ಸದಸ್ಯ:Dechamma n.s

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                               ಜಗದ್ಗುರು ಮೂರು ಸಾವಿರ ಮಠ

ಹುಬ್ಬಳ್ಳಿಯಲ್ಲಿ ಹೂಬಳ್ಳಿಯ ಹೂವುಗಳಂತೆ ಶೋಭಿಸುವ ಶ್ರೀ ಜಗದ್ಗುರು ಮೂರುಸಾವಿರಮಠವು ಸುಪ್ರಸಿದ್ಧ ಮಠವಾಗಿದೆ. ಇದರ ಗತಯುಗದ ಪಕ್ಷಿನೋಟವನ್ನು ನೋಡಿದಾಗ ಪ್ರೊ. ವರದರಾಜ ಉಮರ್ಜಿಯವರು ಬೆಳಕಿಗೆ ತಂದ ಕಲಚೂರಿಯ 12ನೇ ಶತಮಾನದ ಶಿರಸಿಯ ಶಿಲಾಶಾಸನದಲ್ಲಿ ಮೂರುಸಾವಿರಮಠದ ಉಲ್ಲೇಖವಿದೆ. ಶೈವ ಮೂಲದ ತಾಯಿ ಬೇರಿನಿಂದ ಈ ಮಠವು ಅಲ್ಲಮ ಸಂಪ್ರದಾಯದ ಶೂನ್ಯ ಸಿಂಹಾಸನ ಪೀಠವಾಗಿ ಉತ್ಕ್ರಾಂತಿಯಾಗಿದೆಯೆ೦ದು ಊಹಿಸಲಾಗಿದೆ. ಹೂಬಳ್ಳಿಯ ಪುರಾತಣ ಹಳ್ಳಿಯೇ ಹುಬ್ಬಳ್ಳಿಯಾಗಿರಬೇಕೆಂಬುದು ಅಭಿಪ್ರಾಯ. ಹುಬ್ಬಳ್ಳಿಯು ಲಿಂಗಾಯತ ಸಮಾಜದ ಕೇಂದ್ರವಾಗಿತ್ತೆಂದು ನಂಬಲಾಗಿದೆ. ಈ ಹುಬ್ಬಳ್ಳಿಯ ತಪೋವನದ ಗವಿಯಲ್ಲಿ ಉಗ್ರ ಅನುಷ್ಠಾನಗೈದು ಲಿಂಗೈಕ್ಯರಾದ ಜಗದ್ಗುರು ಗುರುಸಿದ್ಧ ಗುರುಸಿದ್ಧರಾಜಯೋಗೀಂದ್ರರ ಜಾಗೃತ ಸಮಾಧಿಯು ಶ್ರೀಮಠದ ಬಲಭಾಗದಲ್ಲಿ "ಹುಚ್ಚನ ಗದ್ದಿಗೆ" ಎಂದೇ ಭಕ್ತರು ಕರೆಯುತ್ತಾರೆ. ಶ್ರೀ ಮೂರುಸಾವಿರಮಠದ ಹುಚ್ಚನೆಂದರೆ ಬೆಂಕಿಯ ಕೆಂಡ. ಅವನ ಅ೦ಗಾರ ಹಿಡಿದು ಆಣೆಮಾಡಿದರೆ ಸಮಸ್ಯೆ ಮುಗಿಯಿತು ಎ೦ದು ಜನ ಇಂದಿಗೂ ನಂಬಿರುವರು. ಈ ಕಾರಣದಿ೦ದ ಇದಕ್ಕೆ ಹುಚ್ಚನ ಮಠ, ಗುರುಸಿದ್ಧಪ್ಪನ ಮಠ ಎ೦ದು ಕರೆಯಲಾಗುತ್ತದೆ. ಕಿತ್ತೂರು ಚನ್ನಮ್ಮನ ಸಂಸ್ಥಾನ ಅವನತಿಯ ನ೦ತರ ಅದೇ ಸಂಸ್ಥಾನದ ಕಟ್ಟಗೆಗಳನ್ನೇ ಈ ಮಠಕ್ಕೆ ಜೋಡಿಸಲಾಗಿದೆ. ತಾಳೆಗ್ರಂಥಗಳನ್ನು ಸಂಗ್ರಹಿಸಿಡಲು ಓಲೆಮಠವನ್ನು ಕಟ್ಟಲಾಯಿತು. ಈ ಮಠದ ಪೂವ೯ ಸ್ಥಾನವೆಂದು ಪೂವ೯ದ ಮೂರುಸಾವಿರಮಠವೆಂದು ಕರೆಯಲಾಗುತ್ತಿ ದೆ. ಅಲ್ಲಮ ಪ್ರಭುವಿನ ಶೂನ್ಯ ಪೀಠದ ಪರಂಪರೆಯಲ್ಲಿ ಅನೇಕ ಜಗದ್ದುರು ಪೀಠಗಳು, ನಿರ೦ಜನ ಪೀಠಗಳು