ಸದಸ್ಯ:Gowtham1940545/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಗೌತಮ್ ಬಿ (ಗೌತಮ್ ಬಂಡಾ). ನಾನು ೯ ನವೆಂಬರ್ ೨೦೦೧ ರಲ್ಲಿ ಜನಿಸಿದ್ಧೇನೆ. ನನ್ನ ಜನ್ಮ ಸ್ಥಳ ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮ. ನನ್ನ ತಾಯಿಯ ಹೆಸರು ಶ್ರೀದೇವಿ ನನ್ನ ತಂದೆಯ ಹೆಸರು ಮಂಜುನಾಥ್. ನನ್ನ ಬಾಲ್ಯದ ಶಿಕ್ಷಣ ಅನಂತಪುರದಲ್ಲಿ ಮುಗಿಸಿದೆ. ನನ್ನ ಪ್ರಾಥಮಿಕ ಶಿಕ್ಷಣ ಹಾಗು ಹಿರಿಯ ಪ್ರಾಥಮಿಕ ಶಿಕ್ಷಣ ಬೆಂಗಳೂರಿನ ಬ್ರೈಟ್ ಫ್ಯೂಚರ್ ಇಂಗ್ಲೀಷ್ ಸ್ಕೂಲಿನಲ್ಲಿ ಮಾಡಿದೆ. ನಾನು ನನ್ನ ಎಸೆಸೆಲ್ಸಿ ಪರೀಕ್ಷೆಯನ್ನು ೯೪.೪% ಶೇಕಡಾದೊಂದಿಗೆ ಉತ್ತಿರ್ಣನಾದೆ. ಹಾಗು ನಾನು ನನ್ನ ಮುಂದಿನ ಶಿಕ್ಷಣಕ್ಕಾಗಿ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನಲ್ಲಿ ಸೇರಿದೆ. ನನ್ನ ದ್ವಿತೀಯ ಪದವಿ ಪೂರ್ವ ಪರೀಕ್ಷೆಯನ್ನು ೭೪.೪% ಶೇಕಡಾದೊಂದಿಗೆ ಉತ್ತಿರ್ಣನಾದೆ.ಹಾಗು ನಾನು ನನ್ನ ಈಗಿನ ಬಿಎಸ್ಸಿ ಪದವಿಯನ್ನು ಕ್ರೈಸ್ಟ್ ಡೀಮ್ಡ್ ಟು ಬಿ ಯೂನಿವರ್ಸಿಟಿಯಲ್ಲಿ ಮಾಡುತ್ತಿದ್ದೇನೆ.

