ವಿಷಯಕ್ಕೆ ಹೋಗು

ಸದಸ್ಯ:C M Vidyashree/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೋಜಾ
ಜನನಲತಾ ನಾಗರಾಜ
೧೭ ನವಂಬರ್ ೧೯೭೨
ತಿರುಪತಿ, ಆಂದ್ರ ಪ್ರದೇಶ, ಭಾರತ
ಉದ್ಯೋಗರಾಜಕಾರಣಿ,ನಟಿ
ಸಕ್ರಿಯ ವರ್ಷಗಳು೧೯೯೨-present
ಸಂಗಾತಿಸೆಲ್ವಮಣಿ
ಮಕ್ಕಳು

ರೋಜಾ ಸೆಲ್ವಮಣಿ ಅವರು ೧೭ ನವೆಂಬರ್ ೧೯೭೨ ರಲ್ಲಿ ಜನಿಸಿದರು. ಅವರು ದmb ಕ್ಷಿಣ ಭಾರತದ ಖ್ಯಾತ ನಟಿ ಮತ್ತು ರಾಜಕಾರಣಿಯಾಗಿದ್ದಾರೆ. ಅವರು ವೈ.ಎಸ್.ಆರ್. ಕಾಂಗ್ರೆಸ್ ಪಾರ್ಟಿ ಜೊತೆಗೂಡಿದರು. ೨೦೧೪ ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನಗರಿಯಿಂದ ಶಾಸಕರಾಗಿ ಜಯ ಗಳಿಸಿದರು.[]


ಆರಂಭಿಕ ಜೀವನ

[ಬದಲಾಯಿಸಿ]

ರೋಜಾ ಅವರು ೧೯೭೨ ರಲ್ಲಿ ನಾಗರಾಜ ರೆಡ್ಡಿ ಮತ್ತು ಲಲಿತಾ ದಂಪತಿಗಳಿಗೆ ಆಂಧ್ರ ಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ಬಂಗಾರಪೇಟೆಯಲ್ಲಿ ಜನಿಸಿದರು. ಅವರ ಪೂರ್ಣ ಹೆಸರು ಶ್ರೀ ಲತಾ. ಅವರ ತಂದೆ-ತಾಯಿಗೆ ಮೂವರು ಮಕ್ಕಳು- ರೋಜಾ ಮತ್ತು ಇಬ್ಬರು ಸಹೋದರರು (ಕುಮಾರಸ್ವಾಮಿ ಮತ್ತು ರಾಮಪ್ರಸಾದ್). ನಂತರ ಕುಟುಂಬ ಸಮೇತ ಹೈದರಾಬಾದ್ ಗೆ ತೆರಳಿದರು. ಅವರು ಶ್ರೀ ಪದ್ಮಾವತಿ ವಿಶ್ವವಿದ್ಯಾನಿಲಯದಿಂದ ರಾಜ್ಯಶಾಸ್ತ್ರದಲ್ಲಿ ತನ್ನ ಸ್ನಾತಕೋತ್ತರ ಪದವಿ ಗಳಿಸಿದರು. ರೋಜಾ ಕುಚುಪುಡಿಯನ್ನು ಕೂಡ ಅಭ್ಯಸಿಸಿದರು. ಅವರು ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ನೃತ್ಯವನ್ನು ಪ್ರದರ್ಶಿಸುತ್ತಿದ್ದರು.

