ಸದಸ್ಯ:Joylinedsouza/sandbox

ವಿಕಿಪೀಡಿಯ ಇಂದ
Jump to navigation Jump to search

ನೀರು ಜೀವ ಜಲ ಮನುಷ್ಯನಿಗೆ ನೀರು ಅತ್ಯಂತ ಮುಖ್ಯವಾದ ವಸ್ತು. ಸಂಸ್ಕ್ರುತಿಯ ಮೂಲ. ತನಗೆ ಜೀವ ಇಲ್ಲದಿದ್ದರೂ ನೀರು ಸಕಲ ಪ್ರಾಣಿ ಪಕ್ಷಿ ಸಸ್ಯ ಸಂಕುಲಕ್ಕೆ ಜೀವ ನೀಡುವ ಸಂಜೀವಿನಿ. ಪ್ರತಿಯೊಂದು ಜೀವಿಗೂ ಗಾಳಿಯಷ್ಟೇ ನೀರು ಸಹ ಮುಖ್ಯ. ಆದರೆ, ಇಂದು ಜೀವಜಲವನ್ನು ಮಾರಾಟ ವಸ್ತುವಾಗಿ ಹಣ ಮಾಡಿಕೊಳ್ಳಲು ಅನೇಕ ಬ್ರಹತ್ ಕಂಪನಿಗಳು ಈಗ ನೀರು ಮಾರಾಟಕ್ಕೆ ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸಿವೆ. ಇದಕ್ಕೆ ಕಾರಣ ನೀರನ್ನು ಕಲುಷಿತಗೊಳಿಸುವುದು ಮತ್ತು ಕೊಳವೆ ಬಾವಿಗಳನ್ನು ಹೆಚ್ಚಾಗಿ ತೆಗೆಯುತ್ತಿರುವುದರಿಂದ ಭೂಮಿಯ ನೀರು ಕಡಿಮೆಯಾಗುತ್ತಿದೆ. ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶ್ವ ಬ್ಯಾಂಕ್ ಗಳಿಂದ ಸಾಲ ಪಡೆಯುವ ಸಂದರ್ಭದಲ್ಲಿ ಅವರು ಹಾಕಿದ ಶರತ್ತುಗಳಿಗೆ ಒಪ್ಪಲೇ ಬೇಕಾದ ಅನಿವಾರ್ಯತೆಯನ್ನು ಜಾಗತೀಕರಣ ವ್ಯವಸ್ಥೆ ಹೇರಿದೆ. ಇದರಲ್ಲಿ ಪ್ರಮುಖವಾದುದು ನೀರು ಸರಬರಾಜು ಖಾಸಗೀಕರಣ. ಇಡೀ ವಿಶ್ವದಲ್ಲಿ ಶೇ ೧೦ರಷ್ಟು ನೀರು ಪೂರೈಕೆ ವ್ಯವಸ್ಥೆ ಈಗಾಗಲೇ ಖಾಸಗೀಕರಣವಾಗಿದೆ. ಈಗ ಭಾರತದಲ್ಲೂ ಈ ವಿಷಯದ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ, ದೆಹಲಿ, ಮುಂಬಯಿ, ಬೆಂಗಳೂರು ಹಾಗೂ ಮತ್ತಿತರ ಪ್ರಮುಖ ನಗರಗಳಲ್ಲಿ ನೀರು ಪೂರೈಕೆ ವ್ಯವಸ್ಥೆಯನ್ನು ಖಾಸಗಿಯವರಿಗೆ ಒಪ್ಪಿಸಲು ವಿಶ್ವಬ್ಯಾಂಕಿನಿಂದ ಆದೇಶಗಳು ಬಂದಿವೆ. ದೇಶದಲ್ಲಿ ಬಾಟಲೀ ನೀರಿನ ಸಂಸ್ಕ್ರತಿಯು ಅಗಾಧವಾಗಿ ಬೆಳೆಯುತ್ತಿದೆ. ಅಂಕಿ ಅಂಶಗಳ ಪ್ರಕಾರ ನಮ್ಮಲ್ಲಿ ಬಾಟಲೀ ನೀರಿನ ವಹಿವಾಟು ಸುಮಾರು ಸಾವಿರ ಕೋಟಿ ರೂಪಾಯಿ. ದೇಶದಲ್ಲಿ ೧೨೦೦ ಬಾಟಲಿ ನೀರು ಕಾರ್ಖಾನೆ ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ೬೦೦ ತಮಿಳುನಾಡಿನಲ್ಲಿವೆ. ಇನ್ನೊಂದು ಆಶ್ಚರ್ಯದ ವಿಷಯವೆಂದರೆ ನೀರು ಪೂರೈಕೆಯನ್ನು ಖಾಸಗೀಕರಣಗೊಳಿಸುವಲ್ಲಿ ನಮ್ಮ ಕರ್ನಾಟಕ ರಾಜ್ಯವು ಪ್ರಥಮ ರಾಜ್ಯವಾಗಿದೆ. ಪ್ರಯೋಗಿಕವಾಗಿ ಬೆಂಗಳೂರು ನಗರದ ಸುತ್ತಮುತ್ತಲಿನ ೭ ನಗರಸಭೆಗಳು ಮತ್ತು ೧ ಪುರಸಭೆ ವ್ಯಾಪ್ತಿಯಲ್ಲಿ ನೀರು ಪೂರೈಕೆಯ ಕಾರ್ಯಾಚರಣೆ ಮತ್ತು ನಿವಾರಣೆಯ ಜವಾಬ್ದಾರಿಯನ್ನು ಬ್ರಹತ್ ಖಾಸಗಿ ಕಂಪನಿಗೆ ವಹಿಸಲು ಸಿದ್ಧತೆ ನಡೆದಿದೆ. ಆದರೆ ನೀರು ಖಾಸಗೀಕರಣದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ, ಸೂಕ್ತ ತರಬೇತಿ ನೀಡುವ, ಸಾರ್ವಜನಿಕರನ್ನು ಒಳಗೊಂಡ ಚಾಲನಾ ಸಮಿತಿಗಳನ್ನು ಅಂದರೆ ಯೋಜನೆಯನ್ನು ಸಿದ್ಧಪಡಿಸಲು ನಮ್ಮಲ್ಲಿ ತಜ್ಞರು, ಪರಿಣಿತಿ ಹೊಂದಿದವರಿಲ್ಲ.