ನನ್ನ ಜೀವನದಲ್ಲಿ ನನ್ನ ಮೇಲೆ ಹೆಚ್ಚಾಗಿ ಪ್ರಭಾವಮುಡಿದ್ದು ಎರಡೇ ವಿಷಯ ಒಂದು ಕನ್ನಡ ಭಾಷೆ ಮತ್ತು ಇನ್ನೊಂದು ಸಿನಿಮಾ ಚಿತ್ರಕಥೆ ಸಂಭಾಷಣೆ ನಿರ್ದೇಶನ ಮಾಡುವ ಬಯಕೆ. ನನ್ನಲ್ಲಿ ಕನ್ನಡದ ಸ್ಪೂರ್ತಿಯನ್ನು ತುಂಬಿದ್ದು ಮಾತ್ರ ನನ್ನ ಶಿಕ್ಷಕರು. ನನ್ನ ಶಾಲಾ ದಿನಗಳಿಂದ ನನ್ನ ಶಿಕ್ಷಕರು ನನಗೆ ಕನ್ನಡದ ಸೊಬಗನ್ನು ಹೇಳಿ ಕನ್ನಡದ ಹಿರಿಮೆಯನ್ನು ಕೇಳಿ ನನ್ನಲ್ಲಿ ಕನ್ನಡದ ಮೇಲೆ ಅಪಾರವಾದ ಪ್ರೀತಿ ಬೆಳೆಯಿತು. ಕೇವಲ ಕನ್ನಡ ಶಿಕ್ಷಕರಲ್ಲದೆ ನಮ್ಮ ಶಾಲೆಯ ಇಂಗ್ಲೀಷ್ ಶಿಕ್ಷಕಿ ಕೂಡಾ ನನ್ನಲ್ಲಿ ಕನ್ನಡದ ಮೇಲೆ ಪ್ರೀತಿಯನ್ನು ಇನ್ನಷ್ಟು ಹೆಚ್ಚುವಂತೆ ಮಾಡಿತು. ಕನ್ನಡಕ್ಕೆ ನನ್ನನು ಅರ್ಪಿಸಬೇಕೆನಿಸಿದ್ದು ನನ್ನ ಪದವಿ ಪೂರ್ವ ಕಾಲೇಜಿನಲ್ಲಿ. ನಮ್ಮ ಕನ್ನಡ ಶಿಕ್ಷಕರು ಕನ್ನಡ ಭಾಷೆಯನ್ನು ಮಾತಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ ನೊಂದು ಹೇಳುವ ಮಾತುಗಳು ನನಗೆ ಇನ್ನೂ ನೆನಪಿದೆ. ಹಾಗಾ ನಾನು ನನ್ನ ಸ್ನೇಹಿತ ಕನ್ನಡದ ಕುರಿತು ಕನ್ನಡಕ್ಕೆ ಆಗುವ ಅನ್ಯಾಯದ ಕುರಿತು ಇತರರಿಗೆ ತಿಳಿಸುವ ಪ್ರಯತ್ನ ಪಡಬೇಕೆಂದು ಯೋಚಿಸಿದೆವು. ಹಾಗಾ ನಾನು ಹಾಡುಗಳನ್ನು ಬರೆಯಲು ಆರಂಭಿಸಿದೆ. ಕನ್ನಡದ ಬಗ್ಗೆ ಹಾಗೂ ಭಾರತದ ಇತಿಹಾಸದ ಬಗ್ಗೆ ಹಾಡು ಬರೆಯಲು ಶುರು ಮಾಡಿದೆ. ನಾನು ಕೇವಲ ನಾನು ಕಂಡದ್ದು ಹಾಗು ನಾನು ತಿಳಿದದ್ದನ್ನು ಮಾತ್ರ ಬರೆಯಲು ಆರಂಭಿಸಿದೆ. ನಾನು ಎಂದಿಗೂ ಸೋತರು ಕೂಡ ಪ್ರಯತ್ನವನ್ನು ನಿಲ್ಲಿಸುವುದಿಲ್ಲ. ನಾನು ಬರೆದ ಹಾಡುಗಳನ್ನು ಕಾಲೇಜಿನ ಪತ್ರಿಕೆಗೆ ಸೇರಿಸಲು ನೀಡಿದೆ ಆದರೆ ಆತ ಒಮ್ಮೆಯೂ ಕೂಡಾ ಅದನ್ನು ಓದಲಿಲ್ಲ. ಆದರೂ ಕೂಡಾ ನಾನು ನನ್ನ ಪ್ರಯತ್ನವನ್ನು ನಿಲ್ಲಿಸಲಿಲ್ಲ. ನನಗೆ ನನ್ನ ಬಾಷೆ ಸಂಸ್ಕೃತಿ ಕಲೆ ಸಾಹಿತ್ಯ ಎಂದರೆ ಎಳ್ಳಿಲ್ಲದಷ್ಟು ಪ್ರೀತಿ.

