ಸದಸ್ಯ:Deepikachrist/WEP 2018-19 dec

ವಿಕಿಪೀಡಿಯ ಇಂದ
Jump to navigation Jump to search
ಸರ್ ಆಂಡ್ರೂ ವಿಲೆಸ್
Andrew wiles1-3.jpg
ಸರ್ ಆಂಡ್ರೂ ವಿಲೆಸ್
ಜನನಏಪ್ರಿಲ್ ೪,೧೯೫೩
ಕ್ಯಾಂಬ್ರಿಡ್ಜ್, ಇಂಗ್ಲೆಂಡ್
ರಾಷ್ಟ್ರೀಯತೆಬ್ರಿಟಿಷ್
ಕಾರ್ಯಕ್ಷೇತ್ರಗಣಿತಶಾಸ್ತ್ರ
ಸಂಸ್ಥೆಗಳು
 • ಆಕ್ಸ್ಫರ್ಡ್ ವಿಶ್ವವಿದ್ಯಾಲಯ
 • ಪ್ರಿನ್ಸಟನ್ ವಿಶ್ವವಿದ್ಯಾಲಯ

ಆಂಡ್ರೂ ವಿಲೆಸ್[ಬದಲಾಯಿಸಿ]

ಸರ್ ಆಂಡ್ರೂ ಜಾನ್ ವಿಲೆಸ್ ಓರ್ವ ಬ್ರಿಟಿಷ್ ಗಣಿತಶಾಸ್ತ್ರಜ್ಞ.ಇವರು ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ರಾಯಲ್ ಸೊಸೈಟಿ ಸಂಶೋಧನಾ ಪ್ರಾಧ್ಯಾಪಕರಾಗಿದ್ದಾರೆ.ಇಲ್ಲಿ ಇವರು ಸಂಖ್ಯಾ ಸಿದ್ಧಾಂತದಲ್ಲಿ ವಿಶೇಷತೆಯನ್ನು ಗಳಿಸುತ್ತಿದ್ದಾರೆ.ಇವರು ಫರ್ಮ್ಯಟ್ನ ಪ್ರಮೇಯವನ್ನು ಸಾಬೀತುಪಡಿಸಿದ್ದಕ್ಕೆ ಸುಪರಿಚಿತರಾಗಿದ್ದು, ಇದಕ್ಕಾಗಿ ಇವರಿಗೆ ೨೦೧೬ನಲ್ಲಿ ಅಬೆಲ್ ಪ್ರಶಸ್ತಿ ಹಾಗು ೨೦೧೭ನಲ್ಲಿ ರಾಯಲ್ ಸೊಸೈಟಿಯಿಂದ ಕೋಪ್ಲ್ಯ್  ಪದಕ ಲಭಿಸಿತು.೨೦೦೨ನೆೇ ಇಸವಿಯಲ್ಲಿ ಇವರನ್ನು ಬ್ರಿಟಿಷ್ ಸಾಮ್ರಾಜ್ಯದ ನೈಟ್ ಕಮ್ಯಾಂಡರ್ ಆಗಿ ನೇಮಿಸಲಾಯಿತು.೨೦೧೮ರಲ್ಲಿ ಇವರು ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದ  ಮೊದಲ ರೀಜಿಯಸ್ ಪ್ರಾಧ್ಯಾಪಕರಾಗಿ ನೇಮಕಗೊಂಡರು.

ಆರಂಭಿಕ ಜೀವನ ಹಾಗೂ ವಿದ್ಯಾಭ್ಯಾಸ[ಬದಲಾಯಿಸಿ]

