ವಿಷಯಕ್ಕೆ ಹೋಗು

ಸದಸ್ಯ:Gururaj 2210561/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರಗಳು !!

ನನ್ನ ಕಿರು ಪರಿಚಯ

[ಬದಲಾಯಿಸಿ]

ನನ್ನ ಹೆಸರು ಗುರುರಾಜ್. ಏನ್

ನಾನು ಹುಟ್ಟಿದ್ದು ಮಾರ್ಚ್ ೧೮ ೨೦೦೪ ರಂದು ಬೆಂಗಳೂರಿನ ಚಾಮರಾಜಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ .ನನ್ನ ತಂದೆಯ ಹೆಸರು ನಾರಾಯಣ್ , ತಾಯಿ ರೇಣುಕಾ ಹಾಗೂ ನನ್ನ ತಮ್ಮನ ಹೆಸರು ಸೂರಜ್ ನನ್ನ ತಾತ ಮುತ್ತು ಅಜ್ಜಿ ಮೂಲತಃ ಮಾಗಡಿ ತಾಲ್ಲೂಕಿನ ಬಸವನಗುಡಿ ಪಾಳ್ಯ ಎಂಬ ಗ್ರಾಮದವರು ನನ್ನ ತಾತನ ಹೆಸರು ಸೀನಪ್ಪ ಮತ್ತು ಅಜ್ಜಿಯ ಹೆಸರು ಜಯಮ್ಮ ಈಗ ನಮ್ಮ ಜೊತೆ ಬೆಂಗಳೂರಿನಲ್ಲಿ ಇದರೆ

ನನ್ನ ಬಾಲ್ಯ ಮತ್ತು ಶಾಲಾ ದಿನಗಳು

[ಬದಲಾಯಿಸಿ]

ನಾನು ನನ್ನ ಪ್ರೌಡ ಮತ್ತು ಪ್ರಾಥಮಿಕ ಶಾಲೆಯನ್ನು ಕುಂಡಲಹಳ್ಳಿ ಐಟಿಪಿಲ್ ಮುಖ್ಯ ರಸ್ತೆಯಲ್ಲಿ ಇರುವ ಬ್ರಿಲಿಯಂಟ್ ಶಾಲೆಯಲ್ಲಿ ಮುಗಿಸಿದೆ .ನಾನು ನನ್ನ ೧೦ ನೇ ತರಗತಿಯಲ್ಲಿ ೪೯೮ ಅಂಕಗಳನ್ನು ಗಳಿಸಿದೆ. ನನ್ನ ಶಾಲೆಯಲ್ಲಿ ನನಗೆ ಆಸಕ್ತಿ ಇದ ವಿಷಿಯಗಳು ಕನ್ನಡ , ಸಮಾಜ ಮತ್ತು ಗಣಿತ. ನಾನು ನನ್ನ ಶಾಲೆಯ ಜೀವನದಲ್ಲಿ ಹಲವು ಸ್ಪ್ರದೇಯಲ್ಲಿ ಹಾಗೂ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ . ಶಾಲೆಯಲ್ಲಿ ನನ್ನ ಪ್ರೀತಿಯ ಶಿಕ್ಷಕರು ಎಂದರೆ ನನ್ನ ಕನ್ನಡ ಶಿಕ್ಷಕರು ಸಿದ್ದರಾಜು ಸರ್ ಮತ್ತು ಜಯಶ್ರೀ ಮೇಡಂ ಮತ್ತು ನಾನಾ ಅತಿಮಿಯ ಗೆಳಯರು ಎಂದರೆ ಅಜಯ್ ,ಅರವಿಂದ್,ರಿಷಿ ಇವರು ನಾನಾ ಜೊತೆಯಲ್ಲಿ ಇರುತ್ತಿದ್ದರು.ನನ್ನ ಶಾಲೆಯಲ್ಲಿ ನನ್ನ ಸ್ನೇಹಿತರ ಬಳಗ ತುಂಬಾ ದೊಡ್ಡದು ನಾನು ಎಲ್ಲರೊಂದಿಗೂ ಆತ್ಮೀಯವಾಗಿ ಸಂತೋಷದಿಂದ ಇರುತಿದೇ.ನನ್ನ ಶಾಲೆ ಮತ್ತು ಬಾಲ್ಯದಲ್ಲಿ ನಾನು ತುಂಬಾ ಇಷ್ಟ ಪಡುತ್ತಿದ್ದ ವಸ್ತು ಎಂದರೆ ನನ್ನ ಆಟದ ವಸ್ತುಗಳು ಮತ್ತು ನನಗೆ ನನ್ನ ಅಜ್ಜಿಯ ಕೈಯಲ್ಲಿ ಕೈತುತ್ತು ತಿನ್ನುವದು ತುಂಬಾ ಇಷ್ಟ ವಾಗುತಿತ್ತು ಏಕೆ ಎಂದರೆ ನನಗೆ ನನ್ನ ಅಜ್ಜಿ ಎಂದರೆ ತುಂಬಾ ಇಷ್ಟ ಅವಳು ನನ್ನ ತುಂಬಾ ಮುದಾಗಿ ಮತ್ತು ಪ್ರೀತಿಯನ್ನ ಆರೈಕೆ ಮಾಡುತ್ತಾ ಬೆಳೆಸಿದ್ದಾಳೆ .


