ಸದಸ್ಯ:Hampesh K S/ನನ್ನ ಪ್ರಯೋಗಪುಟ
ದಶಲಕ್ಷಣ ಪರ್ವ ಪರ್ವಅಂದರೆ ಹಬ್ಬ. ಹಬ್ಬವೆಂದರೆ ಸಂಭ್ರಮ, ಸಡಗರ,ಸಂತೋಷ, ಸುಖ-ಭೋಗದ ಕನಸು ಕಾಣುತ್ತೇವೆ. ಆದರೆದಶಲಕ್ಷಣ ಪರ್ವ ಭೋಗದ ಪರ್ವವಲ್ಲ, ತ್ಯಾಗದ ಪರ್ವ, ವೈರಾಗ್ಯದ ಪರ್ವ.ವೈರಾಗ್ಯದಕಡೆಗೆ ಮನಸ್ಸನ್ನುಕೊಂಡೊಯ್ಯುವ ಪರ್ವವಾಗಿದೆ. ಭಾದ್ರಪದ ಮಾಸದಲ್ಲಿ ಪಂಚಮಿಯಿಂದ ಹುಣ್ಣಿಮೆವರೆಗೆ ಹತ್ತು ದಿನಗಳು ದಶಲಕóಣ ಪರ್ವವನ್ನುಜೈನರು ವಿಶಿಷ್ಟ ರೀತಿಯಲ್ಲಿಆಚರಣೆ ಮಾಡುತ್ತಾರೆ.ಸೆ. 6ರಿಂದ 16ರವರೆಗೆ ದಶಲಕ್ಷಣ ಪರ್ವಆಚರಿಸುತ್ತಾರೆ.ಇದುಅಧ್ಯಾತ್ಮಿಕ ಪರ್ವವಾಗಿದ್ದು,ನಮ್ಮ ಭಾವನೆಗಳನ್ನು ಪರಿಷ್ಕರಿಸಿ ಪರಿಶುದ್ದಗೊಳಿಸುವ ಹಬ್ಬವಾಗಿದೆ.ವರ್ತನೆಯಲ್ಲಿ ಪರಿವರ್ತನೆ ಮಾಡುವ ಪರ್ವವಾಗಿದೆ. ವಿಕಾರ ಭಾವನೆಗಳನ್ನು ತ್ಯಜಿಸಿ,ಮಾನವೀಯ ಮೌಲ್ಯಗಳನ್ನು ಹೊಂದಿರುವಉದಾತ್ತ ಭಾವನೆಗಳನ್ನು ಸ್ವೀಕರಿಸುವುದೇ ಈ ಪರ್ವದ ಮೂಲ ಉದ್ದೇಶವಾಗಿದೆ. ಈ ಪರ್ವದಲ್ಲಿ ಶ್ರಾವಕ-ಶ್ರಾವಕಿಯರು ಸಂಯಮಿಗಳಾಗುತ್ತಾರೆ.ಜಪ-ತಪ,ಪೂಜೆ,ಧ್ಯಾನ,ಪ್ರಾರ್ಥನೆಯಲ್ಲಿ ತಲ್ಲೀನರಾಗುತ್ತಾರೆ.ತಮ್ಮ ಪ್ರಾಯ,ಶಕ್ತಿ-ಸಾಮಥ್ರ್ಯಕ್ಕೆಅನುಗುಣವಾಗಿ ಉಪವಾಸ ಮಾಡುತ್ತಾರೆ ಉತ್ತಮ ಕ್ಷಮೆ,ಮಾರ್ದವ,ಆರ್ದವ,ಶೌಚ,ಸತ್ಯ,ಸಂಯಮ,ತಪ,ತ್ಯಾಗ,ಆಕಿಂಚನ್ಯ ಮತ್ತು ಬ್ರಹ್ಮಚರ್ಯ-ಇವುದಶ ಧರ್ಮಗಳು.ಒಂದೊಂದು ಪರ್ವವುಒಂದೊಂದು ದಿನಕ್ಕೆ ಮೀಸಲಾಗಿದೆ.