ಸದಸ್ಯ:Carol Sheona/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೋಲ್ಡನ್ ಫೆಸೆಂಟ್[ಬದಲಾಯಿಸಿ]

ನೆಲದ ಮೇಲೆ ತಿರುಗಾಡುವ ಭಾರ ದೇಹದ ಹಕ್ಕಿಗಳಿಗೆ ಗ್ಯಾಲಿನೇಶಿಯಸ್ ಹಕ್ಕಿಗಳು ಎಂದು ಹೆಸರು. ಕೋಳಿ, ಕಾಡುಕೋಳಿ, ಟರ್ಕಿ, ಕ್ವೇಯ್ಲ, ಪಾರ್ಟ್ರಿಜ್, ಫೆಸೆಂಟ್ ಮುಂತಾದವುಗಳು ಈ ಜಾತಿಗೆ ಸೇರಿದ ಹಕ್ಕಿಗಳು. ಈ ಜಾತಯಲ್ಲಿ ಸರ್ವಾತಿ ಸುಂದರ ಹಕ್ಕಿ ಗೋಲ್ಡನ್ ಫೆಸೆಂಟ್. ಅಥವಾ ಚೈನೀಸ್ ಫೆಸೆಂಟ್. ಇದರ ಮೂಲ ವಾಸಸ್ಥಾನ ಪಶ್ಚಿಮ ಚೀನಾದ ಪರ್ವತ ಪ್ರದೇಶ. ಅಲ್ಲಿನ ದಟ್ಟ ಕಾಡುಗಳಲ್ಲಿ ಇದು ವಾಸವಾಗಿರುತ್ತವೆ. ಇತ್ತೀಚೆಗೆ ಇಂಗ್ಲೆಂಡ್ ಮತ್ತು ಐರೊಪ್ಯ ದೇಶಗಳ ಕಾಡುಗಳಲ್ಲಿ ಕೂಡ ಇದರ ಸಂತಾನ ಬೆಳೆಸಲಾಗಿದೆ. ಗೋಲ್ಡನ್ ಫೆಸೆಂಟಿನ ಗಂಡು ಮತ್ತು ಹೆಣ್ಣುಗಳಲ್ಲಿ ಭಾರೀ ವ್ಯತ್ಯಾಸ ಇದೆ. ಗಂಡು ಸುಮಾರು ೧೦೦ಸೆಂಟಿಮೀಟರ್ ಉದ್ದವಾಗಿರುತ್ತದೆ. ಇದರ ದೇಹದ ಮೂರನೆಯ ಎರಡು ಭಾಗದಷ್ಟು ಇದರ ಬಾಲವೇ ಇದೆ. ಆಕರ್ಷಕ ಬಣ್ಣಗಳ ಸಿಂಗಾರಕ್ಕಾಗಿ ಇದು ಪ್ರಸಿದ್ದವಾಗಿದೆ. ಬಂಗಾರದ ಬಣ್ಣದ ಜುಟ್ಟು, ಮೇಲೊಂದಿಷ್ಟು ಕೆಂಪು ಗರಿಗಳು ಇದರ ವಿಶೇಷ, ಇದರ ದಢಹದ ಮೇಲೆ ಆಕರ್ಷಕ ಕೆಂಬಣ್ಣದ ಗರಿಗಳು ಇದ್ದು, ಅಲ್ಲಲ್ಲಿ ಚುಕ್ಕೆಗಳಂತಿರುವ ಕಪ್ಪು ಗರಿಗಳು ಇದರ ಸೌಂದರ್ಯಕ್ಕೆ ಕಳೆ ಕೊಡುತ್ತವೆ. ಇದು ಮೈಯ ಗರಿಗಳನ್ನು ಕೆದರಿದಾಗ ಕಿತ್ತಳೆ ಬಣ್ಣದ ಸುಂದರ ಉಡುಗೆಯಾಗಿ ಕಾಣಿಸುತ್ತದೆ. ಇದರ ಮುಖ, ಗಂಟಲು, ಗದ್ದ ಮತ್ತು ಕತ್ತಿನ ಬದಿಗಳಲ್ಲಿ ಕಂದು ಬಣ್ಣದ ಛಾಯೆ ಇರಬಹುದು. ಬೆನ್ನಿನ ಮೇಲೆ ಕಪ್ಪು ಅಂಚಿನ ಹಸುರು ಗರಿಗಳು ಮತ್ತು ಅವುಗಳ ಹಿಂಭಾಗದಲ್ಲಿ ಬಂಗಾರದ ಹಳದಿ ಬಣ್ಣದ ಗರಿಗಳು ಇರುತ್ತವೆ. ಅಲ್ಲಲ್ಲಿ ಚೆದುರಿರುವ ನೀಲಿ ಬಣ್ಣದ ಛಾಯೆ ಇದಕ್ಕೆ ಇನ್ನಷ್ಟು ಮೆರುಗು ಕೊಡುತ್ತದೆ. ಇದು ಉದ್ದ ಬಾಲ ಎತ್ತಿ ನಡೆಯುವ ಚೆಂದವೇ ಬೇರೆ. ಇದೆಲ್ಲ ಆಕರ್ಷಣೆ ಇರುವುದು ಗಂಡು ಹಕ್ಕಿಗೆ ಮಾತ್ರ. ಹೆಣ್ಣು ಹಕ್ಕಿಗೆ ಬಣ್ಣದ ಸಿಂಗಾರ ಇಲ್ಲ. ಇದರ ಮೈಮೇಲೆ ಕಂದು ಅಥವಾ ಬುದು ಬಣ್ಣದ ಗರಿದಳ ಜೊತೆಗೆ ಬಿಳಿ ಬಣ್ಣದ ಗರಿಗಳ ಮಿಶ್ರಣ ಇರುತ್ತದೆ. ಹೊಟ್ಟೆಯ ಭಾಗ ಮಸುಕಾಗಿರುತ್ತದೆ. ಇದರ ದೇಹದ ಅರ್ಧ ಭಾಗದಷ್ಟು ಬಾಲವೇ ಇದೆ. ಗಂಡು ಮತ್ತು ಹೆಣ‍್ಣು ಎರಡಕ್ಕೂ ನಸು ಹಳದಿ ಬಣ್ಣದ ಕಾಲುಗಳು ಮತ್ತು ಕೊಕ್ಕುಗಳು ಇರುತ್ತವೆ. ಗೋಲ್ಡನ್ ಫೆಸೆಂಟ್ ಸಾಮಾನ್ಯವಾಗಿ ಒತ್ತಾಗಿ ಬೆಳೆದ ಸೂಜಿಮೊನೆ ವೃಕ್ಷಗಳ ದಟ್ಟಕಾಡುಗಳ ನಡುವೆ ವಾಸವಾಗಿರುತ್ತದೆ. ಹೀಗಾಗಿ ಇದು ತನ್ನ ವಾಸಸ್ಥಾನದಲ್ಲಿ ಜನರ ಕಣ್ಣುಗಳಿಗೆ ಕಾಣುವುದಿಲ್ಲ. ಇವುಗಳನ್ನು ಮೃಗಾಲಯಗಳಲ್ಲಿ ಮಾತ್ರ ಕಾಣಬಹುದು. ಗೋಲ್ಡನ್ ಫೆಸೆಂಟ್ ಹೆಚ್ಚ್ಆಗಿ ನೆಲದ ಮೇಲೆಯೇ ಆಹಾರ ಹುಡುಕುತ್ತ ತಿರುಗಾಡುತ್ತಿರುತ್ತದೆ. ಧಾನ್ಯಗಳು, ಬೀಜ, ಚಿಗುರು, ಎಲೆಗಳು ಇದರ ಆಹಾರ. ಇದರ ಜೊತೆಗೆ ಹುಳ ಮತ್ತು ಕೀಟಗಳನ್ನು ತಿನ್ನುತ್ತದೆ. ಇದು ರಾತ್ರಿ ಕಳೆಯುವುದು ಮರಗಳ ಮೇಲೆ. ಈ ಹಕ್ಕಿಗೆ ಹಾರುವ ಶಕ್ತಿ ಇದೆ. ಆದರೆ ಹೆಚ್ಚು ದೂರಕ್ಕೆ ಹಾರಲು ಸಾಧ್ಯವಿಲ್ಲ. ಅಪಾಯ ಬಂದಾಗ ಪಟಪಟ ಶಬ್ದ ಮಾಡುತ್ತ ರೆಕ್ಕೆಗಳನ್ನು ಬಡಿದು ತುಸು ದೂರಕ್ಕೆ ಹಾರಿ ನೆಲಕ್ಕೆ ಇಳಿಯುತ್ತದೆ. ಹೆಣ್ಣು ಗೋಲ್ಡನ್ ಫೆಸೆಂಟ್ ಒಮ್ಮೆಗೆ ೮ ರಿಂದ ೧೨ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳಿಗೆ ಸುಮಾರು ೨೨ ದಿನ ಕಾವು ಕೊಟ್ಟಾಗ ಮರಿಗಳು ಹೊರಗೆ ಬರುತ್ತದೆ. ಚೀನಾದಲ್ಲಿ ಈ ಹಕ್ಕಿಗಳನ್ನ ಆಹಾರಕ್ಕಾಗಿ ಮತ್ತು ಇವುಗಳ ಆಕರ್ಷಕ ಗರಿಗಳಿಗಾಗಿ ಬೇಟೆಯಾಡುತ್ತಾರೆ.









