ಸದಸ್ಯ:Chris.noronha/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾರಾಟ ತೆರಿಗೆ[ಬದಲಾಯಿಸಿ]

ಮಾರಾಟ ತೆರಿಗೆಯು ಕೆಲವೊಂದು ವಸ್ತುಗಳು ಹಾಗೂ ಸೇವೆಗಳನ್ನು ಖರೀದಿಸುವ ಸಮಯದಲ್ಲಿ ವಿಧಿಸಲಾಗುವ ಬಳಕೆ ತೆರಿಗೆ. ಮಾರಾಟದ ಸಮಯದಲ್ಲಿ ತೆರಿಗೆ ವಿಧಿಸಬಹುದಾದಂತಹ ಬೆಲೆಯ ಶೇಕಡಾ ದರವಾಗಿ ಲೆಕ್ಕಾಚಾರ ಮಾಡಿ ವಿಧಿಸುವುದು ತೆರಿಗೆ ಮೊತ್ತ. ಮಾರಾಟದ ಒಂದು ಭಾಗಕ್ಕೆ ತೆರಿಗೆಯ ಲೆಕ್ಕಾಚಾರದಿಂದ ವಿನಾಯಿತಿ ಇರುತ್ತದೆ, ಏಕೆಂದರೆ ಮಾರಾಟ ತೆರಿಗೆಗಳ ನಿಯಮಗಳು ಸಾಮಾನ್ಯವಾಗಿ ವಿನಾಯಿತಿಗಳ ಒಂದು ಪಟ್ಟಿಯನ್ನು ಹೊಂದಿರುತ್ತವೆ. ತೆರಿಗೆಗಳನ್ನು ನಿರ್ವಹಿಸುವ ನಿಯಮಗಳ ಪ್ರಕಾರ ತೆರಿಗೆಯು ನಿಗದಿ ಪಡಿಸಿದ ಬೆಲೆಯಲ್ಲಿ ಸೇರಿರಬಹುದು(ತೆರಿಗೆ-ಸೇರಿದ) ಅಥವಾ ಮಾರಾಟದ ಸಮಯದಲ್ಲಿ ಬೆಲೆಯ ಜೊತೆ ಸೇರಿಸಬಹುದು.

ಹೆಚ್ಚಿನ ಮಾರಾಟ ತೆರಿಗೆಗಳನ್ನು ಮಾರುವವನು ಕೊಳ್ಳುವವನಿಂದ ಸಂಗ್ರಹಿಸಲಾಗುತ್ತಚೆ, ಸರ್ಕಾರದ ಏಜೆನ್ಸಿಗೆ ಆತನು ಅದನ್ನು ಭರಿಸುತ್ತಾನೆ. ವಸ್ತುಗಳನ್ನು ಮಾರಾಟ ಮಾಡುವಾಗ ಸಾಮಾನ್ಯವಾಗಿ ಮಾರಾಟ ತೆರಿಗೆಗಳನ್ನು ವಿಧಿಸಲಾಗುತ್ತದೆ, ಆದರೆ ಸೇವೆಗಳ ಮಾರಾಟ ಮಾಡುವಾಗಲೂ ಸಹ ಮಾರಾಟ ತೆರಿಗೆ ವಿಧಿಸಲಾಗುವುದು. ಸೂಕ್ತವಾಗಿ, ಮಾರಾಟ ತೆರಿಗೆಯು ಹೆಚ್ಚಿನ ಒಪ್ಪಂದದ ದರವನ್ನು ಹೊಂದಿರಬಹುದು, ತಡೆಯುವುದು ಕಷ್ಟ, ಆದರೆ ಲೆಕ್ಕಾಚಾರ ಮತ್ತು ಸಂಗ್ರಹ ಮಾಡಲು ಸುಲಭವಾಗಿರುತ್ತದೆ. ಒಂದು ಸಾಂಪ್ರದಾಯಿಕ ಅಥವಾ ಚಿಲ್ಲರೆ ವ್ಯವಹಾರದ ಮಾರಾಟ ತೆರಿಗೆಯನ್ನು ಕೊನೆಯ ಬಳಕೆದಾರನಿಗೆ ಮಾರುವ ವಸ್ತುವಿನ ಮೇಲೆ ವಿಧಿಸಲಾಗುತ್ತದೆ. ಇದನ್ನು ಸಾಧಿಸುವುದಕ್ಕೋಸ್ಕರ, ಖರೀದಿ ಮಾಡುವವನು ಕೊನೆಯ ಬಳಕೆದಾರನಲ್ಲದಿದ್ದರೆ ಆತನು "ಮರು ಮಾರಾಟದ ಪ್ರಮಾಣಪತ್ರ"ವನ್ನು ಮಾರುವವನಿಗೆ ನೀಡಬೇಕು, ಇದು ಒಬ್ಬ ಮಾರಾಟಗಾರನು ಇನ್ನೊಬ್ಬ ಗ್ರಾಹಕನಿಗೆ ಮಾರುವುದಕ್ಕಾಗಿ ವಸ್ತುಗಳನ್ನು ಖರೀದಿಸುತ್ತಿದ್ದಾನೆ ಎಂದು ತಿಳಿಸುತ್ತದೆ. ಈ ರೀತಿಯ ಪ್ರಮಾಣ ಪತ್ರವನ್ನು ನೀಡದ ಖರೀದಿದಾರನಿಗೆ ಖರೀದಿಸುವ ಪ್ರತಿಯೊಂದು ವಸ್ತುವಿನ ಮೇಲೆ ತೆರಿಗೆ ವಿಧಿಸಲಾಗುತ್ತದೆ.

