ಸದಸ್ಯ:Harini.ng2001

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
st charles
my school

ನನ್ನ ಜೀವನ[ಬದಲಾಯಿಸಿ]

ನನ್ನ

ನನ್ನ ಪರಿಚಯ ಹಾಗೂ ಬಾಲ್ಯ[ಬದಲಾಯಿಸಿ]



ನಮಸ್ಕಾರ ನನ್ನ ಹೆಸರು ಹರಿಣಿ .ಎನ್. ಜಿ . ನಾನು ಈಗ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿಕಾಂ ಓದುತ್ತಿದ್ದೇನೆ . ನನ್ನ ಊರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕು . ನಾನು ೧೩/೦೯/೨೦೦೧ ರಂದು ಹುಟ್ಟಿದೆ .ನಾನು   ಹುಟ್ಟಿದ್ದು ಭದ್ರಾವತಿಯಲ್ಲಿ . ನನ್ನ ತಂದೆಯ ಹೆಸರು ನಿರಂಜನ್ ಮೂರ್ತಿ . ನನ್ನ ತಾಯಿಯ ಹೆಸರು ಪೂರ್ಣಿಮಾ . ನನ್ನ ತಂದೆಯವರು ಜೂನಿಯರ್ ಟ್ರೈನಿಂಗ್ ಆಫೀಸರ್ ಹಾಗಿ ಐ ಟಿ ಐ  ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ . ನನ್ನ ಅಮ್ಮ ಗೃಹಿಣಿಯಾಗಿದ್ದಾರೆ . ನನ್ನಗೆ ಒಬ್ಬ ತಮ್ಮ ಇದ್ದಾನೆ . ಅವನು ೬ ನೇ ತರಗತಿಯಲ್ಲಿ ಓದುತ್ತಿದ್ದಾನೆ .ನನ್ನಗೆ ತುಂಬಾ ಸ್ನೇಹಿತರು ಇದ್ದಾರೆ ಅವರ ಹೆಸರುಗಳು ಸಿಂಚನ್,ವಿಕಾಸ್,ಮನೋಜ್,ಹರ್ಷಿತಾ,ಸ್ಪೂರ್ತಿ,ಲಾವಣ್ಯ ಇವರೆಲ್ಲರೂ ನನ್ನಗೆ ಬಹಳ ಇಷ್ಟವಾದ ಗೆಳೆಯ ಗೆಳತಿಯರು . ಇವರೆಲ್ಲರೂ ನನ್ನ ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ . ನನಗೆ ಅವರನ್ನು ಕಳೆದು ಕೊಳಲ್ಲು ಇಷ್ಟ ಇಲ್ಲ .ನನ್ನ ಮಾತೃ ಭಾಷೆ ಕನ್ನಡ . ಮನೆಯಲ್ಲಿ ಕನ್ನಡದಲ್ಲೇ ಮಾತನಾಡುತ್ತೇವೆ .ನನ್ನ ಅಜ್ಜ ಕನ್ನಡದ ಶಿಕ್ಷಕರಾಗಿದ್ದರು . ಅವರಿಂದ ನಾನು ಕನ್ನಡ ಓದಲು ಪ್ರಾರಂಭಿಸಿದೆ ಅದರಲ್ಲೇ ನನಗೆ ಹೆಚ್ಚಿನ ಅಂಕಗಳು ಬಂದಿದು ಅದಕ್ಕಾಗಿ ನಾನು ನನ್ನ ಅಜ್ಜನಿಗೆ ಧನ್ಯವಾದ ತಿಳಿಸುತ್ತೇನೆ .

ವಿದ್ಯಾಭ್ಯಾಸ[ಬದಲಾಯಿಸಿ]

ನನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸಂತ ಚಾರ್ಲ್ಸ್ ಆಂಗ್ಲ ಶಾಲೆಯಲ್ಲಿ ಪೂರ್ಣಗೊಳಿಸಿದೆ . ನನ್ನ ಹತ್ತನೇ ತರಗತಿಯನ್ನು ೨೦೧೬ ಅಲ್ಲಿ ಮುಗಿಸಿ ಮುಂದೆ ನಂದನ ಟ್ರಸ್ಟ್ ನ ಆಚಾರ್ಯ ಪದವಿ ಪೂರ್ವ ಕಾಲೇಜು ಶಿವಮೊಗ್ಗದಲ್ಲಿ ನನ್ನ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ .(೨೦೧೭ -೨೦೧೮)ರಲ್ಲಿ ಓದಿ ಮುಗಿಸಿದೆ . ನನ್ನಗೆ ದ್ವಿತೀಯ ಪಿ.ಯು.ಸಿ ಯಲ್ಲಿ ಶೇಕಡ ೯೦ ಅಂಕ ಗಳಿಸಿದ್ದೇನೆ . ಈಗ ನಾನು ಬೆಂಗಳೂರು ಕ್ರೈಸ್ಟ್ ವಿಶ್ವವಿದ್ಯಾಲಯಕ್ಕೆಕ್ಕೆ್ಕೇೆ್ೆ್್ೆ್ೆ್್್್್ . ಇಲ್ಲಿನ ರೀತಿ ರಿವಾಜುಗಳನ್ನು ಪಾಲಿಸಿ ನನ್ನ ಶಿಕ್ಷಣವನ್ನು ಪೂರ್ಣಗೊಳಿಸಲು ಇಷ್ಟಪಡುತ್ತೇನೆ . ಮುಂದಿನ ದಿನಗಳಲ್ಲಿ ನಾನು ಚೆನ್ನಾಗಿ ಓದುತ್ತೇನೆ .