ರೋಜಾ ತೆಲುಗು ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಪ್ರವೇಶ ನೀಡಿದರು. ಅವರ ಮೊದಲನೇ ಚಿತ್ರ ಪ್ರೇಮ ತಪಸ್ಸು. ಅದರಲ್ಲಿ ನಾಯಕ ರಾಜೇಂದ್ರ ಪ್ರಸಾದ್ ಗೆ ನಾಯಕಿಯಾಗಿ ನಟಿಸಿದರು. ಈ ಇಡೀ ಚಿತ್ರವನ್ನು ತಿರುಪತಿಯಲ್ಲಿ ಶೂಟಿಂಗ್ ಮಾಡಲಾಗಿತ್ತು. ನಿರ್ದೇಶಕ ಆರ್.ಕೆ.ಸೆಲ್ವಮಣಿ, ಚೆಂಬರುತಿ ಮತ್ತು ನಟ ಪ್ರಶಾಂತ್ ರವರು ತಮಿಳು ಚಿತ್ರರಂಗಕ್ಕೆ ರೋಜಾರವರನ್ನು ಪರಿಚಯಿಸಿದರು. ಆಕೆಯು ಮಮ್ಮೂಟಿಯ ಜೊತೆ ನಟಿಸಿದ "ವೇಲೂರ್ ಮೆಮಾನ್" ಮತ್ತು ಪ್ರಭುದೇವ ಜೊತೆ ನಟಿಸಿದ "ಮಸ್ತಾನಾ ಮಸ್ತಾನಾ" ಎಂಬ ಹಾಡುಗಳು ಜನಪ್ರಿಯವಾದವು. ರಜನೀಕಾಂತ್(ವೀರ) ಮತ್ತು ಅರ್ಜುನ್ ಸರ್ಜ(ಅಯುಧ ಪೂಜ) ಮುಂತಾದವರ ಚಿತ್ರಗಳಲ್ಲಿ ಅಭಿನಯಿಸಿ ಮೆಚ್ಚುಗೆಯನ್ನು ಪಡೆದಿದ್ದಾರೆ. ವಿಕ್ರಮ ನಿರ್ದೇಶನದ ಚಲನಚಿತ್ರ "ಉನ್ನಿದಯತಿಲ್ ಎನ್ನೈ ಕೊಡುತೇನ್"ದಲ್ಲಿ ರೋಜಾ ಪ್ರಮುಖ ವೃತ್ತಿ ಪ್ರಗತಿಯನ್ನು ಗಳಿಸಿದರು. ಅವರ ೧೦೦ನೇಯ ಚಿತ್ರ ಪೊಟ್ಟು ಅಮ್ಮನ್ ಆಗಿತ್ತು. ನಂತರ ರೋಜಾ ಅರಸು(೨೦೦೩), ಪಾರಿಜಾತಂ(೨೦೦೬), ಶಂಭೋ ಶಿವ ಶಂಭೋ(೨೦೧೦), ಗೋಲಿಮಾರ್(೨೦೧೦), ಮೊಗುಡು(೨೦೧೧), ಕೋಡಿಪುಂಜು(೨೦೧೧), ವೀರಾ, ಕಾವಲನ್(೨೦೧೧), ಮತ್ತು ಸಗುನಿ(೨೦೧೨) ಮೊದಲಾದ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರು.

ರಾಜಕೀಯ ಜೀವನ

[ಬದಲಾಯಿಸಿ]

ರೋಜಾ ತೆಲುಗು ದೇಶಂ ಪಾರ್ಟಿಗೆ (ಟಿಡಿಪಿ)ಸೇರಿದರು ಮತ್ತು ತೆಲುಗು ಮಹಿಳಾ ಪಕ್ಷದ ಮಹಿಳೆ ಪಾರ್ಶ್ವದ ಅಧ್ಯಕ್ಷರಾಗಿದ್ದರು. ೨೦೦೯ರಲ್ಲಿ ನಡೆದ ರಾಜ್ಯ ಚುನಾವಣೆಗಳಲ್ಲಿ ರೋಜಾ ಸತತ ಎರಡನೇ ಬಾರಿಗೆ ಸೋಲನ್ನು ಅಪ್ಪಿದರು. ಇದರ ಅಂತಿಮವಾಗಿ ತನ್ನ ಪ್ರತಿಸ್ಪರ್ಧಿ ವಿರೋಧ ಪಕ್ಷದ ನಾಯಕರು, ಎದುರಿಸಿ ಮತ್ತು ರಾಜಕೀಯ ವರ್ತನೆಗಳನ್ನು ಒಳಗೊಂಡಿದ್ದರು.[] ಆಗಸ್ಟ್ 2009ರಲ್ಲಿ, ಅವರು ಟಿಡಿಪಿ ತ್ಯಜಿಸಿ ಕಾಂಗ್ರೆಸ್ ಪಕ್ಷವನ್ನು ಸೇರಿದರು.[] ನಂತರ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ವೈ.ಎಸ್.ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.[] ೧೬ ಮೇ ೨೦೧೪ರಂದು ಅವರು ನಗರಿಯಿಂದ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಜಯವನ್ನು ಗಳಿಸಿದರು.