ನನ್ನ ಕಾಲೇಜು ದಿನಗಳು

[ಬದಲಾಯಿಸಿ]

ನಾನು ನನ್ನ ೧೧ ಮತ್ತು ೧೨ ನೇ ತರಗತಿಯನ್ನು ಕ್ರೈಸ್ಟ್ ಪಿಯು ಇವಿನಿಂಗ್ ಕಾಲೇಜ್ ನಲ್ಲಿ ನನ್ನ ವಿದ್ಯಾಭ್ಯಾಸವನ್ನು ಮುಗಿಸಿದೆ, ನಮ್ಮನು ಕರೋನಾ ಬ್ಯಾಚ್ ಹಾಗೂ ಆನ್ಲೈನ್ ಬ್ಯಾಟ್ಸ್ ಎಂದು ಕರೆಯುತ್ತಿದ್ದರು . ನನ್ನ ತರಗತಿಗಳು ಇದ್ದದು ಬರಿ ಒಂದು ವರೆ ವರ್ಷ ಮಾತ್ರ ಅದರಲ್ಲೂ ನೆನಪುಗಳನ್ನು ಮಾಡಿಕೊಂಡಿದ್ದೇನೆ . ಕಾಲೇಜು ಜೀವನದಲ್ಲಿ ನನಗೆ ತುಂಬಾ ಆಸಕ್ತಿ ಇದ್ದ ವಿಷಯವೆಂದರೆ ಅಕೌಂಟೆನ್ಸಿ ಮತ್ತು ಕನ್ನಡ. ನನ್ನ ಕಾಲೇಜಿನ ಜೀವನದಲ್ಲಿ ಕೂಡ ಕನ್ನಡದ ಬಹುತೇಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದೇನೆ ನನ್ನ ಪ್ರಿಯ ಶಿಕ್ಷಕಿಯ ಹೆಸರು ಐಶ್ವರ್ಯ ರಾಣಿ ಮೇಡಂ . ಹಾಗೂ ನನ್ನ ಗೆಳೆಯರ ಹೆಸರು ಪ್ರಜ್ವಲ್ ಪೊನ್ನಪ್ಪ .ನನ್ನ ೧೨ನೇ ತರಗತಿಯಲ್ಲಿ ೪೮೯ ಅಂಕಗಳನ್ನುಗಳನ್ನು ಗಳಿಸಿದ್ದೆ. ನನ್ನ ಕಾಲೇಜು ದಿನಗಳಲ್ಲಿ ನಾನು ನನ್ನ ಗೆಳೆಯರೊಂದಿಗೆ ತುಂಬಾ ನೆನಪುಗಳನ್ನು ಮಾಡಿಕೊಂಡಿದ್ದೇನೆ ಅದರಲ್ಲೂ ನಾನು ನನ್ನ ಗೆಳೆಯರೊಂದಿಗೆ ಹಲವಾರು ಚಿತ್ರಗಳನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿದ್ದೇವೆ . ನಮ್ಮ ಕ್ಲಾಸ್ ಶುರುವಾಗುತ್ತಿದ್ದು ಮಧ್ಯಾಹ್ನ ಅದಕ್ಕೂ ಮುನ್ನೇ ನಾವು ಚಿತ್ರಮಂದಿರಕ್ಕೆ ಹೋಗಿ ದಿನದ ಸೆಕೆಂಡ್ ಶೋ ಗಳನ್ನು ನೋಡುತ್ತಿದ್ದೆವು . ನಾನು ಮಾಂಸಾಹಾರಿ ಪ್ರೇಮಿ ಆದ್ದರಿಂದ ನನ್ನ ಗೆಳೆಯರು ಕೂಡ ಮಾಂಸಾಹಾರಿ ಪ್ರೇಮಿಗಳು ದಿನ ಸಂಜೆ ಕಬಾಬ್ ತಿನ್ನಲು ಹೋಗುತ್ತಿದ್ದೇವೆ . ಕ್ಲಾಸ್ ಮುಗಿದ ನಂತರ ರೆಡ್ ಬೆಂಚಸ್ ಅಲ್ಲಿ ಕುಳಿತುಕೊಂಡು ತುಂಬಾ ಹರಟೆ ಮಾಡುತ್ತ ನಮ್ಮ ದಿನಗಳ ದಿನವನ್ನು ಅಲ್ಲೇ ಕಳೆಯುತ್ತಿದ್ದೇನೆ ಮನೆಗೆ ಬರುವಷ್ಟರಲ್ಲಿ ರಾತ್ರಿ 9:00 ಆಗುತ್ತಿತ್ತು ಮನೆಗೆ ಬಂದು ದಿನವೂ ಬಯಸಿಕೊಳ್ಳುತ್ತಿದ್ದೇನೆ. ಆದ ನಂತರ ಇನ್ನೇನು ನಮ್ಮ ಎರಡನೇ ಪಿಯುಸಿ ಮುಗಿಯುವ ಕೊನೆಯ ದಿನಗಳಲ್ಲಿ ನಾನು ನನ್ನ ಐದಾರು ಗೆಳೆಯರೊಂದಿಗೆ ಧರ್ಮಸ್ಥಳ ಟ್ರಿಪ್ ಹೋಗಿದ್ದೆ ಅದು ತುಂಬಾ ಬಹಳ ಮನಮೋಹಕವಾಗಿದ್ದು ನನ್ನ ಗೆಳೆಯರೊಂದಿಗೆ ಸಮಯ ಓದದೆ ತಿಳಿದಿಲ್ಲ. ಅಲ್ಲಿ ಹೋಗಿ ತುಂಬಾ ಮಳೆ ಬರುತ್ತಿತ್ತು ಏಕೆಂದರೆ ಅದು ಮಳೆಗಾಲದ ಸಮಯ ಆ ಮಳೆಯಲ್ಲಿ ಕೂಡ ನಾವು ಅಲ್ಲೆಲ್ಲ ತಿರುಗಾಡಿ ಎಲ್ಲಾ ಜಾಗಗಳನ್ನು ನೋಡಿ ನಂತರ ಬರುವಾಗ ಟ್ರೈನ್ ನಲ್ಲಿ ಬಂದಿದೆ ಕಾರಣ ಅವರಿವರ ಸೀಟಲ್ಲಿ ಕುಳಿತುಕೊಂಡು ಬಂದೆವು . ಆದ ನಂತರ ನಮ್ಮ ದ್ವಿತೀಯ ಪಿಯುಸಿಯ ಅಂಕಗಳು ಹೊರ ಬಿಟ್ಟರು ಅದು ಮುಗಿದ ನಂತರ ನಾವೆಲ್ಲರೂ ಒಂದೊಂದು ಕಾಲೇಜುಗಳಿಗೆ ಅಪ್ಲಿಕೇಶನ್ ಹಾಕಿದ್ದೆವು. ಈಗಲೂ ಕೂಡ ನಾವು ನಮ್ಮ ಸ್ನೇಹಿತರೊಂದಿಗೆ ತುಂಬಾ ಆತ್ಮೀಯರಿಂದ ಇದ್ದೇನೆ.