ಆಯಾ ದಿನ ಆ ಧರ್ಮದ ಬಗ್ಗೆ ಚಿಂತನ-ಮಂಥನ ನಡೆಸಿ ಆತ್ಮಧರ್ಮವನ್ನು ತಿಳಿಯುವ ಪ್ರಯತ್ನ ಮಾಡಲಾಗುತ್ತದೆ.ಎಲ್ಲ ಬಸದಿಗಳಲ್ಲಿ ಅಷ್ಟವಿಧಾರ್ಚನೆ,ಭಜನೆ,ಪ್ರಾರ್ಥನೆ,ವಿದ್ವಾಂಸರಿಂದ ಪ್ರವಚನ,ವೀಶೆಷ ಆರಾದನೆ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಉತ್ತಮಕ್ಷಮಾಧರ್ಮ: ಕ್ರೋಧವೆಂಬ ಕಷಾಯವನ್ನು,ಕೋಪತಾಪವನ್ನು,ಒರಟುತನವನ್ನು ಬಿಟ್ಟು ಸರಳ,ಸಭ್ಯ,ಸಾತ್ವಿಕನಾಗಿ ಬಾಳುವುದೇ ಕ್ಷಮಾಧರ್ಮ.ಕ್ಷಮೆಯುಅಂತರಂಗದ ಸ್ವಭಾವ.ಅಹಿಂಸೆಯ ಹೆಗ್ಗುರುತು.ಇಂತಹ ಸೌಮ್ಯಗುಣವನ್ನು ಬೆಳೆಸಿಕೊಡು ಬಾಳುವುದೇ ಉತ್ತಮಕ್ಷಮಾಧರ್ಮವಾಗಿದೆ. ಉತ್ತಮ ಮಾರ್ದವ: ಮನ,ವಚನ,ಕಾಯದಲ್ಲಿ ಮೃದು ಸ್ವಭಾವದಿಂದ,ಶಾಂತಿಯಿಂದ ಬಾಳುವುದೇ ಮಾರ್ದವಧರ್ಮ.ಅಹಂಕಾರತೊರೆದು,ಮಮಕಾರ ಬಿಟ್ಟು ಸರಳ ಜೀವನ ನಡೆಸುವುದೇ ಮಾರ್ದವವಾಗಿದೆ. ಉತ್ತಮಆರ್ಜವ: ಕುಟಿಲತೆಯನ್ನು ತ್ಯಜಿಸಿ ಧರ್ಮ,ನ್ಯಾಯ ಮಾರ್ಗದಲ್ಲಿ ಸಾತ್ವಿಕಜೀವನ ನಡೆಸುವುದೇಆರ್ಜವಧರ್ಮವಾಗಿದೆ. ಉತ್ತಮ ಶೌಚ: ಆಂತರಿಕ ಪವಿತ್ರತೆಯೆ ಶೌಚ ಧರ್ಮ,ಅತಿಯಾಸೆ,ಜಿಪುಣತನತೊರೆದುಉದಾರ ಗುಣಗಳಿಂದ ದಾನ,ಧರ್ಮ ಪರೋಪಕಾರದೊಂದಿಗೆಉತ್ತಮಜೀವನ ನಡೆಸುವುದೇ ಶೌಚಧರ್ಮವಾಗಿದೆ. ಉತ್ತಮ ಸತ್ಯ: ಸುಳ್ಳು,ಮೋಸ ವಂಚನೆಯನ್ನುತೊರೆದು ಪ್ರಾಮಾಣಿಕವಾಗಿ ಬಾಳುವುದೇ ಸತ್ಯಧರ್ಮ,ತನ್ನ ನಡೆ-ನುಡಿಯನ್ನುಉತ್ತಮವಾಗಿಟ್ಟುಕೊಂಡು ಸತ್ಯವಾದ ಧರ್ಮ,ದೇವರು,ಗುರು,ಶಾಸ್ತ್ರವನ್ನು ನಂಬಿ ತಿಳಿದು