ವಿಷಯಕ್ಕೆ ಹೋಗು

ಸದಸ್ಯ:Kavya.1910164/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೊಸದ್ಯಾವರ ಕೋಲಾರದಹಬ್ಬ

ಹೊಸ ದ್ಯಾವ್ರ ಮತ್ತು ದೊಡ್ಡ ದ್ಯಾವರ ಎಂಬ ಆಚರಣೆಗಳು ಕೋಲಾರದ ಪ್ರಾಂತ್ಯದ ಒಕ್ಕಲಿಗರ ಬಹುತೇಕ ಒಳಪಂಗಡಗಳಲ್ಲಿ ಕಾಣಿಸುತ್ತದೆ .ಹೊಸ ದ್ಯಾವರ ವು ಮಹಿಳೆಯರಿಗಷ್ಟೇ ಸಂಬಂಧಿಸಿದ ಆಚರಣೆಯಾಗಿದೆ ಇದನ್ನು ಹಸ್ತ ಮಳೆಯ ಸಂದರ್ಭದಲ್ಲಿ ಆಚರಿಸಲಾಗುತ್ತದೆ .ಹೊಸ ದ್ಯಾವ್ರ ವನ್ನು ಸಾಮಾನ್ಯವಾಗಿ ಶನಿವಾರ ಮತ್ತು ಭಾನುವಾರ ಈ ಎರಡು ದಿನಗಳಲ್ಲಿ ಆಚರಿಸಲಾಗುತ್ತದೆ ಶನಿವಾರದಂದು ಈ ಆಚರಣೆಗೆ ಸಂಬಂಧಪಟ್ಟ ಎಲ್ಲಾ ಸ್ತ್ರೀಯರು ತಮ್ಮ ತಮ್ಮ ಮನೆಗಳಿಂದ ತುಪ್ಪ ರಾಗಿ ಬೆಲ್ಲ ತರಕಾರಿ ಮತ್ತು ಪೂಜೆ ಸಾಮಗ್ರಿಗಳನ್ನು ತೆಗೆದುಕೊಂಡು ಒಂದು ಮನೆಯಲ್ಲಿ ಸೇರಿ ಆ ದಿನ ಸಂಜೆಯವರೆಗೂ ಉಪವಾಸವಿದ್ದು ಸಂಜೆ ಮೂರರಿಂದ ಆರು ಗಂಟೆಯ ಒಳಗಡೆ ದೇವರಿಗೆ ಪೂಜೆ ಸಲ್ಲಿಸಿ ಮುಡುಪು ಕಟ್ಟಿ ಕುಂಬಳಕಾಯಿ ಎಲೆಯಲ್ಲಿ ದೇವರಮುಂದೆ ಎಡೆ ಹಾಕಿ ಎಲ್ಲರೂ ಅದನ್ನು ಪ್ರಸಾದರೂಪದಲ್ಲಿ ಸೇವಿಸುತ್ತಾರೆ . ಇದನ್ನು ಸನ ಶೆಟ್ಟಿ ಹೊಂದಿತು ಎನ್ನುತ್ತಾರೆ .ಈ ಆಹಾರ ತಯಾರಿಕೆಗೆ ಬಳಸುವ ಹಸಿ ಹಿಟ್ಟನ್ನು ಸ್ತ್ರೀಯರು ಅವರು ಉಳಿದುಕೊಂಡಿರುವ ಮನೆಯಲ್ಲಿ ಬೀಸುವ ಕಲ್ಲನ್ನು ಬಳಸಿಯೇ ತಯಾರಿ ಮಾಡಿಕೊಳ್ಳಬೇಕಾಗುತ್ತದೆ.

