ಸದಸ್ಯ:Carolpearl26/ನನ್ನ ಪ್ರಯೋಗಪುಟ
ಕೋಳಿಮುಳ್ಳುಹ೦ದಿಯು ಎರಿನೇಸಿನೆ ಉಪಕುಟು೦ಬಕ್ಕೆ ಸೇರಿರುವ ಸಸ್ತನಿ ಪ್ರಾಣಿಯಾಗಿದೆ.[೧] ಮುಳ್ಳುಗಳಿಂದ ಹೊದಿಸಿದ ಸಣ್ಣ ಹಂದಿಯಂತೆ ಕಾಣುವ ಈ ಪ್ರಾಣಿಯು, ಯುರೋಪ್, ಏಷ್ಯಾ, ಆಫ್ರಿಕಾ, ನ್ಯೂಜಿಲ್ಯಾಂಡಿನಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ೧೭ ಜಾತಿಗಳಿವೆ. ಕೆಲವು ಜಾತಿಯ ಕೋಳಿಮುಳ್ಳುಹ೦ದಿಯು ಅಳಿವಿನ ಅಂಚಿನಲ್ಲಿದೆ.
ಭೌತಿಕ ವಿವರಣೆ
[ಬದಲಾಯಿಸಿ]ಈ ಪ್ರಾಣಿಯು ಹುಟ್ಟುವಾಗ ಕುರುಡಾಗಿರುತ್ತದೆ.[೨] ಇದರ ಮುಳ್ಳುಗಳು ಕೆರಟಿನ್ ಎಂಬ ಪದಾರ್ಥದಿಂದ ಮಾಡಲ್ಪಟ್ಟಿದ್ದು, ಕಠಿಣತೆಯನ್ನು ಒದಗಿಸುತ್ತದೆ. ಈ ಮುಳ್ಳುಗಳು ವಿಷಕಾರಿ ಅಲ್ಲ. ಈ ಪ್ರಾಣಿಯು ಸ್ವರಕ್ಷಣೆಗಾಗಿ ಚೆಂಡಿನಂತೆ ಉರುಳುತ್ತದೆ.[೩] ಇದರ ಬೆನ್ನಿನಲ್ಲಿ ಎರಡು ದೊಡ್ಡ ಮಾಂಸಖಂಡಗಳನ್ನು ಹೊಂದಿದ್ದು, ಮುಳ್ಳುಗಳ ಸ್ಥಾನವನ್ನು ನಿರ್ಧರಿಸುತ್ತದೆ. ರಾತ್ರಿ ಚಟುವಟಿಕೆ ಮಾಡುವ ಈ ಪ್ರಾಣಿಯು ದಿನದ ಅಧಿಕಾವಧಿಯಲ್ಲಿ ನಿದ್ರಿಸುತ್ತದೆ.[೪]
ಆಹಾರ
[ಬದಲಾಯಿಸಿ]ಕೋಳಿಮುಳ್ಳುಹ೦ದಿಯು ಸರ್ವಭಕ್ಷಕ ಆದುದರಿಂದ ಕೀಟಗಳನ್ನು, ಕಪ್ಪೆಗಳನ್ನು, ಹುಲ್ಲು, ಹಣ್ಣುಗಳನ್ನು ಆಹಾರವಾಗಿ ಸೇವಿಸುತ್ತದೆ.
ಸಂತಾನೋತ್ಪತ್ತಿ ಮತ್ತು ಆಯಸ್ಸು
[ಬದಲಾಯಿಸಿ]ಕೋಳಿಮುಳ್ಳುಹಂದಿಯು ೩೫- ೫೮ ದಿನಗಳ ಗರ್ಭಾವಸ್ಥೆಯ ಅವಧಿ ಹೊಂದಿರುತ್ತದೆ. ಇದರ ಆಯಸ್ಸು ಗಾತ್ರದ ಮೇಲೆ ಅವಲಂಬಿತವಾಗಿದೆ. ದೊಡ್ಡ ಗಾತ್ರದ ಕೋಳಿಮುಳ್ಳುಹಂದಿಯು ೪- ೭ ವರ್ಷದ ಆಯಸ್ಸನ್ನು ಹೊಂದಿರುತ್ತದೆ. ಸಣ್ಣ ಗಾತ್ರದ ಕೋಳಿ ಮುಳ್ಳುಹಂದಿಯು ೨- ೪ ವರ್ಷದ ಆಯಸ್ಸನ್ನು ಹೊಂದಿರುತ್ತದೆ.
ಔಷಧೀಯ ಉಪಯೋಗಗಳು
[ಬದಲಾಯಿಸಿ]ಇದರ ಮಾಂಸವು ಔಷಧೀಯ ಸತ್ವವನ್ನು ಹೊಂದಿದ್ದು, ಸಂಧಿವಾತ ಸಮಸ್ಯೆಗಾಗಿ ಬಳಸಬಹುದಾಗಿದೆ. ರೊಮಾನಿ ಜನರು ಈ ಪ್ರಾಣಿಯ ರಕ್ತ ಹಾಗು ಕೊಬ್ಬಿನಾಂಶವನ್ನು ಔಷಧಿ ತಯಾರಿಸಲು ಉಪಯೋಗಿಸುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]