ರಾಜಕೀಯ ವಿವಾದಗಳು

[ಬದಲಾಯಿಸಿ]

ಆರ.ಕೆ.ರೋಜಾ ಅವರು ಮಹಿಳಾ ಶಾಸಕರ ನಡುವೆ ಸಕ್ರಿಯ ಸ್ಪೀಕರ್ ಆದರು. ಅವರು ಪ್ರದೋಚನಕಾರಿ ಭಾಷೆಗೆ ಹೆಸರಾಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ವಿಧಾನಸಭೆ ವಿಚಾರಣೆಯ ಸಮಯದಲ್ಲಿ ಅವರ ದುರ್ವರ್ತನೆಯ ಕಾರಣದಿಂದಾಗಿ ಅವರನ್ನು ವಿಧಾನಸಭೆಯಲ್ಲಿ ಹಾಜರಾಗದಂತೆ ನಿಷೇಧಿಸಲಾಗಿತ್ತು. ೧೮ ಡಿಸೆಂಬರ್ ೨೦೧೫ರಂದು, ಶಾಸಕಾಂಗ ಸಭೆಯ ಎಲ್ಲಾ ಸದಸ್ಯರು ಹಾಗು ಮುಖ್ಯಸ್ಥ-ಸ್ಪೀಕರ್ ಒಟ್ಟುಗೂಡಿ ಈ ನಿರ್ಧಾರವನ್ನು ತೆಗೆದುಕೊಂಡರು. ವಿಧಾನಸಭೆ ಚಟುವಟಿಕೆಗಳು ಮತ್ತು ಸಭೆಯ ಶಿಸ್ತು ಸಂಬಂಧಿಸಿದಂತೆ ವರ್ತನೆಯನ್ನು ಹಾಗೂ ತನ್ನ ಭಾಷೆಯ ಆಯ್ಕೆಯ ಬಗ್ಗೆ ವಿವಿಧ ರಾಜಕಾರಣಿಗಳು, ರಾಜಕೀಯ ವಿಶ್ಲೇಷಕರು ಮತ್ತು ಕಾರ್ಯಕರ್ತರು ಟೀಕಿಸಿದರು. ಇದೆಲ್ಲ ಹೊರತಾಗಿಯೂ Y.S.ಜಗನ್ ಮೋಹನ್ ರೆಡ್ಡಿ,[] ವಿರೋಧ ಪಕ್ಷದ ಗೌರವಾನ್ವಿತ ನಾಯಕ, ಅವರ ಬೆಂಬಲಿತನಾಗಿ ಹಾಗು ಅವರ ನಡತೆಗೆ ಬೆಂಬಲ ನೀಡಿದರು. ಅಂತಹ ನಡವಳಿಕೆಯನ್ನು ಬೆಂಬಲಿಸಲು ಕಾರಣವೇನೆಂದು ಹಲವು ವಿಶ್ಲೇಷಕರು ಪ್ರಶ್ನಿಸಿದಾಗ, ಇದು ರಾಜ್ಯ ಒಳಿತಿಗೇ ಎಂದು ಪರಿಗಣಿಸಲಾಯಿತು. ರೋಜಾ ಅವರನ್ನು ವಿಧಾನಸಭೆಯಿಂದ ಅಮಾನತುಗೊಳಿಸುವ ಸಂದರ್ಭದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾಗಿತ್ತು[]. ಇಂತಹ ಅನುಮಾನಗಳು ಸ್ಪೀಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸುವಂತೆ ಮಾಡಿತು. ಅಸೆಂಬ್ಲಿಯ (ಅಥವಾ ವಿಧಾನಸಭೆಯ) ಆಸ್ತಿಯಾದ ವೀಡಿಯೋ ವಿವರಗಳನ್ನು ಮಾಧ್ಯಮದವರು ಸಭಾಪತಿಯವರ ಅನುಮತಿಯಿಲ್ಲದೆ ಹೇಗೆ ಮಾಧ್ಯಮದಲ್ಲಿ ಪ್ರಕಟಿಸಿದರು? ಎಂಬುದನ್ನು ಸಭಾಸದಸ್ಯರೆಲ್ಲರೂ ಪ್ರತಿಭಟಿಸಿದಾಗ ಸಭಾಪತಿಯವರು ಇದನ್ನು ವಿಚಾರಿಸಲು ಒಂದು ಆಯೋಗವನ್ನು ರಚಿಸಿ ಅವರ ವರದಿಯನ್ನು ಮುಂದಿನ ಸಭೆಯಲ್ಲಿ ಹಾಜರು ಪಡಿಸುವವುದಾಗಿ ಭರವಸೆಯಿತ್ತರು.[]