ಮರುದಿನ ಭಾನುವಾರದಂದು ಬೆಳಗಿನಿಂದ ಸಂಜೆಯವರೆಗೂ ಸಮುದಾಯಕ್ಕೆ ಸಂಬಂಧಪಟ್ಟ ಸ್ತ್ರೀಯರೆಲ್ಲರೂ ಉಪವಾಸವಿರಬೇಕು .ಅಂದು ಪ್ರತಿಯೊಬ್ಬರು ತಮ್ಮ ಮನೆಗಳಿಂದ ಬತ್ತ ತಂದು ಅಕ್ಕಿ ಮಾಡಿಕೊಂಡು ಅಕ್ಕಿ ಮಡಿಕೆಗಳನ್ನು ಮತ್ತು ಪೂಜೆಗೆ ಬೇಕಾದ ಸಾಮಗ್ರಿಗಳನ್ನೆಲ್ಲ ಗಾಂಪದಲ್ಲಿಟ್ಟುಕೊಂಡು ಊರ ಹೊರಗಿನ ಕಟ್ಟೆ ಮೇಲಿರುವ ಚಾಮುಂಡಮ್ಮ ನ ದೇವಸ್ಥಾನಕ್ಕೆ ಹೋಗಿ ಅಲ್ಲಿ ಪೂಜಾ ಶಾಸ್ತ್ರಗಳನ್ನು ಮಾಡುತ್ತಾರೆ . ಆ ಗುಂಪಿನಲ್ಲಿ ರಾಮದೇವರ ಮಾಡಬೇಡಿ ಹೊಸ ಸೊಸೆಯವರಿದ್ದರೆ ಆಕೆಯ ತವರುಮನೆಯವರು ತಂದಿರುವಂತಹ ಭತ್ತ ಬೆಲ್ಲ ಎಲೆ ಅಡಿಕೆ ಅರಿಶಿನ-ಕುಂಕುಮ ಹೊಸ ಸೀರೆ ಮಗಳಿಗೆ ಮತ್ತು ಆಕೆಯ ಅತ್ತೆಯವರಿಗೆ ನೀಡುತ್ತಾರೆ .ತವರು ಮನೆಯಿಂದ ತಂದಿರುವಂತಹ ಎಲ್ಲವನ್ನೂ  ಅತ್ತೆಯ ಕೈಗೆ ನೀಡಿ ಆಶೀರ್ವಾದ ಪಡೆದು ಹಿಂದುಸ್ತಾನ ಮಡಿಕೆಯಲ್ಲಿ ಎಂಟು ರೀತಿಯ ಹುಲ್ಲು ರಾಗಿ ಹಿಟ್ಟಿನ ದೀಪ ನನ್ನ ಬಾಳೆಹಣ್ಣು ಅರಿಶಿನ-ಕುಂಕುಮ ಇಟ್ಟು ಆ ಮಡಿಕೆಯನ್ನು ಅತ್ತೆಯ ತಲೆಯ ಮೇಲಿಂದ ಸೊಸೆಯ ತಲೆಯಮೇಲೆಗೆ ತೆಗೆದುಕೊಳ್ಳುವ ಪದ್ಧತಿ ಇದೆ .ಈ ರೀತಿ ಮಡಿಕೆ ಯು ಹಿರಿಯರ ತಲೆಯ ಮೇಲಿಂದ ಕಿರಿಯರ ತಲೆ ಮೇಲೆ ಗೆ ಹೋಗಿ ಮೊದಲಿಗೆ ಎತ್ತಿ ಕೊಂಡಂತಹ ಹಿರಿಯರಿಗೆ ಮತ್ತೆ ಸೇರುತ್ತದೆ .ಕೆಲವು ಕಾರಣಗಳಿಂದ ಬರದೇ ಇರುವಂತಹ ಸ್ತ್ರೀಯರ ಹೆಸರಿನಲ್ಲೇ ಅವರು ಪ್ರಾರ್ಥನೆ ಸಲ್ಲಿಸುತ್ತಾರೆ .ನಂತರ ಎಲ್ಲರೂ ಪ್ರಸಾದ ಸೇವಿಸಿ ಮಡಿಕೆಗಳನ್ನು ತಲೆಮೇಲೆ ಎತ್ತಿಕೊಂಡು ಗಂಚಲಿ ಸಕನ ಹೊಂಟನೆ ನಿದ್ರಾಸನ ಕಡೆ ನಡೆದು ಅವುಗಳನ್ನು ಉಳಿದುಕೊಂಡು ಮನೆಯಲ್ಲಿ ಇಟ್ಟು ಎಲ್ಲರೂ ಊರಿನಲ್ಲಿರುವ ಚಾಮುಂಡೇಶ್ವರಿಯ ದೇವಾಲಯಕ್ಕೆ ಹೋಗಿ ಪೂಜೆ ಮುಗಿಸಿ ಅದೇ ಮನೆಗೆ ಬಂದು ಊಟ ಮಾಡಿ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುತ್ತಾರೆ.ಆದರೆ ಈ ಆಚರಣೆ ಇಲ್ಲದವರಿಗೆ ಊಟ ಬಡಿಸಬಾರದೆಂದು ಎನ್ನುತ್ತಾರೆ.ಮರುದಿನ ಸೋಮವಾರದ ಬೆಳೆಗೆ ಹಿರಿಯರಿದ್ದರು ಮಡಿಕೆಗಳನ್ನು ಪಾತ್ರೆಗಳನ್ನು ಹಾಗೂ ದೇವರಿಗೆ ಕೊಟ್ಟಿರುವಂತಹ ಮೀಸಲನ್ನು ತೆಗೆದುಕೊಂಡು ಹೋಗಿ ಕುಂಟೆಯಲ್ಲಿ ನೀರಿಗೆ ಬಿಟ್ಟು ಸ್ವಚ್ಛಗೊಳಿಸುತ್ತಾರೆ.ಇದು ಹೊಸ ದ್ಯಾವರ ದ ಆಚರಣೆ.