ಬಯೋ ಅನಿಲ ಸ್ಥಾವರ[ಬದಲಾಯಿಸಿ]

ಕೃಷಿಕರಿಗಾಗಿ ರೂಪಿಸಾಗಿರುವ ರಾಷ್ಟ್ರೀಯ ತೋಟಗಾರಿಕಾ ಸಹಾಯಧನ ಯೋಜನೆ ಸಾರ್ಥಕ ಕ್ರಮಗಳಲ್ಲೊಂದು.ರೈತರ ಬದುಕಿಗೆ ತುಂಬಾ ಪೂರಕವಾಗಿರುವ, ಮುಖ್ಯವಾಗಿ ಪರಿಸರ ರಕ್ಷಣೆಯಲ್ಲಿ ಅತ್ಯುತ್ತಮ ಪಾತ್ರ ನಿರ್ವಹಿಸುತ್ತಿರುವ ಬಯೋ ಅನಿಲ ಸ್ಥಾವರ.ಪ್ರತಿಯೊಬ್ಬ ರೈತ ಕೃಷಿಯೊಂದಿಗೆ ಪಶುಸಂಗೋಪನೆಯನ್ನೂ ಸಾಮಾನ್ಯವಾಗಿ ನಡೆಸುವುದರಿಂದ ಬಯೋ ಅನಿಲಕ್ಕೆ ಅಗತ್ಯವಾದ ಕಚ್ಚಾ ಸಾಮಗ್ರಿಯಾದ ಸಗಣಿ ಆತನಲ್ಲೇ ಲಭ್ಯವಿರುತ್ತದೆ. ಬಯೋ ಅನಿಲವು ಒಂದು ಶಕ್ತಿ ರೂಪದಲ್ಲಿ ಲಭ್ಯವಾಗುವುದರಿಂದ ಹಲವು ಯಾಂತ್ರಿಕ ಸಲಕರಣೆಗಳಿಗೆ ಇಂಧನವಾಗಿ ಬಳಕೆಯಾಗುತ್ತಿದೆ.

ಪ್ರಮುಖವಾಗಿ ಬಯೋ ಅನಿಲದ ಬಳಕೆ ಅಡುಗೆ ಮನೆಯಲ್ಲಿ. ಆಹಾರ ಬೇಯಿಸಲು ನಾವು ಬಳಸುವ ಕಟ್ಟಿಗೆ, ವಿದ್ಯುತ್‌ ಹೀಟರ್‌, ಎಲ್‌ಪಿಜಿ ಗ್ಯಾಸ್‌ಗೆ ಅತ್ಯುತ್ತಮ ಪರ್ಯಾಯವಿದು. ಅಂದರೆ ಬಯೋ ಅನಿಲ ಸ್ಥಾವರಗಳಿಗೆ ಸಬ್ಸಿಡಿ ನೀಡಿ ಉತ್ತೇಜಿಸುವುದು ಸರ್ಕಾರದ ದೃಷ್ಟಿಯಿಂದ ದೂರಗಾಮಿ ಸಫಲತೆಗೆ ಅಡಿಪಾಯವಾಗುತ್ತದೆಂದು ದೃಢವಾಗಿ ಹೇಳಬಹುದು.

ಅಡುಗೆ ಅನಿಲ, ಸೀಮೆಎಣ್ಣೆ, ವಿದ್ಯುತ್‌ಗಳಲ್ಲಾಗುವ ಉಳಿತಾಯದ ಲಾಭ ಸರ್ಕಾರದ ಖಜಾನೆಗೆ. ಇಂದು 26 ಸಾವಿರ ಕೋಟಿ ರೂ.ಗಳ ವಾರ್ಷಿಕ ಸಬ್ಸಿಡಿಯನ್ನು ಈ ಕ್ಷೇತ್ರಕ್ಕೆ ಸರ್ಕಾರ ನೀಡುತ್ತದೆ ಎನ್ನುವುದನ್ನು ಗಮನಿಸಿದರೆ, ಬಯೋ ಅನಿಲ ಸ್ಥಾವರಕ್ಕೆ ಸರ್ಕಾರ ಸಹಾಯಧನ ನೀಡಿ ಉತ್ತೇಜಿಸಿದರೆ, ಆಗುವ ಬದಲಾವಣೆಯನ್ನು ಕ್ರಾಂತಿಕಾರಕ ಎಂದರೆ ಉತ್ಪ್ರೇಕ್ಷೆಯೇನಿಲ್ಲ.

