ಸದಸ್ಯ:Dhanush cs

ವಿಕಿಪೀಡಿಯ ಇಂದ
Jump to navigation Jump to search

ನನ್ನ ವಿವರ[ಬದಲಾಯಿಸಿ]

ನನ್ನ ಹೆಸರು ಧನುಷ್ ಸಿ.ಎಸ್. ನಾನು ಹುಟ್ಟಿದ್ದು ಬೆಂಗಳೂರಿನ ದೇವನಹಳ್ಳಿ ತಾಲೂಕು. ನನ್ನ ಅಪ್ಪನ ಹೆಸರು ಚಂದ್ರ ಶೇಖರ್. ಅವರು ಡ್ರೈವರ್ ಮತ್ತು ಎಲೆಕ್ಟ್ರಿಕ್ ಕೆಲಸ ಮಾಡ್ತಾರೆ. ಅವರು ಎಸ್.ಎಸ್.ಎಲ್. ಸಿ ಮುಗಿಸಿದ್ದಾರೆ. ನನ್ನ ಅಮ್ಮನ ಹೆಸರು ಮಂಜುಳ. ಅವರು ಕೂಡ ಎಸ್.ಎಸ್.ಎಲ್.ಸಿ ಮುಗಿಸಿದ್ದಾರೆ. ನನ್ನ ಹುಟ್ಟಿದ ದಿನಾಂಕ 12-7-2001. ಹುಟ್ಟಿದು ಯಲಹಂಕ ಸರ್ಕಾರಿ ಆಸ್ಪತ್ರೆನಲ್ಲಿ. ನನಗೆ ಒಬ್ಬ ಸ್ವಂತ ತಂಗಿಯು ಇದಾಳೆ. ಅವಳ ಹೆಸರು ಶಿಲ್ಪ. ಅವಳು ಈಗ ದ್ವಿತೀಯ ಪಿ.ಯು.ಸಿ ವಿಧ್ಯಾರ್ಥಿನಿ. ನನಗೆ ನನ್ನ ತಂಗಿ ಅಂದ್ರೆ ತುಂಬಾ ಇಷ್ಟ. ಏಷ್ಟು ಬಾರಿ ಜಗಳ ಮಾಡಿದ್ರು ಆಮೇಲೆ ಒಂದ್ ಆಗ್ತಿವಿ. ಇನ್ನೂ ಅಮ್ಮ ಅಂದ್ರೆ ಇಷ್ಟ. ಅವರೆ ನನಗೆ ಬೆಸ್ಟ್ ಫ್ರೆಂಡ್ ಮನೆಯಲ್ಲಿ. ಅಪ್ಪ ಸ್ವಲ್ಪ ಸ್ಟ್ರಿಕ್ಟ್.

ನನ್ನ ಶಾಲೆ - ಕಾಲೇಜು ದಿನಗಳು[ಬದಲಾಯಿಸಿ]