ಇತರ ಕಾರ್ಯಗಳು

[ಬದಲಾಯಿಸಿ]

ಮೋಡರ್ನ್ ಮಹಾಲಕ್ಷ್ಮಿ ಎಂಬ ಕಾರ್ಯಕ್ರಮದಲ್ಲಿ ಅನುಸೂಯರವರ ಬದಲು ನಿರೂಪಕಿಯಾಗಿ ರೋಜಾ ಅವರು ಕಾರ್ಯ ನಿರ್ವಹಿಸಿದರು.ಈ ಕಾರ್ಯಕ್ರಮವು ಮಾ ಟಿವಿಯಲ್ಲಿ ಪ್ರಸಾರವಾಗಿತ್ತು. ಜಬರ್ದಸ್ತ್ ಎಂಬ ಹಾಸ್ಯ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದರು.ಈ ಕಾರ್ಯಕ್ರಮವು ಈ ಟಿವಿಯಲ್ಲಿ ಪ್ರಸಾರವಾಗುತಿತ್ತು. ಜೀ ತಮಿಳ್ ನಲ್ಲಿ ಲಕ್ಕಾ-ಕಿಕ್ಕಾ ಎಂಬ ಕಾರ್ಯಕ್ರಮವನ್ನು ನಿರ್ವಹಿಸಿದರು.

ವಯಕ್ತಿಕ ಜೀವನ

[ಬದಲಾಯಿಸಿ]

ರೋಜಾ ಅವರು ಆರ್.ಕೆ.ಸೆಲ್ವಮಣಿ ಅವರನ್ನು ೧೦ ಆಗಸ್ಟ್ ೨೦೦೨ ರಂದು ವಿವಾಹವಾದರು. ಈ ದಂಪತಿಗಳಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳು ಇದ್ದಾರೆ.[]

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]

