ಸದಸ್ಯ:Chandu.mr

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಜೀವನ ಪಯಣ[ಬದಲಾಯಿಸಿ]


ನನ್ನ ಬಾಲ್ಯದ ದಿನಗಳು[ಬದಲಾಯಿಸಿ]

ನನ್ನ ಹೆಸರು ಚಂದು,ನಾನು ಮೂಲತಃ ಬೆಂಗಳೂರು ನಿವಾಸಿಯಾಗಿದ್ದು.ನಾನು ಹುಟ್ಟಿ ಹಾಗೂ ಬೆಳೆದಿದ್ದು ಎಲ್ಲ ಬೆಂಗಳೂರಿನಲ್ಲಿ.ಆದರೆ ನನಗೆ ಆರು ತಿಂಗಳು ತುಂಬುವಧಕ್ಕಿಂತ ಮುಂಚಿತವಾಗಿ ಹಲವಾರು ಕಾರಣಗಳಿಂದ ನನ್ನ ಅಜ್ಜಿ ನನ್ನನ್ನು ತಮ್ಮ ಊರಿಗೆ ಕರೆದೊಯ್ದರು ಹಾಗೂ ನನಗೆ ಆರು ವರ್ಷ ತುಂಬುವವರಿಗೂ ನನ್ನನ್ನು ಸಾಕಿ ಬೆಳೆಸಿದರು.ಆ ಆರು ವರ್ಷಗಳು ನನ್ನ ಜೀವನದ ನೆನಪುಗಳ ಬುತ್ತಿಯ ಬಹು ಪಾಲಾಗಿ ಉಳಿಯುತ್ತದೆ.ಆ ಸಮಯದಲ್ಲಿ ನನ್ನ ತಾಯಿಯ ಸ್ಥಾನವನ್ನು ನನ್ನ ಅಜ್ಜಿ ತುಂಬುವುದರಲ್ಲಿ ಯಶಸ್ವಿಯಾಗಿದ್ದಾರೆ.ಅವರು ಆ ಸಮಯದಲ್ಲಿ ಅವರು ನನಗೆ ಮಾಡಿದ ಲಾಲನೆ ಪಾಲನೆಯನ್ನು ನಾನು ಎಂದಿಗೂ ಮರೆಯಲಾರೆ.ನಾನು ನನ್ನ ತಾಯಿಗಿಂತಲು ನನ್ನ ಅಜ್ಜಿಯನ್ನು ಹೆಚ್ಚು ಪ್ರೀತಿಸುತ್ತೆನೆ.ಅವರಿಗೂ ನನ್ನನ್ನು ಕಂಡರೆ ಅಷ್ಟೇ ಪ್ರೀತಿ ಹಾಗೂ ಅಕ್ಕರೆ.

ನನ್ನ ಕುಟುಂಬ[ಬದಲಾಯಿಸಿ]