ಪಾಲಿಸುವುದೇಉತ್ತಮ ಸತ್ಯವಾಗಿರುತ್ತದೆ. ಉತ್ತಮ ಸಂಯಮ: ಇಂದ್ರಿಯ ಮತ್ತು ಮನಸ್ಸನ್ನು ನಿಗ್ರಹಿಸಿ,ಶೀಲವಂತರಾಗಿ,ವ್ರತ-ನಿಯಮಗಳೊದಿಗೆ ಧ್ಯಾನ,ಸ್ವಾಧ್ಯಾಯ ಮಾಡುವುದೇ ಸಂಯಮಧರ್ಮವಾಗಿದೆ. ಉತ್ತಮತಪ: ಆಸೆ-ಆಕಾಂಕ್ಷೆಗಳನ್ನು ನಿರೋದಿಸಿ ತನು-ಮನವನ್ನು ನಿಯಂತ್ರಿಸಿ ಉಪವಾಸಾದಿ ನಿಯಮಗಳ ಪಾಲನೆ ಉತ್ತಮತಪವಾಗಿದೆ. ಉತ್ತಮತ್ಯಾಗ: ಅಹಂಕಾರ,ಮಮಕಾರ ತ್ಯಜಿಸಿ,ದಾನ-ಧರ್ಮ,ಪರೋಪಕಾರ ಮಾಡುತ್ತ,ಆತ್ಮಧರ್ಮವನ್ನು ನಂಬಿ,ತಿಳಿದು ಪಾಲಿಸುವುದೇಉತ್ತಮತ್ಯಾಗಧರ್ಮವಾಗಿದೆ. ಉತ್ತಮಆಕಿಂಚನ್ಯ: ಎಲ್ಲ ಬಾಹ್ಯ ಪರಿಗ್ರಹಗಳನ್ನು ತೊರೆದು ವೀತರಾಗ ಭಾವದಿಂದ ಬಾಳುವುದೇ ಆಕಿಂಚನ್ಯಧರ್ಮ.ಧಾರ್ಮಿಕಕ್ರಿಯೆಯಲ್ಲಿತೊಡಗಿ,ಸಾತ್ವಿಕ ವೃತ್ತಿಯಿಂದ ಬಾಳುವುದೇ ಆಕಿಂಚನ್ಯಧರ್ಮವಾಗಿದೆ. ಉತ್ತಮ ಬ್ರಹ್ಮಚರ್ಯ: ಆತ್ಮಜ್ಞಾನವನ್ನು ಹೊಂದಿ ಆತ್ಮಾರಾದನೆಯಲ್ಲಿ ನಿರತವಾಗಿ,ಸರಳ,ಸಾತ್ವಿಕ ಆಹಾರ ಸೇವನೆಯೊಂದಿಗೆ ಬಾಳುವುದೇ ಉತ್ತಮ ಬ್ರಮ್ಮಚರ್ಯಧರ್ಮವಾಗಿದೆ. ಈ ದಶಧರ್ಮಾರಾಧನೆಯಕೊನೆಯ ದಿನ ಕóಮಾವಾಣಿ ದಿನವನ್ನಾಗಿಆಚರಿಸುವ ಸಂಪ್ರದಾಯವಿದೆ.ಪರಸ್ಪರಕóಮೆಯಾಚಿಸುವುದರ ಮೂಲಕ ತಮ್ಮಿಂದಆಗಿರುವ ತಪ್ಪು-ಕೋಪಗಳನ್ನು ಮರೆತುಕóಮಿಸಬೇಕೆಂದು ಕೇಳುತ್ತಾರೆ.ದಶ ಧರ್ಮಗಳ ಅನುಷ್ಠಾನ ಕೇವಲ ಹತ್ತು ದಿನಗಳಿಗೆ ಸೀಮಿತವಾಗಬಾರದು.ನಿತ್ಯವು ಧರ್ಮಚರಣೆ ಮಾಡಿದಾಗಜೀವನಪಾವನವಾಗುತ್ತದೆ. ಇಹ-ಪರದಲ್ಲಿ ಸುಖ-ಶಾಂತಿ ಸಿಗುತ್ತದೆ