ತೆಲುಗು ಚಿತ್ರಗಳು

[ಬದಲಾಯಿಸಿ]
ವರ್ಷ ಚಿತ್ರ ಸಹ ನಟ ಭಾಷೆ ಪಾತ್ರ
೧೯೯೧ಸರ್ಪಯಾಗಂಶ್ರೀನಿವಾಸ ವರ್ಮತೆಲುಗು
೧೯೯೧ಪ್ರೇಮ ತಪಸ್ಸುರಾಜೇಂದ್ರ ಪ್ರಸಾದ್ತೆಲುಗು
೧೯೯೨ಸೀತರತ್ನಂ ಗಾರಿ ಅಬ್ಬಾಯಿವಿನೋಧ್ ಕುಮಾರ್ತೆಲುಗು
೧೯೯೨ಅಟಾಕು ಕೊಡಕು ಮಾಮಕು ಅಲ್ಲುಡುವಿನೋಧ್ತೆಲುಗು
೧೯೯೩ರಕ್ಷಣಾನಾಗಾರ್ಜುನ್ತೆಲುಗು
೧೯೯೩ಮುಠಾ ಮೇಸ್ತ್ರಿಚಿರಂಜೀವಿತೆಲುಗು
೧೯೯೩ಅತ್ತಾ ಸೊಮ್ಮು ಅಲ್ಲುಡಿ ದಾನಂವಿನೋಧ್ ಕುಮಾರ್ತೆಲುಗು
೧೯೯೩ಮೊಗುಡುಗಾರುವಿನೋಧ್ ಕುಮಾರ್ತೆಲುಗು
೧೯೯೪ ಮುಗ್ಗುರು ಮೊನಗಾಲ್ಲು ಚಿರಂಜೀವಿತೆಲುಗು
೧೯೯೪ಭೈರವ ದ್ವೀಪಂ ಬಾಲಕೃಷ್ಣತೆಲುಗುರಾಜಕುಮಾರಿ ಪದ್ಮಾವತಿ
೧೯೯೪ಗಾಂಡೀವಂಬಾಲಕೃಷ್ಣತೆಲುಗು
೧೯೯೪ಬೊಬ್ಬಿಲಿ ಸಿಂಹಂ ಬಾಲಕೃಷ್ಣತೆಲುಗು
೧೯೯೪ ಅಣ್ಣ ರಾಜಶೇಖರ್ತೆಲುಗು
೧೯೯೪ಪೊಲೀಸ್ ಬ್ರದರ್ಸ್ವಿನೋಧ್ ಕುಮಾರ್ತೆಲುಗು
೧೯೯೪ಶುಭ ಲಗ್ನಂ' ಜಗಪತಿ ಬಾಬುತೆಲುಗು
೧೯೯೪ಸಮರಂಸುಮನ್,ರಘುತೆಲುಗು
೧೯೯೫ಬಿಗ್ ಬಾಸ್ಚಿರಂಜೀವಿತೆಲುಗು
೧೯೯೫ಇಲ್ಲು ಪೆಲ್ಲಿನರೇಶ್ತೆಲುಗು
೧೯೯೫ಮಾತೋ ಪೆಟ್ಟುಕೋಕುಬಾಲಕೃಷ್ಣತೆಲುಗು
೧೯೯೫ದಸರಿ ಮಾಯಾ ಬಜಾರ್ ಅಕ್ಕಿನೇನಿ ನಾಗೇಶ್ವರ ರಾವ್ತೆಲುಗು
೧೯೯೫ ತೆಲುಗುವೀರಲೇವರ ಕೃಷ್ಣತೆಲುಗು
೧೯೯೫ ಪೋಕಿರಿ ರಾಜ ವೆಂಕಟೇಶ್ತೆಲುಗು
೧೯೯೫ ಘಟೋತ್ಕಚುಡು ಆಲಿತೆಲುಗುರೋಜಾ
೧೯೯೬ ವಜ್ರಂ ನಾಗಾರ್ಜುನ್ತೆಲುಗುಕೌಲಿ
೧೯೯೭ಪೆದ್ದಣ್ಣಯ್ಯ ಬಾಲಕೃಷ್ಣತೆಲುಗುಸೀತಾ
೧೯೯೭ ಅಡವಿಲೋ ಅಣ್ಣ ಮೋಹನ್ ಬಾಬುತೆಲುಗು
೧೯೯೭ ಅಣ್ಣಮಯ್ಯ ಮೋಹನ್ ಬಾಬುತೆಲುಗು
೧೯೯೮ಸ್ವರ್ನಕ್ತೆಲುಗು
೧೯೯೯ ಸುಲ್ತಾನ್ ಬಾಲಕೃಷ್ಣತೆಲುಗು
೨೦೦೦ಕ್ಷೇಮಂಗಾ ವೆಳ್ಳಿ ಲಾಭಂಗಾ ರಂಡಿ ಶ್ರೀಕಾಂತ್ತೆಲುಗು
೨೦೦೦ ಮೀ ಆಯ್ನ ಜಾಗ್ರತಾ ತೆಲುಗು
೨೦೦೦ ತಿರುಮಲ ತಿರುಪತಿ ವೆಂಕಟೇಶ ಶ್ರೀಕಾಂತ್ತೆಲುಗು
೨೦೦೦ಫ್ಯಾಮಿಲಿ ಸರ್ಕಸ್ಜಗಪತಿ ಬಾಬುತೆಲುಗು
೨೦೦೧ದುರ್ಘ ವೇಣುತೆಲುಗು
೨೦೦೮ ಸಮ್ಮಕ್ಕ ಸಾರಕ್ಕ ತೆಲುಗು
೨೦೧೦ಶಂಭೋ ಶಿವ ಶಂಭೋರವಿತೇಜತೆಲುಗುಗೃಹ ಸಚಿವ
೨೦೧೦ಗೋಲಿಮಾರ್ಗೋಪಿಚಂದ್ತೆಲುಗುಅರುಂಧತಿ
೨೦೧೧ ಪರಮವೀರ ಚಕ್ರ ಬಾಲಕೃಷ್ಣತೆಲುಗುಚಿತ್ರಕಲಾವಿದ
೨೦೧೧ಮೊಗುಡು ಗೋಪಿಚಂದ್ತೆಲುಗುರಾಜಕರಣಿ ಚಾಮುಂಡೇಶ್ವರಿ
೨೦೧೧ ಕೊಡಿಪುಂಜು ತನಿಷ್ತೆಲುಗುಸೀತಾರತ್ನಂ,ತನಿಷ್ ನ ತಾಯಿ
೨೦೧೧ವೀರಾರವಿ ತೇಜತೆಲುಗುರವಿ ತೇಜ ಅವರ ಸಾಕುತಾಯಿ
೨೦೧೧ಶ್ರೀ ರಾಮ ರಾಜ್ಯಂನಂದಮೂರಿ ಬಾಲಕೃಷ್ಣತೆಲುಗು/ತಮಿಳ್ಭೂದೇವಿ
೨೦೧೨ಲಕ್ಕಿಶ್ರೀಕಾಂತ್ತೆಲುಗು
೨೦೧೩ಪವಿತ್ರತೆಲುಗು
೨೦೧೩ಶ್ರೀ ಜಗದ್ಗುರು ಆದಿ ಶಂಕರಉಪೇಂದ್ರತೆಲುಗುಲಕ್ಷ್ಮಿ ದೇವಿ
೨೦೧೩ಕಮೀನಶ್ರಿಹರಿತೆಲುಗು
೨೦೧೩D/O ರಾಮಗೋಪಾಲ ವರ್ಮತೆಲುಗು
೨೦೧೪ದೂಸುಕೆಲ್ತ ವಿಷ್ಣು ಮಂಚುತೆಲುಗು