ವಿಲೆಸ್ಅವರು ೧೯೫೩,ಏಪ್ರಿಲ್ ೧೧ರೆಂದು ಇಂಗ್ಲೆಂಡಿನ ಕ್ಯಾಂಬ್ರಿಡ್ಜ್ನಲ್ಲಿ ಜನಿಸಿದರು.ಇವರ ತಂದೆ ಮೌರಿಸ್ ಫ್ರಾಂಕ್ ವಿಲೆಸ್ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು.ಇವರ ತಾಯಿ ಪ್ಯಾಟ್ರಿಸಿಯಾ ವಿಲೆಸ್.ವಿಲೆಸ್ ಅವರು ಕಿಂಗ್ಸ್ ಕಾಲೇಜು ಶಾಲೆ, ಕೇಂಬ್ರಿಜ್ ಹಾಗೂ ದಿ ಲೇಯ್ಸ್ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ಇವರು ೧೦ ವರ್ಷದವರಿದ್ದಾಗ ಒಂದು ದಿನ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದರು.ಈ ಸಮಯದಲ್ಲಿ ಅವರಿಗೆ  ಫೆರ್ಮಾಟ್ನ ಕೊನೆಯ ಪ್ರಮೇಯದ ಬಗ್ಗೆ ತಿಳಿದದ್ದು .ಆಗ ಅವರು ಸ್ಥಳೀಯ ಗ್ರಂಥಾಲಯವೊಂದರಲ್ಲಿ ಇದರ ಬಗ್ಗೆ ಒಂದು ಪುಸ್ತಕವನ್ನು ಪಡೆದರು.೧೦ ವರ್ಷದ ಹುಡುಗನಿಗೆ ಅರ್ಥವಾಗುವ ಪ್ರಮೇಯವನ್ನು ಯಾರೂ ಸಾಬೀತು ಪಡಿಸಿಲಿಲ್ಲವೆಂಬುದು ಇವರಿಗೆ ಅಚ್ಚರಿಯ ವಿಷಯವಾಗಿತ್ತು.ಆಗ ಇವರು ಇದನ್ನು ನಾನೇ ಮೊದಲು ಸಾಬೀತು ಪಡಿಸಬೇಕೆಂಬ ಛಲವನ್ನು ತೊಟ್ಟರು.ಆದರೆ  ಅವರ ಗಣಿತಶಾಸ್ತ್ರದ ಜ್ಞಾನ ತುಂಬಾ ಕಡಿಮೆಯೆಂದು ಅವರಿಗೆ ಶೀಘ್ರದಲ್ಲೇ ತಿಳಿದ ಕಾರಣ ಅವರು ಆ ಕನಸನ್ನು ಕೈಬಿಟ್ಟರು.ಆದರೆ ಇವರಿಗೆ ೩೩ ವರ್ಷವಿರುವಾಗ ಕೆನ್ ರಿಬೆರ್ಟ್ರವರು ಮಾಡಿದ ಪ್ರಮೇಯವೊಂದು ವಿಲೆಸ್ ಅವರಿಗೆ ಮತ್ತೆ ಫೆರ್ಮಾಟ್ನ ಪ್ರಮೇಯವನ್ನು ನೆನಪಿಸಿತು.

ಸಂಶೋಧನೆ ಮತ್ತು ವೃತ್ತಿಜೀವನ[ಬದಲಾಯಿಸಿ]

೧೯೭೪ರಲ್ಲಿ ಆಕ್ಸ್ಫರ್ಡ್ ನ ಮೆಲ್ಟನ್ ಕಾಲೇಜಿನಿಂದ ವಿಲೆಸ್ ಅವರಿಗೆ ಗಣಿತಶಾಸ್ತ್ರದಲ್ಲಿ ಬ್ಯಾಚುಲರ್ ಪದವಿ ದೊರೆಯಿತು.ನಂತರ ೧೯೮೦ರಲ್ಲಿ ಕೇಂಬ್ರಿಜ್ ನ ಕ್ಲಾರೆ ಕಾಲೇಜಿನಿಂದ ಪಿಎಚ್ಡಿ ದೊರೆಯಿತು.೧೯೮೧ರಲ್ಲಿ ವೈಲ್ಸ್ರವರು ಪ್ರಿನ್ಸಟನ್  ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿ ನೇಮಕಗೊಂಡರು.೧೯೮೮-೧೯೯೦ರವರೆಗೆ ವೈಲ್ಸ್ರವರು ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ರಾಯಲ್ ಸೊಸೈಟಿಯ ಸಂಶೋಧನಾ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು.

