ಸದಸ್ಯ:Drmallikarjunamc/ನನ್ನ ಪ್ರಯೋಗಪುಟ
ಕನ್ನಡ ಭಾಷೆ ಪದವಿ ತರಗತಿಗೆ ಎರಡು ವರ್ಷಗಳ ಅವಧಿಗೆ ಅಳವಡಿಸಿರುವುದು ಅತ್ಯಂತ ಸೂಕ್ತವಾಗಿದೆ. ಏಕೆಂದರೆ ಪದವಿ ಹಂತದಲ್ಲಿ ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾಗಿ ಸಾಂಸ್ಕೃತಿ ಅರಿವು ಮೂಡಿಸಲು ಮತ್ತು ವಿಕಾಸಗೊಳ್ಳಲು ಅತ್ಯಂತ ಸೂಕ್ತವಾಗಿರುತ್ತದೆ. ಈ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಪದವಿ ತರಗತಿಗಳಿಗೆ ಅಳವಡಿಸುವಲ್ಲಿ ಸೂಕ್ತ ನಿರ್ಧಾರ ಕೈಗೊಂಡಿರುತ್ತದೆ. ಬಹಳ ಮುಖ್ಯವಾಗಿ ವೃತ್ತಿಪರ ಶಿಕ್ಷಣದಲ್ಲಿ ಕನ್ನಡ ಸಾಹಿತ್ಯವನ್ನು ಕಲಿಸುವುದರಿಂದ ವಿಕಾಸಗೊಂಡ ಪ್ರೌಢ ವಿದ್ಯಾರ್ಥಿಗಳಿಗೆ ಶೀಘ್ರವಾಗಿ ಸಾಂಸ್ಕೃತಿಕ ಅರಿವು ಮೂಡುತ್ತದೆ. ಇದರ ಜೊತೆಗೆ ಹೊರ ರಾಜ್ಯದಿಂದ ಬಂದಂತಹ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನು ಕಲಿಸುವುದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಮಿತಿಯನ್ನು ರಚಿಸಿದ್ದು ಅಧ್ಯಯನ ನಡಸಿ ಈಗಾಗಲೇ ಹಲವು ವರದಿಯನ್ನು ಕರ್ನಾಟಕ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿರುತ್ತದೆ. ಅದರಲ್ಲಿ ಮುಖ್ಯವಾಗಿ ಡಾ.ಬರಗೂರು ರಾಮಚಂದ್ರಪ್ಪ ವರದಿ ಹಾಗೂ ಡಾ. ಹಿ.ಚಿ. ಬೋರಲಿಂಗಯ್ಯ ಅವರ ವರದಿಗಳು ಬಹಳ ಮುಖ್ಯವಾಗಿವೆ. ಡಾ. ಬರಗೂರು ರಾಮಚಂದ್ರಪ್ಪ ವರದಿಯು ಈಗಾಗಲೇ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಾಜ್ಯದಾದ್ಯಂತ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಯಲು ತನ್ನ ವರದಿಯನ್ನು ಸರ್ಕಾರ ಸಲ್ಲಿಸಿ ಇದನ್ನು ಅನುಷ್ಠಾನಗೊಳಿಸಿರುತ್ತದೆ.ತದನಂತರದಲ್ಲಿ ಡಾ. ಹಿ.ಚಿ. ಬೋರಲಿಂಗಯ್ಯನವರ ನೇತೃತ್ವದ ಸಮಿತಿಯು ಸಮಗ್ರ ಅಧ್ಯಯನ ನಡೆಸಿ ಎಲ್ಲಾ ವೃತ್ತಿಪರ ಶಿಕ್ಷಣದಲ್ಲಿ ಕನ್ನಡ ಭಾಷೆಯನ್ನು ೨ ವರ್ಷದ ಅವಧಿಗೆ ಕಲಿಯಲು ತನ್ನ ವರದಿಯಲ್ಲಿ ತಿಳಿಸಿರುತ್ತದೆ. ಅಂದರೆ ವೈದ್ಯಕೀಯ,ನರ್ಸಿಂಗ್,ಆರ್ಯುರ್ವೇದ ವಿಜ್ಞಾನ, ಸಂಗೀತ ವಿಜ್ಞಾನ, ಇಂಜಿನಿಯರಿಂಗ್,ಕೃಷಿ ವಿಜ್ಞಾನ ಮತ್ತು ಪಶುವೈದ್ಯಕೀಯ ವಿಜ್ಞಾನಗಳಲ್ಲಿ ಈ ಎಲ್ಲಾ ವೃತ್ತಿಪರ ಶಿಕ್ಷಣಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕೆಂದು ವರದಿಯನ್ನು ಸಲ್ಲಿಸಿರುತ್ತದೆ. ಇದನ್ನು ೨೦೧೫-೧೬ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸಿರುತ್ತದೆ.