ತಮಿಳು ಚಿತ್ರಗಳು

[ಬದಲಾಯಿಸಿ]

ಮಲಯಾಲಮ್ ಚಿತ್ರಗಳು

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ಭಾಷೆ
೧೯೯೭ಗಂಗೋತ್ರಿನಂದನ ಮೆನನ್ಮಲಯಾಳಂ
೨೦೦೨ಮಲಯಾಳಿ ಮಾಮನು ವಣಕ್ಕಂ ಪಾರ್ವತಿಮಲಯಾಳಂ
೨೦೧೫ಜಮ್ನ ಪ್ಯಾರಿನೀಲಾಂಬಾರಿಮಲಯಾಳಂ

ಕನ್ನಡ ಚಿತ್ರಗಳು

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ
೧೯೯೩ಗಡಿಬಿಡಿ ಗಂಡ ನೀಲಾಂಬರಿ
೧೯೯೭ಕಲಾವಿಧ
೧೯೯೯ಪ್ರೇಮೋತ್ಸವ
೨೦೦೦ಸ್ವಾತಂತ್ರ ದಿನ
೨೦೦೧ಗ್ರಾಮ ದೇವತೆಪಾರ್ವತಿ
೨೦೦೧ಸುಂದರ ಕುಂಡ
೨೦೦೨ಪರ್ವಸುಧಾ
೨೦೦೪ಮೌರ್ಯ
೨೦೧೨ಶ್ರೀಚೌಡೇಶ್ವರಿ ದೇವಿ ಮಹಿಮೆ

ದೂರದರ್ಶನ

[ಬದಲಾಯಿಸಿ]
ವರ್ಷದಾರಾವಾಹಿ / ಕಾರ್ಯಕ್ರಮಪಾತ್ರಭಾಷೆಚಾನೆಲ್ಸೂಚನೆ
೨೦೦೨-೨೦೦೩ನದಿ ಎಂಗೆ ಪೋಗಿರದುಸಿಂಧುತಮಿಳುಸ್ಟಾರ್ ವಿಜಯ್ದಾರಾವಾಹಿ
೨೦೦೪ಉತ್ತರಾಯಣ ಕನ್ನಡಉದಯಾ ಟಿವಿ
೨೦೧೦-೨೦೧೨ಮಾಡ್ರನ್ ಮಹಾಲಕ್ಷ್ಮಿಕಾರ್ಯಕ್ರಮ ನಿರ್ವಹಣೆತೆಲುಗುಮಾ ಟಿವಿ
೨೦೧೩ಜಬರ್ದಸ್ತ್ತೀರ್ಪುಗಾರ್ಥಿತೆಲುಗುಈ ಟಿವಿಸಾಪ್ತಾಹಿಕ
೨೦೧೪ಎಕ್ಸ್ಟ್ರಾ ಜಬರ್ದಸ್ತ್ತೀರ್ಪುಗಾರ್ಥಿತೆಲುಗುಈ ಟಿವಿಸಾಪ್ತಾಹಿಕ
೨೦೧೪ಲಕ್ಕಾ ಕಿಕ್ಕಾಕಾರ್ಯಕ್ರಮ ನಿರ್ವಹಣೆತಮಿಳುಜೀ ತಮಿಳು
೨೦೧೪-೨೦೧೫ರೇಸ್ಕಾರ್ಯಕ್ರಮ ನಿರ್ವಹಣೆತೆಲುಗುಜೀ ತೆಲುಗು

ಉಲ್ಲೇಖಗಳು

[ಬದಲಾಯಿಸಿ]