ಇನ್ನು ನನ್ನ ಪೋಷಕರ ವಿಷಯಕ್ಕೆ ಬಂದರೆ ನನ್ನ ತಂದೆ ರವಿ ಮೂಲತಃ ಹಳ್ಳಿಯಲ್ಲಿ ಹುಟ್ಟಿ ಬೆಳೆದು ನಂತರ ನಗರಕ್ಕೆ ಬಂದು ಕಷ್ಟಪಟ್ಟು ಸಮಾಜದಲ್ಲಿ ತಮ್ಮ ಕುಟುಂಬವನ್ನು ಒಳ್ಳೆಯ ಸ್ಥಾನದಲ್ಲಿ ಇರಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ನನ್ನ ತಾಯಿ ಮಂಜುಳ ಗೃಹಿಣಿಯಾಗಳು ಬೇಕಾದಯೆಲ್ಲ ಗುಣಗಳನ್ನು ಹೊಂದಿ ಕುಟುಂಬವನ್ನು ಒಳ್ಳೆಯ ಮಾರ್ಗದಲ್ಲಿ ನೆಡೆಸುತಿದ್ದಾರೆ.ನನ್ನ ಪೋಷಕರಿಗೆ ನಾನು ದ್ವಿತೀಯ ಪುತ್ರನಾಗಿದ್ದು ನನಗೆ ಓರ್ವ ಅಣ್ಣನು ಇದ್ದಾರೆ ಜೀವನದಲ್ಲಿ ನನ್ನ ಅಣ್ಣ ನನಗೆ ಸ್ಪೂರ್ತಿಯು ಹೌದು ಹಾಗೂ ಒಳ್ಳೆಯ ಗೆಳೆಯನಾಗಿರುತ್ತಾನೆ. ನನಗೆ ನನ್ನ ಪೋಷಕರನ್ನು ಕಂಡರೆ ಬಹಳ ಗೌರವ ಹಾಗೂ ಪ್ರೀತಿ ಹಾಗೂ ಅದು ಇಂದಿಗೂ ಹಾಗೂ ಎಂದಿಗೂ ಹಾಗೆ ಉಳಿಯುತ್ತದೆ.ನನ್ನ ತಂದೆ ರವಿ ಹಾಗೂ ತಾಯಿ ಮಂಜುಳ ಮತ್ತು ನನ್ನ ಪ್ರೀತಿಯ ಅಣ್ಣ ಧನುಷ್ ಇವರೆಲ್ಲರೂ ನನ್ನ ಜೀವನದಲ್ಲಿ ಪ್ರಮುಖರಾಗಿ ಉಳಿಯುತ್ತಾರೆ ಹಾಗೂ ಅವರ ಸ್ಥಾನವನ್ನು ಯಾರು ತುಂಬಾಲಾರರು.ನನಗೆ ನನ್ನ ಅಮ್ಮನ ಅಡುಗೆ ಎಂದರೆ ಅಚ್ಚುಮೆಚ್ಚು.ಅದು ಅವರು ಮಾಡುವ ರೀತಿಯೂ ಹಾಗೂ ಅವರ ಕೈ ಗುಣದ ಫಲಿತಾಂಶ.

ನನ್ನ ಶಿಕ್ಷಣ ಜೀವನ[ಬದಲಾಯಿಸಿ]

ನಾನು ಪ್ರಾಥಮಿಕ ಶಿಕ್ಷಣದಿಂದ ಪ್ರೌಢ ಶಿಕ್ಷಣವರೆಗೂ ಕೋರಮಂಗಳದ ಸಂತ ಫ್ರಾನ್ಸಿಸ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದೇನೆ.ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿರುತ್ತದೆ. ಅಂತಹ ಎಸ್ ಎಸ್ ಎಲ್ ಸಿಯಲ್ಲಿ ನನಗೆ ಉತ್ತಮ ಅಂಕಗಳನ್ನು ಗಳಿಸಲು ಸಹಾಯ ಮಾಡಿದ ನನ್ನ ಶಾಲೆಯ ಎಲ್ಲ ಅಧ್ಯಾಪಕರಿಗೆ ಸದಾ ತಲೆಬಾಗುತ್ತೆನೆ.ನನ್ನ ಶಾಲೆಯ ದಿನಗಳು ಜೀವನದಲ್ಲಿ ಮತ್ತೆ ಬಾರಲಾರದ ದಿನಗಳಾಗಿ ಉಳಿಯುತ್ತದೆ.ಒಂದರ ಕೊನೆ ಇನ್ನೊಂದರ ಆರಂಭ ಎನ್ನುವಂತೆ ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದೇನೆ.ನನ್ನ ಜೀವನದಲ್ಲಿ ಆ ಎರಡು ವರ್ಷಗಳು ಬಹಳ ವಿಶೇಷದಿಂದ ಕೂಡಿರುತ್ತದೆ.ನಾನು ನನ್ನ ಕಾಲೇಜು ಜೀವನವನ್ನು ನನ್ನ ಗೆಳೆಯರೊಂದಿಗೆ ಬಹಳ ಮೋಜು ಮಸ್ತಿಯಿಂದ ಕಳೆದ್ದಿದ್ದೇನೆ. ಇನ್ನು ಜೀವನದ ಇನೊಂದ್ದು ಪ್ರಮುಖ ಘಟ್ಟವಾಗಿರುವ ಪಿ ಯು ಸಿ ಪರೀಕ್ಷೆಯಲ್ಲಿ ನನಗೆ ಉತ್ತಮ ಅಂಕಗಳನ್ನು ಪಡೆಯಲು ಹಾಗೂ ಮುಂದೊರೆಯಲು ನನ್ನ ಕಾಲೇಜು ಬಹಳ ಸಹಾಯ ಮಾಡಿದೆ.ಜೀವನದ ಹಲವಾರು ದಾರಿಗಳಲ್ಲಿ ಒಂದು ಉತ್ತಮ ದಾರಿಯನ್ನು ಆಯ್ಕೆ ಮಾಡಿ ನಾನು ನನ್ನ ಶಿಕ್ಷಣವನ್ನು ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾಲಯ ಎಂದು ಹೆಸರಾಗಿರುವ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಕಾ0 ಪದವಿ ಪಡೆಯಲು ಓದುತ್ತಿದ್ದೇನೆ.ಈ ತಾಣ ನನಗೆ ಜೀವನದಲ್ಲಿ ಪ್ರಮುಖನಾಗಲು ಸಹಾಯ ಮಾಡುತ್ತದೆ ಎಂಬ ನಂಬಿಕೆಯಿದೆ.ಈ ವಿಶ್ವವಿದ್ಯಾಲಯ ನಾನು ಅಂದುಕೊಂಡದ್ದಕ್ಕಿಂತ ಒಂದು ಮಟ್ಟ ಮೇಲೆಯೇ ಇದೆ. ಇಲ್ಲಿನ ಶಿಕ್ಷಣ ವ್ಯವಸ್ಥೆ ಹಾಗೂ ಪರಿಸರ ವಿದ್ಯಾರ್ಥಿಗಳ ಓದುವ ಆಸಕ್ತಿಯನ್ನು ಹೆಚ್ಚಿಸುತ್ತದೆ

