ಗುಕೇಶ್ ಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸದಸ್ಯ:Kavya.S.M/ಗುಕೇಶ್ ಡಿ ಇಂದ ಪುನರ್ನಿರ್ದೇಶಿತ)

ದೊಮ್ಮರಾಜು ಗುಕೇಶ್
ಗುಕೇಶ್ ಡಿ
ಜನನ (2006-05-29) ೨೯ ಮೇ ೨೦೦೬ (ವಯಸ್ಸು ೧೭)
ಚೆನ್ನೈ, ತಮಿಳುನಾಡು, ಭಾರತ
ಶೀರ್ಷಿಕೆಗ್ರ್ಯಾಂಡ್ ಮಾಸ್ಟರ್(೨೦೧೯)
ಗರಿಷ್ಠ ರೇಟಿಂಗ್೨೭೩೨ (ಅಕ್ಟೋಬರ್ ೨೦೨೨)

ದೊಮ್ಮರಾಜು ಗುಕೇಶ್ (ಜನನ ೨೯ ಮೇ ೨೦೦೬), ಗುಕೇಶ್ ಡಿ ಎಂದು ಪ್ರಸಿದ್ಧರಾಗಿದ್ದಾರೆ. ಇವರು ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್. ಚೆಸ್ ಪ್ರಾಡಿಜಿಯಲ್ಲಿ, ಇವರು ಗ್ರ್ಯಾಂಡ್‌ಮಾಸ್ಟರ್ ಪ್ರಶಸ್ತಿಗೆ ಅರ್ಹತೆ ಪಡೆದ ಇತಿಹಾಸದಲ್ಲಿ ಮೂರನೇ-ಕಿರಿಯ ವ್ಯಕ್ತಿಯಾಗಿದ್ದಾರೆ. ಇದನ್ನು [೧] FIDE ಇವರಿಗೆ ಮಾರ್ಚ್ ೨೦೧೯ರಲ್ಲಿ ನೀಡಿತು. ೧೬ ಅಕ್ಟೋಬರ್ ೨೦೨೨ ರಂದು, ೧೬ ನೇ ವಯಸ್ಸಿನಲ್ಲಿ, ಇವರು ಪ್ರಸ್ತುತ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನು ಸೋಲಿಸಿದ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ. ಇವರು ಏಮ್ಚೆಸ್ ರಾಪಿಡ್ ಟೂರ್ನಮೆಂಟ್‌ನಲ್ಲಿ ಕಾರ್ಲ್‌ಸೆನ್ ಅನ್ನು ಸೋಲಿಸಿದರು. [೨]

ಆರಂಭಿಕ ಜೀವನ[ಬದಲಾಯಿಸಿ]

ಗುಕೇಶ್ ಅವರು ತಮಿಳುನಾಡಿನ ಚೆನ್ನೈನಲ್ಲಿ ೨೯ ಮೇ ೨೦೦೬ ರಂದು ಜನಿಸಿದರು. ಇವರ ತಂದೆ ರಜನಿಕಾಂತ್ ಅವರು ಕಿವಿ, ಮೂಗು ಮತ್ತು ಗಂಟಲು ಶಸ್ತ್ರಚಿಕಿತ್ಸಕರಾಗಿದ್ದಾರೆ ಮತ್ತು ಅವರ ತಾಯಿ ಪದ್ಮಾ ಅವರು ಸೂಕ್ಷ್ಮ ಜೀವಶಾಸ್ತ್ರಜ್ಞರಾಗಿದ್ದಾರೆ. [೩]ಇವರು ತಮ್ಮ ಏಳನೇ ವಯಸ್ಸಿನಲ್ಲಿ ಇವರು ಚದುರಂಗವನ್ನು ಕಲಿತರು. [೪] ಇವರು ಚೆನ್ನೈನ ಮೆಲ್ ಅಯನಂಬಾಕ್ಕಂನ ವೆಲಮ್ಮಾಳ್ ವಿದ್ಯಾಲಯದಲ್ಲಿ ಅಭ್ಯಸಿಸಿದ್ದಾರೆ. [೫]

ವೃತ್ತಿ[ಬದಲಾಯಿಸಿ]

