ಸದಸ್ಯ:Chaithali Karthik/ನನ್ನ ಪ್ರಯೋಗಪುಟ
ಹುತ್ತರಿ ಹಬ್ಬ
ಕೊಡವ ಭಾಷೆಯಲ್ಲಿ ಪುದಿಯ ಅರಿ ಎಂದರೆ ಹೊಸ ಅಕ್ಕಿ ಎಂದರ್ಥ ಪುದಿಯ ಅರಿ ಎನ್ನುವುದರ ಸಮಾಸ ಪುತ್ತರಿ ಕನ್ನಡದಲ್ಲಿ ಹುತ್ತರಿ ಎನ್ನುತ್ತಾರೆ. ಹೊಸ ಅಕ್ಕಿಯನ್ನು ವಾಸ್ತವವಾಗಿ ಭತ್ತದ ಕದಿರನ್ನು ಮನೆಗೆ ತರುವ ಸುಗ್ಗಿ ಹಬ್ಬ ಪುತ್ತರಿ .
ಆಚರಣೆ:- ಈ ಹಬ್ಬ ಎರಡು ದಿನಗಳು ನಡೆಯುತ್ತದೆ. ಮೊದಲನೇ ದಿನ ಇಗ್ಗುತ್ತಪ್ಪ ದೇವಸ್ಥಾನದ ಗದ್ದೆಯಿಂದ ಕದಿರು ತರುವ ಹಬ್ಬ. ಎರಡನೆಯ ದಿನ ಕೊಡಗಿನಲ್ಲಿ ಎಲ್ಲಾ ಕೊಡವರು ಕದಿರನ್ನು ಮನೆಗೆ ತರುವ ನಾಡಹಬ್ಬ. ರೋಹಿಣಿ ನಕ್ಷತ್ರವಿರುವ ಹುಣ್ಣಿಮೆಯ ರಾತ್ರಿ "ಕದಿರು ತೆಗೆಯುವುದು"ಈ ಹೊಸ ಬೆಳೆಯನ್ನು ಪ್ರಥಮವಾಗಿ ಮನೆಗೆ ತರುವ ಒಳ್ಳೆಯ ಸಮಯವೆಂಬ ನಂಬಿಕೆ. ಈ ಮುಹೂರ್ತ ಸಾಮಾನ್ಯವಾಗಿ ನವೆಂಬರ್ ಅಂತ್ಯದಿಂದ ಡಿಸೆಂಬರ್ ಒಳಗೆ ಬರುತ್ತದೆ. ಈ ಹಬ್ಬದ ದಿನದಂದು ಕೊಡಗಿನಲ್ಲಿ ಎಲ್ಲಾ ಕೋಲಾಟ ಮತ್ತು ಜಾನಪದ ನೃತ್ಯಗಳನ್ನು ಮಾಡಲಾಗುತ್ತದೆ.
ಹಬ್ಬಕ್ಕೆ ಸಿದ್ಧತೆ:-
ಹಿಂದೆ ಗ್ರಾಮದಲ್ಲಿ ಹಲವಾರು ಕಸುಬುದಾರರು ಇದ್ದಾಗ ಹಬ್ಬಕ್ಕೆ ಬೇಕಾದ ಕುಕ್ಕೆ, ಚಾಪೆ, ಕತ್ತಿ, ಕುಡುಗೋಲು ,ಕುಡಿಕೆ ಇತ್ಯಾದಿಗಳನ್ನು ಹೊಸದಾಗಿ ತಯಾರಿಸಿ ಪ್ರತಿಯೊಂದು ಮನೆಗೂ ಕೊಡುತ್ತಿದ್ದರು. ಮತ್ತು ಊರಿನ ಅರ್ಚಕರು ಬೆಳಗ್ಗೆ ದೇವಸ್ಥಾನದಲ್ಲಿ ಪೂಜೆ ಮಾಡಿ ತೀರ್ಥವನ್ನು ತೇಯ್ದ ಗಂಧವನ್ನು ಪ್ರತಿ ಮನೆಗೂ ವಿತರಿಸುವುದು.
ಕದಿರು ತೆಗೆಯುವುದು:-
ಎಲ್ಲರೂ ಕದಿರು ತೆಗೆಯುವುದಕ್ಕೆ ಅವರವರ ಗದ್ದೆಗೆ ಬಂದು ಬೆಳೆಯನ್ನು ಪೂಜಿಸಿ ಕತ್ತಿಯಿಂದ ಬುಡವನ್ನು ಕತ್ತರಿಸುವಾಗ "ಪೊಲಿ ಪೊಲಿ ದೇವಾ"ಎಂದು ಜೋರಾಗಿ ಕೂಗುತ್ತಾರೆ. ನಂತರ ಕೋವಿಯಿಂದ ಗುಂಡನ್ನು ಹಾರಿಸುತ್ತಾರೆ. ಕತ್ತರಿಸಿದ ಕದಿರನ್ನು ದೇವಸ್ಥಾನಕ್ಕೆ ತಂದು ಪೂಜೆ ಮಾಡಿಸಿ ಅಲ್ಲಿಂದ ಮನೆಗೆ ಬಂದು, ಒಳಗೆ ಬರುವ ಮುನ್ನ ಕದಿರು ತಂದವರ ಕಾಲುಗಳನ್ನು ತೊಳೆದು ನಂತರ ಒಳಗೆ ತಂದು ಆ ಕದಿರುಗಳನ್ನು ದೇವರ ಹತ್ತಿರ ಇಟ್ಟು ಪೂಜಿಸುತ್ತಾರೆ.
ಊಟ:-
ಬೆಲ್ಲ ಸೇರಿಸಿ ಅಕ್ಕಿ ಪಾಯಸವನ್ನು ಮಾಡುವಾಗ ತಂದ ಹೊಸ ಕದಿರಿನಿಂದ ಬತ್ತದ ಕಾಳನ್ನು ತೆಗೆದು ಪಾಯಸಕ್ಕೆ ಸೇರಿಸುತ್ತಾರೆ. ಕಿವುಚಿದ ಬಾಳೆಹಣ್ಣುಗಳೊಡನೆ ಹುರಿದಕ್ಕಿ ಹಿಟ್ಟನ್ನು ಕಲಿಸಿ ತಂಬಿಟ್ಟು ತಯಾರಿಸುತ್ತಾರೆ.