ನನ್ನ ಪಿಯುಸಿ ವ್ಯಾಸಂಗ ಮುಗಿದ ನಂತರ

ನನ್ನ ಪಿಯುಸಿ ವ್ಯಾಸಂಗ ಮುಗಿದ ಮೇಲೆ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ನಾನು ಡಿಗ್ರಿ ಅರ್ಜಿಯನ್ನು ಬಿಕಾಂ ಗೆ ಹಾಕಿದೆ ಆಗ ನಾನು ಎರಡು ಬಾರಿ ರಿಜೆಕ್ಟ್ ಆಗಿ ಮೂರನೇ ಬಾರಿ ನಾನು ಸೆಲೆಕ್ಟ್ ಆದೆ ಈಗ ನಾನು ನನ್ನ ಬಿಕಾಂ ವ್ಯಾಸಂಗವನ್ನು ಕ್ರೈಸ್ಟ್ ವಿಶ್ವವಿದ್ಯಾಲಯದ ಬಿಕಾಂ ಮಾರ್ನಿಂಗ್ ತರಗತಿಯಲ್ಲಿ ವ್ಯಾಸಂಗವನ್ನು ಮಾಡುತ್ತಿದ್ದೇನೆ ಈಗ ನನಗೆ ಬಹಳ ಗೆಳೆಯ ಗೆಳತಿಯರು ಸಿಕ್ಕಿದ್ದಾರೆ ನನ್ನ ಆಸಕ್ತಿಯ ವಿಷಯ ಕನ್ನಡ ಮತ್ತು ಅಕೌಂಟೆನ್ಸಿ, ಬಿಸಿನೆಸ್ ಸ್ಟಡೀಸ್. ನಾನು ನನ್ನ ಬಿಕಾಂ ಮುಗಿಸಿದ ನಂತರ ಬ್ಯಾಂಕಿಂಗ್ ಪರೀಕ್ಷೆಯನ್ನು ಬರೆಯಬೇಕು ಎಂದು ನಿರ್ಧಾರ ಮಾಡಿದ್ದೇನೆ.

ನನ್ನ ಆಸಕ್ತಿಯ ವಿಷಯಗಳು

[ಬದಲಾಯಿಸಿ]

ನನಗೆ ಪ್ರಾಣಿಗಳು ಎಂದರೆ ಬಹಳ ಇಷ್ಟ ಅದರಲ್ಲೂ ನಾಯಿ ಎಂದರೆ ತುಂಬಾ ಇಷ್ಟ ಯಾಕೆಂದರೆ ಅದು ನಿಯತ್ತಿನ ಪ್ರಾಣಿ ನಮ್ಮ ಮನೆಯಲ್ಲಿ ಕೂಡ ನಾಯಿ ಸಾಕುತ್ತಿದ್ದೇನೆ