ಬಯೋ ಅನಿಲದಿಂದ ಫ್ರಿಜ್‌ ನಿರ್ವಹಿಸುವ ತಾಂತ್ರಿಕತೆ ಯಶಸ್ವಿಯಾಗಿದೆ. ಶಿರಸಿ ತ್ಯಾಗಲಿಯ ಸುಬ್ರಾಯರು ಹಿಂದೆ ಹಡಗಿನಲ್ಲಿದ್ದ ಫ್ರಿಜ್‌ ಒಂದನ್ನು ತಂದು ಅದನ್ನು ಬಯೋ ಅನಿಲದಲ್ಲಿ ದುಡಿಸಿದ್ದರು. ಅದರ ವ್ಯಾಪಕ ಬಳಕೆ ಇನ್ನಷ್ಟೇ ಆಗಬೇಕಿದೆ. ಇತ್ತೀಚೆಗೆ ಎಲ್‌ಪಿಜಿ ಬಳಸಿ ನೀರು ಕಾಯಿಸುವ ಯಂತ್ರ ಬಂದಿದೆಯಷ್ಟೆ. ಅದರಲ್ಲಿ ಕೆಲ ತಾಂತ್ರಿಕ ಪರಿವರ್ತನೆ ಮಾಡಿ ಎಲ್‌ಪಿಐ ಬದಲು ಬಯೋ ಅನಿಲ ಬಳಸುವ ತಂತ್ರ ನೂರಕ್ಕೆ ನೂರು ಸಫಲವಾಗಿದ್ದು, ಈಗಾಗಲೇ ಕೃಷಿಕರನ್ನು ಆಕರ್ಷಿಸಿದೆ. ಇದರಿಂದ ದೀಪ ಬೆಳಗಿಸುವ ಸಾಧನವಂತೂ ಹಿಂದಿನಿಂದ ಜಾರಿಯಲ್ಲಿದೆ.ಬಯೋ ಅನಿಲದಿಂದ ನೀರಾವರಿ ಪಂಪ್‌ ನಡೆಸಬಹುದಾದ ವ್ಯವಸ್ಥೆಯನ್ನು ಜಾರಿಗೊಳಿಸಲು ಸಾಧ್ಯವಿದೆ. ಕಳೆದ ಕೆಲವು ವರ್ಷಗಳಿಂದ ಸುಸೂತ್ರವಾಗಿ ರೈತರು ಇದನ್ನು ಬಳಸುತ್ತಿರುವುದೇ ಸಫಲತೆಗೆ ಸಾಕ್ಷಿ ಎನ್ನಬಹುದೇನೋ.

