ವಿಷಯಕ್ಕೆ ಹೋಗು

ಸದಸ್ಯ:Keerthana.m.k.shetty/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಣುಶಕ್ತಿ ಸ್ಥಾವರಗಳಲ್ಲಿ ಲೋಹಗಳ ಪಾತ್ರ

ಮಾನವನು ವಸ್ತುಗಳನ್ನು ನಾಶಮಾಡಲು ಹಾಗು ನಿರ್ಮಿಸಲು ಸಾಧ್ಯವಿಲ್ಲವೆಂದುಕೊಂಡಿದ್ದ. ಆದರೆ ಈ ಶತಮಾನದ ಆದಿಭಾಗದ ಐನ್ಸ್ಟೀನ್ ಎಂಬ ವಿಜ್ಙಾನಿಯು ವಸ್ತು ಮತ್ತು ಶಕ್ತಿಯನ್ನು ಕಂಡುಕೊಂಡ. ಈ ಕ್ರಿಯೆಯು ಪರಮಾಣು ಸಂಯೋಜನೆ ಹಾಗೂ ಪರಮಾಣು ವಿದಳನ ಕ್ರಿಯೆಗಳಲ್ಲಿ ಕಂಡು ಬರುತ್ತದೆ. ಸೂರ್ಯನಲ್ಲಿ ನಡೆಯುವ ಕ್ರಿಯೆಯನ್ನು ಪರಮಾಣು ಸಂಯೋಜನೆ ಕ್ರಿಯೆಗೆ ಉದಾಹರಿಸಬಹುದು. ಸಂಯೋಜನೆಯಿಂದ ಶಕ್ತಿಯ ಉತ್ಪಾದನೆಯನ್ನು ಮಾನವ ತನ್ನ ಕೈಗೆ ಎಟುಕಿಸಿಕೊಂಡಿದ್ದಾನೆ.

ಪರಮಾಣು ಶಕ್ತಿ ಸ್ಥಾವರಗಳಲ್ಲಿ ಇತರ ಶಾಖ ಶಕ್ತಿ ಸ್ಥಾವರಗಳಲ್ಲಿರುವಂತೆ, ಸಾಮಾನ್ಯವಾಗಿ ನೀರನ್ನು ಉಗಿಯಾಗಿಸಿ, ಅದನ್ನು ಚಕ್ರಗಳ ಮೂಲಕ ಹಾಯಿಸಿ, ವಿದ್ಯುತ್ ಜನಕಗಳಿಂದ, ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲಾಗುತ್ತದೆ. ಶಾಖ ಶಕ್ತಿ ಪಡೆಯಲಾಗುತ್ತದೆ. ಆದರೆ ಪರಮಾಣು ಶಕ್ತಿ ಸ್ಥಾವರಗಳಲ್ಲಿ ಯುರೇನಿಯಂ-೨೩೫ ನಂತಹ ಪರಮಾಣುಗಳನ್ನು ನ್ಯೂಟ್ರಾನ್ ನಿಂದ ವಿಭಜಿಸಿದಾಗ ಎರಡು ಅಸ್ಥಿರ ಅಣುಗಳು ಸುಮಾರು ೨ ರಿಂದ ೩ ನ್ಯೂಟ್ರಾನ್ ಗಳು ಹಾಗು ಶಕ್ತಿ ಬಿಡುಗಡೆಯಾಗುತ್ತದೆ. ಹೀಗೆ ಉತ್ಪನ್ನವಾದ ನ್ಯೂಟ್ರಾನ್ ಗಳಲ್ಲಿ ಒಮದನ್ನು ಮಾತರ್. ಪರಮಾಣು ವಿದಳನ ಪಾಲ್ಗೊಳ್ಳುವಂತೆಯೂ, ಉಳಿದ ನ್ಯೂಟ್ರಾನ್ ಗಳನ್ನು ಪರಮಾಣು ಭಟ್ಟಿಯಲ್ಲಿರುವ ಸಾಮಾಗ್ರಿಗಳಲ್ಲಿ ಹೀರಿಕೊಳ್ಳುವಂತೆ ಮಾಡಿ ವಿದಳನ ಸರಪಳಿ ಕ್ರಿಯೆಯನ್ನು ಕಾಯ್ದುಕೊಳ್ಳಲಾಗುತ್ತದೆ. ಸುಮಾರು ೩೦೦೦ ಟನ್ ಕಲ್ಲಿದ್ದಲು ಉತ್ಪಾದಿಸುವ ಶಕ್ತಿಯನ್ನು ಒಂದೆ ಒಂದು ಕೇಜಿಯಷ್ಟು ವಸ್ತುವನ್ನು ವಿದಳನಕ್ಕೆ ಒಳಪಡಿಸಿ ಪಡೆಯಬಹುದು.

