ಸದಸ್ಯ:Devika. K. M

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಪರಿಚಯ

ನನ್ನ ಹೆಸರು ದೇವಿಕ.ಕೆ.ಎಂ.ನಾನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ

ಕ್ರೈಸ್ಟ್ ಯುನಿವರ್ಸಿಟಿ

ಬಿ.ಎಸ್.ಸಿ ಓದುತ್ತಿದ್ದೇನೆ.ನಾನು ಹುಟ್ಟಿದ್ದು ಹೊಸಕೋಟೆ

ಹೊಸಕೋಟೆ

ತಾಲೂಕಿನ, ಕಾಜಿಹೊಸಹಳ್ಳಿ ಎಂಬ ಗ್ರಾಮದಲ್ಲಿ.

ಕುಟುಂಬ

ನನ್ನ ತಂದೆಯ ಹೆಸರು ಮುನಿಸ್ವಾಮಿ ಗೌಡ ನನ್ನ ತಾಯಿಯ ಹೆಸರು ಸೌಜನ್ಯ .ನಾನು ಮೂಲತಹ ರೈತ

ರೈತ ಕುಟುಂಬ

ಕುಟುಂಬದವಳು.

ಶಿಕ್ಷಣ

ಹೊಸಕೋಟೆ ತಾಲ್ಲೂಕಿನಲ್ಲಿ ಇರುವ ಸಿಟಿಜನ್ ಹೈ ಸ್ಕೂಲ್ ಎಂಬ ಶಾಲೆಯಲ್ಲಿ ನನ್ನ ಮೂರನೇ ತರಗತಿಯ ವರೆಗಿನ ವಿದ್ಯಾಭ್ಯಾಸವನ್ನು ಪಡೆದಿದ್ದೇನೆ, ನಂತರ ನನ್ನ ಇಡೀ ಕುಟುಂಬ ಬೆಂಗಳೂರಿಗೆ ಬಂದೆವು.ನಂತರದ ವಿದ್ಯಾಭ್ಯಾಸವನ್ನು ಎಸ್.ಎಸ್.ಐ.ಎಸ್ ಎಂಬ ಶಾಲೆಯಲ್ಲಿ ಮುಗಿಸಿದ್ದೇನೆ. ಹತ್ತನೇ ತರಗತಿಯನ್ನು ಉತ್ತಮ ಅಂಕಗಳೊಂದಿಗೆ ಮುಗಿಸಿದೆ. ಶಾಲೆಯಲ್ಲಿ ನಾನು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ ಚೆಸ್, ಕಬಡ್ಡಿ, ರಿಲೇ, ತ್ರೋಬಾಲ್, ಮುಂತಾದ ಕ್ರೀಡೆಗಳನ್ನು ಆಡಿ ಗೆದ್ದಿದ್ದೇನೆ .ಹಲವಾರು ಪ್ರಶ್ನಾವಳಿ ಹಾಗೂ ಭಾಷಾ ಚರ್ಚೆಗಳಲ್ಲಿ ಭಾಗವಹಿಸಿದ್ದೇನೆ.