ನಾನು ಓದಿದ್ದು ವಿವೇಕಾನಂದ ಶಾಲೆಯಲ್ಲಿ. ಅದು ತುಂಬಾ ಚಿಕ್ಕ ಶಾಲೆಯಾದರು,ನನಗೆ ಸಿಕ್ಕ ವಿಧ್ಯೆ ಮಾತ್ರ ಅಪಾರ. ನನಗೆ ಚಿತ್ರಕಲೆಯಲ್ಲಿ ತುಂಬಾ ಆಸಕ್ತಿ. ನಾನು ಚಿಕ್ಕಂದಿನಿಂದಲೇ ಬಹಳ ಚುರುಕಾಗಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದೇನೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ಒಂದು ಸಲ ಮೊದಲನೆಯ ಸ್ಥಾನ ಹಾಗೂ ಎರಡು ಸಲ ಎರಡನೇ ಸ್ಥಾನ ಗಳಿಸಿದ್ದೇನೆ. ಪ್ರಬಂಧ ಸ್ಪರ್ಧೆಯಲ್ಲಿ ಎರಡನೇ ಸ್ಥಾನ,ಚಿತ್ರಕಲೆಯಲ್ಲಿ ಮೂರನೇ ಸ್ಥಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ. ವಿದ್ಯಾಭ್ಯಾಸದಲ್ಲೂ ನನಗೆ ಅಷ್ಟೇ ಆಸಕ್ತಿ. ಅಲ್ಲಿಯೂ ಹಲವಾರು ಬಹುಮಾನಗಳನ್ನು ಸ್ವೀಕರಿಸಿದ್ದೇನೆ.ಏಳನೇ ತರಗತಿಯಲ್ಲಿ ನಮ್ಮ ಶಾಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ನಾನು ಅಂತರ ಶಾಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಸಿಕ್ಕಿದೆ. ಹಲವು ಬಾರಿ ಸೋತರು,ಅದರ ಅನುಭಾವದಿಂದ ಸ್ಫೂರ್ತಿ ಸಿಕ್ಕಿದೆ. ಶಾಲೆಯಲ್ಲಿ ತುಂಬಾ ಚಟುವಟಿಕೆಯಲ್ಲಿ ಭಾಗವಹಿಸಿದಿನಿ. ಸ್ಪೋರ್ಟ್ಸ್ ನಲ್ಲಿ ಅಷ್ಟು ಆಸಕ್ತಿ ಇಲ್ಲ ಆದ್ರೆ ಬ್ಯಾಡ್ಮಿಂಟನ್ ಅಂದ್ರೆ ಪಂಚ ಪ್ರಾಣ. ಎಸ್. ಎಸ್. ಎಲ್. ಸಿನಲ್ಲಿ ಒಳ್ಳೆಯ ಅಂಕ ಬಂದಿತು. ಅಡ್ಮಿಷನಗಾಗಿ ಕ್ರೈಸ್ಟ್ ಕಾಲೇಜಿಗೆ ಬಂದೆ. ಆದ್ರೆ ಕಾಲೇಜನ್ನು ನೋಡಿ ಗಾಬರಿಗೊಂದೆ. ಚಿಕ್ಕ ಚಿಕ್ಕ ಶಾಲೆಯಲ್ಲಿ ಓದಿ ಒಂದೇ ಸಲ ಅಷ್ಟು ದೊಡ್ಡ ಕಾಲೇಜ್ ನೋಡಿದರೆ ಗಾಬರಿಗೊಂದೆ. ಸೆಲೆಕ್ಟ್ ಅದೇ ಆದ್ರೆ ನಾನೇ ಬೇಡ ಎಂದು ತ್ಯಜಿಸಿದೆ. ಆನಂತರ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿ,ಪಿ.ಯು.ಸಿನಲ್ಲಿ ಕಾಲೇಜಿಗೆ ಮೊದಲ ರಾಂಕ್ ಬಂದೆ. ಇದ್ದು ನನಗೆ ಮಾತ್ರ ಅಲ್ಲ,ನಮ್ಮ ತಂದೆ ತಾಯಿಗೂ ತುಂಬಾ ಸಂತೋಷವಯ್ತು. ಅವಾಗ ನಾನು ಒಂದು ನಿರ್ಧಾರ ಕೈಗೊಂಡಿದೆ. ಮುಂದೆ ನಾನು ಕ್ರೈಸ್ಟ್ ಯೂನಿವರ್ಸಿಟಿಯಲೇ ಓದಬೇಕು ಅಂತ. ರಿಸಲ್ಟ್ ಬಂದ ಕೂಡಲೇ ಕಾಲೇಜಗೆ ಹೋಗಿ ಅಪ್ಲಿಕೇಶನ್ ಫಾರ್ಮ್ ತಂದು ಫೀಲ್ ಮಾದಿದೆ. ಫಾರ್ಮ್ ಕೋಟಗ ಡೈರೆಕ್ಟ್ ಅಡ್ಮಿಷನ್ ಸಿಕ್ತು. ನನಗೆ ಒಂತೂ ಫುಲ್ ಖುಷಿ ಆಯ್ತು. ಅಪ್ಪ ಅಮ್ಮಗೆ ಫುಲ್ ದಿಲ್ ಖುಷ್.

ನನ್ನ ಅಸೆ - ಹವ್ಯಾಸಗಳು[ಬದಲಾಯಿಸಿ]

