ಸದಸ್ಯ:Kishorkg261/ನನ್ನ ಪ್ರಯೋಗಪುಟ/2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲ್ಯೂಕಾ ಪ್ಯಾಸಿವೋಲಿ

[೧] ಪರಿಚಯ:[೨]

     ಫ಼್ರಾ ಲ್ಯೂಕಾ ಬಾರ್ಟೊಲೋಮಿಯೊ ಡೆ ಪ್ಯಾಸಿವೋಲಿ ಅವರು ೧೪೪೭ ರಲ್ಲಿ ರಿಪಬ್ಲಿಕ್ ಆಫ್ ಫ಼್ಲೋರೆನ್ಸ್ ನ  ಸ್ಯಾನ್ಸೆಪೋಲ್ ಕ್ರೋ ಎಂಬಲ್ಲಿ ಜನಿಸಿದರು.ಇವರು ಇಟಲಿಯಲ್ಲಿ ಗಣಿತ ಶಾಸ್ತ್ರಜ್ಞರಾಗಿದ್ದರು.ಮತ್ತು ಲಿಯೋನಾರ್ಡೊ ಡಾ ವಿನ್ಸಿ ಯವರಿಗೆ ಗಣಿತ ಶಾಸ್ತ್ರವನ್ನು ಬೋಧಿಸುತ್ತಾ ಅವರ ಸಹಯೋಗಿಯಾಗಿದ್ದರು.ಅಲ್ಲದೆ ಇವರು ಲೆಕ್ಕಶಾಸ್ತ್ರಕ್ಕೆ  ತುಂಬಾ ಕೊಡುಗೆಯನ್ನು ನೀಡಿದ್ದಾರೆ.ಆದ್ದರಿಂದಲೇ ಇವರನ್ನು ಯುರೋಪ್ ನಲ್ಲಿ "ಲೆಕ್ಕಶಾಸ್ತ್ರ ಮತ್ತು ಬುಕ್ ಕೀಪಿಂಗ್ ನ ಜನಕ" ಎಂದು ಕರೆಯುತ್ತಾರೆ.ಇವರು ಯುರೋಪ್ ನಲ್ಲೇ ಬುಕ್ ಕೀಪಿಂಗ್ ನಲ್ಲಿ ಡಬಲ್ ಎಂಟ್ರಿ ವ್ಯವಸ್ಥೆಯನ್ನು ಹೊರತಂದ ಮೊದಲಿಗರಾಗಿದ್ದಾರೆ.ಇವರ ಜನ್ಮಸ್ಥಳಕ್ಕೆ ಅನುಗುಣವಾಗಿ ಇವರನ್ನು "ಲ್ಯೂಕಾ ಡೆ ಬೋರ್ಗೊ" ಎಂದೂ ಕರೆಯುವುದುಂಟು.ಇವರ ತಂದೆ ಬಾರ್ಟೊಲೋಮಿಯೋ ಪ್ಯಾಸಿವೋಲಿ ಮತ್ತು ತಾಯಿ ಮ್ಯಾಡಲೇನಾ ಡಿ ಫ್ರಾನ್ಸೆಸ್ಕೊ ನ್ಯೂಟಿ.