ಆಸಕ್ತಿ ಮತ್ತು ಹವ್ಯಾಸಗಳು

ನನಗೆ ನೃತ್ಯ,ನಾಟಕ ಎಂದರೆ ಬಹಳ ಆಸಕ್ತಿ ಇದೆ. ನಾಲ್ಕು ವರ್ಷಗಳ ಕಾಲ ಭರತನಾಟ್ಯಂ ಕಲಿತಿದ್ದೇನೆ. ನನ್ನ ಮುಂದಿನ ಓದು ಕ್ರೈಸ್ಟ್ ಜೂನಿಯರ್ ಕಾಲೇಜಿನಲ್ಲಿ ಶುರುವಾಯಿತು. ಪಿ.ಯು.ಸಿ ನಲ್ಲಿ ವಿಜ್ಞಾನವನ್ನು ತೆಗೆದುಕೊಂಡೆ. ನನಗೆ ಮೊದಲಿನಿಂದಲೂ ವಿಜ್ಞಾನದಲ್ಲಿ ಬಹಳಷ್ಟು ಆಸಕ್ತಿ. ನಾನು ಮುಂದೆ ಜೀವನದಲ್ಲಿ ನ್ಯಾಚುರಲ್ ಲಿಸ್ಟ್ ಆಗಬೇಕೆಂಬ ಆಸೆ ಇದೆ.ನನಗೆ ಹಾವುಗಳ ಬಗ್ಗೆ ತಿಳಿದುಕೊಂಡು ಅವುಗಳ ಬಗ್ಗೆ ಮುಂದೆ ಓದಬೇಕೆಂಬ ಆಸಕ್ತಿ ಸಹ ಇದೆ.ಹಾವು ಎಂದ ತಕ್ಷಣ ಸಾಮಾನ್ಯ ಜನರಿಗೆ ಬರೀ ಕೆಟ್ಟ ಯೋಚನೆಗಳು ಬರುತ್ತವೆ.ಈ ಯೋಚನೆಗಳನ್ನು ಬದಲಾಯಿಸಬೇಕೆಂಬ ಮನಸ್ಥಿತಿ ನನ್ನದು.ನನಗೆ ಪುಸ್ತಕಗಳನ್ನು ಓದುವ ಅಭ್ಯಾಸವಿದೆ,ಮನಸ್ಸಿಗೆ ಸರಿ ಇದ್ದಾಗ ಹಾಡುಗಳನ್ನು ಕೇಳುತ್ತೇನೆ.ನಾನು ದೇವರನ್ನು ನಂಬುವುದಿಲ್ಲ, ನನ್ನ ಪ್ರಕಾರ ದೇವರನ್ನು ನಂಬುವುದಕ್ಕಿಂತ ನಮ್ಮಲ್ಲಿ ನಮಗೆ ನಂಬಿಕೆ ಇರಬೇಕು,ನಮ್ಮನ್ನು ನಾವು ಅತಿಯಾಗಿ ಪ್ರೀತಿಸಬೇಕು ಹಾಗೂ ಗೌರವಿಸಿ ಕೊಳ್ಳಬೇಕು.ನನ್ನ ಮಾದರಿ ನನ್ನ ಸುತ್ತಮುತ್ತಲಿರುವ ಜನರು ಮುಖ್ಯವಾಗಿ ನನ್ನ ತಂದೆ ತಾಯಿ.

ಗುರಿ

ಇದೆಲ್ಲದರ ನಡುವೆ ನನಗೆ ಒಂದು ಐ.ಪಿ.ಎಸ್ ಆಫೀಸರ್ ಆಗಿ ನನ್ನ ಸುತ್ತಮುತ್ತ ನಡೆಯುತ್ತಿರುವ ದೌರ್ಜನ್ಯವನ್ನು ನಿಲ್ಲಿಸುವುದು ನನ್ನ ಗುರಿ! .ಎಲ್ಲರಲ್ಲೂ ಒಳ್ಳೆಯದನ್ನು ಕಾಣಬೇಕು ಎಂಬುದು ನನಗೆ ನನ್ನ ತಂದೆ ಕಲಿಸಿರುವ ಜೀವನದ ಅತ್ಯಂತ ಅಮೂಲ್ಯವಾದ ಪಾಠ. ನನಗೆ ನನ್ನ ಗೆಳೆಯರೆಂದರೆ ಪಂಚಪ್ರಾಣ.ಅವರೊಂದಿಗೆ ಇಡೀ ಜಗತ್ತನ್ನು ಸುತ್ತುವ ಆಸೆ ಹಾಗೂ ಅಲ್ಲಿನ ತರತರವಾದ ಆಹಾರಗಳನ್ನು ಸವಿಯುವುದು ನನ್ನ ದೊಡ್ಡ ಕನಸು.ಹೀಗೆ ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದೇನೆ.ಇವೆಲ್ಲವನ್ನು ಪೂರೈಸಿಕೊಳ್ಳುವುದು ನನ್ನ ದೊಡ್ಡ ಕನಸು ಹಾಗೂ ನನ್ನ ತಂದೆ ತಾಯಿಯನ್ನು ರಾಜ ರಾಣಿಯಂತೆ ನೋಡಿಕೊಳ್ಳುವುದೇ ಜೀವನದ ಗುರಿಯಾಗಿರುತ್ತದೆ.