ಕನ್ನಡ ನಾಡಿನಲ್ಲಿ ಉದಯಿಸಿದವು. ಕಲ್ಯಾಣದ ಕ್ರಾಂತಿಯಾಯಿತು. ಆಗ ಅಲ್ಲಿಯ ಮೂರುಸಾವಿರ (೩೦೦೦) ಜನ ಭಕ್ತ ಮಹೇಶ್ವರರು ಪೂವಳ್ಳಿ (ಹುಬ್ಬಳ್ಳಿ)ಗೆ ಬಂದು ಈ ಧರ್ಮಪೀಠದಲ್ಲಿ ತಂಗಿದರು. ಈ ಐತಿಹಾಸಿಕ ಘಟನೆಯ ಪರಿಣಾಮವಾಗಿ ಮೂರುಸಾವಿರಮಠವಾಯಿತೆಂದು ಹಲವರ ಅಭಿಪ್ರಾಯ. ಡಾ|| ಡಿ.ಎಲ್. ನರಸಿಂಹಾಚಾಯ೯ರ ಕನ್ನಡ ಗ್ರಂಥ ಸಂಪಾದನೆಯಲ್ಲಿ ಶ್ರೀ ಬಸವೇಶ್ವರ ಪುರಾಣ ಬರೆಯುವದು ಸ೦ಪೂಣ೯ವಾಯಿತು. ಈ ಪುಸ್ತಕವನ್ನು ಬರೆಸಿದವರು ಯಾರು ಎಂದರೆ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಶೂನ್ಯ ಸಿಂಹಾಸನಾಧೀಶ್ವರ ಭ್ರೂಪುರದ ೩ ಸಹಸ್ರ ಮಠಾಧಿಕಾರಿಗಳಾದ ಗಂಗಾಧರ ಸ್ವಾಮಿಜಿಯರ ಕತಮಲೋದ್ಭವವಾದ ಗುರುಸಿದ್ಧ ಸ್ವಾಮಿಯವರು ಬರೆಸಿದ್ದರೆಂದು ೧೩೫೩ ರಲ್ಲಿ ಶ್ರೀ ಮೂರುಸಾವಿರಮಠದ ಪ್ರಾಚೀನತೆಗೆ ಸ್ಪಷ್ಟ ಅಂಶವಾಗಿದೆ.ಶ್ರೀ ಮೂರುಸಾವಿರಮಠದ ಲಿಂಗೈಕ್ಯ ಜಗದ್ಗುರು ಗ೦ಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳವರು ಜಗದ್ಗುರು ಪೀಠವನ್ನು ಅಲಂಕರಿಸಿದ ಮಹಾಮಹಿಮರು. ಸಮಾಜ ಸೇವೆಯೇ ಸದಾಶಿವನೊಲುಮೆಯಯ್ಯಾ ಎ೦ದು ಘೋಷಿಸಿದರು. ಹುಬ್ಬಳ್ಳಿಯಲ್ಲಿ ಶ್ರೀ ಜಗದ್ಗುರು ಗ೦ಗಾಧರ ಜಿನ್ನಿಂಗ್ ಅ೦ಡ್ ಪ್ರೆಸ್ಸಿಂಗ ಫ್ಯಾಕ್ಟರಿ ಸ್ಥಾಪಿಸಿದರು. ೧೯ ವಷ೯ಗಳ ಕಾಲ ಆಳಿಕೆಗೈದು ಲಿಂಗೈಕ್ಯರಾದರು. ಕನಾ೯ಟಕದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ "ಧರ್ಮತರಂಗಿಣಿ" ಎಂಬ ಮಾಸಪತ್ರಿಕೆಯನ್ನು ಆರಂಭಿಸಿ ಅದಕ್ಕೆ ಸ್ವತಂತ್ರ ಮುದ್ರಣಾಲಯವನ್ನು ಅಣಿಗೋಳಿಸಿದರು. ಅದರಂತೆಯೇ ಶಿಕ್ಷಣ ಪ್ರೇಮಿಗಳಾದ ಗುರಸಿದ್ಧರಾಜಯೋಗಿಂದ್ರರು ಕೆ. ಎಲ್. ಇ ಸಂಸ್ಥೆಯ ಸಂಚಾಲಕರನ್ನು ಪ್ರೇರೇಪಿಸಿ ಶ್ರೀ ಕಾಡಸಿದ್ಧೇಶ್ವರ ಕಾಲೇಜು ಸ್ಥಾಪಿಸಲು ೮೦ ಸಾವಿರ ರೂಪಾಯಿಗಳನ್ನು ದಾನ ನೀಡಿದರು. ಅದರಂತೆ ೧ ಲಕ್ಷ ರೂಪಾಯಿಗಳ ಕೊಡುಗೆ ನೀಡಿ ಜಗದ್ಗುರು ಗಂಗಾಧರ ಕಾಮಸ೯ ಕಾಲೇಜನ್ನು ಸ್ಥಾಪಿಸಿದರು. ವಾಣಿಜ್ಯ ಕೇಂದ್ರವಾದ ಹುಬ್ಬಳ್ಳಿ ನಗರವನ್ನು ಶಿಕ್ಷಣ ಕೇಂದ್ರವಾಗಿ ನಿರ್ಮಿಸುವಲ್ಲಿ ಪರಿಶ್ರಮಿಸಿ.....