ನನ್ನ ಜೀವನದ ಮುಖ್ಯ ಗುರಿ ಒಂದು ದೊಡ್ಡ ವಿದ್ಯಾಸಂಸ್ಥೆಯಲ್ಲಿ ಒಳ್ಳೆಯ ಶಿಕ್ಷಕಯಾಗಿ ಸೇವೆ ಸಲ್ಲಿಸುವುದಾಗಿದೆ. ನನ್ನ ಪ್ರಕಾರ ಯಾವುದೇ ವ್ಯಕ್ತಿ ಜೀವನದಲ್ಲಿ ಏನಾದರು ಸಾಧಿಸಬೇಕಾದರೆ ಇನ್ನೊಬ್ಬ ವ್ಯಕ್ತಿಯ ಜೀವನವನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು. ಆಗ ಆ ವ್ಯಕ್ತಿಗಿಂತಲೂ ಹೆಚ್ಚಾಗಿ ಸಾಧಿಸುವ ಯೋಚನೆಯಲ್ಲಿ ಅದಕ್ಕಿಂತಲೂ ಹೆಚ್ಚಾಗಿ ಸಾಧಿಸುವ ಅವಕಾಶ ಒದಗಿ ಬರುತ್ತದೆ. ಈ ರೀತಿಯಲ್ಲಿ ನನಗೆ ನನ್ನ ಅಬ್ದುಲ್ ಕಲಾಂ ಮಾದರಿ ಮನುಷ್ಯ. ಅವರಿಗೆ ಇರುವ ಸಹನೆ,ಶಾಂತಿ,ವಿವೇಕತನೆಗಳು ನನಗೆ ಮಾದರಿಯಾಗಿವೆ. ಹವ್ಯಾಸ ಎಂದರೆ ನಮ್ಮ ವಿರಾಮದ ಸಮಯದಲ್ಲಿ ನಮಗೆ ಇಷ್ಟವಾದ ಕೆಲಸ ಮಾಡುವುದು. ಹೊಟ್ಟೆ ಬಟ್ಟೆಗಾಗಿ ದುಡಿಯುವುದು ಇದ್ದದ್ದೆ, ನಮಗೆ ಕೆಲಸ ಇಷ್ಟವಿರಲಿ ಇಲ್ಲದಿರಲಿ ಮಾಡಲೇಬೇಕು. ಆದರೆ ಹವ್ಯಾಸ ಹಾಗಲ್ಲ,ಅದು ನಮಗೆ ಪ್ರಿಯವಾದದ್ದು, ಯಾರ ಒತ್ತಾಯ ಇಲ್ಲ,ಯಾರನ್ನೂ ಮೆಚ್ಚಿಸುವ ಅಗತ್ಯವಿಲ್ಲ. ನನ್ನ ಜೀವನದಲ್ಲಿ ನನ್ನ ಪೋಷಕರು ಇಲ್ಲಿಯವರೆಗೂ ಅವರು ನನ್ನ ಜೀವನಕ್ಕೆ ಮೂಳೆ ಯಾಗಿ ಇರುವವರು. ನನ್ನ ಅಭ್ಯಾಸಗಳು ನನ್ನ ನಾಯಿ ಜತೆ ಆಟ ಆಡುವುದು ಮತ್ತು ಸ್ಫೂರ್ತಿ ವೀಡಿಯೊಗಳನ್ನು ನೋಡುವುದು. ನನ್ನ ನೆಚ್ಚಿನ ಆಟಗಾರ ಎಂ.ಎಸ್. ಧೋನಿ ನಾನು ಅವರ ಅಭಿಮಾನಿ. ಅವರ ಗುಣಮಟ್ಟ ಉಲ್ಲೇಖಿಸಲಾಗಿದೆ ಕೇವಲ ಕ್ರಿಕೆಟ್ ಮಾತ್ರವಲ್ಲ ಬೇರೆ ಕ್ರೀಡೆಗಳಲ್ಲೂ ಅವರ ಸ್ಪೋರ್ಟ್ ಮ್ಯಾನ್ ಶೇಪ್ ಮತ್ತು ಪ್ರತಿಭೆಗಳಿಂದ ಕಷ್ಟವಾಗಿರುವ ಹೊಂದಾಣಿಕೆಯನ್ನು ಸುಲಭವಾಗಿ ಗೆಲ್ಲಿಸುತ್ತಾರೆ. ಇದನ್ನು ನಾವು ನಮ್ಮ ಜೀವನದಲ್ಲಿ ಬೆಳೆಸಿಕೊಂಡರೆ ನಮ್ಮ ಜೀವನದಲ್ಲಿ ಬರುವ ಎಷ್ಟೇ ಕಷ್ಟವಾದ ಪರಿಸ್ಥಿತಿಯಲ್ಲಿ ಇದನ್ನು ಬಳಿಸಿಕೊಂಡರೆ ನಾವು ಸುಲಭವಾಗಿ ಗೆಲ್ಲಬಹುದು. ನಾನು ಮುಂಚೆ ಹೇಳಿರುವಂತೆ ನನ್ನ ಅಭ್ಯಾಸಗಳು ಸ್ಫೂರ್ತಿ ವಿಡಿಯೋಗಳನ್ನು ನೋಡುವುದು ಮಾನವೀಯತೆ ನಮ್ಮ ಜೀವನದಲ್ಲಿ ಅಳವಡಿಸಬೇಕು ಯಾಕೆಂದರೆ ಅದು ಒಂದು ಒಳ್ಳೆಯ ಗುಣ ಮನುಷ್ಯನಲ್ಲಿ ಇರುತ್ತಿತ್ತು ಈಗ ಅದು ಮಾಯವಾಗುತ್ತದೆ ಈಗಿನ ಸಮಯದಲ್ಲಿ ಮನುಷ್ಯ ಮನುಷ್ಯನನ್ನೇ ನಂಬುವುದಿಲ್ಲ. ನಾವು ಧೋನಿಯ ಗುಣಮಟ್ಟವನ್ನು ಬೆಳೆಸಿಕೊಂಡು ಯಾವುದೇ ಕ್ರೀಡೆಯಾಗಿದ್ದರೂ ತಾಳ್ಮೆಯಿಂದ,ಪ್ರತಿಭೆಯಿಂದ,ಸುಲಭವಾಗಿ ಗೆಲ್ಲಬಹುದು.

