ಸದಸ್ಯ:Jainysamuel/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅ, ಆ, ಇ, ಈ, ಉ, ಊ, ಋ, ಎ, ಏ, ಐ, ಒ,ಓ, ಔ, ಅಂ, ಅಃ ಕ, ಖ, ಗ, ಘ, ಙ ಚ, ಛ, ಜ, ಝ, ಞ ಟ, ಠ, ಡ, ಢ, ಣ ತ, ಥ, ದ, ಧ, ನ ಪ, ಫ, ಬ, ಭ, ಮ ಯ, ರ, ಲ, ವ, ಶ, ಷ, ಸ, ಹ, ಳ

ಕ, ಕಾ, ಕಿ, ಕೂ, ಕೃ, ಕೆ, ಕೇ, ಕೈ, ಕೌ, ಕಂ, ಕಃ

ಅಗಸ, ಅಮರ, ಆನೆ, ಅಂಬಾರ, ಅನ್ನ, ಅಣ್ಣ, ಕನ್ನಡ, ರಾಮ, ಸೀತೆ, ಸೌಮಿತ್ರಿ, ಲಕ್ಷ್ಮೀ,

ವೈರಾಣು[ಬದಲಾಯಿಸಿ]

ವೈರಾಣುಗಳು ಡಿ.ಎನ್.ಎ ಅಥವಾ ಆರ್.ಎನ್.ಎ ಎಳೆಗಳನ್ನು ಪ್ರೂಟೀನುಗಳು ಆವರಿಸಿಕೊಂಡಿರುವ ಕಣಗಳಾಗಿವೆ. ಇವುಗಳು ಜೀವಕೋಶಗಳು ಅಲ್ಲ ಎಂಬುದನ್ನು ರುಡಾಲ್ಫ್ ವರ್ಛೊ ಅವರು ಹೊರಡಿಸಿದ ಸೆಲ್ ಥಿಯರಿಯ ಮೂಲಕ ವ್ಯಕ್ತ ಪಡಿಸಲಾಗಿದೆ. ಆದರು ಇವುಗಳು ಜೀವಿಗಳ ಒಳಗಡೆ ಇದ್ದಾಗ ಜೀವ ತುಂಬಿದಂತೆ ಕಾಣುವುದು. ಇದರಿಂದಾಗಿ ವೈರಾಣುಗಳು ಜೀವಿಗಳ ಹಾಗು ನಿರ್ಜೀವ ಲೋಕದ ಮಧ್ಯೆ ಇರುವ ಒಂದು ಸೇತುವೆ ಆಗಿದೆ. ಇವುಗಳು ಹಲವಾರು ರೋಗಗಳನ್ನು ಹೊರಡಿಸುತ್ತದೆ. ಇದರಿಂದಾಗಿ ನಮ್ಮ ವಿಜ್ಞಾನಿಗಳು ಇವುಗಳ ಬಗ್ಗೆ ತಿಳಿದು ಜೀವಿಗಳಲ್ಲಿ ರೋಗಗಳನ್ನು ಉಂಟುಮಾಡುವ ರೀತಿಯನ್ನು ಕುರಿತು ಹೆಚ್ಚು ಮಾಹಿತಿಯನ್ನು ಸಂಗ್ರಹಿಸಿರುವರು. ಜೊತೆಗೆ ಇವುಗಳನ್ನು ಮಾನವನ ಹಾಗು ಪರಿಸರದ ಉಪಯೋಗಕ್ಕಾಗಿಯೂ ಇಂದು ಬಳಸಲಾಗಿದೆ. ವೈರಾಣುಗಳು ಆಕ್ರುತಿಯಲ್ಲಿಯೂ ಗಾತ್ರದಲ್ಲಿಯೂ ವ್ಯತ್ಯಾಸವನ್ನು ತೋರಿಸುವುದು. ಇವುಗಳಲ್ಲಿ ಕೇವಲ ೧೭ ರಿಂದ ೧೦೦೦ ನಾನೋಮೀಟರುಗಳ ವ್ಯಾಸವನ್ನು ನೋಡಬಹುದು.