ನನ್ನ ಹುಟ್ಟೂರಾದ ಕಿನ್ನಾಳ ಗ್ರಾಮದಲ್ಲಿ ಕಿನ್ನಾಳ ಕಲೆ ವಿಶ್ವಪ್ರಸಿದ್ಧ ಆಗಿನ ವಿಜಯನಗರ ಅರಸರ ಕಾಲದಿಂದಲೂ ಅದೂ ಪ್ರಸಿಧ್ಧ. ಆದರೆ ಈಗ ಅದು ನಿದಾನವಾಗಿ ಗತಿಸಿ ಹೋಗುತ್ತಿದೆ. ಕಿನ್ನಾಳ ಕಲೆಯನ್ನು ಕಲಿಯಲು ವಿವಿಧ ರಾಷ್ಟ್ರಗಳಿಂದ ಜನರು ನಮ್ಮ ಊರಿಗೆ ಬಂದು ಕಲಿಯುತ್ತಾರೆ ಅದರೆ ನಮ್ಮ ಜನಕ್ಕೆ ಅದರ ಆಸಕ್ತಿಯಿಲ್ಲ. ಕಿನ್ನಾಳ ಕಲೆಯನ್ನು ಉಳಿಸಿಕೊಂಡು ಬರುವ ಚಿತ್ರಕರರಿಗೆ ಸರ್ಕಾರದಿಂದ ಪ್ರೋತ್ಸಾಹವಿಲ್ಲ. ಇನ್ನು ಕೆಲವು ವರ್ಷಗಳಲ್ಲಿ ಅದು ಗುಂದುಹೋಗುತ್ತದೆ. ಅದಕ್ಕೆ ನನ್ನ ಊರಿನ ಕಲೆಯನ್ನು ಕಾಪಾಡಿಕೊಳ್ಳುವ ಜವಾಬ್ಧಾರಿ ನನಗೆ ಇದೆ. ನನ್ನ ಜನ್ಮಸ್ಥಳ ಕೊಪ್ಪಳ ಜಿಲ್ಲೆ ಮೊದಲಿಗೆ ಇದು ರಾಯಚೂರು ಜಿಲ್ಲೆಯಲ್ಲಿ ಸೇರಿತ್ತು. ನನ್ನ ಜಿಲ್ಲೆ ಕರ್ನಾಟಕದ ಬರ ಜಿಲ್ಲೆಗಳಲ್ಲಿ ಒಂದು. ಅದಕ್ಕೆ ಬಿಸಿಲ ನಾಡು ಹಾಗೂ ಬಯಲು ಸೀಮೆ ಎಂಬ ಹೆಸರು ಇರುವುದುಂಟು. ನೀರಾವರಿಗಾಗಿ ತುಂಗಾಭದ್ರಾ ಅಣೆಕಟ್ಟು ಇದ್ದರೂ ಅದರ ಹೂಳು ತೆಗೆಯುವ ಕೆಲಸ ಮಾಡಲು ಸರ್ಕಾರ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ರಾಜಕೀಯವೆಂಬುದು ಎಲ್ಲರಿಗೂ ತಿಳಿದ ವಿಷಯವೇ ಇದರ ಬಗ್ಗೆ ಯಾವ ರಾಜಕರಣಿಯು ತಲೆಕೆಡಿಸಿಕೊಳ್ಳಲ್ಲ. ಇದರ ಬಗ್ಗೆಯೂ ನನಗೆ ಚಿಂತೆಯಿದೆ. ಇವೆಲ್ಲದರ ಜೊತೆಗೆ ನನ್ನ ಕನಸು ಸಿನಿಮಾ ನಿರ್ದೇಶನ. ಆದರೆ ಅದರ ಬಗ್ಗೆ ನನಗೆ ತಿಳುವಳಿಕೆ ಇಲ್ಲ ಆದರೆ ಕಲಿಯುವ ಆಸಕ್ತಿ. ನನಗೆ ಸೋಲಿನ ಬಯವಿಲ್ಲ ನಾನು ಸೋತರು ಕೂಡ ನನ್ನ ಪ್ರಯತ್ನ ನಿಲ್ಲುವುದಿಲ್ಲ.

ಕಿನ್ನಾಳ[ಬದಲಾಯಿಸಿ]


