ಸದಸ್ಯ:CHETU 301/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೇಡರ ದಾಸಿಮಯ್ಯ[ಬದಲಾಯಿಸಿ]

ಜೇಡರ ದಾಸಿಮಯ್ಯರು ಗುಲ್ಬರ್ಗ ಜಿಲ್ಲೆಯ ಮುದನೂರಿನವರು. ಆದ್ಯ ವಚನಕಾರರೆಂದು ಪ್ರಸಿದ್ಧರಾಗಿದ್ದಾರೆ. ಇವರ ಕಾಲ ಸು.೧೦೧೫-೧೦೪೨. ಬಟ್ಟೆ ನೇಯುವ ವೃತ್ತಿ ಇವರದಾದ್ದ ರಿಂದ ಇವರಿಗೆ ಜೇಡರ ಎಂಬ ವಿಶೇಶಣ ಬಂದಿದೆ. ಜೇಡ- ಜಾಡ ಎಂದರೆ ನೇಯ್ಗೆಯವರು ಎಂದರ್ಥ. ಮುದನೂರಿನ ದೈವವಾದ ರಾಮನಾಥನ ಭಕ್ತನಾದ್ದರಿಂದ ಅದೇ ಹೆಸರನ್ನು ತಮ್ಮ ವಚನದ್ಗಳ ಅಂಕಿತವಾಗಿ ಬಳಸಿಕೊಂಡಿದ್ದಾರೆ. ಪತ್ನಿಯ ಹೆಸರು ದುಗ್ಗಳೆ. ಆಧ್ಯಾತ್ಮ ಸಾಧನೆಯಲ್ಲೂ ಇವರಿಬ್ಬರೂ ಜೊತೆಯಾಗಿ ನಡೆದವರು. ಚಾಲುಕ್ಯ ಜಯಸಿಂಹನ ಪತ್ನಿ ಸುಗ್ಗಲಾದೇವಿ ಇವರ ಶಿಶ್ಯೆಯಾಗಿದ್ದಳು.