ನಾಣ್ಯದ ಇನ್ನೊಂದು ಮಗ್ಗುಲನ್ನೂ ಇಲ್ಲಿಯೇ ವಿವರಿಸಬೇಕು. ಈಗಾಗಲೇ ಬಯೋ ಅನಿಲ ಸ್ಥಾವರ ಮಾಡಿಕೊಂಡವರು ದೈನಂದಿನ ಅಡುಗೆಗೆ ಸಾಕಷ್ಟು ಅನಿಲ ದೊರಕದೆ ಬಳಲುತ್ತಿದ್ದಾರೆ. ಇದು ಬಯೋ ಅನಿಲ ಸ್ಥಾವರ ಸ್ಥಾಪನೆಯನ್ನು ನಿರುತ್ತೇಜಿಸಿದೆ. ವಾಸ್ತವ ಬೇರೆ. ತಪ್ಪು ಬಯೋ ಅನಿಲದಲ್ಲ, ಕಚ್ಚಾ ವಸ್ತುಗಳದ್ದಲ್ಲ. ದೀನಬಂಧು, ಕಾಮಧೇನು ತೇಲುವ ಫೈಬರ್‌ ಡ್ರಮ್‌ ಮುಂತಾದ ಈ ಹಿಂದಿನ ಸ್ಥಾವರದ ಮಾದರಿಗಳಲ್ಲಿಯೇ ದೋಷವಿದೆ. ಇವುಗಳಲ್ಲಿ ಶೇ.100ರಲ್ಲಿ ಬಯೋ ಅನಿಲ ಉತ್ಪತ್ತಿಯಾಗದಿರುವುದರಿಂದಲೇ ಗ್ರಾಹಕ ಕಡಿಮೆ ಅನಿಲ ಲಭ್ಯತೆಗೆ ತೃಪ್ತಿಪಡುವಂತಾಗಿದೆ. ಆದರೆ ಇದೀಗ ಶಿವಮೊಗ್ಗ ಸಾಗರದ ವೀ.ನಾ.ಕೃಷ್ಣಮೂರ್ತಿಯವರು ವಿನ್ಯಾಸಗೊಳಿಸಿರುವ ಅಕ್ಷಯ ಜೈವಿಕ ಅನಿಲ ಯಂತ್ರ ಸ್ಥಾವರ ಪರಿಹಾರವೆನ್ನಬಹುದು. ಕೇವಲ ಒಂದು ಬುಟ್ಟಿ ಸಗಣಿ, ಇತರ ಕಚ್ಚಾವಸ್ತು ಬಳಸಿದರೆ ಸಾಕು, ಐದು ಜನರ ಒಂದು ಕುಟುಂಬ ಅಡುಗೆಯ ಇಂಧನದ ಸಮಸ್ಯೆ `ಅಕ್ಷಯದಲ್ಲಿ ಹುಟ್ಟುವುದಿಲ್ಲ.

ಬಯೋ ಡೈಜೆಸ್ಟರ್‌ಗಿಂತ ಅನಿಲ ಸ್ಥಾವರ ಹೆಚ್ಚು ಉಪಯೋಗಿ. ಡೈಜಿಸ್ಟರ್‌ನಲ್ಲಿ ದ್ರಾವಣ (ಡಿಕಾಕ್ಷನ್‌) ಮಾತ್ರ ಲಭ್ಯ. ಇದರಲ್ಲಿ ಉತ್ಪತ್ತಿಯಾಗುವ ಮಿಥೇನ್‌ ಅನಿಲ ವ್ಯರ್ಥವಾಗಿ ವಾಯುಮಂಡಲವನ್ನು ಸೇರುತ್ತದೆ. ವಾಸ್ತವವಾಗಿ, ಮಿಥೇನ್‌ ಅನಿಲ ಪರಿಸರಕ್ಕೆ ಬೆರೆಯುವುದು. ಕ್ಷೇಮವಲ್ಲ. ಬಯೋಗ್ಯಾಸ್‌ ಶಕ್ತಿಯ ಮೂಲವಾದುದರಿಂದ ಯಾವುದೇ ಸಂದರ್ಭದಲ್ಲಿ ಇದನ್ನು ವಿದ್ಯುತ್‌ನ್ನಾಗಿಯೂ ಪರಿವರ್ತಿಸಿಕೊಳ್ಳಬಹುದು.

ಪ್ರಸ್ತುತ ಬೇರೊಂದು ಯೋಜನೆಯಡಿ ಗೋ ಅನಿಲ ಸ್ಥಾವರಕ್ಕೆ ಐದು ಸಾವಿರ ರೂ.ಗಳ ಸಬ್ಸಿಡಿ ಸಿಕ್ಕೀತು ಎಂದು ಕೇಳಿದ್ದೇವೆ. ಪ್ಲಾಂಟ್‌ ಬಗ್ಗೆ ಯಾವುದೇ ಷರತ್ತುಗಳಿಲ್ಲದಿರುವುದರಿಂದ ಇದೊಂದು ಅಸಮರ್ಪಕ ಕ್ರಮ. ಮೊತ್ತವೂ ತುಂಬಾ ಕನಿಷ್ಟವಾಗಿದೆ. ಹಾಗಾಗಿ ಎನ್‌ಹೆಚ್‌ಬಿ ಮೂಲಕ ಇದನ್ನು 30 ಸಾವಿರ ರೂ.ಗಳ ಸಹಾಯಧನದ ವ್ಯಾಪ್ತಿಗೆ ಸೇರಿಸಿದರೆ ಅಷ್ಟರಮಟ್ಟಿಗೆ ರೈತರಿಗೇ ಅನುಕೂಲವಾಗುತ್ತದೆ.