ಗುಕೇಶ್ ೨೦೧೫ ರಲ್ಲಿ ಏಷ್ಯನ್ ಸ್ಕೂಲ್ ಚೆಸ್ ಚಾಂಪಿಯನ್‌ಶಿಪ್‌ನ ೯ ವರ್ಷದೊಳಗಿನವರ ವಿಭಾಗದಲ್ಲಿ, [೬] ಮತ್ತು ೨೦೧೮ ರಲ್ಲಿ ವಿಶ್ವ ಯೂತ್ ಚೆಸ್ ಚಾಂಪಿಯನ್‌ಶಿಪ್‌ಗಳನ್ನು ೧೨ ವರ್ಷದೊಳಗಿನವರ ವಿಭಾಗದಲ್ಲಿ ಗೆದ್ದಿದ್ದಾರೆ. [೭] ಇವರು ೨೦೧೮ ರ ಏಷ್ಯನ್ ಯೂತ್ ಚೆಸ್ ಚಾಂಪಿಯನ್‌ಶಿಪ್‌ಗಳಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಯು-೧೨ ವೈಯಕ್ತಿಕ ಕ್ಷಿಪ್ರ ಮತ್ತು ಬ್ಲಿಟ್ಜ್, ಯು-೧೨ ತಂಡದ ರ್ಯಾಪಿಡ್ ಮತ್ತು ಬ್ಲಿಟ್ಜ್, ಮತ್ತು ಯು-೧೨ ವೈಯಕ್ತಿಕ ಶಾಸ್ತ್ರೀಯ ಸ್ವರೂಪಗಳಲ್ಲಿ ಗೆದ್ದಿದ್ದಾರೆ. [೮] ಇವರು ಮಾರ್ಚ್ ೨೦೧೮ ರಲ್ಲಿ ೩೪ ನೇ ಕ್ಯಾಪೆಲ್ಲೆ-ಲಾ-ಗ್ರ್ಯಾಂಡೆ ಓಪನ್‌ನಲ್ಲಿ ಇಂಟರ್ನ್ಯಾಷನಲ್ ಮಾಸ್ಟರ್ ಶೀರ್ಷಿಕೆಯ ಅವಶ್ಯಕತೆಗಳನ್ನು ಪೂರ್ಣಗೊಳಿಸಿದರು. [೯]

ಗುಕೇಶ್ ಅವರು ಸೆರ್ಗೆಯ್ ಕರ್ಜಾಕಿನ್ ಅವರನ್ನು ಮೀರಿಸಿದ ಅತ್ಯಂತ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಆಗಿದ್ದಾರೆ . [೧೦] ಇವರು ೧೫ ಜನವರಿ ೨೦೧೯ ರಂದು ೧೨ ವರ್ಷ, ೭ ತಿಂಗಳು ಮತ್ತು ೧೭ ದಿನಗಳ ವಯಸ್ಸಿನಲ್ಲಿ ಇತಿಹಾಸದಲ್ಲಿ ಎರಡನೇ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಆದರು. [೧೧] ಆದಾಗ್ಯೂ, ಇವರು ೨೦೨೨ ರ ಹೊತ್ತಿಗೆ ಭಾರತದ ಅತ್ಯಂತ ಕಿರಿಯರಾಗಿದ್ದಾರೆ. ಜೂನ್ ೨೦೨೧ ರಲ್ಲಿ, ಇವರು ಜೂಲಿಯಸ್ ಬೇರ್ ಚಾಲೆಂಜರ್ಸ್ ಚೆಸ್ ಟೂರ್, ಗೆಲ್ಫಾಂಡ್ ಚಾಲೆಂಜ್ ಅನ್ನು ಗೆದ್ದರು. ೧೯ ರಲ್ಲಿ ೧೪ ಅಂಕಗಳನ್ನು ಗಳಿಸಿದರು. [೧೨] ಆಗಸ್ಟ್ ೨೦೨೨ ರಲ್ಲಿ, ಇವರು ೪೪ ನೇ ಚೆಸ್ ಒಲಿಂಪಿಯಾಡ್ ಅನ್ನು ೮/೮ ಪರಿಪೂರ್ಣ ಸ್ಕೋರ್‌ನೊಂದಿಗೆ ಪ್ರಾರಂಭಿಸಿದರು. ೮ ನೇ ಪಂದ್ಯದಲ್ಲಿ ನಂಬರ್ ೧ ಶ್ರೇಯಾಂಕದ ಯುಎಸ್ ಅನ್ನು ಸೋಲಿಸಲು ಸಹಾಯ ಮಾಡಿದರು. ಇವರು ೧೧ ರಲ್ಲಿ ೯ ಅಂಕಗಳೊಂದಿಗೆ ೨೮೬೭ ಎಲೋ ಪ್ರದರ್ಶನವನ್ನು ಮುಗಿಸಿದರು. ೧ನೇ ಬೋರ್ಡ್‍ನಲ್ಲಿ ಚಿನ್ನದ ಪದಕವನ್ನು ಗಳಿಸಿದರು.