ನನ್ನ ಆಸಕ್ತಿಗಳು[ಬದಲಾಯಿಸಿ]

ನನಗೆ ಬಿಡುವಿನ ಸಮಯದಲ್ಲಿ ಕ್ರಿಕೆಟ್ ಆಡುವುದು,ಹಾಡು ಕೇಳುವುದು ಮತ್ತು ಪುಸ್ತಕಗಳನ್ನು ಓದುವುದು ಹೀಗೆ ಹಲವಾರು ಹವ್ಯಾಸಗಳಿವೆ.ಇದಲ್ಲದೆ ನನಗೆ ಪ್ರವಾಸಕ್ಕೆ ಹೋಗುವ ಒಂದು ವಿಭಿನ್ನ ಹವ್ಯಾಸವು ಉಂಟು ಹಾಗೂ ಪ್ರತಿ ವಾರ ಯಾವುದಾದರೂ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಮಹತ್ವವಾದ ವಿಚಾರಗಳನ್ನು ತಿಳಿಯಬೇಕೆಂಬ ಆಸೆಯು ಉಂಟು.ಇದ್ದಲ್ಲದೆ ನ್ರ್ಥಆನ್ದುಅಗೆ ಪ್ರಾಣಿ ಪಕ್ಷಿಗಳೆಂದರೆ ತುಂಬಾ ಇಷ್ಟ. ಸ್ನೇಹಿತರಿಲ್ಲದ ಜೀವನ ವ್ಯರ್ಥವೆಂದು ಹಿರಿಯರು ಹೇಳುತ್ತಾರೆ ಹಾಗೆಯೇ ನನಗೆ ಸ್ನೇಹಿತರೆಂದರೆ ಬಹಳ ಪ್ರೀತಿ ಹಾಗೂ ಗೌರವವಿದೆ.ನನಗೆ ನನ್ನ ಗೆಳೆಯ ಕಿರಣ್ ಎಂದರೆ ಎಲ್ಲಿಲದ ಪ್ರೀತಿ.ನಾನು ಅವನ್ನನ್ನು ಭೇಟಿಯಾಗಿದ್ದು ನನ್ನ ಎಂಟ್ಟನೇ ವಯಸ್ಸಿನಲ್ಲಿ ಅಂದು ಶುರುವಾದ ನಮ್ಮ ಸ್ನೇಹ ಈಗಲೂ ಹಾಗೆ ಮುಂದೊರೆಯುತ್ತಿದೆ.