ಗೊಬ್ಬರ[ಬದಲಾಯಿಸಿ]

ಗಿಡಗಳಿಗೆ ಹಾಕುವ ಕೀಟನಾಶಕಗಳಿಂದ ಹಲವಾರು ಕಾಯಿಲೆಗಳು ಬರುತ್ತವೆ. ಆದ್ದರಿಂದ ನಮ್ಮ ಮನೆಯ ಕೈತೋಟದಲ್ಲಿ ಬೆಳೆಯುವ ಗಿಡಗಳಿಗೆ ನಾವೇ ತಯಾರಿಸಿಕೊಳ್ಳುವ ಗೊಬ್ಬರವನ್ನು ಬಳಸುವುದು ಒಳ್ಳೆಯದು.ಪ್ರತಿಯೊಬ್ಬರು ಸ್ವಲ್ಪ ಮಟ್ಟಿಗಿನ ಸ್ಥಳಾವಕಾಶ ದೊರೆತರೆ ತಮ್ಮ ಮನೆಗಳಿಗೆ ಬೇಕಾಗುವ ತರಕಾರಿಗಳನ್ನು ಬೆಳೆದುಕೊಳ್ಳಲು ಆಲೋಚಿಸುತ್ತಾರೆ. ಅಷ್ಟೇ ಅಲ್ಲ ಇಂತಹ ಕೈತೋಟಗಳಿಗೆ ಜೈವಿಕ ಗೊಬ್ಬರಗಳು ತುಂಬಾ ಒಳ್ಳೆಯದು ಎಂಬುದು ಎಲ್ಲರಿಗು ತಿಳಿದ ವಿಚಾರವೇ. ಈ ಗೊಬ್ಬರಗಳು ಮಣ್ಣಿಗೆ ಪೋಷಕಾಂಶಗಳನ್ನು ಮತ್ತು ಸಾವಯವ ಅಂಶಗಳನ್ನು ತುಂಬುತ್ತವೆ.ತರಕಾರಿಗಳನ್ನು ಬೆಳೆಯುವಾಗ ನಾವು ಕೆಲವೊಂದು ವಿಚಾರಗಳನ್ನು ನೆನಪಿನಲ್ಲಿಡಬೇಕು. ಈ ತರಕಾರಿಗಳನ್ನು ಬೆಳೆಸಲು ನಾವು ಬಳಸುವ ಮಣ್ಣಿನಲ್ಲಿ ತರಕಾರಿಗೆ ಅಗತ್ಯವಾಗಿರುವ ಪೋಷಕಾಂಶಗಳು ಇಲ್ಲದೆ ಇರಬಹುದು. ಆದ್ದರಿಂದಲೆ ಈ ಮಣ್ಣಿಗೆ ನಾವು ಗೊಬ್ಬರದ ರೂಪದಲ್ಲಿ ಪೋಷಕಾಂಶಗಳನ್ನು ಒದಗಿಸಬೇಕಾಗಿ ಬರುತ್ತದೆ. ಅದರಲ್ಲೂ ಇದಕ್ಕೆ ಪ್ರಾಣಿಗಳ ಗೊಬ್ಬರವು ಅತ್ಯಂತ ಉತ್ತಮ. ದುರದೃಷ್ಟವಶಾತ್ ಪ್ರಾಣಿಗಳ ಗೊಬ್ಬರದಲ್ಲಿ ಇ-ಕೊಲಿ ಎಂಬ ಬ್ಯಾಕ್ಟೀರಿಯಾಗಳು ಮತ್ತು ಎರೆಹುಳುಗಳು ಹಾಗು ಜಂತು ಹುಳುಗಳು ಮಣ್ಣಿನಲ್ಲಿ ಇರುತ್ತವೆ. ಈ ಸಣ್ಣದಾದ ಕೀಟಗಳು, ಮನುಷ್ಯರಿಗೆ ಗೊಬ್ಬರದ ಮೂಲಕ ನೇರವಾಗಿ ಸಂಪರ್ಕಗೊಳ್ಳುತ್ತವೆ. ಕೆಲವೊಂದು ಅವಶ್ಯಕ ಮುಂಜಾಗರೂಕತೆ ಕ್ರಮಗಳನ್ನು ತೆಗೆದುಕೊಂಡು ನೀವು ನಿಮ್ಮ ತರಕಾರಿಗಳನ್ನು ಬೆಳೆಯಲು ಗೊಬ್ಬರವನ್ನು ಬಳಸಿಕೊಳ್ಳಬಹುದು. ಇಲ್ಲಿ ನಾವು ನಿಮ್ಮ ಕೈತೋಟಕ್ಕಾಗಿ ಗೊಬ್ಬರವನ್ನು ಸಮರ್ಪಕವಾಗಿ ಬಳಸಲು ಕೆಲವೊಂದು ಮಾರ್ಗಗಳನ್ನು ನೀಡಿದ್ದೇವೆ.