ನನ್ನ ಗುರಿ[ಬದಲಾಯಿಸಿ]

ನನ್ನ ಬಿಕಾಂ ಶಿಕ್ಷಣ ಪೂರ್ಣಗೊಳಿಸಿ ಆನಂತರ ಕೆ .ಎ .ಎಸ್ .ಓದುವ ಹಂಬಲದಲಿದ್ದೇನೆ .ಈಗಿನಿಂದಲೇ ನಾನು ಓದಲು ಶ್ರಮಿಸುತ್ತಿದ್ದೇನೆ . ನನ್ನ ಗುರಿ ಸಾಧಿಸುವ ಮತ್ತೊಂದು  ಮೆಟ್ಟಿಲು ಏರಿದ್ದೇನೆ . ಈಗಿನಿಂದಲೇ ನಾನು ದಿನಪತ್ರಿಕೆಯನ್ನು ಓದುವ ಹವ್ಯಾಸ ರೂಡಿಸಿಕೊಳ್ಳುತಿದ್ದೇನೆ . ದಿನಪತ್ರಿಕೆಯಲ್ಲಿ ಬರುವ ಹೊಸ ವಿಷಯ ವಿಚಾರಗಳನ್ನು ಸಂಗ್ರಹಿಸಿಕೊಂಡು ನನ್ನ ಗುರಿ ಸಾಧಿಸಲು ಬೇಕಾಗಿರುವ ಅಂಶವಾಗಿ ಉಪಯೋಗಿಸಿಕೊಳ್ಳುತ್ತಿದ್ದೇನೆ. ನಾನು ಭ್ರಷ್ಟಾಚಾರ ರಹಿತ ಅಧಿಕಾರಿಯಾಗಿ ದೇಶಕ್ಕೆ ಒಳ್ಳೆ ಪ್ರಜೆ ಆಗಬೇಕೆಂದು ಇದೆನ್ನೆ . ನಾನು ನನ್ನ ಶಾಲೆ ದಿನಗಳಲ್ಲಿ ಚೆನ್ನಾಗಿ ಓದುತ್ತಿದೆ .ಸಾಮಾನ್ಯ ಜ್ಞಾನ  ರಸಪ್ರಶ್ನೆಗಳ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಳ್ಳೆ ರೀತಿ ಅಂಕ ಪಡೆದು ನನ್ನ ಜ್ಞಾನ ವೃದ್ಧಿಸಿ ಕೊಂಡಿದ್ದೇನೆ . ನಾನು ಕ್ರೈಸ್ಟ್ ವಿಶ್ವವಿದ್ಯಾಲಯ ಸೇರಿರುವ ಉದ್ದೇಶವೂ ಈ ಕಾರಣಕ್ಕೆ . ಇಲ್ಲಿ ನಮ್ಮಗೆ ಒಳ್ಳೆ ಅವಕಾಶ ಸಿಗುತ್ತದೆ ಎಂದು ಸೇರಿದ್ದೇನೆ . ನಾನು ಈಗ ಕೆ. ಎ. ಎಸ್. ಗೆ ಸಂಭಂದಪಟ್ಟ ವಿವಿಧ ರೀತಿಯ ಪುಸ್ತಕಗಳನ್ನು ಸಂಗ್ರಹಿಸಿ ಅದರಲ್ಲಿನ ಮುಖ್ಯ ಮತ್ತು ವಿಶೇಷವಾದ ವಿಷಯಗಳನ್ನು ಅರಿತು ನನ್ನ ಮುಂದಿನ ಪರೀಕ್ಷೆಗಾಗಿ ತಯಾರಿಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಇದ್ದೇನೆ .

ನನ್ನ ಹವ್ಯಾಸಗಳು[ಬದಲಾಯಿಸಿ]

ನಾನು ನನ್ನ ಬಿಡುವಿನ ಸಮಯದಲ್ಲಿ ಆದಷ್ಟು ಕಥೆ ,ಜ್ಞಾನ ,ನಾಟಕ ,ಪುಸ್ತಕ ಓದಿದ್ದೇನೆ .ನನ್ನಗೆ ಹಾಡನ್ನು ಕೇಳುವುದು ಬಹಳ ಇಷ್ಟ ಆದರಿಂದ ಬಿಡುವಿನ ಸಮಯದಲ್ಲಿ ಹಾಡು ಕೇಳುತ್ತೇನೆ . ನಾನು ಓದಿ ಮುಗಿಸಿದ ನಂತರ ನನ್ನ ಊರಿಗಾಗಿ ಬಹಳ ನಿಷ್ಠೆಯಿಂದ ಕೆಲಸ ಮಾಡುತ್ತೇನೆ .ನಾನು ನನ್ನ ಸ್ವಾರ್ಥಕ್ಕಾಗಿ ನನ್ನ ಉದ್ದೆಯನ್ನು ದುರುಪಯೋಗ ಪಡಿಸಿಕೊಳ್ಳುವುದಿಲ್ಲ.ನನ್ನ ಹವ್ಯಾಸಗಳು ಯಾವುದೆಂದರೆ ದಿನಪತ್ರಿಕೆ ಓದುವುದು , ದೂರದರ್ಶನ ನೋಡುವುದು,ರಜೆ ದಿನಗಳಲ್ಲಿ ಪ್ರವಾಸ ಹೋಗುವುದು .ಪ್ರವಾಸ ಮಾಡುವುದು ನನ್ನಗೆ ಬಹಳ ಇಷ್ಟ .ನನಗೆ ಚಲನಚಿತ್ರಗಳನ್ನು ನೋಡಲು ಬಹಳ ಇಷ್ಟ. ನನಗೆ ಪುನೀತ್ ರಾಜ್ ಕುಮಾರ್ ಬಹಳ ಇಷ್ಟ ಅವರ ಚಿತ್ರಗಳನ್ನು ನಾನು ಜಾಸ್ತಿ ನೋಡುತ್ತೇನೆ . ನಾನು ಚಲನಚಿತ್ರಗಳನ್ನು ನೋಡುತ್ತೇನೆ . ನಾನು ಜಾಸ್ತಿ ಕನ್ನಡದ ಚಿತ್ರವನ್ನೇ ನೋಡುವುದು . ರಜೆ ದಿನಗಳಲ್ಲಿ ನನ್ನ ಅಜ್ಜಿ ಮನೆಗೆ ಹೋಗಲು ಬಹಳ ಇಷ್ಟ . ಹಳ್ಳಿಯ ಸೊಗಡು ಅಲ್ಲಿನ ವಾತಾವರಣ ನನ್ನ ಮನಸಿಗೆ ಖುಷಿ ತರುತ್ತದೆ . ಹಳ್ಳಿಯಲ್ಲಿ ಸಾಕಿರುವ ಪ್ರಾಣಿಗಳನ್ನು ನೋಡುವುದು ನನಗೆ ತುಂಬಾ ಸಂತೋಷ ಕೊಡುತ್ತದೆ . ಅಜ್ಜಿ ಮಾಡುವ ತಿನಿಸುಗಳು ಬಹಳ ರುಚಿಯಾಗಿರುತ್ತದೆ . ನನಗೆ ಹಳ್ಳಿಯ ಬೆಟ್ಟ ಗುಡ್ಡಗಳು ಬಹಳ ಇಷ್ಟ . ನಮ್ಮ ಆಧುನಿಕ ಯುಗದಲ್ಲಿ ಹಳ್ಳಿಯ ವಾತಾವರಣವನ್ನು ಮರೆತು ಬಿಟ್ಟಿರುತ್ತೇವೆ ಆದರೆ ಅದನ್ನು ನಾವು ಮರೆಯಬಾರದು . ನನ್ನಗೆ ವಿಶ್ವದ೭ಅಧ್ಬುತ ಗಳನ್ನು ನೋಡುವ ಆಸೆ ಬಹಳ . ನನ್ನ ಜೀವನ ಸಮಯದಲ್ಲಿ ಒಂದು ಭಾರಿ ನೋಡಬೇಕೆಂಬ ಹಂಬಲ .ನಾನು ನನ್ನ ಆಸೆಯನ್ನು ಈಡೇರಿಸಿ ಕೊಳ್ಳುತೀನಿ . ನನ್ನ ಜೀವನದಲ್ಲಿ ಬರುವ ಎಲ್ಲಾ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಿ ನನ್ನ ಗುರಿ ತಲುಪುವ ಚಲದಲ್ಲಿ ಇದ್ದೇನೆ .ಹಾಗೂ ನನ್ನಗೆ ತುಂಬಾ ಸಿಟ್ಟು ಬರುತ್ತದೆ ಅದನ್ನ ಕಡಿಮೆ ಮಾಡಿಕೊಳ್ಳಬೇಕೆಂದು ದೃಢವಾಗಿ ಅಂದುಕೊಂಡಿದ್ದೇನೆ. ಹಾಗೂ ನನ್ನ ತಂದೆ ತಾಯಿ ಹಾಗೂ ಕುಟುಂಬಕ್ಕೆ ಒಳ್ಳೆ ಹೆಸರು ತರುವ ಎಲ್ಲಾ ಪ್ರಯತ್ನ ಮಾಡುತ್ತೇನೆ .

ಧನ್ಯವಾದಗಳು.


.