ಸದಸ್ಯ:Harshitha HB/ನನ್ನ ಪ್ರಯೋಗಪುಟ
ಹೊನ್ನಮ್ಮ ತಾಯಿ ಪುಣ್ಯ ಕ್ಷೇತ್ರ
[ಬದಲಾಯಿಸಿ]
ಕೊಡಗಿನ ತಾಲೂಕುಗಳಲೊಂದಾದ ಸೋಮವಾರಪೇಟೆ ತಾಲೂಕಿನ ದೊಡ್ಡಮಳ್ತೆ ಗ್ರಾಮ ಪಂಚಾಯತಿಯ ವ್ಯಾಪ್ತಿ ಯಲ್ಲಿಯೇ ಇರುವ ಹೊನ್ನಮ ಕೆರೆಯು ಬಹಳ ವಿಶಾಲವಾದ ಕೆರೆಯನ್ನು ಹೊಂದಿದೆ . ಇದು ಕೊಡಗಿನಲ್ಲಿಯೇ ಅತೀ ದೊಡ್ಡ ಕೆರೆಯಾಗಿದೆ. ೬.೨ ವಿಸ್ತೀರ್ಣವನ್ನು ಹೊಂದಿದೆ.
ಊರಿನ ಜನರಿಗೋಸ್ಕರ ತನ್ನನು ತಾನೇ ಕೆರೆಗೆ ಆಹುತಿ ಮಾಡಿಕೊಂಡಿದ್ದಾರೆ. ದೇವಸ್ಥಾನವು ವಿಶಾಲವಾಗಿದ್ದು ಗಣಪತಿ, ಬಸವೇಶ್ವರ, ತಾಯಿ ಹೊನ್ನಮನ ವಿಗ್ರಹವಿದೆ. ಕೆರೆಯ ಬಲಬಾಗದಲ್ಲಿ ಗವಿಬೆಟ್ಟವಿದೆ. ಈ ಬೆಟ್ಟದಲ್ಲಿ ಒಂದು ಗುಹೇ ಇದೆ ,ಗುಹೆ ಅಲ್ಲಿ ತೀರ್ಥ ಉದ್ಭವಿಸುತ್ತದೆ. ಎಡಬಾಗದಲ್ಲಿ ಮೋರಿಬೆಟ್ಟವಿದೆ ಈ ಬೆಟ್ಟವನ್ನು ಪಾಂಡವರ ಪಾರೆ ಎಂದು ಕರೆಯುತ್ತಾರೆ, ಕಾರಣ ಇಲ್ಲಿ ಪಾಂಡವರು ವಾಸಮಾಡುತಿದ್ದ ಮನೆಗಳು ಇದೆ. ಗೌರಿಹಬ್ಬದಂದು ನವದಂಪತಿಗಳು ಕೆರೆಗೆ ಬಾಗಿನ ಸಮರ್ಪಣೆ ಮಾಡುತ್ತಾರೆ . ಆಗೆಯೇ ವರ್ಷಕೊಮ್ಮೆ ಜಾತ್ರೆ ನಡೆಯುತ್ತದೆ.
ಹೊನ್ನಮನ ಕೆರೆಯಿಂದ ಸ್ವಲ್ಪ ದೂರ ಹೋದರೆ ಅಲ್ಲಿ ಸೂಳೆಗುಡಿ ಹಾಗೂ ಬಿಳಿಗೆರೆ ಬಸವಣ್ಣ ದೇವಸ್ಥಾನ ಹಾಗೂ ಶಾಸನಗಳಿವೆ. ಮತ್ತು ಕೋಡಿ ಹರಿಯುವ ಜಾಗದಲ್ಲಿ ಸಿದ್ದೇಶ್ವರ ಗುಡಿ ಇದೆ. ಹಾಗೆಯೇ ಕುದುರೆ ನೆಗೆದ ಕಲ್ಲು ಕೂಡ ಇದೆ .
ಒಟ್ಟಿನಲ್ಲಿ ಈ ಹೊನ್ನಮ ಕೆರೆಯು ಒಂದು ಐತಹಾಸಿಕ ಹಿನ್ನಲೆಯುಳ್ಳ ಜಾನಪದ ಸನ್ನಿವೇಶದ ಕಥೆಯಾಗಿದೆ.