ಪರಿವಿಡಿ: ೧.ಪರಿಚಯ ೨.ಜೀವನ ೩.ಕೃತಿಗಳು ೪.ಕೊಡುಗೆಗಳು

ಜೀವನ:-

    ಇವರು ತಮ್ಮ ಹುಟ್ಟೂರಲ್ಲೇ "ಅಬ್ಯಾಕೋ" ಎಂಬ ಶಿಕ್ಷಣವನ್ನು ಪಡೆಯುತ್ತಾರೆ.ಲ್ಯಾಟಿನ್ ಭಾಷೆಯ ಕಡೆಗೆ ಗಮನ ಹರಿಸದೆ ವ್ಯಾಪಾರಿಗಳಿಗೆ ಬೇಕಿದ್ದ ಜ್ಞಾನದ ಕಡೆ ಗಮನ ಹರಿಸಿದರು.೧೪೬೪ ರಲ್ಲಿ ಅವರು ವೆನೈಸ್ ಗೆ ತೆರಳಿ,ಶಿಕ್ಷಣವನ್ನು ಮುಂದುವರೆಸಿದರು.ಅದರೊಂದಿಗೆ ವ್ಯಾಪಾರಿಯೊಬ್ಬರ ಮೂರು ಮಕ್ಕಳಿಗೆ ಬೋಧಕರಾಗಿ ಕೆಲಸ ಮಾಡಿದರು.ಆ ಸಮಯದಲ್ಲಿ ಇವರು ತಮ್ಮ ಮೊದಲ ಪುಸ್ತಕವನ್ನು ಬರೆದರು.೧೪೭೭ರಲ್ಲಿ ಪ್ಯಾಸಿವೋಲಿಯವರು ಪ್ರವಾಸ ಮಾಡುವ ಮೂಲಕ ಮತ್ತು ಹಲವು ವಿಶ್ವವಿದ್ಯಾಲಯಗಳಲ್ಲಿ ಗಣಿತಶಾಸ್ತ್ರ(ಅಂಕಗಣಿತ)ವನ್ನುಭೋಧಿಸುವ ಮೂಲಕ ತಮ್ಮ ಜೀವನವನ್ನು ಸಾಗಿಸುತಿದ್ದರು.೧೪೭೭ ರಿಂದ ೧೪೮೦ ರ ವರೆಗೆ ಇವರು ಪೆರುಜಿಯಾ ವಿಶ್ವವಿದ್ಯಾಲಯಗಳಲ್ಲಿದ್ದಾಗ ತಮ್ಮ ಎರಡನೇ ಪುಸ್ತಕವನ್ನು ಅಂಕಗಣಿತದ ಮೇಲೆ ಬರೆದರು.ಇವರು ಝರಾ(ಈಗಿನ ಝಾದರ್ ಅಥವಾ ಜಡೆರಾ)ದಲ್ಲಿದ್ದಾಗ ತಮ್ಮಮೂರನೆ ಪುಸ್ತಕವನ್ನೂ ಕೂಡ ಅಂಕಗಣಿತದ ಮೇಲೆಯೇ ಬರೆದರು.ಇವರು ಮೂರು ಪುಸ್ತಕಗಳನ್ನು ಬರೆದರೂ ಕೂಡ ಜನರ ಮನಮುಟ್ಟಿದ್ದು ಮಾತ್ರ ಮೊದಲನೆಯದು.ಇವರು ಝರಾ ದ ನಂತರ ನೇಪ್ಲಿಸ್ ವಿಶ್ವವಿದ್ಯಾಲಯದಲ್ಲಿ ನಂತರ ರೋಮ್ ನ ವಿಶ್ವವಿದ್ಯಾಲಯದಲ್ಲಿ ಅದ್ಯಾಪಕ ವೃತ್ತಿಯನ್ನು ಮುಂದುವರೆಸಿದರು.ಎರಡು ವರ್ಷಗಳ ನಂತರ ೧೪೮೯ರಲ್ಲಿ ರೋಮ್ ನಿಂದ ತಮ್ಮ ತಾಯ್ನಾಡಿಗೆ ಮರಳಿದರು.ಆಗ ಅಲ್ಲಿ "ಸುಮ್ಮ ಡೆ ಅರಿತ್ ಮೆಟಿಕಾ,ಜಾಮೆಟ್ರಿಯಾ,ಪ್ರೊಪೊರ್ಷನಿ ಎಟ್ ಪ್ರೊಪೊರ್ಷನಾಲಿಟಿ" ಎಂಬ ಕೃತಿಯನ್ನು ಹೊರತಂದರು.ಇವರು ೧೫೧೭ ರ ತಮ್ಮ ೭೦ನೇ ವಯಸ್ಸಿನಲ್ಲಿ ಮರಣವನ್ನು ಹೊಂದಿದರು.  ಇವರು ಗಣಿತ ಶಾಸ್ತ್ರದಲ್ಲಿ ಹಲವಾರು ಕೃತಿಗಳನ್ನು ಬರೆದಿದ್ದಾರೆ.ಅವುಗಳಲ್ಲಿ ಕೆಲವುಗಳೆಂದರೆ:

ಕೃತಿಗಳು:

೧. ಟ್ರ್ಯಾಕ್ಟಟಸ್ ಮ್ಯಾಥಮೆಟಿಕಸ್ ಆಡ್ ಡಿಸಿಪೋಲಸ್ ಪೆರುಸಿನೋಸ್ ಮತ್ತು
೨. ಸುಮ್ಮ ಡೆ ಅರಿಥ್ ಮೆಟಿಕಾ, ಜೋಮೆಟ್ರಿಯಾ(೧೪೯೪)
ಪ್ಯಾಸಿವೋಲಿಯವರು ತಮ್ಮನ್ನು ಚದುರಂಗ ಕ್ಷೇತ್ರದಲ್ಲೂ ತೊಡಗಿಸಿಕೊಂಡು ಕೊಡುಗೆಯನ್ನು ನೀಡಿದ್ದಾರೆ. ಅವರು ಬರೆದ ಕೃತಿ ಕೆಳಗಿನಂತಿದೆ:
೧. ಡೆ ಲ್ಯೂಡೊ ಸ್ಕ್ಯಕೊರಮ್.
೨. ಡಿ ಡಿವೈನಾ ಪ್ರೊಪೊರ್ಷನ್(೧೫೦೯)
೩. ಡಿ ವೈರಿಬಸ್ ಕ್ವಾಂಟಿಟಾಟಿಸ್
೪. ಪ್ಯಾಸಿವೋಲೊ ಆನ್ ಅಕೌಂಟಿಂಗ್
೫. ಏನ್ಷಿಯೆಂಟ್ ಡಬಲ್ ಎಂಟ್ರಿ ಬುಕ್ ಕೀಪಿಂಗ್

ಕೊಡುಗೆಗಳು:

    ಲೆಕ್ಕಶಾಸ್ತ್ರಕ್ಕೆ ಲ್ಯೂಕಾ ಪ್ಯಾಸಿವೋಲಿಯವರ ಕೊಡುಗೆ ಅಪಾರವಾದದ್ದು.ಇವರು ಲೆಕ್ಕಶಾಸ್ತ್ರದ ಜನಕ ಎಂದು ಕರೆಯಲು ಅದೇ ಕಾರಣವೆಂದರೂ ತಪ್ಪಾಗಲಾರದು.ಪ್ಯಾಸಿವೋಲಿಯವರು ಲೆಕ್ಕಶಾಸ್ತ್ರದ ವ್ಯವಸ್ಥೆಯನ್ನು ನಿರ್ಮಿಸಲಿಲ್ಲ ಬದಲಿಗೆ ಅದರ ವಿಧಾನವನ್ನು ಕಂಡುಹಿಡಿದರು. ಇದನ್ನು ಇಟಲಿಯ ನವೋದಯ ಕಾಲದಲ್ಲಿ ಕಂಡುಹಿಡಿದು ಜನರಿಂದ ಹೊಗಳಿಕೆಗೆ ಪಾತ್ರರಾದರು.ಇಂದಿಗೂ ಕೂಡ ಇವರು ಕಂಡುಹಿಡಿದ ಲೆಕ್ಕಶಾಸ್ತ್ರದ ವಿಧಾನಗಳನ್ನೇ ನಾವು ಬಳಸುತ್ತಿರುವುದು.ಅಲ್ಲದೆ ಇವರು,"ಅಕೌಂಟೆಂಟ್ ಒಬ್ಬನು ಡೆಬಿಟ್ ಮತ್ತು ಕ್ರೆಡಿಟ್ ಗಳು ಸಮನಾಗುವ ತನಕ ನಿದ್ರಿಸಬಾರದು"ಎಂದು ಹೇಳಿದ್ದಾರೆ.ಇವರು ಲೆಕ್ಕಶಾಸ್ತ್ರದ ನೈತಿಕತೆಯನ್ನು ಮತ್ತು ಪರಿವ್ಯಯ ಅರ್ಥಶಾಸ್ತ್ರವನ್ನೂ ಸಹ ಕಂಡುಹಿಡಿದಿದ್ದಾರೆ.ಇವರ ಲೆಕ್ಕಶಾಸ್ತ್ರದ ತಂತ್ರಗಳು ಹೂಡಿಕೆದಾರರಿಗೆ,ವ್ಯಾಪಾರ ಸಂಸ್ಥೆಗಳಿಗೆ,ಸಾಲ ನೀಡುವ ಸಂಸ್ಥೆಗಳಿಗೆ ಮತ್ತು ಎಲ್ಲಾ ವ್ಯಾಪಾರಿಗಳಿಗೆ ಲಾಭದಾಯಕವಾಗಿದ್ದು ಲೆಕ್ಕಶಾಸ್ತ್ರದ ಅಭಿವೃದ್ಧಿಗೆ ನೆರವಾಗಿದೆ.ಇವರು ೧೪೯೭ ರಲ್ಲಿ ಡ್ಯೂಕ್ ಲುಡೊವಿಕೊ ಎಸ್ ಫೋರ್ಜಾ ಅವರ ಮಾತಿನ ಮೇರೆಗೆ ಮಿಲನ್ ನಲ್ಲಿ ಕೆಲಸ ಮಾಡಲು ಒಪ್ಪಿಕೊಂಡರು.ಅಲ್ಲಿ ಗಣಿತ ಶಾಸ್ತ್ರವನ್ನು ಬೋಧಿಸುತ್ತ ಲಿಯೋನಾರ್ಡೊ ಡ ವಿನ್ಸಿ ಅವರೊಟ್ಟಿಗೆ ಇದ್ದಾಗ ಇವರಿಬ್ಬರ ನಡುವೆ ಒಳ್ಳೆಯ ಗೆಳೆತನವು ಬೆಳೆಯಿತು.೧೪೯೯ರಲ್ಲಿ ಪ್ಯಾಸಿವೋಲಿ ಮತ್ತು ವಿನ್ಸಿಯವರು ಮಿಲನ್ ಅನ್ನು ಬಿಟ್ಟು ಹೋಗಬೇಕಾಯಿತು.ಏಕೆಂದರೆ,ಫ಼್ರಾನ್ಸ್ ನ ಹನ್ನೆರಡನೆ ಲ್ಯೂಯಿಸ್ ಆ ಊರನ್ನು ವಶಪಡಿಸಿಕೊಂಡಿದ್ದನು.ಈ ರೀತಿ ಪ್ಯಾಸಿವೋಲಿಯವರು ಲೆಕ್ಕಶಾಸ್ತ್ರ,ಗಣಿತ ಶಾಸ್ತ್ರ ಗಳಲ್ಲಿ ಬಹಳ ಕೊಡುಗೆಯನ್ನು ನೀಡಿದ್ದಾರೆ.ಮತ್ತು ಇಂದಿಗೂ ಸಹ ಜನಮನದಲ್ಲಿ ಅಮರರಾಗಿದ್ದಾರೆ.
  1. https://en.wikipedia.org/wiki/Luca_Pacioli
  2. https://papers.ssrn.com/sol3/papers.cfm?abstract_id=2320658