ಹೆಮ್ಮೆಯ ಕ್ರೈಸ್ಟ್ ವಿದ್ಯಾರ್ಥಿ[ಬದಲಾಯಿಸಿ]

ನಮ್ಮ ಬ್ಲಾಕ್

ಕ್ರೈಸ್ಟ್ ಯೂನಿವರ್ಸಿಟಿ ಎಲ್ಲಾ ರೀತಿಯ ಅವಕಾಶಗಳನ್ನು ನೀಡುತ್ತದೆ,ಇದನ್ನು ಒಳೆಯ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳುತ್ತಿದ್ದೇನೆ. ಉದ್ಯೋಗ,ಎಲ್ಲಾ ರೀತಿಯಾದ ಅಭಿವೃದ್ದಿಯನ್ನು ಕ್ರೈಸ್ಟ್ ಯೂನಿವರ್ಸಿಟಿ ಕಲಿಸಿಕೊಡುತ್ತದೆ ಆದ್ದರಿಂದ ನಾನು ಈ ವಿಶ್ವವಿದ್ಯಾಲಯವನ್ನು ನನ್ನ ಶಿಕ್ಷಣಕ್ಕಾಗಿ ಆಯ್ಕೆ ಮಾಡಿಕೊಂಡೆ. ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಪ್ರತಿಯೊಬ್ಬ ಉಪನ್ಯಾಸಕರು ಸಹಾ ಬಹಳ ಚೆನ್ನಾಗಿ ಪಾಠ ಮಾಡುತ್ತಾರೆ. ಕಾಲೇಜು ಕ್ಯಾಂಪಸ್ ನಿರ್ವಹಣೆ ಬಹಳ ಅಚ್ಚುಕಟ್ಟಾಗಿ ಮತ್ತು ಸುಂದರವಾಗಿ ಮಾಡಿದ್ದಾರೆ. ನಾನು ಕ್ರೈಸ್ಟ್ ಯೂನಿವರ್ಸಿಟಿಯ ವಿದ್ಯಾರ್ಥಿ ಎಂದು ಹೆಮ್ಮೆಪಡುತ್ತೇನೆ.ನನಗೆ ವಿಕಿಪೀಡಿಯ ಬಗ್ಗೆ ತಿಳಿದಿದು ಬಿ.ಕಾಂಮ್ ಸೇರಿದ ನಂತರ. ಮೊದಲಿಗೆ ವಿಕಿಪೀಡಿಯ ಬಗ್ಗೆ ಹೇಳಬೇಕಾದರೆ ವಿಕಿಪೀಡಿಯ ನನ್ನ ಕಲಿಕೆಗೆ ಒಳ್ಳೆಯ ವೇದಿಕೆಯಾಗಿದೆ. ನಮ್ಮಲಿರುವ ಆಸ್ತಕಿಗಳನ್ನು ಬೆಳಕಿಗೆ ತರಲು ಇದು ಒಂದು ಸಹಾಯವಾಗಿದೆ. ನಿಮ್ಮ ವಿಕಿಪೀಡಿಯ ಅಂತರ್ಜಾಲದಿಂದ ಕನ್ನಡವನ್ನು ಓದಲು ಮತ್ತು ಛಾಪಿಸಲು ಸುಲಭವಾಗಿದೆ. ನಾನು ವಿಕಿಪೀಡಿಯಾ ಬಳಸಿ ನನ್ನ ಕನ್ನಡ ಟೈಪಿಂಗ್ ಕೌಶಲ್ಯಗಳನ್ನು ಸುಧಾರಿಸಲು ಭಾವಿಸುತ್ತೇನೆ.