ನನ್ನ ಹೆಸರು ಗೌತಮ್ ಬಿ. ನನ್ನ ತಂದೆಯ ಹೆಸರು ಮಂಜುನಾಥ್ ನನ್ನ ತಾಯಿಯ ಹೆಸರು ಶ್ರೀದೇವಿ. ನನ್ನ ಹುಟ್ಟೂರು ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮ. ನನಗೆ ನನ್ನ ಗ್ರಾಮವೆಂದರೆ ಬಹಳ ಪ್ರೀತಿ. ಎಕೆಂದರೆ ನನ್ನ ಊರಿಗೆ ಅದರದೆ ಆದ ವಿಶೇಷತೆ ಇದೆ. ನನ್ನ ಊರಿಗೆ ಹಲಾವರು ಹೆಸರುಗಳು ಇವೆ ಕಿನ್ನಾರಪುರ, ಕಿನ್ಹಾಳ ಹಾಗು ಇತ್ಯಾದಿ. ನಮ್ಮ ಊರು ಕಲಾವಿದರ ಊರು. ನನ್ನ ಅಜ್ಜ ರಂಗಭೂಮಿ ನಟರು ಅವರು ಹಲಾವರು ನಾಟಕವನ್ನು ಪ್ರದರ್ಶಿಸಿದ್ದರೆ. ಜಾತ್ರೆಗಳಲ್ಲಿ ನಾಟಕ ಪ್ರದರ್ಶನವಾಗುತ್ತದೆ. ನಮ್ಮ ಊರಿನಲ್ಲಿ ವರ್ಷಕ್ಕೆ ಹಲವಾರು ಜಾತ್ರೆಗಳು ನಡೆಯುತ್ತದೆ. ಅದಕ್ಕಾಗಿ ವಿಶೇಷವಾಗಿ ದೇವರ ಮೂರ್ತಿಯನ್ನು ಮಾಡುತ್ತರೆ. ಅದನ್ನು ಮಾಡುವ ಕಲೆಯೆ ಕಿನ್ನಾಳ ಕಲೆ.

ಕಿನ್ನಾಳ ಕಲೆಯ ಹನುಮಂತನ ಮೂರ್ತಿ


ನನ್ನ ಊರಿನ ವಿಶೇಷಗಳು ಹಲವು ಅದರಲ್ಲಿ ಪ್ರಮುಖ ಎಂದರೆ ಅದು ಕಿನ್ನಾಳ ಕಲೆ. ಇದು ಸುಮಾರು ೬೫೦-೬೦೦ ವರ್ಷಗಳಿಂದ ಬಳಕೆಯಲ್ಲಿದೆ. ಇದನ್ನು ದೇವರ ಮೂರ್ತಿ ಹಾಗೂ ಗೊಂಬೆ ಮಾಡಲು ಬಳಸುತ್ತಾರೆ.

ಗೊಂಬೆಯನ್ನು ಮಾಡುತ್ತಿರುವ ಚಿತ್ರಗರರು

ಇದನ್ನು ಮಾಡುವವರನ್ನು ಚಿತ್ರಗರ್ ಎಂದು ಕರೆಯುತ್ತಾರೆ. ಕಿನ್ನಾಳ ಗೊಂಬೆಗಳನ್ನು ಮಾಡಲು ವಿಶೇಷವಾದ ಸೌದೆ ತೆಳು ಸೌದೆಯನ್ನು ಬಳಸುತ್ತಾರೆ. ಗೊಂಬೆಯ ಭಾಗಗಳನ್ನು ಪ್ರತ್ಯೇಕವಾಗಿ ತಯಾರಿಸುತ್ತಾರೆ. ಆಗು ನಂತರ ಅದನ್ನು ಕಿಟ್ಟದಿಂದ ಅಂಟಿಸುತ್ತಾರೆ. ನಂತರ ಅದಕ್ಕೆ ಬಣ್ಣ ಹಚ್ಚುತ್ತಾರೆ.

ಗೊಂಬೆಗಳ ಭಾಗಗಲನ್ನು ಜೊಡಿಸುವುದು

ಗೊಂಬೆಯನ್ನು ಮಾಡುವುದು ಆಗು ಅದನ್ನು ಬಣ್ಣ ಬಣ್ಣದ ಚಿತ್ರಕಲೆ ಬಿಡಿಸುವುದರಲ್ಲಿ ಕಿನ್ನಾಳ ಕಲೆಯ ಅನನ್ಯತೆ ತಿಳಿಯುತ್ತದೆ ಹಾಗೂ ಕಂಡುಬರುತ್ತದೆ.

ಕಿನ್ನಾಳ ಕಲೆಯನ್ನು ವಿಜಯನಗರದ ಅರಸರ ಕಾಲದಲ್ಲಿ ನಿರ್ಮಾಣವಾದ ಪಂಪಪತೇಶ್ವರ ದೇಗುಲದ ಚಿತ್ರಗಳಲ್ಲಿ ಹಾಗೂ ಹಂಪಿಯ ಮರದ ರಥದಲ್ಲಿ ಕಾಣಬಹುದು.