ಇತಿಹಾಸ[ಬದಲಾಯಿಸಿ]

ವೈರಾಣುಗಳ ಅಸ್ತಿತ್ವವನ್ನು ಹತ್ತೊಂಬತ್ತನೇಯ ಶತಮಾನದಿಂದ ನಿರೀಕ್ಷಣೆಗೆ ಒಳಗೊಂಡಿದೆ. ಇದರ ಫಲವಾಗಿ ಇವುಗಳು ಬ್ಯಾಕ್ಟೀರಿಯಾಗಳಿಗಿಂತ ಚಿಕ್ಕದು ಎಂಬುದು ವ್ಯಕ್ತವಾಯಿತು. ಇನ್ನ ಒಂದು ಹೆಜ್ಜೆ ಮುಂದೆಯಾಗಿ ಇವುಗಳು ಪುನರಾವರ್ತಿಸುವುದು ಜೀವಕೋಶಗಳಲ್ಲಿ ಮಾತ್ರವೆಂದು ತಿಳಿಯಿತು. ೧೮೯೨ರಲ್ಲಿ, ಡಿಮಿಟ್ರಿ ಇವಾನೋವ್ಸ್ಕಿ ಅವರು ಮಾಡಿದ ವ್ಯಾಸಂಗದ ಮೂಲಕ, ಸೋಂಕಿತಗೊಂಡ ಸಸ್ಯರಸವನ್ನು ಬಹಳ ಫೂಟ್ಟ ರಂದ್ರ ಹೊಂದಿರುವ ಶೋಧಕದಲ್ಲಿ ಸೋಸಿದಾಗಲು ಪಡೆದ ದ್ರವಕ್ಕೆ ಬೇರೆ ಆರೋಗ್ಯಕರವಾದ ಗಿಡವನ್ನು ಸೋಂಕಿತಗೊಳಿಸುವ ಶಕ್ತಿ ಉಳಿದಿತ್ತು. ಆದರೆ ಇದೇ ದ್ರವವನ್ನು ಪ್ರಯೋಗಾಲಯದಲ್ಲಿ ಬೆಳೆಯಲು ಸಾಧ್ಯವಾಗಲಿಲ್ಲ. ಪಡೆದ ಫಲಿತಾಂಶದಿಂದ ಇವರು, ಬೆಳೆಯಲು ಅಸಾಧ್ಯವಾದ, ಬ್ಯಾಕ್ಟೀರಿಯಾಗಳಿಗಿಂತ ಚಿಕ್ಕ ಜೀವಿಗಳು ಇವು ಎಂದು ಹೇಳಿದರು. ಇವುಗಳ ನಿಜವಾದ ಸ್ವಭಾವವನ್ನು ೧೯೩೩ರಲ್ಲಿ ಜೀವಶಾಸ್ತ್ರಜನಾದ ವೆಂಡಲ್ ಮೆರೆಡಿತ್ ಸ್ಟಾನ್ಲಿ ಅವರು ಕಂಡುಹಿಡಿದ ಟೊಬಾಕೊ ಮೊಸಾಯ್ಕ್ ವೈರಾಣುವಿನTMV ಮೂಲಕ. ತಂಬಾಕು ಗಿಡದ ಸೋಂಕಿತ ಎಲೆಯನ್ನು ತೆಗೆದು, ಅದರ ಸತ್ವವನ್ನು ಶೇಕರಿಸಿ,ಶುದ್ದಗೊಳಿಸಿ, ಪತನ ಮಾಡಿದಾಗ, ದ್ರವದಲ್ಲಿದ್ದ ಎಲ್ಲವು ಪತನಗೊಂಡವು. ಇದು ಸಾಧ್ಯವಾಗುವುದು ರಾಸಾಯನೀಯ ಪದಾರ್ಥಗಳಲ್ಲಿ ಮಾತ್ರವೆ. ಇದರ ಮೂಲಕ ಇವರು, ವೈರಾಣುಗಳನ್ನು ಸ್ಫಟಕೀಕರಣಗೊಳ್ಳಿಸಿ, ಇವುಗಳು ಕೇವಲ ನಿರ್ಜೀವ ಪದಾರ್ಥಗಳು ಎಂದು ವ್ಯಕ್ತಪಡಿಸಿದರು. ೧೯೪೬ರಲ್ಲಿ ಇವರ ಈ ಕೆಲಸಕ್ಕೆ ನೊಬೇಲ್ ಪುರಸ್ಕಾರ ದೊರಕಿತು. ಕೆಲವು ವರ್ಷಗಳ ನಂತರ ವಿಜ್ಞಾನಿಗಳು ಈ ವೈರಾಣುವಿನ ಸಂಯೋಜನೆ ಆರ್.ಎನ್.ಎ ಹಾಗು ಪ್ರೋಟೀನುಗಳು ಎಂಬುದು ವ್ಯಕ್ತವಾಯಿತು.

ವೈರಾಣುಗಳ ನಿರ್ಮಾಣ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

<ref> Raven, Peter H;Johnson George Brooks. Biology,6th edition. state textbook adoption,Rowan,Salisbury.2000