ಹೊಸವೀಡು ಹುಂಡಿ (ಗ್ರಾ) ವು ನಂಜನಗೂಡು (ತಾ) ಮೈಸೂರು (ಜಿ) ಯಲ್ಲಿದೆ. 1000 ಕಿಂತ ಅಧಿಕವಾಗಿ ಜನಸಂಖ್ಯಾಯನ್ನು ಈ ಗ್ರಾಮವು ಹೊಂದಿತ್ತು ,ನಂತರ ಕೆಲವು ಆಂತರಿಕ ಕಾರಣಗಳಿಂದ ಈ ಗ್ರಾಮವು ಪ್ರತ್ತೇಕವಾಗಿ ಹೊಸವೀಡು ಹುಂಡಿ ಮತ್ತು ಹೊಸವೀಡು ಎಂದು 2 ಗ್ರಾಮಗಳಾಗಿವೆ. ಪ್ರಸ್ತುದಲ್ಲಿ 400-500 ಕುಟುಂಬಗಳು ವಾಸಮಾಡುತ್ತಿವೆ . ಈ ಗ್ರಾಮದಲ್ಲಿ ಗಂಡಿನ ಲಿಂಗಾಣುಪಾತ ಹೆಚ್ಚಿದೆ .ಇಲ್ಲಿ ಯಾವುದೇ ರೀತಿಯ ತಾರತಮ್ಯವಿಲ್ಲದೆ ಜನರು ವಾಸಿಸುತಿದ್ದಾರೆ .ಇಲ್ಲಿ ಕೃಷಿಯೇ ಪ್ರಮುಖ ಕಸುಬಾಗಿದೆ .ಸುತ್ತಮುತ್ತಲಿನ 48 ಗ್ರಾಮಗಳೊಂದಿಗೆ ಗ್ರಾಮವು ಗಡಿಯನ್ನು ಹೊಂದಿದೆ .
ಈ ಗ್ರಾಮದಲಿ ಒಂದು ಅರಳಿ ಮರವಿದೆ ,ಈ ಮರವು ತೇರಿನ ಆಕಾರವನ್ನು ಹೊಂದಿದೆ . ಈ ಗ್ರಾಮದ ಸ್ವಲ್ಪ ಅಂತರದಲ್ಲಿ ಬೆಳದಕುಪ್ಪೆ ಶ್ರೀ ಮಹದೇಶ್ವರ ದೇವಾಲಯವಿದೆ . ಈ ದೇವಾಲಯವು ಬಂಡೀಪುರ ಅರಣ್ಯ ಪ್ರದೇಶಕ್ಕೆ ಸೇರಿದುದಾಗಿದ್ದು ಈ ದೇವಾಲಯವು ಅರಣ್ಯದ ಮದ್ಯಭಾಗದಲ್ಲಿದೆ. ಪ್ರತಿ ಸೋಮವಾರ ಮತ್ತು ಶುಕ್ರವಾರ ವಿಶೇಷ ಪೂಜೆಯನ್ನು ಮಾಡಲಾಗುತದೆ .
ಈ ದೇವಾಲಯದ ವಿನ್ಯಾಸವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. ಪ್ರತಿ ವರ್ಷ ಕೊನೆಯ ಕಾರ್ತಿಕ ಮಾಸದಲ್ಲಿ ವಿಜೃಂಭಣೆಯಿಂದ ಜಾತ್ರೆಯನ್ನು ಮಾಡುತ್ತಾರೆ ,ಇಲ್ಲಿಗೆ ಸುತ್ತಮುತ್ತಲಿನ ಊರುಗಳಿಂದ ಹಲವಾರು ಜನರು ಹೆತ್ತಿನ ಗಾಡಿಯ ಮೂಲಕ ಭಕ್ತಿ ಭಾವನೆಗಳನ್ನು ಹೊತ್ತಿ ಬರುತ್ತಾರೆ.
ಈ ಗ್ರಾಮದಲ್ಲಿ ಯುವಕರು ಶಿಕ್ಷಣವನ್ನು ಪಡೆದು ತಮ್ಮ ಅನುಕೂಲಕ್ಕಾಗಿ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಕೊಂಡಿದ್ದಾರೆ. ಇಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಸಂಘವು ಚಾಲ್ತಿಯಲ್ಲಿದ್ದು ಈ ಸಂಘದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಈ ಸಂಘದ ಸದಸ್ಯರು ಹಮ್ಮಿಕೊಳ್ಳುತ್ತಾರೆ. ಅಂಬೇಡ್ಕರ್ ರವರ 125ನೇ ಜನ್ಮ ದಿನಾಚಾರಣೆಯ ಅಂಗವಾಗಿ ಈ ಗ್ರಾಮದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು, ಅದೇನೆಂದರೆ "ರಾಮ ಮಂದಿರವನ್ನು ಬುದ್ಧ ವಿಹಾರವಾಗಿ" ಮಾರ್ಪಾಟು ಮಾಡಲಾಗಿದೆ. ಸತ್ಯ ಆಸತ್ಯದ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಏರ್ಪಡಿಸುತ್ತಾರೆ. ಕರ್ನಾಟಕದಲ್ಲೇ ರಾಮ ಮಂದಿರವನ್ನು ಬುದ್ಧ ವಿಹಾರವನ್ನಾಗಿ ಮಾಡಿದ ಮೊದಲ ಗ್ರಾಮ ಎಂದು ಹೇಳಲು ಆಶಿಸುತ್ತೇನೆ. ಊರಿನ ಮುಖಂಡರ ಸಮ್ಮುಖದಲ್ಲಿಯೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ. ಹೀಗೆ ಹೊಸವೀಡು ಹುಂಡಿ ಗ್ರಾಮವು ಪೂರ್ವಜರ ಕಾಲದಿಂದಲೂ ಸಾಮಾಜಿಕವಾಗಿ,ಧಾರ್ಮಿಕವಾಗಿ,ಸಾಂಸ್ಕೃತಿಕವಾಗಿ ತನ್ನ ಪರಂಪರೆಯನ್ನು ಉಳಿಸಿಕೊಂಡು ಬಂದಿದೆ.