ನನ್ನ ಆಸಕ್ತಯ ವಿಷಯವೆಂದರೆ ನನ್ನಗೆ ಚಿಕ್ಕವನಿದ್ದಾಗಿನಿಂದ ನಂಗೆ ತುಂಬಾ ಇಷ್ಟವಾದಾಡು ಎಂದರೆ ಚಿತ್ರ ಬಿಡಿಸುವುದು ನಾನು ಹಲವಾರು ಚಿತ್ರ ಬಿದಿಸಿದನೆ ಮತ್ತು ನನ್ನಗೆ ಚಿತ್ರ ಬಿದಿಸಿದಕೆ ಹಲವಾರು ಪ್ರಶಸ್ತಿ ಕೂಡ ಸಿಕ್ಕಿದವೇ ಅಡಲದೆ ನನಗೆ ಚಲನಚಿತ್ರ ನೋಡುವ ಹುಚ್ಚು ಎಲ್ಲ ಭಾಷೆಯ ಚಲನಚಿತ್ರ ಗಳನ್ನು ನೋಡುತ್ತೇನೆ. ಮತ್ತು ನನಗೆ ಹೊರ ಪ್ರಪಂಚವನ್ನು ಸುತ್ತುವ ಅಸೇ ನನ್ನು ನನ್ನ ಮನೆಯವರು ತುಂಬಾ ಕಡೆ ಪ್ರವಾಸಕ್ಕೆ ಹೋಗಿದವೆ. ನನಗೆ ಬೇರೆ ಊರಿನ ಬಗ್ಗೆ ಮತ್ತು ಬೇರೆ ಧಾರ್ಮಿಕ ಭಕ್ತಿಗಳ ಬಗ್ಗೆ ತಿಳಿದುಕೊಳ್ಳಲು ತುಂಬಾ ಆಸಕ್ತಿ ಇದೆ. ನನಗೆ ಬೇರೆ ಬೇರೆ ಊರಿನ ಭೋಜನಗಳು ಮತ್ತು ಆ ಊರಿನಲ್ಲಿ ಇರುವ ಸುಪ್ರಸಿದ್ಧ ಸಿಹಿ ತಿಂಡಿಗಳನ್ನು ತಿನ್ನಲು ಬಹು ಇಷ್ಟ . ನಾನು ನನ್ನ ಸ್ನೇಹಿತರೆಲ್ಲರೂ ತುಂಬಾ ತಿಂಡಿ ಪ್ರಿಯರು ನಾನು ನನ್ನ ಗೆಳೆಯರೊಂದಿಗೆ ವಿದೇಶ ಪ್ರಯಾಣ ಮತ್ತು ಪ್ರವಾಸ ಮಾಡಬೇಕೆಂಬ ಆಸೆ . ಇದಲ್ಲದೆ ನಾನು ನನ್ನ ವ್ಯಾಸಂಗವನ್ನು ಮುಗಿಸಿ ಒಂದು ಒಳ್ಳೆಯ ಕೆಲಸ ಪಡೆದು ಏನಾದರೂ ಸಾಧನೆ ಮಾಡಬೇಕು . ನನಗೆ ಅಡುಗೆ ಮಾಡುವುದು ಮತ್ತು ಹೊಸ ಹೊಸ ರುಚಿಗಳನ್ನು ಪ್ರಯತ್ನ ಮಾಡಬೇಕೆಂಬ ಆಸೆ.

