ಸದಸ್ಯ:Gopal Thimmaiah/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Alamabagiri Gurumurtheshwara Temple[ಬದಲಾಯಿಸಿ]

ಗೋಪಾಲ್ ತಿಮ್ಮಯ್ಯ[ಬದಲಾಯಿಸಿ]

ಆಧ್ಯಾತ್ಮಿಕ ನೆಲೆ - ಭಕ್ತಿಯ ಸೆಲೆ ಆಲಂಬಗಿರಿ ಗುರುಸ್ವರೂಪಿ ಶ್ರೀ ಗುರುಮೂರ್ತೇಶ್ವರ ಸ್ವಾಮಿ ಕ್ಷೇತ್ರ ಶಾಂತಂ ಪದ್ಮಾಸನಸ್ಥಂ ಶಶಿಧರ ಮುಕುಟಂ ಪಂಚವಕ್ತಂ ತ್ರಿನೇತ್ರಂ| ಶೂಲಂ ವಜ್ರಂಚ ಖಡ್ಗಂ ಪರಶುಮಭಯದಂ ದಕ್ಷಭಾಗೇ ವಹಂತಂ|| ನಾಗಂ ಪಾಶಂಚ ಗಂಟಾ ಪ್ರಳಯಹತಂ ವಾಮಭಾಗೇ|

ನಾನಾಲಂಕಾರ ಯುಕ್ತಂ ಸ್ಪಟಿಕಾ ಮಣಿಮಯಂ ಪಾರ್ವತೀಶಂ ನಮಾಮಿ||

ಈ ಮಂತ್ರಗಳ ಸಾಲುಗಳಲ್ಲಿ ಅವ್ಯಕ್ತ ಶಕ್ತಿ ಅಡಗಿದ್ದು, ಅದು ಸಂಚಿತ ವ್ಯಕ್ತರೂಪ ತಾಳಿರುವ ಆ ಪರಮಾತ್ಮ, ಪರಶಿವ, ಪರಮೇಶ್ವರ, ಗುರುಸ್ವರೂಪಿ ಈಶಾನ್ಯಧೀಶ ಆಲಂಬಗಿರಿ ಶ್ರೀ ಗುರುಮೂರ್ತೇಶ್ವರ ಸ್ವಾಮಿ ನೆನಪಾಗುತ್ತದೆ.

  ಚೇತನಮಯ ಜೀವನದಲ್ಲಿ ತೇಜಸ್ಸು ಉಕ್ಕಿ ಭಾವುಕರಾಗಿ ಭಕ್ತಿಭಾವದಿಂದ ಶ್ರೀ ಗುರುಮೂರ್ತೇಶ್ವರನ ಪಾದಾರವಿಂದಕ್ಕೆ ವಂದಿಸುತ್ತೇವೆ. ಇಂತಹ ಮಹತ್ತರ ಭಾವುಕ ಹಾಗೂ ಆಧ್ಯಾತ್ಮಿಕ ಸೆಳೆತ ಕೇವಲ ಆ ಮಹಾದೇವನಿಂದ ಮಾತ್ರವೇ ಸಾಧ್ಯ. ಕಷ್ಟದಲ್ಲಿ ಶಿವನೇ ಬೇಕು. ನಷ್ಟದಲ್ಲಿ ಶಿವನೇ ಬೇಕು. ಇಷ್ಟರಿಗೂ, ಭ್ರಷ್ಟರಿಗೂ ಬೇಕಾದ ಮೋಕ್ಷಪ್ರದಾಯಕ ಈಶ್ವರ ಸ್ವರೂಪಿ ಶ್ರೀ ಗುರುಮೂರ್ತೇಶ್ವರ ಸ್ವಾಮಿ ಆಲಂಬಗಿರಿಯಲ್ಲಿದ್ದರೇನೂ, ಕಾಶಿಯಲ್ಲಿದ್ದರೇನೂ ಭಕ್ತರನ್ನು ಸದಾ ತನ್ನತ್ತ ಸೆಳೆದು ಇಷ್ಟಾರ್ಥಗಳನ್ನು ಪೂರೈಸಿ, ಕೈಹಿಡಿದು ಕಾಪಾಡುತ್ತಿರುವ ಆಧ್ಯಾತ್ಮಿಕ ನೆಲೆ ಈ ಭಕ್ತಿಯ ಸೆಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ‘ಆಲಂಬಗಿರಿ ಗ್ರಾಮ’ದ ಶ್ರೀ ಗುರುಮೂರ್ತೇಶ್ವರ ಸ್ವಾಮಿಯ ಸನ್ನಿಧಿ.

ಅನಘ್ರ್ಯ ಮಣಿರತ್ನ ಚಿಂತಾಮಣಿ

  ನೆರೆಯ ಆಂಧ್ರಪ್ರದೇಶದ ಅಂಚಿಗೆ ಆನಿಕೊಂಡಿರುವ ಬೆಡಗಿನ ಬೀಡು, ನೆಮ್ಮದಿಯ ನೆಲೆವೀಡು, ವ್ಯವಹಾರಿಕ ನಾಡು ಈ ಚಿಂತಾಮಣಿ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಎಂದರೆ ಬಯಸಿದ್ದೆಲ್ಲ ಕೊಡಬಲ್ಲ ದೇವಲೋಕದ ದಿವ್ಯರತ್ನವೇ ಸರಿ!
  ಪೂರ್ವಕ್ಕೆ ಗೋಪಸಂದ್ರ, ಪಶ್ಚಿಮಕ್ಕೆ ತಿಮ್ಮಸಂದ್ರ, ಉತ್ತರಕ್ಕೆ ಸಿಂಗಸಂದ್ರ ಹಾಗೂ ದಕ್ಷಿಣಕ್ಕೆ ಚಿನ್ನಸಂದ್ರ ಹೀಗೆ ನಾಲ್ಕೂ ಸಂದ್ರಗಳ ನಡುವೆ ಕಂಗೊಳಿಸುತ್ತಿರುವ ಅನಘ್ರ್ಯ ಮಣಿರತ್ನವೇ ‘ಚಿಂತಾಮಣಿ’. ತನ್ನ ಗಡಿಭಾಗದ ಮಡಿಲ ಗುಡಿಯಲ್ಲಿ ಸನಾತನ ಹಿಂದೂ ಸಂಸ್ಕøತಿಯನ್ನೇ ಅಡಗಿಸಿಕೊಂಡು ಹಲವು ಹತ್ತು ದೇವಾಲಯಗಳನ್ನೇ ತನ್ನ ಬೀಡಿನಲ್ಲಿ ಬಿಡಿಸಿಕೊಂಡು ಮೆರೆಯುತ್ತಿರುವ ನಾಡು ಈ ಚಿಂತಾಮಣಿ. 
  ಮುರುಗಮಲ್ಲದ ಶ್ರೀ ಮುಕ್ತೇಶ್ವರ, ಬುರುಡುಗುಂಟೆಯ ಶ್ರೀ ವೆಂಕಟರಮಣ, ಮಾತಾ ಅಂಬಾಜಿ ದುರ್ಗದ ತಪಸ್ಸೇಶ್ವರ ಸ್ವಾಮಿ, ಬೆಟ್ಟದ ಶ್ರೀ ಆಂಜನೇಯ ಸ್ವಾಮಿ, ಶ್ರೀ ವರದರಾಜ ಸ್ವಾಮಿ, ತಪ್ಪಲಿನಲ್ಲಿರುವ ಶ್ರೀ ನಾಗನಾಥೇಶ್ವರ ಸ್ವಾಮಿ, ಕೈವಾರದ ಶ್ರೀ ಅಮರನಾರೇಯಣ ಸ್ವಾಮಿ... ಹೀಗೆಯೇ ಮೂಡಣಬಾಗಿಲು, ಶತಶೃಂಗ ಪರ್ವತಗಳು, ಕುರುಡುಮಲೈ, ನಂದೀದುರ್ಗ, ವಿದುರಾಶ್ವತ ಮಹಾಕ್ಷೇತ್ರಗಳ ಮಧ್ಯೆ ಪೂರ್ಣಚಂದ್ರ ತೇಜಸ್ಸಿನಂತೆ ಕಂಗೋಳಿಸುತ್ತಿರುವುದೇ ಗುಡಿ ‘ಆಲಂಬಗಿರಿ’.

ವಿಸ್ಮಯ ಕ್ಷೇತ್ರ ಆಲಂಬಗಿರಿ

  ಚಿಂತಾಮಣಿ ನಗರದ ದಕ್ಷಿಣ ದಿಕ್ಕಿಗೆ 6 ಕಿಲೋ ಮೀಟರ್‍ಗಳ ದೂರದಲ್ಲಿರುವ ಆಲಂಬಗಿರಿ ಗ್ರಾಮ, ಕೈವಾರ ಕ್ಷೇತ್ರಕ್ಕೆ 10 ಕಿ.ಮೀ.ಗಳು ಹಾಗೂ ಚಿನ್ನಸಂದ್ರಕ್ಕೆ 3 ಕಿ.ಮೀ.ಗಳ ಅಂತರದಲ್ಲಿದೆ. ಹಸಿರು ಬನಸಿರಿಯ ಮಡಿಲಲ್ಲಿ, ನಿಸರ್ಗ ಸಂಪತ್ತಿನ ಮಹಾನ್‍ಗುಡಿಯಲ್ಲಿ ಗಿರಿಕಂದರಗಳ ಮಧ್ಯೆ, ಗಂಧರ್ವ ಕಲೆಗಳ ಬೀಡಾಗಿದೆ ಆಲಂಬಗಿರಿ ಕ್ಷೇತ್ರ. ಪೂರ್ವಕ್ಕೆ ಮನಸೆಳೆವ ಕುರುಬೂರು ಬೆಟ್ಟಗಳ ಸಾಲು, ಪಶ್ಚಿಮಕ್ಕೆ ಮಡಬಹಳ್ಳಿ ತಿಟ್ಟುಗಳು, ಕಾಡು ಕೊಂಗನಹಳ್ಳಿ (ಚನ್ನಕೇಶವಪುರ) ದಿಣ್ಣೆ, ಮೈಲಾರಪುರ ಗಿರಿಶಿಖರಗಳ ನಡುವೆ ವರ್ಷ ಪೂರ್ತಿ ಬತ್ತದಿರುವ ವೆಂಕಟತೀರ್ಥ (ಚಿಲುಮೆ) ಪ್ರಕೃತಿಯ ವಿಸ್ಮಯಗಳಲ್ಲೊಂದೆನಿಸಿದೆ.

ಶಿವನ ಜಟೆಯ ಗಂಗೆ ಈ ವೆಂಕಟತೀರ್ಥ

  ಆಲಂಬಗಿರಿ ಗ್ರಾಮದ ನೈರುತ್ಯಕ್ಕಿರುವ ಬೆಟ್ಟ-ಗುಡ್ಡಗಳನ್ನು ಆಧ್ಯಾತ್ಮಿಕ ಕೋನದಲ್ಲಿ ಗಮನಿಸಿದಲ್ಲಿ ಶ್ರೀ ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿಯ ನಾಮದಂತೆ ಕಂಗೊಳಿಸುತ್ತವೆ. ಈ ಬೆಟ್ಟದಲ್ಲಿ ಶ್ರೀ ಕಲ್ಕಿ ವೆಂಕಟರಮಣನೇ (ಶ್ರೀಮನ್ನಾರಾಯಣ) ತಪೋಧ್ಯಾನದಿಂದ ಬಳಲಿದ್ದಾಗ ಕುಡಿಯಲು ನೀರು ಕಾಣದೆ ಪರಿತಪಿಸುತ್ತಿದ್ದರಂತೆ. ಆಗ ಸಾಕ್ಷಾತ್ ಪರಶಿವ, ಪರಮೇಶ್ವರ (ಶ್ರೀ ಗುರುಸ್ವರೂಪಿ ಗುರುಮೂರ್ತೇಶ್ವರ ಸ್ವಾಮಿ) ಪ್ರತ್ಯಕ್ಷನಾಗಿ ನಾರಾಯಣ ಸ್ವರೂಪ ಶ್ರೀ ವೆಂಕಟರಮಣನಿಗೆ ತನ್ನ ಜಟೆಯಲ್ಲಿದ್ದ ಗಂಗೆಯನ್ನು ನೀಡಿದ್ದರೆಂಬ ಪ್ರತೀತಿ ಇದೆ. ಅದರ ಕುರುಹಾಗಿದೆ ಇಲ್ಲಿರುವ ಸದಾ ಬತ್ತದ ವೆಂಕಟತೀರ್ಥ ಚಿಲುಮೆ. ಈ ಅಧ್ಯಾತ್ಮ ಸತ್ಯದ ಕುರುಹು ಎನ್ನುವಂತೆ ಕೊಂಡಕ್ಕೆ (ಬೆಟ್ಟ) ಅನಿಕೊಂಡಂತೆ ನಿರ್ಮಿಸಿರುವ ಶಂಕು ಮತ್ತು ಚಕ್ರ ಇಲ್ಲಿಯ ನಿಸರ್ಗ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ.

ಹುಣ್ಣಿಮೆಯಂದು ಗಿರಿ ಪ್ರದಕ್ಷಿಣೆ

  ಪ್ರತಿ ಹುಣ್ಣಿಮೆ ದಿನದಂದು ಭಕ್ತಿಭಾವದಿಂದ ಗಿರಿ (ಬೆಟ್ಟ)ಪ್ರದಕ್ಷಿಣೆ ಮಾಡಿದಲ್ಲಿ ಮಹಾಲಕ್ಷ್ಮೀ ಕಟಾಕ್ಷ ಒಲಿಯಲಿದೆ ಹಾಗೂ ಪ್ರತಿ ಚತುರ್ದಶಿಯಂದು ಪ್ರದಕ್ಷಿಣೆ ಮಾಡಿದಲ್ಲಿ ಜನ್ಮಜನ್ಮಾಂತರಗಳ ಕರ್ಮಗಳು ಕಳೆಯುತ್ತವೆ ಎಂಬ ಪ್ರತೀತಿಯೂ ಇದೆ. ಬೆಟ್ಟವನ್ನು ಆವರಿಸಿರುವ ಕಾಡಿನ ಹಾದಿ, ಸಿರಿಬನದ ಮಡಿಲ ಹಸಿರು ತೆನೆಗಳೊಡನಾಟದಂತೆ ಕಂಡುಬರುತ್ತದೆ. ಭಕ್ತರ ಆಯಾಸವನ್ನು ಮರೆಸಿ, ಮುನ್ನಡೆಸಿ ಮನಸ್ಸನ್ನು ಪುಳಕಿತಗೊಳಿಸಿ ಪ್ರಶಾಂತತೆ ಕಲ್ಪಿಸಿ ದೇವದೇವನ ಅಡಿದಾವರೆಗೆ ನಡೆಸಿಯೇಬಿಡುತ್ತದೆ. ಒಟ್ಟಾರೆ ಸುತ್ತಮುತ್ತಲಿನ ಹತ್ತಾರು ಊರುಗಳಿಗೆ, ಹಳ್ಳಿಗಳಿಗೆ ಅಬಾಲ ವೃದ್ಧರಿಗೆ ಕೈಲಾಸವೂ.. ಇದೆ! ವೈಕುಂಠವೂ... ಇದೆ!! ಎನಿಸುತ್ತದೆ ಈ ಆಲಂಬಗಿರಿ ವೈಭವ ಕ್ಷೇತ್ರ.