ವಿಲೆಸ್ ಅವರು ಪದವಿ ಸಂಶೋಧನೆಯ  ಮಾರ್ಗದಾರ್ಶನ ಪಡೆದದ್ದು  ಜಾನ್ ಕೋಟಸ್ ಅವರಿಂದ.ಇವರಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದು ಸಂಕೀರ್ಣ ಗುಣಾಕಾರದೊಂದಿಗೆ ಅಂಡಾಕಾರದ ವಕ್ರಾಕೃತಿಯ ಅಂಕಗಣಿತದಲ್ಲಿ .ಅವರು ಮತ್ತಷ್ಟು ಸಂಶೋಧನೆ ನಡೆಸದ್ದು ಬ್ಯಾರಿ ಮ್ಯಾಝೋರ್ ಅವರೊಂದಿಗೆ.ಭಾಗಲಬ್ಧ ಸಂಖ್ಯೆಗಳ ಮೇಲಿರುವ  ಐವಸಾವಾಸ್ ಸಿದ್ಧಾಂತವನ್ನು ಇವರಿಬ್ಬರು ಅಧ್ಯಯನ ನಡೆಸಿದರು.

ಪ್ರಿನ್ಸಟನ್ ವಿಶ್ವವಿದ್ಯಾಲಯದ ಇವರ ಜೀವನಚರಿತ್ರೆಯ ಪುಟದ ಪ್ರಕಾರ ಆಂಡ್ರೂ ಅವರು ಸಂಖ್ಯಾ ಸಿದ್ಧಾಂತದಲ್ಲಿ ಬಹಳ ಪರಿಣಿತಿ ಪಡೆದಿದ್ದು,ಇವರ ಜ್ಞಾನವನ್ನು ಮೀರುವರು ಜಗತ್ತಿನಲ್ಲೇ ಅತಿ ಕಡಿಮೆ.ಇವರ ಕೆಳಗೆ ಪಿಎಚ್ಡಿ ಮಾಡಿದ ಹಲವಾರು ಯುವಕರು ಇಂದು ವಿಶ್ವದ ಪ್ರಖ್ಯಾತ ವಿಶ್ವವಿದ್ಯಾಲಯಗಳಲ್ಲಿ ಉನ್ನತ  ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಫೆರ್ಮಾಟ್ನ ಕೊನೆಯ ಪ್ರಮೇಯದ ಪುರಾವೆ[ಬದಲಾಯಿಸಿ]

ಸುಮಾರು ಆರು ವರ್ಶಗಳ ಕಾಲ ವಿಲೆಸ್ ಅವರು ಗೌಪ್ಯವಾಗಿ ಈ ಪ್ರಮೇಯದ ಪುರಾವೆಯ ಮೇಲೆ   ಕೆಲಸ ಮಾಡಿದರು.ಈ ಆರು ವರುಷಗಳಲ್ಲಿ ಅವರ ತಮ್ಮ ಹಿಂದಿನ ಕೆಲಸಗಳನ್ನು ಪ್ರಕಟಿಸುತ್ತಾ ಹೋದರು.ಇವರ ಕೆಲಸದ ಬಗ್ಗೆ ತಿಳಿದದ್ದು ಇವರ ಹೆಂಡತಿಗೆ ಮಾತ್ರ.ಕೊನೆಗೆ ಜೂನ್ ೧೯೯೩ರಲ್ಲಿ   ಇವರು ತಮ್ಮ ಪುರಾವೆಯನ್ನು ಕೇಂಬ್ರಿಜ್ ನ ಒಂದು ಕಾನ್ಫರೆನ್ಸ್ ನಲ್ಲಿ ಪ್ರಕಟಿಸಿದರು.ಆದರೆ ಆಗಸ್ಟ್ ೧೯೯೩ರಲ್ಲಿ ಆ ಪ್ರಮೇಯದಲ್ಲಿ ನ್ಯೂನತೆ ಇರುವುದು ಕಂಡು ಬಂತು.ಇನ್ನೇನು ಬಿಟ್ಟುಕೊಡುವ ಸಮಯದಲ್ಲಿ ಅವರ ಮಾಜಿ ವಿದ್ಯಾರ್ಥಿಯ ಜೊತೆಗೂಡಿ ಮತ್ತೊಂದು ಲೇಖನವನ್ನು ಪ್ರಕಟಿಸಿದರು.ಈ ಲೇಖನ ಫೆರ್ಮಾಟ್ನ ಪ್ರಮೇಯದ ಪುರಾವೆಯನ್ನು ಪೂರ್ಣಗೊಳಿಸಿತು.ಈ ಎರಡು ಲೇಖನಗಳು ಮೇ ೧೯೯೫ ರಲ್ಲಿ  ಅನ್ನಾಲ್ಸ್ ಆಫ್ ಮ್ಯಾಥೆಮ್ಯಾಟಿಕ್ಸ್ ಎಂಬ ಜರ್ನಲ್ ನಲ್ಲಿ ಪ್ರಕಟಗೊಂಡವು