ಕಿನ್ನಾಳ್ ಕ್ರಾಫ್ಟ್ಇಂಡಿಯಾ ಪುಸ್ತಕ

೨೦೦೭ರಲ್ಲಿ ಸ್ಕಾಟ್ಲ್ಯಾಂಡ್ಗ್ಲಾಸ್ ಗೋ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಕ್ರಾಫ್ಟ್ ಕೌನ್ಸಿಲ್ ಆಫ್ ಕರ್ನಾಟಕ ಜೊತೆಗೆ ಸೇರಿ ಕಿನ್ನಾಳ ಕಲೆಯನ್ನು ಉಳಿಸಲು ಹಾಗೂ ಕಲಿಯಲು ಯೋಜನೆಯನ್ನು ಮಾಡಿದರು.

ಸ್ಕಾಟ್ಲ್ಯಾಂಡ್ ನ ಇಸ್ಸೂ ಎಂಬ ಪ್ರಕಾಶನ ಕಿನ್ನಾಳ್ ಕ್ರಾಫ್ಟ್

ಇಂಡಿಯಾ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು.

ಗಣರಾಜ್ಯೋತ್ಸವ ದಲ್ಲಿ ಕಿನ್ನಾಳ ಕಲೆ ಪ್ರದರ್ಶನ

ಭಾರತದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಕರ್ನಾಟಕ ರಾಜ್ಯವು ಕಿನ್ನಾಳ ಕಲೆಯ ವಿಷಯವನ್ನು ಪ್ರದರ್ಶಿಸಿತು.

ನಮ್ಮ ಊರಿನಲ್ಲಿ ಇರುವ ಅಣೆಕಟ್ಟು ಸಣ್ಣದು ಅದಕ್ಕೆ ಕಿನ್ನಾಳ ಡ್ಯಮ್ ಎಂಬ ಹೆಸರೆ ಪ್ರಶಿದ್ದ ಅದರ ಹೆಸರು ಹಿರೇಹಳ್ಳ ಪ್ರಜೆಕ್ಟ್.

ಸಾಂಸ್ಕೃತಿಕ ಪರಂಪರೆ[ಬದಲಾಯಿಸಿ][ಬದಲಾಯಿಸಿ]

