ಸದಸ್ಯ:Karibasava musi
ಹೋಳಿ ಅಂದರೇ ಪವಿತ್ರತೆ,
[ಬದಲಾಯಿಸಿ]
ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ಶಿವರಾತ್ರಿಯ
ನಂತರ ಬರುವ ಆಧ್ಯಾತ್ಮಿಕ ಹಿನ್ನೆಲೆ ಇರುವ ಹಬ್ಬ ವೆಂದರೆ ಹೋಳಿ. ಭಾರತದಲ್ಲಿ ಮಾತ್ರವಲ್ಲದೆ, ಭಾರತಿಯರು ವಾಸಿಸುವ ನೇಪಾಳ, ಬಾಂಗ್ಲಾ ದೇಶ, ಪಾಕಿಸ್ತಾನ, ಯುರೂಪ, ಉತ್ತರ ಅಮೆರಿಕಾ, ಸುರೆನಾಮ್, ಗಯಾನಾ, ಟ್ರಿನಿಡಾಡ್, ಆಫ್ರಿಕಾ, ಮಾರೀಷಸ್, ಪುಜಿ ಮುಂತಾದ ಕಡೆ ಈ ಹಬ್ಬವು ಪೇಮ, ಬಣ್ಣ, ಕುಣಿದು ಕುಪ್ಪಳಿಸುವ ಮತ್ತು ಸ್ನೇಹದ ಹಬ್ಬವೆಂದು ಆಚರಿಸಲಾಗುತ್ತದೆ.
ಕಾಶಿಯ ಮಣಿಕರ್ಣಿಕಾ ಘಾಟ್ನಲ್ಲಿ ವಿಶೇಷ ಹೋಳಿಯ ಆಚರಣೆ ಇದೆ. ಇದು ಸಾಕ್ಷಾತ್ ಭಸ್ಮಧಾರಿ ಭೋಲೆನಾಥನ ತಂಗುದಾಣವೆಂದು ಹೇಳಲಾಗುತ್ತದೆ. ಇಲ್ಲಿ ಚಿತಾಭಸ್ಮದಿಂದ ಹೋಳಿಯು ನಾಗಾ ಸಾಧುಗಳು, ನಾಥಪಂಥದ ಸಾಧುಗಳು ಮೂರು ದಿನಗಳ ಕಾಲ ಆಡುತ್ತಾರೆ.
ಹುಣ್ಣಿಮೆಗೆ ಎರಡು ದಿನ ಮೊದಲೆ ಹೋಲಾಷ್ಟಕ ಶುರುವಾಗುತ್ತದೆ. ಮೊದಲನೆಯ ದಿನ ಮಹಾದೇವ ತನ್ನ ಮೂರನೇಯ ಕಣ್ಣಿನಿಂದ ಕಾಮದೇವನನ್ನ ಸುಟ್ಟು ಹಾಕಿ, ಹೋಳಿಯ ದಿನ ಮತ್ತೆ ಕೃಪೆಯನ್ನು ತೋರಿಸಿ ಜೀವದಾನ ಮಾಡಿದ ಎಂದು ಇಲ್ಲಿನ ಜನರ ನಂಬಿಕೆಯಿದೆ. ಉತ್ತರ ಕರ್ನಾಟಕ ಮತ್ತು ಗುಜರಾತ್‌ನಲ್ಲಿ ದಹಿ-ಹಂಡಿ ಹೊಡೆಯುವ ಸ್ಪರ್ಧೆ ನಡೆಯುತ್ತದೆ. ಮೋಸರು ತುಂಬಿದ ಗಡಿಗೆ ಎತ್ತರಕ್ಕೆ ಕಟ್ಟುವರು. ಅದನ್ನು ಮಾನವ ಪಿರಾಮಿಡ್ ನಿರ್ಮಾಣ ಮಾಡಿ ಮೇಲೆ ಹತ್ತಿ ಹೊಡೆಯ ಬೇಕು. ಬರುವಾಗ ನೀರು ಹಾಗೂ ಬಣ್ಣ ಚೆಲ್ಲುತ್ತಾರೆ.
ಮೂರು ಪೌರಾಣಿಕ ದಂತ ಕಥೆಗಳು ಇವೆ.