ಪ್ರಶಸ್ತಿಗಳು ಮತ್ತು ಗೌರವಗಳು[ಬದಲಾಯಿಸಿ]

ವಿಲೆಸ್ ರವರ ಫೆರ್ಮಾಟ್ ಪ್ರಮೇಯದ ಪುರಾವೆಯೂ ವಿಶ್ವದ ಗಣಿತಶಾಸ್ತ್ರಜ್ಞರ  ಪರಿಶೀಲನೆಗೆ ಮೆಟ್ಟಿ ನಿಂತಿತು.ವಿಲೆಸ್ ರವರನ್ನು ಬಿಬಿಸಿಯು ಹೊರೈಜನ್ ಎಂಬ ತನ್ನ ಸಾಕ್ಷ್ಯಚಿತ್ರ ಸರಣಿಗಾಗಿ ಸಂದರ್ಶಿಸಿತು.ಇವರ ಕೆಲಸ ಹಾಗು ಜೀವನದ ವಿವಿರಗಳನ್ನು  ಸೈಮನ್ ಸಿಂಗ್ ರವರ ಪ್ರಖ್ಯಾತ ಪುಸ್ತಕ ಫೆರ್ಮಾಟ್ಸ್ ಲಾಸ್ಟ ಥಿಯರಮ್ ನಲ್ಲಿ ವಿವರಿಸಲಾಗಿದೆ.

ವಿಲೆಸ್ ರವರಿಗೆ ವಿಜ್ಞಾನ ಹಾಗು ಗಣಿತಶಾಸ್ತ್ರದಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ:

 • ಲಂಡನ್ ಮ್ಯಾಥಮೆಟಿಕಲ್ ಸೊಸೈಟಿಯ ಜೂನಿಯರ್ ವಿಟೆಹೆಡ್  ಪುರಸ್ಕಾರ(೧೯೮೮)
 • ಚುನಾಯಿತ ರಾಯಲ್ ಸೊಸೈಟಿಯ ಸದಸ್ಯ (ಎಫ್ ಆರ್ ಎಸ್) -೧೯೮೯
 • ಸ್ಚವ್ಕ್ ಪ್ರಶಸ್ತಿ (೧೯೯೫)
 • ಫೆರ್ಮಾಟ್ ಪ್ರಶಸ್ತಿ (೧೯೯೫)
 • ಗಣಿತಶಾಸ್ತ್ರದಲ್ಲಿ ವೂಲ್ಫ್ ಪ್ರಶಸ್ತಿ (೧೯೯೫/೬)
 • ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ರವರಿಂದ ಗಣಿತಶಾಸ್ತ್ರದಲ್ಲಿ ಏನ್ ಏ ಎಸ್   ಪ್ರಶಸ್ತಿ (೧೯೯೬)
 • ರಾಯಲ್ ಮೆಡಲ್ (೧೯೯೬)
 • ಒಸ್ಥರೌಸ್ಕಿ ಪ್ರಶಸ್ತಿ (೧೯೯೬)
 • ಕೋಲ್ ಪ್ರಶಸ್ತಿ (೧೯೯೭)
 • ಮ್ಯಾಕ್ಆರ್ಥರ್ ಫೆಲ್ಲೋಶಿಪ್ (೧೯೯೭)
 • ಪೈಥಾಗರಸ್ ಪ್ರಶಸ್ತಿ (೨೦೦೪)
 • ಪೈಥಾಗರಸ್ ಪ್ರಶಸ್ತಿ (೨೦೦೪)
 • ಅಬೆಲ್ ಪ್ರಶಸ್ತಿ (೨೦೧೬)
 • ಕೋಪ್ಲ್ಯ್ ಪದಕ (೨೦೧೬)

ಉಲ್ಲೇಖಗಳು[ಬದಲಾಯಿಸಿ]

[೧] [೨]

 1. https://royalsociety.org/news/2017/05/mathematician-andrew-wiles-wins-royal-society-copley-medal/
 2. https://www.scientificamerican.com/article/are-mathematicians-finall/