ಕೈತೋಟ ಮಾಡುವವರು ನೆನಪಿಡಬೇಕಾಗಿರುವ ಅಂಶವೇನೆಂದರೆ, ನಿಮ್ಮ ತರಕಾರಿಗಳಿಗೆ ಯಾವುದೇ ರೀತಿಯ ತಾಜಾ ಗೊಬ್ಬರ ಬೇಕಾಗಿಲ್ಲ. ಏಕೆಂದರೆ ತಾಜಾ ಗೊಬ್ಬರದಲ್ಲಿ ಸಾರಜನಕ ಮತ್ತು ಅಮೋನಿಯಾವು ಅತಿ ಹೆಚ್ಚು ಪ್ರಮಾಣದಲ್ಲಿರುತ್ತದೆ. ಇವುಗಳು ನಿಮ್ಮ ತರಕಾರಿಗಳನ್ನು ಸುಟ್ಟು ಹಾಕುತ್ತವೆ ಮತ್ತು ಬೀಜಗಳನ್ನು ಮೊಳಕೆಯೊಡೆಯಲು ಸಹ ಬಿಡುವುದಿಲ್ಲ. ಇದೆಲ್ಲದರ ಹೊರತಾಗಿಯೂ ನಿಮಗೆ ಹೊಸ ಗೊಬ್ಬರವನ್ನು ಬಳಸಲೇ ಬೇಕೆಂದಾದಲ್ಲಿ ಕೊಯ್ಲಿಗೆ 120 ದಿನ ಮೊದಲು ಬಳಸಿ. ಆಗ ಇದರಿಂದ ಯಾವುದೇ ಅಪಾಯವಿರುವುದಿಲ್ಲ.


ನಿಮ್ಮ ಕೈತೋಟದಲ್ಲಿರುವ ಗಿಡಗಳಿಗೆ ಗೊಬ್ಬರ ಹಾಕಲು ಇರುವ ಮತ್ತೊಂದು ಮಾರ್ಗವೆಂದರೆ ಅದು ಕಾಂಪೋಸ್ಟ್ ಗೊಬ್ಬರ. ಇದು ನೀವು ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ಹಾಳು ಮಾಡುವ ಅಪಾಯವನ್ನು ಕಡಿಮೆ ಮಾಡುತ್ತದೆ. ಅದರಲ್ಲೂ ಕಾಂಪೋಸ್ಟ್ ಗೊಬ್ಬರದ ರಾಶಿಯ ಉಷ್ಣಾಂಶವು 104F ಗೆ ತಲುಪಿದಾಗ, ಇದು ತನ್ನ ಅಪಾಯವನ್ನು ಮತ್ತೂ ಕಡಿಮೆ ಮಾಡುತ್ತದೆ. ವಾಣಿಜ್ಯ ಉದ್ದೇಶಗಳಿಗಾಗಿ ತಯಾರಿಸಲಾದ ಕಾಂಪೋಸ್ಟ್ ಗೊಬ್ಬರವು ಗಾರ್ಡನ್ ಸೆಂಟರ್‌ಗಳಲ್ಲಿ ದೊರೆಯುತ್ತದೆ. ಇದನು ಕೊಳ್ಳುವ ಮೊದಲು ಇದು ಶೇ. 100 ರಷ್ಟು ರೋಗ ಮುಕ್ತವಾಗಿದೆ ಎಂದು ಖಾತ್ರಿಪಡಿಸಿಕೊಳ್ಳಿ. ತಾಜಾ ಗೊಬ್ಬರದ ವಿಧಗಳು