1.ವಿಷ್ಣು ಭಕ್ತ ಪ್ರಹ್ಲಾದನಿಗೆ ತನ್ನ ತಂದೆಯಾದ ಹಿರಣ್ಯಕಶಿಪು ಮತ್ತು ಅವನ ಸೋದರಿಯ ಹೋಲಿಕಾ ಎಂಬ ರಾಕ್ಷಸಿಯಿಂದ ಹಿಂಸೆಯಾಗುತ್ತದೆ, ಅವನನ್ನು ಸುಟ್ಟುಹಾಕಲು, ಬಯಸುವ ಹೋಲಿಕ ತಾನೆ ದಹನವಾದಳು.
2.ತಾರಕಾಸುರನಿಂದ ಪೀಡಿತರಾದ ದೇವತೆಗಳು, ಶಿವನನ್ನು ತಪಸ್ಸಿನಿಂದ ಎಬ್ಬಿಸಲು ಕಾಮದೇವನ ಸಹಾಯ ಪಡೆಯುತ್ತಾರೆ. ಪುಷ್ಪ ಬಾಣನ ಪ್ರಯೋಗದಿಂದ ವಿಚಲಿತನಾದ ಮಹಾದೇವನು ತನ್ನ ಮೂರನೆಯ ಕಣ್ಣನಿಂದ ಅವನನ್ನು ಸುಟ್ಟು ಹಾಕುತ್ತಾನೆ. ಆಗ ಕಾಮದೇವನ ಪತ್ನಿ ರತಿದೇವಿ ಮತ್ತು ದೇವತೆಗಳು ಕ್ಷಮಾಯಾಚನೆ ಮಾಡಿದಾಗ, ಶಿವನು ಕಾಮದೇವನನ್ನು ಬದುಕಿಸಿ ರತಿಗೆ ಶಾಶ್ವತ ಸೌಭಾಗ್ಯ ನೀಡುತ್ತಾನೆ.
3.ಕೃಷ್ಣ ರಾಕ್ಷಸಿ ಪುತನೇಯ ವಿಷಪ್ರಾಷನ ಮಾಡಿ ಕಪ್ಪುನಾದನು. ಅತಿ ಸುಂದರವಾದ ಗೋಪ ಗೋಪಿಯರ ನಡುವೆ ಅವನು ಶ್ಯಾಮವರ್ಣನವನು. ಅವನ ತಾಯಿ, ರಾಧೆಗೆ ಇಷ್ಟವಾದ ಯಾವ ಬಣ್ಣವಾದರು ಕೃಷ್ಣನಿಗೆ ಹಚ್ಚಲು ತಿಳಿಸುತ್ತಾರೆ. ಅಂದನಿಂದ ರಂಗಪಂಚಮಿ ಆಡುತ್ತಾರೆ.
ಫಾಲ್ಗುಣ ಮಾಸದ ಹುಣ್ಣಿಮೆಯ ದಿನ ಜಹೋಳಿದ ಹಬ್ಬವನ್ನು ಆಚರಿಸುವರು. ತದನಂತರ ಆರಂಗಪಂಚಮಿ, ಬಣ್ಣವನ್ನು ಹಾಕಿ ಬಣ್ಣದ ಹಬ್ಬ ಆಚರಿಸುತ್ತಾರೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಹಬ್ಬದ ಆಚರಣೆ ಸಂಪೂರ್ಣ ಬದಲಾಗಿದ್ದು, ವ್ಯಭಿಚಾರ, ಹಿಂಸಾಚಾರದ ರೂಪ ತಾಳುತ್ತಿವೆ. ಹೋಳಿಯ ಹಬ್ಬದಲ್ಲಿ ಹೋಳಿಯನ್ನು ಸುಡಲು ಕಟ್ಟಿಗೆಯ ಸಂಗ್ರಹಣೆ, ಚಂದಾ ವಸೂಲಿ, ಹಲಗೆಯ ಕರ್ಕಶ ಧ್ವನಿ ಮಿತಿಮೀರುತ್ತಿವೆ. ಬಣ್ಣದ ಹಬ್ಬ ತನ್ನ ನಿಜ ಬಣ್ಣವನ್ನು ಕಳೆದುಕೊಳ್ಳುತ್ತಿದೆ. ನೈಸರ್ಗಿಕ ಬಣ್ಣಗಳ ಬದಲಾಗಿ ಆರೋಗ್ಯಕ್ಕೆ ಹಾನಿ ಮಾಡುವ ಆಮ್ಲ, ರಾಸಾಯನಿಕ ಬಣ್ಣ, ಡಾಂಬರ, ಶಗಣಿ, ಮುಂತಾದ ಪದಾರ್ಥಗಳು ಬಳಕೆಯಾಗುತ್ತಲಿವೆ.