ಮಾರಾಟ ತೆರಿಗೆಗಳ ಇತರೆ ವಿಧಗಳು, ಅಥವಾ ಒಂದೇ ರೀತಿಯ ತೆರಿಗೆಗಳು, ಇದರಲ್ಲಿ ಸೇರಿರುವಂತಹವು: ವ್ಯಾಪಾರದ ಎಲ್ಲಾ ಮಾರಾಟಗಳ ಮೇಲೆ ವಿಧಿಸುವ ಒಟ್ಟು ರಶೀದಿಗಳ ತೆರಿಗೆಗಳು. ಉತ್ಪಾದನೆಯ ಹಂತದಿಂದ ಅಂತಿಮ ಚಿಲ್ಲರೆ ಮಾರಾಟದವರೆಗೆ ಒಂದು ಬಾರಿಗಿಂತ ಹೆಚ್ಚು ತೆರಿಗೆ ವಸೂಲಾತಿ, ಅಂದರೆ "ಒಂದರ ಮೇಲೆ ಇನ್ನೊಂದರಂತೆ" ಅಥವಾ "ಪಿರಾಮಿಡ್ ರೀತಿಯಲ್ಲಿ" ಮಾಡುವುದರಿಂದಾಗುವ ಪರಿಣಾಮಗಳಿಗೆ ಈ ತೆರಿಗೆಯು ಚರ್ಚಿಸಲ್ಪಟ್ಟಿದೆ.[೧] ಉತ್ಪಾದನಾ ತೆರಿಗೆಗಳು, ಕೆಲವು ವಿಧದ ಉತ್ಪನ್ನಗಳಿಗೆ ಅನ್ವಯಿಸುತ್ತದೆ, ಅವೆಂದರೆ ಗ್ಯಾಸೋಲಿನ್ ಅಥವಾ ಆಲ್ಕೋಹಾಲ್, ಇಂತಹವುಗಳಲ್ಲಿ ತೆರಿಗೆಯನ್ನು ಚಿಲ್ಲರೆ ಮಾರಾಟಗಾರನಿಗಿಂತ ಉತ್ಪಾದಕ ಅಥವಾ ಸಗಟು ಮಾರಾಟಗಾರರಿಗೆ ಸಾಮಾನ್ಯವಾಗಿ ವಿಧಿಸಲಾಗುತ್ತದೆ. ಬಳಕೆ ತೆರಿಗೆ, ಮಾರಾಟ ತೆರಿಗೆ ಇಲ್ಲದೆ ಖರೀದಿಸಿದ ವಸ್ತುಗಳ ಮೇಲೆ ನೇರವಾಗಿ ಬಳಕೆದಾರನ ಮೇಲೆ ಬೀಳುವಂತಹದ್ದಾಗಿದೆ, ಸಾಮಾನ್ಯವಾಗಿ ಇದು ಮಾರಾಟಗಾರನಿಂದ ಯಾವುದೋ ರೂಪದಲ್ಲಿ ವಸ್ತುಗಳನ್ನು ಪಡೆದು ನಂತರ ಖರೀದಿದಾರನಿಗೆ ಅಂಚೆಯ ಮೂಲಕ ಅಥವಾ ಸಾಮಾನ್ಯ ಸಾಗಣೆ ಮುಖಾಂತರ ತಲುಪಿಸುವುದಾಗಿರುತ್ತದೆ. ಬಳಕೆ ತೆರಿಗೆಗಳು ಸಾಮಾನ್ಯವಾಗಿ ಮಾರಾಟ ತೆರಿಗೆ ಎಂದು ರಾಜ್ಯಗಳಿಂದ ವಿಧಿಸಲಾಗುತ್ತದೆ, ಆಟೋಮೊಬೈಲ್ ಹಾಗೂ ದೋಣಿಗಳಂತಹ ಕೆಲವೊಂದು ದೊಡ್ಡ ವಸ್ತುಗಳನ್ನು ಬಿಟ್ಟು ಉಳಿದವುಗಳಿಗೆ ಗ್ರಾಹಕರ ಮೇಲೆ ಬಲವಂತ ಮಾಡಲು ಆಗುವುದಿಲ್ಲ.