ಸದಸ್ಯ:Chethan.a/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಿಯೋನ್ ವಾಲ್ರಾ ಶುದ್ದ ಸೈದ್ದಾಂತಿಕ ಆರ್ಥಿಕ ವಿಶ್ಲೇಷಣೆ ಕ್ಷೇತ್ರದಲ್ಲಿ ಲಿಯೋನ್ ವಾಲ್ರಾ ಒಂದು ಸುಪ್ರಸಿದ್ದ ಹೆಸರು. ಆರ್ಥಿಕ ಚಿಂತನೆಯ ಬೆಳವಣಿಗೆಗೆ ಅಪಾರ ಕೊಡುಗೆಗಳನ್ನು ನೀಡಿದ ವಾಲ್ರಾ ಅರ್ಥಶಾಸ್ತ್ರದಲ್ಲಿ ಲಾಸನ್ ಪಂಥವನ್ನು ಸಂಸ್ಥಾಪಿಸಿದ ಕೀರ್ತಿಗೆ ಪಾತ್ರನಾಗಿದ್ದಾರೆ. ಸೀಮಾಂತ ಪಂಥದ ತ್ರಿಮೂರ್ತಿಗಳಲ್ಲಿ ಒಬ್ಬನೆಂದು ಪಂಗಣಿತನಾಗಿರುವ ಈತ ತನ್ನ ವಿಶಿಷ್ಟ ಮತ್ತು ಪ್ರಭಾವಿ ಚಿಂತನೆಗಳ ಮೂಲಕ ಪ್ರಖ್ಯಾತನಾಗಿದ್ದಾನೆ. ಒಬ್ಬ ಅದ್ವಿತೀಯ ಗಣಿತೀಯ ಅರ್ಥಶಾಸ್ತ್ರಜನಾಗಿ ಅವರು ಆರ್ಥಿಕ ಚಿಂತನೆಯ ಇತಿಹಾಸದಲ್ಲಿ ಚಿರಸ್ಥಾಯಿ ಸ್ಥಾನವನ್ನು ಅಲಂಕರಿಸಿದ್ದಾನೆ. ಸಾರ್ವತ್ರಿಕ ಸಮತೋಲನ ವಿಶ್ಲೇಷಣೆಯು ಅವರ ಬಹು ಅಮೂಲ್ಯ ಕೊಡುಗೆಯಾಗಿದೆ. ಲಿಯೋನ್ ವಾಲ್ರಾ ೧೮೩೪ ರ ಡಿಸೆಂಬರ್ ೧೬ ರಂದು ಫ್ರಾನ್ಸಿನ ಎವಾರಿಯಕ್ಸ್ ಎಂಬಲ್ಲಿ ಸುಸಂಸ್ಕೃತ ಕುಟುಂಬವೊಂದರಲ್ಲಿ ಜನಿಸಿದರು. ಅವರ ತಂದೆ ಆಗಸ್ಟ್ ವಾಲ್ರಾ(೧೮೦೧-೧೮೬೬) ಒಬ್ಬ ಸುಪ್ರಸಿದ್ದ ಶ್ಯೆಕ್ಷಣಿಕ ಆಡಳಿತಗಾರನಾಗಿದ್ದರು. ವಾಲ್ರಾ ನವರು ತನ್ನ ೧೭ನೇ ವಯಸ್ಸಿನಲ್ಲಿಯೇ ಸಾಹಿತ್ಯದಲ್ಲಿ ಪದವಿ ಪಡೆದರು. ನಂತರ ಅವರು ತನ್ನ ಜೀವನದಲ್ಲಿ ಒಬ್ಬ ಕಾದಂಬರಿಕಾರನಾಗಿ, ಪತ್ರಿಕೋದ್ಯವಿಯಾಗಿ, ಮತ್ತು ಬ್ಯಾಂಕ್ ಉದ್ಯೋಗಿಯಾಗಿ ತಳವೂರಲು ಯತ್ನಿಸಿದರು. ಇವರು ೧೮೭೧ರಲ್ಲಿ ಲಾಸನ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಅರ್ಥಶಾಸ್ತ್ರದ ವಿಭಾಗದಲ್ಲಿ ನೇಮಕಗೊಂಡರು. ಈ ಹುದ್ದೆಯಿಂದ ನಿವೃತ್ತಿ ಹೊಂದಿದರು. ಇವರು ೧೯೧೦ರಲ್ಲಿ ಜನವರಿ ೪ ರಂದು ಮರಣ ಹೊಂದಿದರು.