ಸದಸ್ಯ:Chaithrasavi/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾಷೆ ಎಂದರೇನು? ಭಾಷೆ ಮನುಷ್ಯನ ಮನಸ್ಸನ್ನು ಪ್ರಕಾಶಪಡಿಸುವ ಸಾಧನಗಳಲ್ಲಿ ಒಂದು ಮಾತ್ರವಲ್ಲ,ಆ ಸಾಧನಗಳಲ್ಲಿ ಅಂತ್ಯಂತ ಪ್ರಮುಖವಾದದ್ದು.ಭಾಷಾವಿ‌ಜ್ನಾನಿಗಳ ಪ್ರಕಾರ ಭಾಷೆಯೆಂದರೆ ಆಡುವ ಮಾತು.ಲಿಪಿ ಅದನ್ನು ಹಿಡಿದಿಡುವ ಸಾಧನವಾಗಿದೆ.ಭಾಷಾವಿಜ್ನಾನಿಯೊಬ್ಬ ಹೇಳುವ ಹಾಗೆ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಮಾಡುವ ಮಹತ್ಕಾಯ೯ಗಳಲ್ಲಿ ಬಾಲ್ಯದಲ್ಲಿ ಭಾಷೆಯನ್ನು ಕಲಿಯುವುದೂ ಒಂದು."ಭಾಷೆಯ ಬೆಳಕು ಜೀವನದುದ್ದಕ್ಕೂ ಬೆಳಗದಿದ್ದರೆ ಲೊಕವೆಲ್ಲಾ ಕತ್ತಲಿಂದ ತುಂಬಿ ಹೋಗುತಿತ್ತುಯೆಂದು"-ದಂಡಿ ಸೊಗಸಾಗಿ ಹೇಳಿದ್ದಾನೆ. ಭಾಷೆಯೆಂದರೇನು ಎಂಬುದನ್ನು ಸೂತ್ರಪ್ರಾಯವಾಗಿ ಹೇಳುವುದು ಕಷ್ಟವಾದಾರೂ ಅಂತಹ ಕೆಲವು ಪ್ರಯತ್ನಗಳು ನೆಡೆದಿವೆ."ಆತ್ಮವಿರುವ (ಮನಸ್ಸಿರುವ) ಯಾವುದೇ ಪ್ರಾಣಿಯ ಅನುಭವಗಳ ಅಭಿವ್ಯಕ್ತಿಯೇ ಭಾಷೆ"(Eisler). "ಭಾಷೆಯೆನ್ನುವುದನ್ನು ಅಭಿಪ್ರಾಯಗಳ ಅಭಿವ್ಯಕ್ತಿಯ ಒಂದು ವಿಧಾನವಲ್ಲ,ಅದೊಂದು ರೀತಿಯ ಆಲೋಚನೆ;stated or Formulated thinking.ಭಾಷೆಯನ್ನುವುದು ಒಂದು ಸಾಧನ,ಮನುಷ್ಯರಿಗೆ ವಿಶಿಷ್ಟವಾಗಿರುವ ಆಲೋಚನೆಯ ಒಂದು ಸಾಧನ ಅಥವಾ ಅಂಗ.








ಭಾಷಾ ವ್ಯತ್ಯಾಸ ಭಾಷೆಯೆಂಬುದು ನಿಂತ ನೀರಲ್ಲ,ಹರಿಯುವ ಹೊಳೆಯಂತೆ. ನಿರಂತರವಾಗಿ ವ್ಯತ್ಯಾಸಗಗೊಳ್ಳುವುದೇ ಅದರ ಪ್ರಮುಖ ಲಕ್ಷಣ. ಇದನ್ನು ಎಲ್ಲ ಜೀವಂತ ಭಾಷೆಗಳಲ್ಲೂ ಗಮನಿಸಬಹುದು ಇದನ್ನೇ ಭಾಷಾವ್ಯತ್ಯಾಸಯೆಂದು ಕರೆದಿರುವುದು.ನಮಗೆ ತಿಳಿದಿರುವಂತೆ ಈ ವಿಶ್ವದಲ್ಲಿ ಸಾವಿರಕ್ಕೂ ಹೆಚ್ಚು ಭಾಷೆಗಳಿದ್ದು ಪ್ರತಿ ಭಾಷೆಗೂ ಅದರೆದೆ ಅದ ಅನನ್ಯ ವಿಶಿಷ್ಥ ಗುರುತು ಇರುತ್ತದೆ.ಈ ಕಾರಣದಿಂದಾಗಿ ಪ್ರತಿಯೊಂದು ಭಾಷೆಯು ಬೇರೊಂದು ಭಾಷೆಗಿಂತ ಭಿನ್ನವಾಗಿರುತ್ತದೆ.