ಕನ್ನಡಿಗರಿಗೆ ಆಯಾ ವೃತ್ತಿಪರ ಹಿನ್ನೆಲೆಯ ಆಯಾ ಪರಿಭಾಷೆಯ ಪಠ್ಯವನ್ನು ಅಳವಡಿಸುವುದು, ಕನ್ನಡೇತರರಿಗೆ ಕನ್ನಡ ಭಾಷೆಯನ್ನು ಕಲಿಸುವುದು ಕುರಿತಂತೆ ಸ್ವಷ್ಪ ನಿರ್ದೇಶನವನ್ನು ಕರ್ನಾಟಕ ಸರ್ಕಾರವು ನೀಡಿರುತ್ತದೆ. ಕಳೆದ ಐದು ವರ್ಷಗಳಿಂದ ಎಲ್ಲಾ ವೃತ್ತಿಪರ ಶಿಕ್ಷಣದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಭಾಷೆಯನ್ನು ಕಲಿಸಲಾಗುತ್ತದೆ. ಈ ಮೊದಲು ಪಠ್ಯಪುಸ್ತಕಗಳನ್ನು ಆಯಾ ವೃತ್ತಿಪರ ಶಿಕ್ಷಣದ ವಿಶ್ವವಿದ್ಯಾಲಯಗಳೇ ಸಿದ್ಧಪಡಿಸಿಕೊಳ್ಳುತ್ತಿದ್ದವು. ತದನಂತರದಲ್ಲಿ ೨೦೨೦-೨೧ನೇ ಸಾಲಿನಲ್ಲಿ ಡಾ. ಹಿ.ಚಿ. ಬೋರಲಿಂಗಯ್ಯನವರ ನೇತೃತ್ವದಲ್ಲಿ ಏಕ ರೂಪ ಪಠ್ಯವನ್ನು ಸಿದ್ಧಪಡಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನೇತೃತ್ವವನ್ನು ವಹಿಸಿರುತ್ತದೆ. ವೃತ್ತಿ ಪರ ಶಿಕ್ಷಣ ಸಂಸ್ಥೆಗಳಲ್ಲಿ ಅಂದರೆ ರಾಜ್ಯದ ಎಲ್ಲಾ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳಿಗೆ ಏಕ ರೂಪದ ಪಠ್ಯ, ಇಂಜಿನಿಯರಿಂಗ್ ಸಂಬಂಧಿಸಿದಂತೆ ವಿ.ಟಿಯು ವಿಶ್ವವಿಯದ್ಯಾಲಯ, ವೈದ್ಯಕೀಯ ವಿಜ್ಞಾನಗಳಿಗೆ ಸಂಬಂಧಿಸಿದಂತೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಕನ್ನಡ ಪಠ್ಯಪುಸ್ತಕವನ್ನು ಡಾ.ಹಿ.ಚಿ.ಬೋರಲಿಂಗಯ್ಯ ಅವರ ನೇತೃತ್ವದಲ್ಲಿ ಸಿದ್ಧಪಡಿಸಿರುತ್ತದೆ. ಈ ಮೊದಲಿದ್ದ ಪಠ್ಯಪುಸ್ತಕಗಳನ್ನು ಏಕ ರೂಪಕ್ಕೆ ತರಲು ಕನ್ನಡ ಅಭಿವೃದ್ಧಿಪ್ರಾಧಿಕಾರವು ಸಿದ್ಧತೆ ನಡೆಸಿ ಎಲ್ಲಾ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಆಯಾ ಜ್ಞಾನ ಶಿಸ್ತುಗಳ ನೆಲೆಯಲ್ಲಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿ ಕೊಟ್ಟಿರುತ್ತದೆ. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳಲ್ಲಿ ಈಗಾಗಲೇ ಸಾಂಸ್ಕೃತಿಕ ಕನ್ನಡ ಮತ್ತು ಕನ್ನಡ ಕೃಷಿ ಎಂಬ ಪಠ್ಯ ಪುಸ್ತಕಗಳನ್ನು ಸಿದ್ಧಪಡಿಸಿಕೊಟ್ಟಿರುತ್ತದೆ. ಇದು ವೃತ್ತಿಪರ ವಿಜ್ಞಾನವನ್ನು ಕಲಿಯುವುದರಿಂದ ಸಾಂಸ್ಕೃತಿಕ ಅರಿವು ಕನ್ನಡ ನೆಲ,ಜಲ, ಸಾಂಸ್ಕೃತಿಕ ಅರಿವು ಮೂಡಿಸುವಲ್ಲಿ ವಿದ್ಯಾರ್ಥಿಗಳಿಗೆ ಕನ್ನಡ ಪಠ್ಯಗಳು ಅತ್ಯಂತ ಸೂಕ್ತವಾಗಿರುತ್ತವೆ.
- ಸಸ್ಯವರ್ಣನೆ
- ಬೇಸಾಯ ಕ್ರಮಗಳು
- ಸಸ್ಯಾಭಿವೃದ್ಧಿ
- ಭೂಮಿ ಸಿದ್ಧತೆ
- ಛಾಯಾಚಿತ್ರಗಳು