ನಾನು ಮೊದಲೇ ಹೇಳಿದ ಹಾಗೆ ನನಗೆ ದೇಶವನ್ನು ಸುತ್ತುವ ಆಸೆ ಇದೆ, ಅದರಲ್ಲೂ ನಾನು ಸ್ವಲ್ಪ ಕಡೆ ಸುತ್ತಿದ್ದೇನೆ ನನ್ನ ತಂದೆ ನನಗೆ ಸಾತ್ ಕೊಟ್ಟಿ ನನ್ನನ್ನು ನಾನು ಕೇಳಿದ ಕಡೆಯಲ್ಲ ಕರೆದುಕೊಂಡು ಹೋಗಿದ್ದಾರೆ ನಾನು ನಾನು ಪ್ರಯಾಣ ಪ್ರೇಮಿ . ನನಗೆ ಪ್ರಯಾಣಿಸಲು ತುಂಬಾ ಇಷ್ಟ ಅದರಲ್ಲೂ ನಾನು ಬೇರೆ ಬೇರೆ ಕಡೆಗೆ ಹೋಗಿ ಆ ಜಾಗದ ಆಚಾರ-ವಿಚಾರಗಳನ್ನು ತಿಳಿದುಕೊಳ್ಳಲು ತುಂಬಾ ಇಷ್ಟ ನಾನು ತುಂಬಾ ಜಾಗಕ್ಕೆ ಭೇಟಿ ಕೊಟ್ಟಿದ್ದೇನೆ ಹೋಗಿರುವ ಜಾಗಗಳ ಉದಾಹರಣೆ ಬಾಂಬೆ, ಕೇರಳ, ತಮಿಳುನಾಡು, ಆಂಧ್ರ, ಗೋವಾ, ಮತ್ತು ನನ್ನ ನೆಚ್ಚಿನ ನಮ್ಮ ನಾಡು ಕರ್ನಾಟಕದಲ್ಲಿ ಹಲವು ಜಿಲ್ಲೆಗಳಿಗೆ ಭೇಟಿ ಕೊಟ್ಟಿದ್ದೇನೆ ಅಲ್ಲಿರುವ ವಿಶೇಷತೆಗಳನ್ನು ತಿಳಿದುಕೊಂಡಿದ್ದೇನೆ . ಹಾಗೂ ಈಗಷ್ಟೇ ಕೆಲವು ದಿನಗಳ ಮುಂಚೆ ನಾನು ಹಾಗೂ ನನ್ನ ಗೆಳೆಯರೊಂದಿಗೆ ಮನೆಯಲ್ಲಿ ತಿಳಿಸಿದಂತೆ ಗಾಡಿಯಲ್ಲಿ ಬನ್ನೇರುಘಟ್ಟ ರಸ್ತೆಯಲ್ಲಿರುವ ತೊಟ್ಟಿಕಲ್ಲು ಫಾಲ್ಸ್ ಎಂಬ ಜಾಗಕ್ಕೆ ಹೋಗಿದ್ದೆವು. ಆನಂತರ ನನ್ನ ಬಗ್ಗೆ ಹೇಳ ಬೇಕೆಂದರೆ ನಾನು ದೈವ ಭಕ್ತ ದೇವರನ್ನು ತುಂಬಾ ಇಷ್ಟಪಡುತ್ತೇನೆ ಮತ್ತು ನಂಬುತ್ತೇನೆ ದೇವರ ಮೇಲೆ ತುಂಬಾ ನಂಬಿಕೆ ನನಗೆ ಏನೇ ಕಷ್ಟ ಬಂದರೂ ಜೀವನನ್ನು ನಾನು ಮೊದಲು ಬೇಡುತ್ತೇನೆ ನನಗೆ ಜನ್ಮ ನೀಡಿದ್ದು ನನ್ನ ತಂದೆ ತಾಯಿ ಆದರೆ ನನಗೆ ಜೀವನ ಮತ್ತು ನನ್ನ ದಾರಿಯನ್ನು ತೋರುವುದು ದೇವರು ಎಂದು ನಾನು ಭಾವಿಸುತ್ತೇನೆ . ದೇವರು ಅಂದರೆ ತುಂಬಾ ಇಷ್ಟ ಅದರಲ್ಲೂ ಅಯ್ಯಪ್ಪ ಸ್ವಾಮಿ ,ಓಂ ಶಕ್ತಿ , ಬಂಡಿ ಮಹಾಕಾಳಿ ಅಮ್ಮ, ಬನಶಂಕರಿ , ಅಣ್ಣಮ್ಮ ದೇವಿ ಹಾಗೂ ಎಲ್ಲಾ 300 ಮುಕ್ಕೋಟಿ ದೇವರುಗಳನ್ನು ನಾನು ನಂಬುತ್ತೇನೆ.