ಪರಮಾಣು ಶಕ್ತಿ ಸ್ಥಾವರವನ್ನು ನಿರ್ಮಿಸಲು, ಸರಪಳಿ ಕ್ರಿಯೆಯನ್ನು ನಿಯಂತ್ರಿಸುವ ಕಾರ್ಯ ವಿಕಿರಣ ನಿಯಂತ್ರಣದ ತಂತ್ರಜ್ಞಾನ, ದೂರದಿಂದಲೇ ನಿಯಂತ್ರಿಸುವ ತಂತ್ರಜ್ಞಾನ ಮತ್ತು ಯುರೇನಿಯಂ ಝರ್ಕೋನಿಯಂ ಹಾಗೂ ವಿಶೇಷವಾದ ತುಕ್ಕು ಹಿಡಿಯದ ಉಕ್ಕಿನ ತಂತ್ರಜ್ಞಾನ ಇವೆಲ್ಲವುಗಳ ಹೆಚ್ಚಿನ ಮಾಹಿತಿ ಬೇಕಾಗುತ್ತದೆ.

ಪರಮಾನು ವಿದ್ಯುತ್ ಉತ್ಪಾದನೆಯಲ್ಲಿ ನೇರವಾಗಿ ನೀರು ಉಗಿಯುವ ಪರಮಾಣು ಕುಲುಮೆ ನೀರನ್ನು ಒತ್ತಡಕ್ಕೊಳಪಡಿಸುವ ಪರಮಾಣು ಕುಲುಮೆ ಭಾರ ಜಲವನ್ನು ಒತ್ತಡಕ್ಕೊಳಪಡಿಸಿದ ಪರಮಾಣು ಕುಲುಮೆ , ಅನಿಲ ಶೀತಕ ಪರಮಾಣು ಕುಲುಮೆ ಮತ್ತು ತೇಜೋತ್ಪಾದನಾ ಪರಮಾಣು ಕುಲುಮೆಗಳನ್ನು ಮುಖ್ಯವಾಗಿ ಅಣು ವಿದಳನ ಕ್ರಿಯೆಗೆ ಉಪಯೋಗಿಸಲಾಗುತ್ತದೆ

ಸಾಮಾಗ್ರಿಗಳ ಅಂಕೆಯಲ್ಲಿ ಗಮನಿಸಬೇಕಅದ ಅಂಶಗಳು:-ಪರಮಾಣು ಕುಲುಮೆಯಲ್ಲಿ ಸಾಮಾನ್ಯವಾಗಿ ಇಂಧನ , ರಚನಾ, ಸಾಮಾಗ್ರಿ, ಶೀತಕ , ಮಂದಕ , ನಿಯಂತ್ರಕ, ಪ್ರತಿಫಲಕ ಹಾಗೂ ವಿಕಿರಣವನ್ನು ತಡೆಹಿಡಿಯುವ ಸಾಮಾಗ್ರಿ ಇವುಗಳನ್ನು ಉಪಯೋಗಿಸಲಾಗುತ್ತದೆ. ಯಾವುದೇ ಉದ್ಯಮದಲ್ಲಿ ಸಾಮಾಗ್ರಿಗಳನ್ನು ಆಯ್ಕೆ ಮಾಡುವಾಗ ವಸ್ತುವಿನ ಯಾಂತ್ರಿಕ ಶಕ್ತಿ ತುಂತುಶೀಲತೆ, ರಚನಾಶೀಲತೆ, ಜಂಗು ಹಿಡಿಯದ ಗುಣ ಶಾಖವರ್ಗಾವಣೆ ಗುಣ ಇತ್ಯಾದಿಗಳನ್ನು ಪರಿಗಣಿಸಬೇಕು , ಆದರೆ ಕೆಲವೊಮ್ಮೆ , ಆ ಉದ್ಯಮ್ಮಕ್ಕೆ ತನ್ನದೇ ಆದ ಕ್ಲಿಷ್ಟ ಪರಿಸರ ಸ್ಥಿತಿ ಇರುವುದರಿಂದ ಕೆಲವು ವಿಶೇಷ ಗುಣಗಳನ್ನು ಗಮನಿಸಬೇಕಾಗುತ್ತದೆ. ಅದರಂತೆ ಪರಮಾಣು ಸ್ಥಾವರಗಳಲ್ಲಿ ಭಟ್ಟಿಯಲ್ಲಿ ಉಪಯೋಗಿಸುವ ವಸ್ತುಗಳಿಗೆ ಅತೀ ಕಡಿಮೆ ನ್ಯೂಟ್ರಾನ್ ಗಳನ್ನು ಹೀರುವ ಗುಣವೂ ಇರಬೇಕು. ವಿಕಿರಣ ವಾತಾವರಣದಲ್ಲಿ ಲೋಹಗಳ ದೃಢತೆ ಮತ್ತು ಎಳೆತದ ಶಕ್ತಿ ಹೆಚ್ಚಾಗುತ್ತವೆ ಮತ್ತು ತಂತು ಶೀಲತೆ ಕಡಿಮೆ ಆಗುತ್ತದೆ. ಯಾವುದೇ ಸೂಚನೆ ಇಲ್ಲದೆ ತನ್ನ ಕಾರ್ಯದಲ್ಲಿ ವಿಫಲವಾಗುವುದರಿಂದ ತಂತುಶೀಲತೆ ಕಡಿಮೆ ಆಗುವ ಗುಣ ಒಳ್ಳೆಯದಲ್ಲ.