ಗೊಬ್ಬರಕ್ಕಾಗಿ ಯಾವ ಯಾವ ಪ್ರಾಣಿಗಳ ತ್ಯಾಜ್ಯಗಳನ್ನು ಬಳಸಲಾಗುತ್ತದೆ ಎಂಬುದನ್ನು ಮೊದಲು ನಾವು ಅರಿತಿರಬೇಕು. ಬೆಕ್ಕು, ನಾಯಿ ಮತ್ತು ಹಂದಿಗಳ ತ್ಯಾಜ್ಯಗಳನ್ನು ನಾವು ಗೊಬ್ಬರಕ್ಕಾಗಿ ಬಳಸಲೇಬಾರದು. ಈ ತ್ಯಾಜ್ಯಗಳನ್ನು ಕಾಂಪೋಸ್ಟ್ ಗೊಬ್ಬರಗಳಲ್ಲಿ ಸಹ ಬಳಸಬಾರದು. ಏಕೆಂದರೆ ಈ ಬಗೆಯ ಗೊಬ್ಬರಗಳಲ್ಲಿರುವ ಪರಾವಲಂಬಿಗಳು ತುಂಬಾ ಕಾಲ ಜೀವಿಸುತ್ತವೆ ಮತ್ತು ಮನುಷ್ಯರಿಗೆ ಇನ್‍ಫೆಕ್ಷನ್ ಉಂಟು ಮಾಡುತ್ತವೆ. ಕೋಳಿಯ ಹಿಕ್ಕೆಗಳು ತೋಟಕ್ಕೆ ಹೇಳಿ ಮಾಡಿಸಿದ ಗೊಬ್ಬರವಾಗಿರುತ್ತವೆ. ನಮ್ಮ ಕೈತೋಟಕ್ಕೆ ಬೇಕಾದ ಗೊಬ್ಬರವನ್ನು ಹೇಗೆ ತಯಾರಿಸಿಕೊಳ್ಳಬಹುದು ಎಂಬುದಕ್ಕೆ ಇದು ಒಂದು ಮಾರ್ಗವಾಗಿದೆ.

ಪ್ರಾಣಿಯ ತ್ಯಾಜ್ಯಗಳನ್ನು ಗೊಬ್ಬರವಾಗಿ ಬಳಸುವ ಬದಲು, ಮಣ್ಣಿನ ಕಂಡೀಶನರನ್ನು ಬಳಸಿಕೊಳ್ಳುವುದು ಉತ್ತಮ. ಚಳಿಗಾಲದ ಆರಂಭದಲ್ಲಿ ನೆಟ್ಟ ಗಿಡಗಳಿಗೆ ಬೇಸಿಗೆಯ ಆರಂಭಕ್ಕೆ ಮುನ್ನ ಗೊಬ್ಬರವನ್ನು ನೀಡಿ. ಇದು ಮಣ್ಣಿಗೆ ಗೊಬ್ಬರವನ್ನು ಹೀರಿಕೊಳ್ಳುವಂತಹ ಸಾಮರ್ಥ್ಯವನ್ನು ನೀಡುತ್ತದೆ. ಜೊತೆಗೆ ಗೊಬ್ಬರವು ಮಣ್ಣಿಗೆ ಫಲವತ್ತತೆಯನ್ನು ನೀಡಿ ಪೋಷಿಸುತ್ತದೆ. ಇದರಿಂದ ತರಕಾರಿಗಳು ಚೆನ್ನಾಗಿ ಬೆಳೆಯುತ್ತವೆ.

ನಿಮ್ಮ ಕೈತೋಟಕ್ಕೆ ಗೊಬ್ಬರವನ್ನು ಹೇಗೆ ಹಾಕಬೇಕೆಂಬುದನ್ನು ನಿರ್ಧರಿಸುವ ಮತ್ತೊಂದು ಮಾರ್ಗವೆಂದರೆ ಅದು ಸ್ಥಿರತೆ. ಪ್ರತಿ ಗೊಬ್ಬರವು ಮೂರು ಮುಖ್ಯ ಮೂಲಭೂತ ಅಂಶಗಳನ್ನು ಒಳಗೊಂಡಿರಬೇಕು. ಅವುಗಳೆಂದರೆ ಸಾರಜನಕ, ರಂಜಕ ಮತ್ತು ಪೊಟ್ಶಾಶಿಯಂ. ಸಾರಜನಕವು ಕೋಶಗಳನ್ನು ಬೆಳೆಸಲು ನೆರವಾಗುತ್ತದೆ. ಪೊಟ್ಶಾಶಿಯಂ ಸಕ್ಕರೆ ಅಂಶಗಳನ್ನು ಅಳವಡಿಸಿಕೊಳ್ಳಲು ನೆರವಾಗುತ್ತದೆ ಮತ್ತು ರಂಜಕವು ಇಡೀ ಸಸ್ಯದಲ್ಲಿ ಶಕ್ತಿ ಸಂಚಯವಾಗಲು ನೆರವಾಗುತ್ತದೆ.