ಸದಸ್ಯ:Jayashree mavinakatte/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜನಪದ ಆಟಗಳಲ್ಲಿ ಜುಬುಲಿಯು ಒ‍ಂದು.ಈ ಆಟದಲ್ಲಿ ಪಲ್ಲೇಯಾಕಾರದ ವಸ್ತುವನ್ನು ಬಳಸುವುದರಿಂದ ಪರ್ಯಾಯವಾಗಿ ಪಲ್ಲೇಯಾಟ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಬಹುತೇಕ ಕಡೆ ಆಟದ ಸ್ವರೂಪ ಒಂದೇ ಆಗಿದ್ದರೂ ಅದರ ಪ್ರದರ್ಶನಗಳಲ್ಲಿ ಭಿನ್ನತೆ ಇರುತ್ತದೆ. ಬಳಸುವ ವಸ್ತು, ಕೋಣೆಗಳ ಸಂಖ್ಯೆಯಿಂದಾಗಿ ಭಿನ್ನತೆಗಳು ಕಂಡು ಬರುತ್ತವೆ. ಇದು ಹುಡುಗಿಯರೇ ಆಡುವ ಆಟವಿದು. ಗಂಡು ಮಕ್ಕಳೂ ಆಡುವುಂಟು. ಆರು ವರ್ಷದಿಂದ ಹದಿನೆಂಟು ವರ್ಷದವರೆಗಿನ ಹುಡುಗಿಯರೇ ಈ ಆಟವನ್ನು ಇಷ್ಟ ಪಡುತ್ತಾರೆ. ಜುಬುಲಿ ಒಂದು ಹೊರಾಂಗಣ ಆಟ. ಹಾಗಾಗಿ ಇದು ಮನೆಯಂಗಳ, ಗದ್ದೆ, ಮೈದಾನ, ರಸ್ತೆ ಬದಿ ಮೊದಲಾದ ಸ್ಥಳಗಳಲ್ಲಿ ಆಡುವ ಆಟವಾಗಿದೆ. ಆಟ ನಿರ್ಧಾರವಾದ ಬಳಿಕ ಆಟಗಾರರು ಜುಬುಲಿಯ ಕೋಣೆಯ ತಯಾರಿ, ಪಲ್ಲೆಯ ಹುಡುಕಾಟ, ನಿಯಮಗಳ ಚರ್ಚೆ, ಅದನ್ನು ವಿವರಿಸಿಕೊಳ್ಳುವುದನ್ನು ಮಾಡುತ್ತಾರೆ .ಈ ಆಟದಲ್ಲಿ ಪಲ್ಲೆ ಪ್ರಧಾನ. ಇದು ಒಂದು ಬಗೆಯ ಗಂಭೀರ ಆಟ. ಇಲ್ಲಿ ಇತರ ಜನಪದ ಆಟಗಳಾದ ಹುಲಿ-ದನ ಆಟಗಳಂತಲ್ಲ. ಇಲ್ಲಿ ಜಗಳ-ಟೀಕೆಗಳಿಗೆ ಅವಕಾಶವಿಲ್ಲ. ಸಹ ಆಟಗಾರರು, ಆಟಗಾರರಲ್ಲದ ಪ್ರೇಕ್ಷಕರು ಈ ಆಟವನ್ನು ಆಸಕ್ತಿ ಮತ್ತು ಗಂಭೀರತೆಗಳಿಂದ ನೋಡುತ್ತಾರೆ. ಈ ಆಟದಲ್ಲಿ ಪಲ್ಲೆ ಪ್ರಧಾನವಾದ್ದರಿಂದ ಅದರ ಆಯ್ಕೆಯಲ್ಲಿ ಹೆಚ್ಚು ಗಮನ ಹರಿಸುತ್ತಾರೆ.ಪರಿಸರದಲ್ಲಿ ದೊರೆಯುವ ಮಡಿಕೆ ಚೂರು, ಚಪ್ಪಡೆ ಕಲ್ಲು, ಹಂಚಿನ ತುಂಡುಗಳನ್ನೇ ಹೆಚ್ಚಾಗಿ ಬಳಸುತ್ತಾರೆ.