ನನ್ನ ಜೀವನ

[ಬದಲಾಯಿಸಿ]
 ನನ್ನ ಜೀವನದಲ್ಲಿ ನಾನು ತುಂಬಾ ಕಷ್ಟ ಮತ್ತು ಸುಖದ  ಏರಿಳಿತಗಳನ್ನು ನೋಡಿದ್ದೇನೆ . ನಾವು ಮೊದಲು ಇದದ್ದು ವಿಲ್ಸನ್ ಗಾರ್ಡನ್ ನಲ್ಲಿ ಅಧು ೨೦೦೭ ರಲ್ಲಿ ಬಿಡಿಎ ನಿವೇಶನ ಅಟಕ್ ಆದಾಗ ನಾನು ಮತ್ತು ನನ್ನ ಮನೆಯವರು ತುಂಬಾ ಕಷ್ಟದಲ್ಲಿ ಇದ್ದವು. ನಂತರ ನಮ್ಮ ಅಜ್ಜಿಯ ತವರುಮನೆಯವರು ನಮ್ಮನು ಬಂದು ನಾವು ಇವಾಗ ಇರುವ ಮನೆ ಕುಂಡಲಹಳ್ಳಿಗೆ ಕರೆದು ಕೊಂಡು ಹೋದರು ಅ ಸಮಯದಲ್ಲಿ ನಮ್ಮನು ನಮ್ಮ ಸಂದಂಡಿಕರು ತುಂಬ ಕೀಳಾಗಿ ಕಾಣುತಿದರು ಅದರಿಂದ ನಮ್ಮ ಅಜ್ಜಿ ಮತ್ತು ತಾತ ಹಾಗೂ ನನ್ನ ತಂದೆ ತಾಯಿ  ಎಲ್ಲರೂ ತುಂಬಾ ಮನನೊಂಡಿದರು . ಕೆಲವು ದಿನಗಳ ನಂತರ ನನ್ನ ತಂದೆಯವರಿಗೆ ಒಂದು ಒಳ್ಳೇ ಕೆಲಸ ಸಿಕ್ಕಿತು ನಂತರ ಅವರು ಸ್ವಲ್ಪ ಸ್ವಲ್ಪ ಹಣವನ್ನು ಕೊಟ್ಟು ನಮ್ಮದೇ ಆದ ಒಂದು ಮನೆಯನ್ನು ಕೊಂಡರು ಈಗ ನಾವು ಅದೇ ಮನೆಯಲ್ಲಿ ಸುಖ ಜೀವನವನ್ನು ನಡೆಸುತ್ತಿದ್ದೀರಿ. ನಂತರ ನಂತರ ನನ್ನ ತಮ್ಮ ಹುಟ್ಟಿದ . ನನ್ನ ಹಾಗೂ ಅವನ ನಡುವೆ 12 ವರುಷಗಳ ಗ್ಯಾಪ್ ಇದೆ. ಅವನಿಗೆ ಈಗ ಏಳು ವರುಷ ಅವನು ಈಗ ಒಂದನೇ ತರಗತಿ ಓದುತ್ತಿದ್ದಾನೆ. ಈಗ ನಾನು ಮತ್ತು ನನ್ನ ಕುಟುಂಬದವರು ಸುಖ ನೆಮ್ಮದಿಯಿಂದ ಜೀವನವನ್ನು ಸಾಗಿಸುತಿದ್ದೇವೆ. 

ಇದು ನನ್ನ ಕಿರುಪರಿಚಯವಾಗಿತ್ತು ಇದರಲ್ಲಿ ನನ್ನ ಕಷ್ಟದ ಸಮಯವಿತ್ತು ಮತ್ತು ಸುಖದ ಸಮಯ ಕೂಡ ಇತ್ತು ಜೀವನದಲ್ಲಿ ಹಲವಾರು ಜನ ಬಂದು ಹೋಗಿದ್ದಾರೆ ಕೊನೆಗೆ ಉಳಿದವರು ಹೀಗ ಇರುವವರು ಮಾತ್ರ .ನನಗೆ ನಾನು ಕೇಳಿದ್ದ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ನೀಡಿದ ತಂದೆ ತಾಯಿಗೆ ನನ್ನ ಧನ್ಯವಾದಗಳು ಮತ್ತು ವಿದ್ಯಾಭ್ಯಾಸವನ್ನು ಕಳಿಸಿಕೊಟ್ಟ ಶಿಕ್ಷಕರಿಗೆ ನನ್ನ ಧನ್ಯವಾದಗಳು ಅರ್ಪಿಸಲು ಇಷ್ಟಪಡುತ್ತೇನೆ

ಈ ನನ್ನ ಕಿರು ಪರಿಚಯವನ್ನು ನೀವೆಲ್ಲ ನಿಮ್ಮ ಅಮೂಲ್ಯ ಸಮಯವನ್ನು ಉಪಯೋಗಿಸಿ ಓದಿದ್ದಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು

ಕನ್ನಡವೇ ಸತ್ಯ ಕನ್ನಡವೇ ನಿತ್ಯ

ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ.