ಸದಸ್ಯ:Gauthami.K/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿವಾಜಿ ಸಾವಂತ (೩೧ ಅಗಸ್ಟ್ ೧೯೪೦-೧೮ ಸೆಪ್ಟೆಂಬರ್ ೨೦೦೨)ಮರಾಠಿಯ ಕಾದಂಬರಿಕಾರರಾಗಿದ್ದರು. ಮೃತ್ಯುಂಜಯವನ್ನು ಬರೆದಿದ್ದರಿಂದ ಮೃತ್ಯುಂಜಯಕಾರ್ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು. ೧೯೯೪ರಲ್ಲಿ ಮೂರ್ತಿದೇವಿ ಪುರಸ್ಕಾರ ಪಡೆದ ಅವರು, ಈ ಪುರಸ್ಕಾರವನ್ನು ಪಡೆದ ಮೊದಲ ಮರಾಠಿ ಲೇಖಕ ಎಂದು ಪ್ರಸಿದ್ಧರಾಗಿದ್ದಾರೆ. ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಂದಾದ ಕರ್ಣನ ಕುರಿತಾಗಿ ಇವರು ಮೃತ್ಯುಂಜಯ ಎಂಬ ಪುಸ್ತಕವನ್ನು ಬರೆದರು. ಈ ಪುಸ್ತಕವು ಹಿಂದಿ(೧೯೭೪), ಇಂಗ್ಲಿಷ್(೧೯೮೯), ಕನ್ನಡ(೧೯೯೦), ಗುಜರಾತಿ(೧೯೯೧) ಹಾಗೂ ಮಲಯಾಳಂ(೧೯೯೫)ಗೆ ತರ್ಜುಮೆಗೊಂಡು ಅನೇಕ ಪ್ರಶಸ್ತಿ ಹಾಗೂ ಪುರಸ್ಕಾರಗಳನ್ನು ಪಡೆದುಕೊಂಡಿದೆ. 1980ರಲ್ಲಿ ಅವರು ಸಂಭಾಜಿ ಮಹಾರಾಜರ ಜೀವನವನ್ನು ಆಧರಿಸಿ ಚವ ಎಂಬ ಪುಸ್ತಕವನ್ನು ಬರೆದರು. ಅವರು ೧೯೯೫ರಲ್ಲಿ ಮಹಾರಾಷ್ಟ್ರ ಸಾಹಿತ್ಯ ಪರಿಷತ್ ನ ಉಪಾಧ್ಯಕ್ಷರಾಗಿದ್ದರು.1983 ರಲ್ಲಿ ಬರೋಡಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಜೀವನ[ಬದಲಾಯಿಸಿ]

ಅವರು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಅಜಾರ ಗ್ರಾಮದ ಒಂದು ರೈತ ಕುಟುಂಬದಲ್ಲಿ ಜನಿಸಿದರು. ಅಜಾರಾದ ವೆಂಕಟರಾವ್ ಹೈಸ್ಕೂಲಿನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರೈಸಿದರು. ಇವರು ಕೊಲ್ಹಾಪುರದಲ್ಲಿ ಶಿಕ್ಷಕರಾಗಿ ಸ