ಈ ಭಿನ್ನತೆ ಹಲವಾರು ಅಂಶಗಳನ್ನು ಒಳಗೊಂಡಿರುತ್ತೆವೆ,ಅವುಗಳೆಂದರೆ ಸಮಯ,ಸ್ಥಳ ಪ್ರತ್ಯೇಕತೆ,ರಚನೆ,ಸಾಮಾಜಿಕ-ಸಾಂಸ್ಕೃತಿಕ ಅಂಶಗಳೂ ಇತ್ಯಾದಿ.ಹೀಗಿದ್ದರೂ ಅವುಗಳ ಲಕ್ಷಣ ಹಾಗೂ ಕಾರ್ಯ ಹೆಚ್ಚು ಕಡಿಮೆ ಒಂದೇ ಆಗಿರುತ್ತದೆ.ಆದರೆ ಈ ಹಿಂದೆ ಎಲ್ಲಾ ಭಾಷೆಗಳನ್ನು ಹೊಮೋಜಿನಿಯಸ್ ಎಂದು ಪರಿಗಣಿಸಿದರು ಏಕೆಂದರೆ ವಿಶ್ವವ್ಯಾಪ್ತಿಯಾಗಿ ಭಾಷೆಯ ಉದ್ದೇಶ ಸಂಪಕ೯ ಮಾಡುವುದಕ್ಕೆ ಮಾತ್ರವೆಂದು ವ್ಯಾಖ್ಯಾನ ಮಾಡಲಾಗಿತ್ತು ಆದರೆ ಇಂದು ಆಧುನಿಕ socio-linguistic ಕ್ಷೆತ್ರದಲ್ಲಿನ ಪರಿಶೀಲನಾ ಕೆಲಸಗಳಿಂದ ಭಾಷಾ ವ್ಯತ್ಯಾಸ ಎಂಬ ಪರಿಕಲ್ಪನೆಯನ್ನು ಭಹಿರಂಗ ಮಾಡಲಾಗಿದೆ. ಅಲ್ಲಿಂದೀಚೆಗೆ ಎಲ್ಲಾ ಭಾಷೆಗಳನ್ನು ಏಕತೆಯ ದ್ರುಷ್ಥಿಕೋನದಿಂದ ಭಾಷಾ ವೈವಿಧ್ಯತೆಯಡೆಗೆ ವಗಾ೯ಯಿಸಲ್ಪಟಿತು. ಈ ಆಸಕ್ತಿಯು ಸ್ಥಿರ ರಚನೆಯಿಂದ ಭಿನ್ನ ರಚನೆಗೆ ವಗಾ೯ವಣೆಯಾಗಿದ್ದು ಭಿನ್ನ ಪರಿಸ್ಥಿತಿಯಲ್ಲಿ ಅದರ ಕಾಯ೯ ಮತ್ತು ವಿಭಿನ್ನವಾದ ಭಿನ್ನ ಅಂಶಗಳು (ಸಮಯ, ಸ್ಥಳ, ಇತ್ಯಾದಿ) ಇವೆಲ್ಲಸೇರಿ ಒಂದು ಪರಿಕಲ್ಪನೆಯನ್ನು ಹೊರ ಹಾಕಿದ್ದು ಅಲ್ಲಿ ಎಲ್ಲಾ ಭಾಷೆಗಳು ಒಟ್ಟಾಗಿ ಬಂದು ವಿಶಾಲವಾಹಿದ್ದು ಮತ್ತು ವೈವಿದ್ಯವಾಗಿದೆ. ಆಗಾಗಿ ನಮಗೆ ತಿಳಿದಿರುವಂತೆ ನಾವು ದಿನನಿತ್ಯದ ಪತ್ರಿಕೆಗಳಲ್ಲಿ, ರೇಡಿಯೊಗಳಲ್ಲಿ, ಟಿ.ವಿಗಳಲ್ಲಿ ಎಲ್ಲಾ ತರಹದ ಚಚೆ೯ಗಳಲ್ಲಿ ಹಾಗು ನಮ್ಮ ಎಲ್ಲಾರೀತಿಯ ಸಂಪಕ೯ಗಳು ಹಿಂದಿನ ಸಾವಿರ ವಷ೯ಗಳಿಂದಿನಂತವಲ್ಲ ಅದೆ ಸಮಯದಲ್ಲಿ ಒಂದು ಗುಂಪಿನ ಜನಾಂಗ ಒಂದು ನಿದಿ೯ಷ್ಟ ಸಾಮಾಜಿಕ-ಸಾಂಸ್ಕೃತಿಕ ಸೆಟ್ಟಿಂಗ್ಗಳಲ್ಲಿ ಜನರ ಭಾಷೆ ಬೇರೊಂದು ಜನಾಂಗದವರ ಭಾಷೆಗಿಂತ ಭಿನ್ನವಾಗಿರುತ್ತದೆ ಎಂಬುದನ್ನು ಮರೆಯಭಾರದು ಹಾಗಿದ್ದರೆ ಭಾಷೆಯ ಬದಲಾವಣೆ ಭಿನ್ನತೆ, ವಿಭಿನ್ನತೆ ನಿಭ೯ಂದಿತವಾಗಿ ಸಂಭವಿಸುತ್ತವೆ ಹೇಗೆಂದರೆ ಪ್ರಪಂಚದ ನೈಸಗಿ೯ಕ ವಿದ್ಯಮಾನಗಳ ಬದಲಾವಣೆಯಂತೆ.