ವಿಷಯಕ್ಕೆ ಹೋಗು

ಸದಸ್ಯ:G SHIVALINGAPPA/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ಬನ್ನಿ ಮಹಾಂಕಾಳಮ್ಮ ದೇವಸ್ಥಾನ ಬಲಕುಂದಿ,

[ಬದಲಾಯಿಸಿ]


ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕು ಬಲಕುಂದಿ ಗ್ರಾಮದಲ್ಲಿ ಇರುವ ಅತ್ಯಂತ ಶಕ್ತಿಶಾಲಿ ದೇವತೆ ಬನ್ನಿ ಮಹಾಂಕಾಳಮ್ಮ ದೇವಸ್ಥಾನ ಬಳ್ಳಾರಿಯಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿದೆ. ನೂರಾರು ಇತಿಹಾಸವುಳ್ಳ ಈ ದೇವಸ್ಥಾನದಲ್ಲಿ ಸ್ವಯಂ ಆಗಿ ನೆಲೆಸಿರುವ ತಾಯಿ ಬನ್ನಿ ಮಹಾಂಕಾಳಮ್ಮ. ವಿಶಾಲವಾದ ಪ್ರಹಂಗಣದಲ್ಲಿ ದೇವಸ್ಥಾನವು ಕಂಗೊಳಿಸುತ್ತಿದ್ದು ದ್ವಜಸ್ತಂಭ ಕಾಣಸಿಗುತ್ತದೆ ನಂತರ ದೇವಿಯ ಪಾದ ದರ್ಶನ ವಾಗುತ್ತದೆ .ದೇವಸ್ಥಾನವು ನಯನ ಮನೋಹರ ಭವ್ಯವಾಗಿದ್ದು ದೇವಸ್ಥಾನದ ಮುಂಭಾಗದಲ್ಲಿ ನವದುರ್ಗ ಅವತಾರದ ಮೂರ್ತಿಗಳಿವೆ ದೇವಸ್ಥಾನ ಪ್ರಾಂಗಗಣದಲ್ಲಿಯೇ ಸೇವಕೌಂಟರ್ ಇದ್ದು ಅರ್ಚನೆ ಎಲೆ ಪೂಜೆ ಪ್ರಸಾದ ವಿತರಣೆ ಮುಂತಾದ ಪೂಜೆಗಳಿಗೆ ಟೋಕನ್ ವ್ಯವಸ್ಥೆ ಮಾಡಕೊಡಲಾಗುತ್ತದೆ ದೇವಸ್ಥಾನದ ಒಳಗಡೆ ಶಿಲಸ್ತಂಭಗಳಲ್ಲಿ ಅದ್ಭುತವಾದ ಶಿಲ್ಪಕಲೆಗಳು ಹಾಗೂ ವರ್ಣರಂಜಿತ ಚಿತ್ರಕಲೆ ಮೇಲ್ಚಾವಣಿಯಲ್ಲಿ ಕಂಗೊಳಿ ಸುತ್ತದೆ ನೂರಾರು ವರ್ಷ ಇತಿಹಾಸವುಳ್ಳ ಈ ಪುಣ್ಯಕ್ಷೇತ್ರಕ್ಕೆ ಸಾವಿರಾರು ಭಕ್ತರು ಆಗಮಸಿ ದರ್ಶನ ಪಡೆಯುತ್ತಾರೆ, ಆಂಧ್ರ ಪ್ರದೇಶ ತೆಲಂಗಾಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದಲೂ ದೇವಿಯ ದರ್ಶನಕ್ಕಾಗಿ ಆಗಮಿಸುತ್ತಾರೆ ಹಾಗಾಗಿ ಪ್ರತಿಯೊಬ್ಬರೂ ತಾಯಿಯ ಪ್ರಸಾದವಾಗಿ ಅನ್ನದಾಸಹ ಸ್ವೀಕರಿಸುತ್ತಾರೆ. ಈ ತಾಯಿಯು ಭಕ್ತರಿಗೆ ಅಭಯ ಹಸ್ತವನ್ನು ನೀಡಿ ಕಾಪಾಡುತ್ತ ಬಂದಿದ್ದಾಳೆ ಭಕ್ತರಿಗೆ ಯಾವುದೇ ಕಷ್ಟ ಬಂದರೂ ತಾಯಿ ಹೂವಿನ ಮೂಲಕ ಅವರ ಕಷ್ಟವನ್ನು ಪರಿಹರಿಸುತ್ತಾಳೆ.