ಅಕ್ಟೋಬರ್ ೨೦೨೨ ರಲ್ಲಿ, ಗುಕೇಶ್ ಅವರು ಐಮ್ಚೆಸ್ ರಾಪಿಡ್ ಪಂದ್ಯಾವಳಿಯಲ್ಲಿ ವಿಶ್ವ ಚಾಂಪಿಯನ್ ಆದ ನಂತರ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸಿದ ಅತ್ಯಂತ ಕಿರಿಯ ಆಟಗಾರರಾದರು. [೧೩]

ಉಲ್ಲೇಖಗಳು[ಬದಲಾಯಿಸಿ]

  1. He is also the third youngest player in the world (after Wei Yi and Alireza Firouzja) to reach 2700 in classical. "List of titles approved by the 2019 1st quarter PB in Astana, Kazakhstan". FIDE 2019-03-11. Retrieved 2019-03-25.
  2. Watson, Leon (16 ಅಕ್ಟೋಬರ್ 2022). "Now Gukesh stuns Carlsen! Historic moment as Indian teen breaks record". Meltwater Champions Chess Tour 2022 (in ಅಮೆರಿಕನ್ ಇಂಗ್ಲಿಷ್). Retrieved 17 ಅಕ್ಟೋಬರ್ 2022.
  3. Prasad RS (16 ಜನವರಿ 2019). "My achievement hasn't yet sunk in: Gukesh". The Times of India. Retrieved 18 ಮಾರ್ಚ್ 2019.
  4. Lokpria Vasudevan (17 ಜನವರಿ 2019). "D Gukesh: Grit and determination personify India's youngest Grandmaster". India Today. Retrieved 18 ಮಾರ್ಚ್ 2019.
  5. "Velammal students win gold at World Cadet Chess championship 2018". Chennai Plus. 9 ಡಿಸೆಂಬರ್ 2018. Archived from the original on 27 ಮಾರ್ಚ್ 2019. Retrieved 18 ಮಾರ್ಚ್ 2019.
  6. Shubham Kumthekar; Priyadarshan Banjan (2018). "Gukesh D: The story behind a budding talent". IIFL Wealth Mumbai International Chess Tournament. Archived from the original on 16 ಏಪ್ರಿಲ್ 2019. Retrieved 9 ಡಿಸೆಂಬರ್ 2018.
  7. "Chess: India's Gukesh, Savitha Shri bag gold medals in U-12 World Cadets Championship". scroll.in. 16 ನವೆಂಬರ್ 2018. Retrieved 9 ಡಿಸೆಂಬರ್ 2018.
  8. Prasad RS (13 ಮಾರ್ಚ್ 2018). "Gukesh wins 5 gold medals in Asian Youth Chess Championship". The Times of India. Retrieved 9 ಡಿಸೆಂಬರ್ 2018.
  9. Prasad RS (13 ಮಾರ್ಚ್ 2018). "Gukesh making all the right moves". The Times of India. Retrieved 9 ಡಿಸೆಂಬರ್ 2018.
  10. Shah, Sagar (9 ಡಿಸೆಂಬರ್ 2018). "Gukesh with 2 GM norms and 2490 Elo is on the verge of becoming world's youngest GM". ChessBase India. Retrieved 9 ಡಿಸೆಂಬರ್ 2018.
  11. Shah, Sagar (15 ಜನವರಿ 2019). "Gukesh becomes second youngest GM in history". Chess News. ChessBase. Retrieved 15 ಜನವರಿ 2019.
  12. Rao, Rakesh (14 ಜೂನ್ 2021). "Gritty Gukesh wins Gelfand Challenge". The Hindu. Retrieved 18 ಜೂನ್ 2021.
  13. "Gukesh D vs. Carlsen, Magnus | Aimchess Rapid | Prelims 2022". chess24.com (in ಇಂಗ್ಲಿಷ್). Retrieved 16 ಅಕ್ಟೋಬರ್ 2022.

ಬಾಹ್ಯ ಕೊಂಡಿಗಳು[ಬದಲಾಯಿಸಿ]

  • D Gukesh rating card at FIDE
  • D Gukesh ID card at the All India Chess Federation
  • D Gukeshplayer profile at Chess.com
  • D Gukeshplayer profile and games at Chessgames.com
  • D Gukeshchess games at 365Chess.com