ಕ್ರಿ. ಶ ೧೯೫೮ ಮೇ ೧ ರಂದು ಹುಬ್ಬಳ್ಳಿಯ ಮೂರುಸಾವಿರಮಠದ ಇತಿಹಾಸದಲ್ಲಿ ನವಯುಗ ಆರಂಭವಾಯಿತು. ಪೂಜ್ಯ ಜಗದ್ಗುರು ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳು ಒ೦ದು ವ್ಯಕ್ತಿಯಲ್ಲ, ದೊಡ್ಡ ಶಕ್ತಿ ಎಂಬುದನ್ನು ನಾಡು ಮನಗಂಡಿದೆ. ನಿರಂತರವಾಗಿ ದುಡಿಯುವ ಭಕ್ತವೃಂದವನ್ನು ಉದ್ಧರಿಸಿದ ಮಹಾನ್ ವ್ಯಕ್ತಿತ್ವ ಹೊಂದಿದವರು ದಿ. ಡಾ|| ಮೂಜಗ೦ ರವರು. ತಮ್ಮ ಕಾಲದಲ್ಲಿ "ಪರಂಜ್ಯೋತಿ" ಎ೦ಬ ಮಾಸಪತ್ರಿಕೆ ಪ್ರಾರಂಭಿಸಿದರು. ಇದರ ಮೂಲಕ ಧಮ೯, ಸಾಹಿತ್ಯ, ಸಂಸ್ಕೃತಿ, ಕಲೆ, ಅರೋಗ್ಯ ಕುರಿತಾದ ಚಟುವಟಿಕೆಗಳು ಜನರನ್ನು ಮುಗ್ಧಗೊಳಿಸುತ್ತಲಿವೆ. ಮೂಜಗ೦ ರವರ ಕಾಲದಲ್ಲಿ ಅನೇಕ ಶಾಲೆ, ಕಾಲೇಜುಗಳನ್ನು ಸ್ಥಾಪಿಸಿದರು. ಸ್ತ್ರೀ ಪುರುಷರ ಸಮಾನತೆಯ ವಿಚಾರ ಹೇಳುತ್ತಾರೆ. ಸ್ತ್ರೀ ಶಿಕ್ಷಣಕ್ಕೆ ಪ್ರಾಮುಖ್ಯತೆ ಕೊಡಬೇಕೆಂದು ಸರಕಾರದ ವಿಚಾರವಂತರ ಅಭಿಮತದಂತೆ ಈ ವಿಚಾರಗಳನ್ನು ಕಾಯ೯ರೂಪಕ್ಕೆ ತಂದ ಮಹಾಮಹಿಮರು ಶ್ರೀ ಮೂಜಗಂ ರವರು. ಮಹಿಳೆಯರಿಗಾಗಿಯೇ ಶಾಲೆ, ಕಾಲೇಜುಗಳು, ಶಿಸುವಿಹಾರಗಳನ್ನು ಸ್ಥಾಪಿಸಿದ್ದಲ್ಲದೇ ಈ ಜಗದ್ಗುರುಗಳವರು ಹುಬ್ಬಳ್ಳಿ ಮಹಾನಗರದಲ್ಲಿ ಪ್ರಪ್ರಥಮ ಮಹಿಳಾ ಕಾಲೇಜೊಂದನ್ನು ಸ್ಥಾಪಿಸಿದರು. ಇಂದು ೩೦೦೦ ವಿದ್ಯಾಥಿ೯ನಿಯರಿಗಿಂತಲೂ ಹೆಚ್ಚು ವಿದ್ಯಾರ್ಥಿನಿಯರು ಶಿಕ್ಷಣ ಪಡೆಯಲು ಅನುಕೂಲವಾಯಿತು. ಇವರು ದೃಢನಿಧಾ೯ರಮಾಡಿ ತೆರೆದ ಈ ಸಂಸ್ಥೆ ಮಹಿಳಾ ಕಾಲೇಜು ಹೆಮ್ಮರವಾಗಿ ಬೆಳೆದಿದೆ. ಶ್ರೀಮಠದ ಜಗದ್ಗುರುಗಳು ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಗುರುಸ್ವಾಮಿಗಳು.