ವಿಷಯಕ್ಕೆ ಹೋಗು

ಸದಸ್ಯ:Jayateerth S Bhavikatti

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ರಾಘವೇಂದ್ರ ಸ್ತೋತ್ರಮ್

ಶ್ರೀಪೂರ್ಣಬೋಧಗುರುತೀರ್ಥಪಯೋಬ್ಧಿಪಾರಾ ಕಾಮಾರಿಮಾಕ್ಷವಿಷಮಾಕ್ಷ ಶಿರಃಸ್ಪೃಶಂತೀ। ಪೂರ್ವೋತ್ತರಾಮಿತತರಂಗಚರತ್ಸುಹಂಸಾ ದೇವಾಲಿಸೇವಿತಪರಾಂಘ್ರಿಪಯೋಜಲಗ್ನಾ।।

ಶ್ರೀ ಪೂರ್ಣಪ್ರಜ್ಞರ ಪರಂಪರೆಯ, ಸರ್ವಧರ್ಮಗಳಿಗೂ, ವಿಶ್ವದೆಲ್ಲಡೆ ಅತ್ಯಂತ ಮಾನನೀಯರಾದ ಯತಿವರೇಣ್ಯರೇ ಶ್ರೀ ರಾಘವೇಂದ್ರತೀರ್ಥ ಶ್ರೀಪಾದಂಗಳವರು. ಬೆಸಸಂಖ್ಯೆಯ ಕಣ್ಣುಗಳ ಪಾರ್ವತೀಪತಿ ರುದ್ರನು ತಲೆಯ ಮೇಲೆ ಹೊತ್ತ ವಿಷ್ಣುಪದೀ ಎಂದು ಕರೆಸಿಕೊಳ್ಳುವ ಗಂಗೆಯ ಯಾವ ತರಂಗಗಳು ದೇವತೆಗಳಿಂದಲೂ ಪೂಜಿಸಲ್ಪಟ್ಟಿವೆಯೋ ಅಂತೆಯೇ ಲೋಕಮಾನ್ಯರಾದ ನಮ್ಮ ರಾಯರು ಶ್ರೀರಾಮನನ್ನು ಭಜಿಸುವ ಸಕಲರನ್ನೂ ಸಂಸಾರಸಾಗರದಿಂದ ದಾಟಿಸುವಂತೆ ದೇವರಲ್ಲಿ ಮನವಿಮಾಡಿಕೊಳ್ಳುತ್ತಾರೆ.

ಜೀವೇಶಭೀಧಗುಣಪೂರ್ತಿಜಗತ್ಸುಸತ್ವ ನೀಚೋಚ್ಚಭಾವಮುಖನಕ್ರಗಣೈಃಸಮೇತಾ। ದುರ್ವಾದ್ಯಜಾಪತಿಗಿಲೈರ್ಗುರುರಾಘವೇಂದ್ರ ವಾಗ್ದೇವತಾಸರಿದಮುಂ ವಿಮಲೀ ಕರೋತು।।2।।

ಶ್ರೀವ್ಯಾಸರಾಯರು "ಶ್ರೀಮನ್ಮಧ್ವಮತೇ ಹರಿಃ .." ಎಂದು ಒಬ್ಬ ಮಾಧ್ವನು ಮಾಡಿಕೊಳ್ಳಬೇಕಾದ ಕನಿಷ್ಠ ಅನುಷ್ಠಾನಗಳನ್ನು ತಿಳಿಸಿದರು. ಪಂಚಭೇದಗಳು, ಭಗವಂತನ ಪರಿಪೂರ್ಣತ್ವ, ಜಗತ್ತು ಆ ಪರಬ್ರಹ್ಮನಷ್ಟೇ ಸತ್ಯ ಎಂದು ಸಾರಿದ ಅನುಮಾನತೀರ್ಥರ ಶುದ್ಧ ಅನುಯಾಯಿಗಳು ಶ್ರೀರಾಘವೇಂದ್ರತೀರ್ಥರು. ದುರ್ವಾಗಳನ್ನು ವಾದದಲ್ಲಿ ಪರಾಜಯಗೊಳಿಸಿ, ಅವರಿಗೆ ಮತ್ತೆ ಪಾರಿತೋಷಕ ಕೊಟ್ಟು ಅವರಲ್ಲಿ ವೇದವ್ಯಾಸರ ಆರಾಧಿಸಿದರು. "ಗುರುರಾಘವೇಂದ್ರ" ಎಂದು ಸಾಧು ಸಜ್ಜನರ ಬಾಯಿ-ಹೃದಯದಲ್ಲಿ ಸದಾ ಮೆರೆದವರು, ಮೆರೆಯುವರು! ಅಂತಹ ಶ್ರೀರಾಮಭಕ್ತರ ಮಾತುಗಳು ಅರ್ಥಾತ್ ಅವರು ತಿಳಿಸಿರುವ ಶ್ರೀಪೂರ್ಣಪ್ರಜ್ಞರ ಉಕ್ತಿಗಳನ್ನು ನಾವು ಅನುಸಂಧಾನಪೂರ್ವಕವಾಗಿ ಸೇವಿಸಿದರೆ, ಸ್ವತಃ ಲೋಕಪಾವನಿಯಾದ ಗಂಗೆಯೇ ನಮ್ಮನ್ನು ಶುದ್ಧ  ಮಾಡಿದಂತೆ ಎಂದು ಅಪ್ಪಣಾಚಾರ್ಯರು ತಿಳಿಸುತ್ತಾರೆ. 

।।ಪ್ರೀತೋಸ್ತು ಕೃಷ್ಣಃ ಪ್ರಭುಃ ।।