ವಾಲ್ರಾನ ಚಿಂತನೆ ಮತ್ತು ಬರವಣಿಗೆಗಳ ಮೇಲೆ ಅವರ ತಂದೆ ಆಗಸ್ಟ್ ವಾಲ್ರಾ, ಹೆಸರಾಂತ ಅರ್ಥಶಾಸ್ತ್ರಜ್ಞ ಕೂರೆನಾಟ್, ಸುಪ್ರಸಿದ್ದ ತತ್ವಜ್ಞನಿ, ೧೮೪೮ರ್ ಕ್ರಾಂತಿ ಮತ್ತು ಆಗಿನ ಕಾಲದ ಸಾಮಾಜಿಕ ಸ್ಥಿತಿಗತಿಗಳು ವ್ಯಾಪಕ ಪ್ರಭಾವ ಬೀರಿದವು.ವಾಲ್ರಾ ಅವರ ಪ್ರಮುಖ ಕೊಡುಗೆಗನ್ನು ಈ ಮುಂದಿನಂತೆ ಚರ್ಚಿಸಬಹುದು. ಅರ್ಥಶಾಸ್ತ್ರದ ವ್ಯಾಖ್ಯಾನ ಮತ್ತು ವಿಧಾನ: ವಾಲ್ರಾ ಅರ್ಥಶಾಸ್ತ್ರದ ಸ್ವರೂಪದ ಬಗ್ಗೆ ೧) ಪರಿಶುದ್ದ ಅರ್ಥಶಾಸ್ತ್ರ ೨)ಅನ್ವಯಿಕ ಅರ್ಥಶಾಸ್ತ್ರ ಮತ್ತು ೩)ಸಾಮಾಜಿಕ ಅರ್ಥಶಾಸ್ತ್ರ ಎಂಬ ವಿಭಾಗಗಳನ್ನು ಹೊಂದಿದೆ ಎಂದು ಹೇಳುತ್ತಾರೆ. ಅವರೊ ಅರ್ಥಶಾಸ್ತ್ರವು ಪರಿಶುದ್ದ ವಿಜ್ಞನವಾಜಿರಬೇಕು ಎಂದು ಬಯಸಿದ್ದಾರೆ. ಅವರ ಪ್ರಕಾರ ಪರಿಶುದ್ದ ಅರ್ಥಶಾಸ್ತ್ರವು ಮುಖ್ಯವಗಿ ಪೂರ್ವಕಲ್ಪಿತ ಪರಿಪೂರ್ಣ ಮುಕ್ತ ಪ್ಯೆಪೋಟಿ ಆಳ್ವಿಕೆಯಡಿ ಬೆಲೆಗಳ ನಿರ್ಥಾರದ ಸಿದ್ದಾಂತವಾಗಿದೆ. ಅವರು ಅರ್ಥಶಾಸ್ತ್ರವು ಕೇವಲ ಬೆಳಕನ್ನಷ್ಟೇ ನೀಡಿದರೆ ಸಾಲದು, ಅದು ಫಲವನ್ನೂ ನೀಡಬೇಕು ಎಂಬ ಅಭಿಪ್ರಾಯತಾಳುತ್ತಾನೆ. ವಾಲ್ರಾ ಗಣಿತೀಯ ವಿಧಾನಗಳನ್ನು ವ್ಯಾಪಕವಾಗಿ ಬಳಸಿದ್ದಾರೆ. ಅವರು ಆರ್ಥಿಕ ಸಮಸ್ಯೆಗಳನ್ನು ಗಣಿತೀಯ ವಿಧಾನದ ಮೂಲಕ ವಿಶ್ಲೇಷಿಸಲು ಯತ್ನಿಸಿ ಅರ್ಥಶಾಸ್ತ್ರದಲ್ಲಿ ಗಣಿತೀಯ ತುಷ್ಟಿಗುಣ ಪಂಥದ ಸಂಸ್ಥಾಪಕ ಎಂದು ಪರಿಗಣಿತನಾಗಿದ್ದಾನೆ. ಅವರು ಗಣಿತೀಯ ವಿಧಾನವನ್ನು ಜೆವನ್ಸ್ ಗಿಂತಲೂ ಸಮರ್ಥವಾಗಿ ಬಳಸಿದ್ದಾನೆ. ಅವನ ಪ್ರಕಾರ ಗಣಿತೇತರ ವ್ಯಕ್ತಿಗಳ ಸ್ಯೆದ್ಧಾಂತಿಕ ಅರ್ಥಶಾಸ್ತ್ರದಲ್ಲಿ ಯಾವುದೇ ಭವಿಷ್ಯ ಹೊಂದಿರುವುದಿಲ್ಲ ಎಂದು ತಿಳಿಸಿದ್ದರೆ. ಸೀಮಾಂತ ತುಷ್ಟಿಗುಣ: ಜೆವನ್ಸ್ ಮತ್ತು ಮೆಂಜರನ ರೀತಿಯಲ್ಲಿ ವಾಲ್ರಾರವರು ಕೂಡ ಸೀಮಾಂತ ತುಷ್ಟಿಗುಣ ತತ್ವವನ್ನು ಸ್ವತಂತ್ರವಾಗಿ ಅಭಿವೃದ್ಧಿ ಪಡಿಸಿದ್ದಾರೆ. ಅವರಿಬ್ಬರ ರೀತಿಯಲ್ಲಿ ಇವರು ಸಹ ವಿನಿಮಯ ಮೌಲ್ಯವನ್ನು ತುಷ್ಟಿಗುಣದ ಆಧಾರದಲ್ಲಿ ಪ್ರಸ್ತುತ ಪಡಿಸಿದ್ದಾನೆ.ವಾಲ್ರಾ ಹೇಳುವಂತೆ ವಿನಿಮಯ ಮೌಲ್ಯಕ್ಕೆ ತುಷ್ಟಿಗುಣ ಮತ್ತು ಸೀಮಾಂತ ತುಷ್ಟಿಗುಣವು ಮೌಲ್ಯವನ್ನು ನಿರ್ಧರಿಸುತ್ತದೆ. ವಾಲ್ರಾ ಸೀಮಾಂತ ತುಷ್ಟಿಗುಣವು ಎಂಬ ಪರಿಕಲ್ಪನೆಯ ಸ್ಧಾನದಲ್ಲಿ ತನ್ನ ತಂದೆಯು ಪ್ರಚುರ ಪಡಿಸಿದ ರರೆಟ್ ಎಂಬ ಪರಿಕಲ್ಪನೆಯನ್ನು ಬಳಸಿದ್ದಾನೆ. ವಾಲ್ರಾ ಪ್ರಕಾರ ಸೀಮಾಂತ ತುಷ್ಟಿಗುಣಗಳನ್ನು ಸಮಗೊಳಿಸ ಬೇಕು ಎಂಬ ವ್ಯಕ್ತಿಗಳ ಆಕಾಂಕ್ಷೆಯು ವಿನಿಮಯಕ್ಕೆ ದಾರಿಮಾಡಿಕೊಡುತ್ತದೆ. ಅವರ ಪ್ರಕಾರ ಬೇಡಿಕೆ ಮತ್ತು ಬೆಲೆಯ ನಡುವೆ ನೇರವಾದ ಸಂಬಂಧವಿರುತ್ತದೆ. ಆದರೆ ಬೆಲೆಯ ನಡುವೆ ಅಂತಹ ನೇರ ಸಂಬಂಧವೇನೂ ಇರುವುದಿಲ್ಲ. ಬಂಡವಾಳ ಸಿದ್ಧಾಂತ: ಬಂಡವಾಳ ಸಿದ್ಧಾಂತವು ವಾಲ್ರಾ ಅರ್ಥಶಾಸ್ತ್ರಕ್ಕೆ ನೀಡಿದ ಇನ್ನೊಂದು ಗಮನಾರ್ಹ ಕೊಡುಗೆಯಾಗಿದೆ. ಈ ಸಿದ್ಧಾಂತದಲ್ಲಿ ಅವರು ಬಂಡಾವಾಳ ಸರಕುಗಳ ಬೆಲೆ ನಿರ್ಧಾರದ ವಿಚಾರವನ್ನು ವಿವರವಾಗಿ ಚರ್ಚಿಸಿದ್ದಾನೆ. ವಾಲ್ರಾ ಬಂಡವಾಳ ಸರಕುಗಳು ಮತ್ತು ಅವುಗಳ ಸೇವೆಗಳ ನಡುವೆ ಸ್ಪಷ್ಟ ವ್ಯತ್ಯಾಸ ಕಲ್ಪಿಸಿದ್ದಾರೆ. ಅವರು ಒಂದನೇ ಗುಂಪಿನಲ್ಲಿರುವ ಸರಕುಗಳನ್ನು ಸ್ಥಿರ ಬಂಡವಾಳ ಎಂದು ಪರಿಗಣಿಸಿ ಅದನ್ನು ಎಂದೆಂದೂ ಪೂರ್ಣ ಬಳಸಲಿಕ್ಕಾಗದ ಅಥವಾ ಸ್ವಲ್ಪ ಸಮಯಾವಕಾಶದ ಬಳಿಕ ಉಪಯೋಗಿಸಲಾಗುವ ಸಾಮಾಜಿಕ ಸಂಪತ್ತು ಒಂದು ಭಾಗ ಎಂದು ವ್ಯಾಖ್ಯಾನಿಸುತ್ತಾನೆ. ಅದೇ ರೀತಿ ಎರಡನೇ ಗುಂಪಿನಲ್ಲಿರುವ ಬಂಡವಾಳ ಸೇವೆಗಳನ್ನು ಚರ ಬಂಡವಾಳ ಅಥವಾ ಆದಾಯ ಎಂದು ಹೇಳಿ ಅದನ್ನು ತಕ್ಷಣವೇ ಬಳಸಲಾಗುವ ಸಾಮಾಜಿಕ ಸಂಪತ್ತಿನ ಭಾಗ ಎಂದು ವ್ಯಾಖ್ಯಾನಿಸಿದ್ದಾರೆ. ಸಾರ್ವತ್ರಿಕ ಸಮತೋಲನ ವಿಶ್ಲೇಷಣೆ: ಸಾರ್ವತ್ರಿಕ ಸಮತೋಲನ ವಿಶ್ಲೇಷಣೆಯು ಆರ್ಥಿಕ ಚಿಂತನೆಗೆ ವಾಲ್ರಾ ಕೊಡಮಾಡಿದ ಅತ್ಯಮೂಲ್ಯ ಕೊಡುಗೆಯಾಗಿದೆ. ಅವನು ತನ್ನ ಸೀಮಾಂತ ತುಷ್ಟಿಗುಣ ತತ್ವದ ಆಧಾರದ ಮೇಲೆ ಸಾರ್ವತ್ರಿಕ ಸಮತೋಲನ ಸಿದ್ಥಾಂತವನ್ನು ಪ್ರತಿಪಾದಿಸಿದ್ದಾರೆ. ಅವನು ತನ್ನ ಪೂರ್ವಜರು ಮತ್ತು ಸಮಕಾಲೀನರಿಗಿಂತ ಉತ್ತಮವಾದ ಮತ್ತು ವ್ಯಾಪಕವಾದ ವಿಶ್ಲೇಷಣೆಯನ್ನು ಯಶ್ವಸ್ವಿಯಾಗಿ ಅಭಿವೃದ್ಧಿ ಪಡಿಸಿದ್ದಾನೆ. ವಾಲ್ರಾರ ಸಾರ್ವತ್ರಿಕ ಸಮತೋಲನ ವಿಶ್ಲೇಷಣೆಯು ನಿಖರವಾದ ಗಣಿತೀಯ ಮಾದರಿಯಾಗಿದ್ದು ಸರಕುಗಳ ಬೆಲೆಗಳು, ಉತ್ಪಾದನಾಂಗಗಳ ಬೆಲೆಗಳು, ಅವುಗಳ ಬೇಡಿಕೆ ಮತ್ತು ಪೂರೆಕೆ ಮತ್ತು ಉತ್ಪಾದನಾ ವೆಚ್ಚಗಳು ಅನುಭೋಗಿಗಳು, ಉದ್ಯಮಗಳು ಮತ್ತು ಕೈಗಾರಿಕೆಗಳ ಮೇಲೆ ಪರಸ್ಪರ ಅವಲಂಬಿತವಾಗಿರುವುದನ್ನು ಏಕಕಾಲಿಕ ಸಮೀಕರಣಗಳ ವ್ಯವಸ್ಧೆಯಲ್ಲಿ ವಿವರಿಸಲು ಯತ್ನಿಸುತ್ತದೆ. ಸರ್ಕಾರದ ಮಧ್ಯಪ್ರವೇಶ: ವಾಲ್ರಾ ತನ್ನ ಲೇಖನಗಳಲ್ಲಿ ಸರ್ಕಾರ ನಿರ್ವಹಿಸ ಬಹುದಾದ ಕಾರ್ಯಗಳನ್ನು ಹಲವುಬಾರಿ ಪ್ರಸ್ತಾಪಿಸಿದ್ದಾರೆ. ಅವರು ಪ್ರಕಾರ ದೇಶದಲ್ಲಿ ಮುಕ್ತ ಪೈಪೋಟಿಯ ಪರಿಸರವನ್ನು ಕಾಪಾಡುವುದು ಸರ್ಕಾರದ ಶಾಸನಬದ್ದ ಹೊಣೆಗಾರಿಕೆಯಾಗಿದೆ. ಅವನು ಹೇಳುವಂತೆ ಮುಕ್ತ ಪೈಪೋಟಿಯು ಅವಗಡಗಳಿಲ್ಲದ ಪ್ರಕ್ರಿಯೆಯಲ್ಲ. ಅಷೇ ಅಲ್ಲದೆ ಹಣಕಾಸಿನ ನೀತಿ, ಜಾಹಿರಾತು ಮತ್ತು ಪ್ರಚಾರ, ರಕ್ಷಣೆ, ನ್ಯಾಯ ಪರಿಪಾಲನೆ, ಶಿಕ್ಷಣ, ರೈಲು ಸಾರಿಗೆ ಮತ್ತು ಪ್ರಯಾಣ ದರದ ನಿರ್ಧಾರ, ಶ್ರಮದ ಮಾರುಕಟ್ಟೆಯಲ್ಲಿ ಸೇವಾವಧಿಯ ನಿರ್ಧಾರ ಮುಂತಾದ ಕ್ಷೇತ್ರಗಳಲ್ಲಿ ಸರ್ಕಾರದ ಮಧ್ಯ ಪ್ರವೇಶಿಸ ಬಹುದೆಂದು ವಾಲ್ರಾ ಹೇಳುತ್ತಾನೆ. ಹೀಗೆ ಅವನು ಸರ್ಕಾರದ ಹಸ್ತಕ್ಷೇಪದ ಪರವಿದ್ದೂ ಮುಕ್ತ ಪೈಪೋಟಿಯನ್ನು ಪ್ರತಿಪಾದಿಸುತ್ತಾನೆ. ಭೂ ಸುಧಾರಣೆಗಳು: ಭೂ ಸುಧಾರಣೆಗಳ ಬಗ್ಗೆ ವಾಲ್ರಾ ತನ್ನದೇ ಆದ ಯೋಜನೆಯೊಂದನ್ನು ಮುಂದಿಟ್ಟಿದ್ದಾರೆ. ಅವರ ಪ್ರಕಾರ ತೆರಿಗೆ ವ್ಯವಸ್ಧೆಯಲ್ಲಿನ ಸಂಕೀರ್ಣತೆಯನ್ನು ನಿರ್ಮೂಲನೆಗೊಳಿಸಲು ಭೂ ಹಿಡುವಳಿಗಳ ರಾಷ್ಟ್ರೀಕರಣವು ಉಪಯುಕ್ತವಾದ ಮಾರ್ಗವಾಗಿದೆ. ಅವರು ಹೇಳುವಂತೆ ಭೊವಿಯ ಮೌಲ್ಯಗಳ ಏರಿಕೆಯಿಂದ ಲಭ್ಯವಾಗುವ ವರಮಾನವು ಸರ್ಕಾರಕ್ಕೆಸಾಕಾಗುತ್ತದೆ. ಇದರಿಂದ ಸರ್ಕಾರವನ್ನು ನಡೆಸಿಕೊಂಡು ಹೋಗುವುದು ಸುಲಭ ಸಾಧ್ಯವಾಗಿರುತ್ತದೆ ಎಂದು ತಿಳಿಸಿದ್ದರೆ.