ಗುರು ಸ್ವರೂಪ ಶ್ರೀ ಗುರುಮೂರ್ತೇಶ್ವರ ಸ್ವಾಮಿ

  ಸಾಕ್ಷಾತ್ ಗುರು ಸ್ವರೂಪನಾದ ಗುರುಮೂತೇಶ್ವರ ಸ್ವಾಮಿ ಗ್ರಾಮದ ಈಶಾನ್ಯದಲ್ಲಿ ನೆಲೆಸಿದ ನಂತರ ದೈವದತ್ತವಾಗಿ ವಾಸ್ತುಪುರುಷ ಜಾಗೃತನಾಗಿ ಗ್ರಾಮದ ಅಭಿವೃದ್ಧಿಗೆ ಆಸ್ಪದ ನೀಡಿದ ಎನ್ನುವುದರಲ್ಲಿ ಅತಿಶಯೋಕ್ತಿಯಲ್ಲ. ಇಲ್ಲಿ ನೆಲೆಸಿರುವ ಐತಿಹಾಸಿಕ ಶ್ರೀ ಕಲ್ಕಿ ವೆಂಕಟರಮಣ ಸ್ವಾಮಿ ದೇವಾಲಯ ಜೀಣೋದ್ಧಾರ ಕಾರ್ಯ ನಡೆದದ್ದು ಶ್ರೀ ಗುರುಮೂರ್ತೇಶ್ವರ ಸ್ವಾಮಿ ಈಶಾಧೀಶನಾದಮೇಲೆ. ಇಂದು ಶ್ರೀ ದೇವಿ, ಭೂದೇವಿ ಸಮೇತನಾದ ವೆಂಕಟರಮಣ ಸ್ವಾಮಿ ದೇವಾಲಯ ವೈಭವದಿಂದ ಮೆರೆಯುತ್ತಿರುವುದೇ ಪ್ರತ್ಯಕ್ಷ ಸಾಕ್ಷಿ.
  ಶ್ರೀ ಗುರುಮೂರ್ತೇಶ್ವರ ಸ್ವಾಮಿ ದಂಪತಿ ಹಾಗೂ ಕುಟುಂಬ ಸಮೇತರಾಗಿ ಇಲ್ಲಿ ನೆಲೆಸಿದ್ದಾರೆ. ಪ್ರಕೃತಿ-ಪುರುಷ ಸಮಾಗದಂತೆ ದೇವಾಲಯದ ಈಶಾನ್ಯದ ರಸ್ತೆಯ ಪಕ್ಕದಲ್ಲಿ ಹಚ್ಚಹಸಿರ ನಡುವೆ ಕೆರೆ ಇದೆ. ಅದೇ ರೀತಿ ಆಗ್ನೇಯ ರಸ್ತೆಯಲ್ಲಿ ಹಾದು ಹೋದರೆ ದಟ್ಟವಾದ ಮರಗಿಡಗಳು ಹಾದು ಹೋದರೆ ಒಂದು ಪುಟ್ಟಗ್ರಾಮ. ನೈರುತ್ಯದಲ್ಲಿ ಬೆಟ್ಟಗುಡ್ಡಗಳು, ವಾಯುವ್ಯದಲ್ಲಿ ಗ್ರಾಮದ ಕೆರೆ. ಗ್ರಾಮ ಮಧ್ಯ ಶ್ರೀ ಗುರುಮೂರ್ತೇಶ್ವರ ದೇವಾಲಯದ ಪಶ್ಚಿಮ ದಿಕ್ಕಿನಲ್ಲಿ ಶ್ರೀಕಲ್ಕಿ ವೆಂಕಟರಮಣ ಸ್ವಾಮಿ ಬೃಹತ್ ದೇವಾಲಯ, ದಕ್ಷಿಣಕ್ಕೆ ಶ್ರೀ ಆಂಜನೇಯ ಮತ್ತು ಶಿಲ್ಪಕಲಾ ಸೌಂದರ್ಯದ ಕಲ್ಯಾಣಿ. ಹೀಗೆ ಎತ್ತ ಕಣ್ಣುಹಾಯಿಸಿದರೂ ಆಧ್ಯಾತ್ಮಿಕತೆ ಸೂಕ್ಷ್ಮತೆಗಳನ್ನು ಕಾಣಬಹುದು. ಇಂತಹ ಆಲಂಬಗಿರಿಯಲ್ಲಿ ಶ್ರೀ ಪ್ರಸನ್ನ ಪಾರ್ವತಿ, ಬಲಮುರಿ ಗಣಪತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ, ನವಗ್ರಹಗಳು ಹಾಗೂ ನಾಗದೇವತೆಗಳ ಸಮೇತ ಶ್ರೀ ಗುರುಮೂರ್ತೇಶ್ವರನನ್ನು ಪ್ರತಿಷ್ಠಾಪಿಸಿ ನಿತ್ಯ ಪೂಜೆ, ಮಂಗಳ ಕಾರ್ಯಗಳು, ವಿಶೇಷ ಕೈಂಕರ್ಯಗಳನ್ನು ತಪ್ಪದೇ ನಡೆಸಲಾಗುತ್ತಿದೆ. ಈಗಾಗಲೇ ಎರಡೂವರೆ ದಶಕಗಳನ್ನು ಪೂರೈಸಿರುವ ದೇವಾಲಯ, ಆರಂಭಗೊಂಡ 5ನೇ ವರ್ಷದಲ್ಲೇ ಸಾಮೂಹಿಕ ವಿವಾಹ ಕಾರ್ಯಕ್ರಮವು ಹಮ್ಮಿಕೊಂಡಿತ್ತು.
  ವಿಶೇಷ ದಿನಗಳಾದ ಸೋಮವಾರ, ಹಬ್ಬ-ಹರಿದಿನಗಳು, ಕಾರ್ತಿಕ ಮಾಸದಲ್ಲಿ ವೈಭವದಿಂದ ದೀಪೆÇೀತ್ಸವ, ಶಿವರಾತ್ರಿಯಲ್ಲಿ ಪಂಚದಿನ ದೀಕ್ಷಾ ಪ್ರಕಾರ ಅಂಕುರಾರ್ಪಣ, ಧ್ವ್ವಜಾರೋಹಣ, ನಂದಿವಾಹನೋತ್ಸವ, ನಿತ್ಯ ಕ್ಷೀರಾಭಿಷೇಕ, ಶೇಷ ವಾಹನೋತ್ಸವ, ಕಲ್ಯಾಣೋತ್ಸವ, ಮುತ್ತಿನ ಪಲ್ಲಕ್ಕಿ ಮೆರವಣಿಗೆ, ಮಾರನೆ ದಿನದಂದು ಬ್ರಹ್ಮರಥೋತ್ಸವ ಹೀಗೆ ನಾನಾ ಕೈಂಕರ್ಯಗಳು ಅವಿರತವಾಗಿ ನಡೆಯುತ್ತಾ ಬರುತ್ತಿವೆ. ಸುತ್ತಮುತ್ತಲ ಊರುಗಳ, ಹಳ್ಳಿಗಳ ಸಹಸ್ರಾರು ಭಕ್ತಾದಿಗಳು ರಥೋತ್ಸವ ಸಂದರ್ಭದಲ್ಲಿ ಹಾಜರಿದ್ದು ದೇವರ ಸೇವೆಯಲ್ಲಿ ಭಾಗವಹಿಸಿ ನಂತರ ಅನ್ನಸಂತರ್ಪಣೆಗೈದು ತೃಪ್ತರಾಗುತ್ತಾರೆ. ಅಂದು ನಾದಸ್ವರಗಳು, ವಾದ್ಯಗೋಷ್ಠಿಯೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮಗಳು, ಭಜನೆ, ಹರಕಥೆ, ವೀರಭದ್ರ ವೀರಗಾಸೆ ಕುಣಿತ, ರಾತ್ರಿ ವಿಜೃಂಭಣೆಯಿಂದ ಪಲ್ಲಕ್ಕಿ ಉತ್ಸವ ಮುಂತಾದವು ನೆರವೇರುತ್ತವೆ. ಸಂಪೂರ್ಣ ದೇವಾಲಯ ಹಾಗೂ ಆಲಂಬಗಿರಿ ಬೀದಿಗಳು ವಿದ್ಯುತ್ ಅಲಂಕಾರ, ಹೂವಿನ ಅಲಂಕಾರದಿಂದ ಕಂಗೋಳಿಸುತ್ತಿರುತ್ತವೆ. 

ಶಿವರಾತ್ರಿ ಬ್ರಹ್ಮರಥೋತ್ಸವ

  ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ಕೋಲಾರ ಜಿಲ್ಲೆಗಳಲ್ಲಿ ಭಕ್ತಾದಿಗಳಿಗೆ ಇರುವುದೆಂದೇ ಶ್ರೀ ಗುರುಮೂತೇಶ್ವರ ಸ್ವಾಮಿ ದೇವಾಲಯ. ದೂರದ ಊರುಗಳಿಂದ ಇಲ್ಲಿಗೆ ಬಂದು ತಮ್ಮ ಹರಕೆ ತೀರಿಸಿ ಶ್ರೀ ಗುರುಮೂರ್ತೇಶ್ವರ ಸ್ವಾಮಿ ಮತ್ತು ಪ್ರಸನ್ನ ಪಾರ್ವತಾಂಬೆಯ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಪಂಚದಿನ ದೀಕ್ಷಾ ಪ್ರಕಾರ ಶಿವರಾತ್ರಿ ಪೂಜಾ ವಿಧಿ ವಿಧಾನಗಳು ಹಾಗೂ ಬ್ರಹ್ಮರಥೋತ್ಸವ ಮಾಘ ಬಹುಳ ಚತುರ್ದಶಿಯಂದು ನಡೆಯುತ್ತದೆ ಎಂದು ದೇವಾಲಯ ಟ್ರಸ್ಟ್ ಮಾಹಿತಿ ನೀಡಿದೆ.

[೧] ಆಲಂಬಗಿರಿ ಶ್ರೀ ಗುರುಮೂರ್ತೇಶ್ವರ ಸ್ವಾಮಿಯ ನೋಡಲು ಹೀಗೆ ಬನ್ನಿ..!

  ಬೆಂಗಳೂರಿನಿಂದ ಆಲಂಬಗಿರಿಗೆ ಕೇವಲ 68 ಕಿ.ಮೀ. ಅಂತರ, 2 ಗಂಟೆಗಳ ಪ್ರಯಾಣ. ಹೊಸಕೋಟೆಯಿಂದ ಈಶಾನ್ಯ (ಎಡಕ್ಕೆ) ತಿರುಗಿದಲ್ಲಿ ಚಿಂತಾಮಣಿ ಮುಖ್ಯ ರಸ್ತೆ ಸಿಗುತ್ತದೆ. ಅದರಗುಂಟ ಸಾಗಿದರೆ ಕೈವಾರ ಕ್ಷೇತ್ರ. ಆನಂತರ ಸಿಗುವುದು ಚಿನ್ನಸಂದ್ರ. ಚಿನ್ನಸಂದ್ರದಿಂದ ಬಲಕ್ಕೆ ತಿರುಗಿ ಕೇವಲ 3 ಕಿ.ಮೀ. ಕ್ರಮಿಸಿದಲ್ಲಿ ಐತಿಹಾಸಿಕ ಮತ್ತು ಆಧ್ಯಾತ್ಮಿಕದೈವ ಶ್ರೀ ಗುರುಮೂರ್ತೇಶ್ವರ ಸ್ವಾಮಿಯ ಕ್ಷೇತ್ರ ಆಲಂಬಗಿರಿ ತಲುಪುತ್ತೀರಿ.
  1. Alambagiri Sri Gurumurtheswara Swamy Temple History