ಕಿನ್ನಾಳ ಗ್ರಾಮವು ಸಾಂಸ್ಕøತಿಕವಾಗಿ ಮತ್ತು ಧಾರ್ಮಿಕವಾಗಿ ಉತ್ತಮ ಪರಂಪರೆ ಹೊಂದಿದೆ. ಕಿನ್ನಾಳದ ಸುತ್ತ ಮುತ್ತ ಶೈವ ಮಠಗಳು, ಅಗ್ರಹಾರಗಳು, ಜೈನ ಕೇಂದ್ರಗಳಿಂದ ಕೂಡಿರುವುದಲ್ಲದೆ ಜನಪದ ಸಾಹಿತ್ಯ ಸಂಪತ್ತಿನಿಂದಲೂ ಕೂಡಿದೆ. ವೀರಶೈವಧರ್ಮ ಹೊಸ ಸಾಂಸ್ಕøತಿಕ ಪರಿಸರವನ್ನು ಸೃಷ್ಟಿಸಿತು. ಯಲಬುರ್ಗ ತಾಲ್ಲೂಕಿನ ಕುಕನೂರಿನ ಕಲ್ಲೇಶ್ವರ ದೇವಾಲಯ ಮತ್ತು ಅದೇ ತಾಲ್ಲೂಕಿನ ಇಟಗಿಮಹಾದೇವ ದೇವಾಲಯ ಚಾಳುಕ್ಯ ಪರಂಪರೆಯ ಶಿಲ್ಪ ಮತ್ತು ವಾಸ್ತುಗಳನ್ನು ಹೊಂದಿವೆ. ಕೊಪ್ಪಳದ ಕೋಟೆ ನೆಲಮಟ್ಟದಿಂದ 400' ಎತ್ತರದ ಗುಡ್ಡದ ಮೇಲಿದ್ದು ಅದನ್ನು ವಿನ್ಯಾಸ ಮತ್ತು ಭದ್ರತೆಯ ದೃಷ್ಟಿಯಿಂದ ಐರೋಪ್ಯ ದಂಡನಾಯಕರೂ ಮೆಚ್ಚಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೌರೂರು, ಬಳಂಗೆರೆ, ಆಳವಂಡಿ, ತಳಕಲ್ಲು, ಆನೆಗೊಂದಿ, ಮುನಿರಾಬಾದ್ ಮೊದಲಾದ ಪ್ರೇಕ್ಷಣೀಯ ಸ್ಥಳಗಳಿವೆ. ಸ್ತ್ರೀ ದೇವತೆಗಳ ಆರಾಧನೆ ಅತ್ಯಂತ ಪೂರ್ವಕಾಲದಿಂದಲೂ ಬಂದ ಬಳುವಳಿ. ಕುಕನೂರಿನ ಮಹಾಮಾಯ, ಜೇಷಾವಿದೇವಿ, ಸಂಕನೂರಿನ ಸಂಕಲಾದೇವಿ, ಹೊಸೂರಿನ ಮಹಾಮಾಯಾ, ಹುಲಿಗಿಯ ಹುಲೆಗೆಮ್ಮ ಇವು ಪ್ರಸಿದ್ಧ ಶಕ್ತಿ ದೇವತೆಗಳು. ಕುಷ್ಟಗಿಯ ಅಡವಿರಾಯನ ಜಾತ್ರೆ, ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆ, ಕನಕಗಿರಿ ಜಾತ್ರೆ, ಯಲಬುರ್ಗ ತಾಲ್ಲೂಕಿನ ಮಂಗಳೂರಿನ ಮಂಗಳೇಶ್ವರ ಜಾತ್ರೆಗಳು ಭಕ್ತಾದಿಗಳನ್ನು ಆಕರ್ಷಿಸುತ್ತವೆ.

ಶಾಸ್ತ್ರೀಯ ಸಂಗೀತ ಇಲ್ಲಿ ಹೆಚ್ಚು ಜನಪ್ರಿಯ; ದಾಸ ಪರಂಪರೆಯೂ ಉಂಟು. ಪ್ರಾಚೀನ ಕಾಲದಿಂದಲೂ ಸಾಹಿತ್ಯ ರಚನೆಗೆ, ಕವಿಪಂಡಿತರಿಗೆ ಹೆಸರುವಾಸಿ. ಇತ್ತೀಚಿನ ಸಾರಸ್ವತ ಲೋಕದ ಹಲವಾರು ಸಾಧಕರು ಇಲ್ಲಿನವರು. ಇವರಲ್ಲಿ ಸಿದ್ದಯ್ಯ ಪುರಾಣಿಕ, ಪಾಂಡುರಂಗರಾವ್ ದೇಸಾಯಿ, ಜಯತೀರ್ಥ ರಾಜಪುರೋಹಿತ, ಇಟಗಿ ರಾಘವೇಂದ್ರ, ಕುಷ್ಟಗಿ ರಾಘವೇಂದ್ರರಾವ್, ದೇವೇಂದ್ರ ಕುಮಾರ ಹಕಾರಿ, ಎಚ್.ಎಸ್.ಪಾಟೀಲ, ಬಿ.ಆರ್.ತುಬಾಕಿ, ಗವಿಸಿದ್ದ ಬಳ್ಳಾರಿ, ನಾ.ಭ.ಶಾಸ್ತ್ರಿ,ಕೀರ್ತನಕೇಸರಿ ಜಯರಾಮಾಚಾರ್ಯ, ಮಾಧವರಾವ್ ಮುಧೋಳ (ಉರ್ದು ಮತ್ತು ಕನ್ನಡ ಭಾಷೆಗಳೆರಡರಲ್ಲೂ ಪರಿಣಿತಿ ಪಡೆದಿದ್ದರು. ಉರ್ದು-ಕನ್ನಡ ನಿಘಂಟಿನಲ್ಲಿ ಇವರು ಕೆಲಸಮಾಡಿದ್ದರು) ಮೊದಲಾದವರನ್ನು ಇಲ್ಲಿ ಹೆಸರಿಸಬಹುದು.