ವಿಷಯಕ್ಕೆ ಹೋಗು

ಸದಸ್ಯ:Dwarakishareddy S/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೂವಿನಹಡಗಲಿ ಮಾಹಿತಿ

[ಬದಲಾಯಿಸಿ]

ಭೌಗೋಳಿಕ ಹಿನ್ನೆಲೆ

[ಬದಲಾಯಿಸಿ]

"ಪೊವಿನ ಪೊಸ ವಡಂಗಿಲೆ" ಹೂವಿನಹಡಗಲಿಯ ಮೊದಲ ಹೆಸರು. ವಿಜಯನಗರ ಅರಸರ ಕಾಲದಲ್ಲಿ ಹಡಗಿನ ಮೂಲಕ ಮಲ್ಲಿಗೆ ಹೂ ಗಳನ್ನು ಶ್ರೀ ವಿರುಪಾಕ್ಷೇಶ್ವರ ದೇವರ ಪೂಜೆಗೆ ಕಳುಹಿಸುತ್ತಿದ್ದರು ಎಂಬ ಪ್ರತೀತಿ ಇದೆ. ಈ ಪ್ರದೇಶವನ್ನು ಕಲ್ಯಾಣಿ ಚಾಲುಕ್ಯರ ಅರಸ ಮೂರನೆ ತ್ರೈಲೋಕ್ಯಮಲ್ಲನ ಮಾಂಡಳಿಕರಾಗಿದ್ದ ರಾಣಿ "ರಬ್ಬಲಾ ದೇವಿ" ಆಳುತ್ತಿದ್ದರು. ರಾಜ್ಯಾಡಳಿತದ ವಿರಾಮದ ಕಾಲದಲ್ಲಿ ವಿಶ್ರಾಂತಿ ಪಡೆಯಲು ದೊರೆ ತ್ರೈಲೋಕ್ಯ ಮಲ್ಲ ಈ ಸ್ಥಳಕ್ಕೆ ಆಗಮಿಸುತ್ತಿದ್ದನು. ಈ ಪೊವಿನ ಪೊಸ ವಡಂಗಿಲೆ ಪ್ರದೇಶ ಅತ್ಯಂತ ನೈಸರ್ಗಿಕವಾದ ಸಂಪದ್ಭರಿತವಾದ ವಾತವರಣವನ್ನು ಹೊಂದಿತ್ತು. ಸಮ-ಶೀತೋಷ್ಣ ಭೌಗೋಳಿಕ ವಾತವರಣ ವೈವಿಧ್ಯಮಯ ಹೂಗಳ ಕೃಷಿಗೆ ಪೂರಕವಾಗಿತ್ತು. ಅದರಲ್ಲೂ ಮಲ್ಲಿಗೆ ಹೂವಿನ ಕೃಷಿಗೆ ಪ್ರಾಶಸ್ತ್ಯವಾಗಿತ್ತು. ಉತ್ತರಕ್ಕೆ ತುಂಗಭದ್ರಾ ನದಿ ಮತ್ತು ಹಿರೆ ಕೆರೆ, ದಕ್ಷಿಣಕ್ಕೆ ಬಸರಡ್ಡೆವ್ವನ ಕೆರೆ, ಪೂರ್ವಕ್ಕೆ ಕೋಡಿ ಕೆರೆಗಳಿದ್ದವು. ಮೂರು ಭಾಗದಿಂದ ಜಲಾವೃತ್ತವಾದ ನಡುಗಡ್ಡೆ ಪ್ರದೇಶವಾಗಿತ್ತು. ನಡುಗಡ್ಡೆಯ ಪ್ರಧೇಶವನ್ನು ಕೋಟೆ ಎಂದು ಕರೆಯುತ್ತಿದ್ದರು. ಇಂದಿಗೂ ಮಲ್ಲಿಗೆ