ಪರಮಾಣು ಭಟ್ಟಿ ಸಾಮಾಗ್ರಿಗಳು:- ಶಕ್ತಿ ಉತ್ಪಾದನೆಯಲ್ಲಿ ಪರಮಾಣು ಭಟ್ಟಿಯ ವಿಶೇಷವಾದ ಮತ್ತು ಮುಖ್ಯವಾದ ಭಾಗ, ಇದರಲ್ಲಿ ಉಪಯೋಗಿಸುವ ಸಾಮಾಗ್ರಿಗಳಲ್ಲಿ ಯಾವ ಯಾವ ಲೋಹಗಳನ್ನು ಉಪಯೋಗಿಸಬಹುದೆಂದು ಇಲ್ಲಿ ಚರ್ಚಿಸಲಾಗಿದೆ.

ಇಂಧನ: ನೈಸರ್ಗಿಕವಾಗಿ ಯುರೇನಿಯಂ ಲೋಹವನ್ನು ಮಾತ್ರ ನೇರವಾಗಿ ಇಂಧನವಾಗಿ ಪರಮಾಣು ಉತ್ಪಾದನೆಯಲ್ಲಿ ಉಪಯೋಗಿಸಬಹುದಾಗಿದೆ. ಇತರ ಇಂಧನಗಳಾದ ಯುರೇನಿಯಂ-೨೩೩, ಮತ್ತು ಪ್ಲುಟೋನಿಯಂ ೨೩೯ ಲೋಹಗಳು ನೈಸರ್ಗಿಕವಾಗಿ ದೊರೆಯುವ ಥೋರಿಯಂ-೨೩೨ ಮತ್ತು ಯುರೇನಿಯಂ-೨೩೮ಗಳು ರಿಯಾಕ್ಟರ್ ನಲ್ಲಿ ನ್ಯೂಟ್ರಾನ್ ಗಳನ್ನು ಹೀರಿಕೊಂಡಾಗ ಉತ್ಪತ್ತಿಯಾಗುತ್ತದೆ. ಅನಿಲ ಶೀತಕ ಪರಮಾಣು ಕುಲುಮೆಯಲ್ಲಿ ತಾಪಮಾನ ಕಡಿಮೆ ಇರುವುದರಿಂದ ಯುರೇನಿಯಂ ಲೋಹವನ್ನು ನೇರವಾಗಿ ಉಪಯೋಗಿಸಲಾಗುತ್ತದೆ. ಆದರೆ ಇನ್ನುತರ ವಿದ್ಯತ್ ಉತ್ಪಾದಿಸು ಕುಲುಮೆಗಳಲ್ಲಿ ಯುರೇನಿಯಂ ಲೋಹವನ್ನು ನೇರವಾಗಿ ಉಪಯೋಗಿಸಲಾಗುವುದಿಲ್ಲ.