ಜೀವನ ಗುರಿ[ಬದಲಾಯಿಸಿ]

ಬದುಕಿನಲ್ಲಿ ಗುರು ಹಾಗೂ ಗುರಿ ಈ ಎರಡು ಕಡೆ ನಾವು ಬಹಳ ಗಮನ ಕೊಡಬೇಕು.ನನಗೆ ಜೀವನದಲ್ಲಿ ಡಿ.ಸಿ ರವಿ ಹಾಗೂ ಶಿಖಾರಂತಹ ದಷ್ಟ ಐ ಎ ಎಸ್ ಅಧಿಕಾರಿಯಾಗಬೇಕೆಂಬ ಗುರಿಯನ್ನು ಹೊಂದ್ದಿದೆನೆ.ನನ್ನ ಜೀವನದಲ್ಲಿ ಅದನ್ನು ಸಾಧಿಸಬೇಕೆಂಬ ಛಲ ಹಾಗೂ ವಿಶ್ವಾಸವನ್ನು ಹೊಂದ್ದಿದೆನೆ.ಹಾಗೂ ಅದನ್ನು ಸಾಧಿಸಲು ಇಂದಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದೆನೆ.ಕೊನೆಗೆ ಈ ಗುರಿ ಸಾಧಿಸಲು ಸಹಾಯ ಮಾಡುತ್ತಿರುವ ನನ್ನ ಪೋಷಕರನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳಬೇಕೆಂಬ ಪ್ರಮುಖ ಗುರಿ ಹಾಗೂ ನಿಲುವನ್ನು ಹೊಂದಿರುತ್ತೇನೆ.ಇದಲ್ಲದೆ ನನ್ನ ನೆಚ್ಚಿನ ಹಾಗೂ ನನ್ನ ತಂದೆಯ ಹುಟ್ಟೂರ ಆಗಿರುವ ಚಿಕ್ಕಮಗಳೂರು ಎಂದರೆ ಬಹಳ ಇಷ್ಟ ಹಾಗೂ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಎರಡು ಕಣ್ಣು ಸಾಲುವುದಿಲ್ಲ.ಹಾಗೆಯೇ ಅಲ್ಲಿನ ತೊಂದರೆಗಳ ಪಟ್ಟಿಯು ಬಹಳ ಉದ್ಧವಿದೆ.ಆದ್ದರಿಂದ ಅಲ್ಲಿನ ಜನರಿಗೆ ಸಹಾಯ ಮಾಡಬೇಕೆಂಬ ಆಸೆಯನ್ನು ಹೊಂದಿದ್ದೇನೆ.ಇದಲ್ಲದೆ ಶಿಕ್ಷಣವನ್ನು ಎಲ್ಲರಿಗೂ ದೊರೆಯುವಂತೆ ಮಾಡಬೇಕೆಂಬ ದೃಢ ಸಂಕಲ್ಪ ಹೊಂದಿದ್ದೇನೆ.ಹಾಗೂ ಅದನ್ನು ಸಾಧಿಸಲು ಬೇಕಾದ ತಯಾರಿಯನ್ನು ಈಗಿನಿಂದಲೇ ಮಾಡುತ್ತಿದ್ದೇನೆ.ಜೀವನದಲ್ಲಿ ಯಾವುದೇ ಕಾರ್ಯ ಸಫಲವಾಗಲು ದೇವರ ಕೃಪೆ ಅತಿ ಮುಖ್ಯ.ಆದ್ದರಿಂದ ನನ್ನ ಕಾರ್ಯಗಳೆಲ್ಲ ಸಿದ್ಧಿಸುವಂತೆ ಹಾಗೂ ನನ್ನ ಗುರಿ ಮುಟ್ಟಲು ಸಹಾಯ ಮಾಡುವಂತೆ ದೇವರಲ್ಲಿ ದಿನನಿತ್ಯ ಕೋರುತ್ತೆನೆ.