ಸದಸ್ಯ:Bscsagar/sandbox

ವಿಕಿಪೀಡಿಯ ಇಂದ
Jump to navigation Jump to search

ಹೊಸ ಖಾತೆ[ಬದಲಾಯಿಸಿ]

ಭಾರತದ ಅರ್ಥವ್ಯವಸ್ಥೆ[ಬದಲಾಯಿಸಿ]

 • ೨೦೧೪-ಯೂರಿಯಾ ಅಮದು:
 • ೨೦೧೩-೧೪ ೬.೫೬ಲಕ್ಷ ಟನ್ ಅಮದು ;೨೦೧೪-ಮೇ ೬೧೪.೯೦,ಲ.ಟನ್ ಅಮದು;
 • ಯೂರಿಯಾದೇಶೀಯ ಉತ್ಪಅದನೆ ೨.೨೦ ಕೋಟಿ ಟನ್, ಬೇಡಿಕೆ ೩ ಕೋಟಿಟನ್; ಉಳಿದುದನ್ನು ಅಮದು ಮಾಡಿಕೊಳ್ಳಬೇಕು.ಉಳಿದ ೮೦ ಲ.ಟನ್ ಅಮದು
 • ಇಂಡಿಯನ್ ಪೊಟ್ಯಷ‍್` ಮತ್ತು ಇತರೆ ೨ ಕಂಪನಿ ಅಮದು ಮಾಡಿಕೊಳ್ಳುವುದು.
 • ಇಲ್ಲಿ ಮಾರಾಟ ದರ ರೂ. ೫೩೬೦/- ಸಬ್ಸಿಡಿದರ.- ಕೊಟ್ಟು. ಮೂಲ ಬೆಲೆ?

ಶಬ್ದಮಣಿದರ್ಪಣ[ಬದಲಾಯಿಸಿ]

ಶಬ್ದಮಣಿದರ್ಪಣ-ನಲ್ನುಡಿಗನ್ನಡಿ ಶ್ರೀ ಕೇಶೀರಾಜರ ಶಬ್ದಮಣಿದರ್ಪಣಕ್ಕೆ ೯೮೫ ಪುಟದ ವಿಸ್ತೃತವಾದ ವ್ಯಾಖ್ಯಾನವನ್ನು, ಬೆಂಗಳೂರು ಸರ್ಕಾರಿ ವಾಣಿವಲಾಸ ಜೂನಿಯರ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ ಶ್ರೀ ಭುವನಹಳ್ಳಿ ಪದ್ಮನಾಭಶರ್ಮರು ೧೯೭೫/1975 ರಲ್ಲಿ ಬರೆದು ೧೯೭೬ ರಲ್ಲಿ ಪ್ರಕಟಿಸಿದ್ದಾರೆ ಅದನ್ನು ಬಹಳಷ್ಟು ವಿದ್ವಾಂಸರು ಗಮನಿಸಿದಂತೆ ಕಾಣುವುದಿಲ್ಲ.. (ಅವರೇ ಶ್ರೀಮದ್ ಭಟ್ಟಾಕಲಂಕದೇವ ವಿರಚತ ಕರ್ನಾಟಕ ಶಬ್ದಾನುಶಾಸನಕ್ಕೆ ವ್ಯಾಖ್ಯಾನ ಬರೆದು, ೧೯೬೭ರಲ್ಲಿ ಪ್ರಕಟಿಸಿದ್ದಾರೆ) ಅದರ ಬಗ್ಗೆ ಅಂದಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಜಿ.ನಾರಾಯಣ , (ಮಾಜಿ ಬೆಂಗಳೂರು ಮೇಯರ್) ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು,ಅದೇ ಗ್ರಂಥದಲ್ಲಿ ಬರೆದ, ಅವರ ಅಭಿಪ್ರಾಯವನ್ನು ನೋಡಿದರೆ ಗ್ರಂಥದ ಪರಿಚಯ ಸಾಮಾನ್ಯ ಮಟ್ಟಗೆ ತಿಳಿಯುವುದು.

ಅಂದಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಶ್ರೀ ಜಿ.ನಾರಾಯಣ ಅವರ ಅಭಿಪ್ರಾಯ ---ಹಳಗನ್ನಡದ ಅಧಿಕೃತ ಸ್ವಭಾವವನ್ನು ಗುರುತಿಸಬೇಕಾದರೆ ಕೇಶಿರಾಜರ ಸಹಾಯವಿಲ್ಲದೆ ಆಗುವುದಿಲ್ಲ.---ಈ ಕಾರಣದಿಂದಲೇ ಭಾಷಾವಿದ್ವಾಂಸರು ಶಬ್ದಮಣಿದರ್ಪಣವನ್ನು ಅಧಿಕೃತ ಗ್ರಂಥವಾಗಿ ಉಳಿಸಿಕೊಂಡು ಬಂದಿದ್ದಾರೆ.---ಇದರ ಇನ್ನೂ ಹಲವಾರು ಪ್ರಕಟಣೆಗಳು ಈಗಾಗಲೇಬಂದಿವೆ. --- ಶ್ರೀ ಭುವನಹಳ್ಳಿ ಪದ್ಮನಾಭಶರ್ಮರು ಕನ್ನಡ ಪಂಡಿತರು, ವಿದ್ವಾಂಸರು, ಸಂಸ್ಕೃತಾದಿ ಹಲವು ಭಾಷೆಗಳನ್ನು ಬಲ್ಲವರು, ಅವರು ತಮ್ಮದೇ ಆದ ನಲ್ನುಡಿಗನ್ನಡಿ ಎಂಬ ವ್ಯಾಖ್ಯಾನ ಸಹಿತವಾಗಿ ಶಬ್ದಮಣಿದರ್ಪಣದ ಹೊಸ ಆವೃತ್ತಿಯನ್ನು ತಂದಿದ್ದಾರೆ . ಅವರು ಈ ವ್ಯಾಕರಣದ ಅಭ್ಯಾಸ ಎಲ್ಲರಿಗೂ ಸುಲಭವಾಗಲಿ ಎಂದು ಸರಳವಾಗಿ ವಿಷಯಗಳನ್ನು ನಿರೂಪಿಸಿ, ಪ್ರತಿ ಸೂತ್ರಕ್ಕೆ ಪದವಿಭಾಗ, ಪದಾನ್ವಯ, ಅನ್ವಾನುಕ್ರಮವಾದ ಅರ್ಥ, ಕೇಶಿರಾಜರ ವೃತ್ತಿ, ಅದಕ್ಕೆ ಕನ್ನಡದಲ್ಲಿ ವಿವರಣಾತ್ಮಕವಾದ ಅರ್ಥ, ನಿಟ್ಟೂರು ನಂಜಯ್ಯನ ವ್ಯಾಖ್ಯಾನ, ಉದಾಹರಣೆಗಳು, ಭಾಷಾಭೂಷಣ ಇತ್ಯಾದಿ ಇತರ ವ್ಯಾಕರಣಗಳ ಸೂತ್ರಗಳ ಅನ್ವಯ, ಮತ್ತು ಕಠಿಣ ಶಬ್ದಗಳ ಅರ್ಥ, ಮತ್ತು ವಿಶೇಷ ವಿಷಯಗಳು,(ಕೊನೆಯಲ್ಲಿ ವಿಷಯ ಸೂಚಿ-ಪರಿಶಿಷ್ಟ) ಹೀಗೆ ವಿವರಣೆ --ನೀಡಿದ್ದಾರೆ . ಭೂಮಿಕೆ (ಪೀಠಿಕೆ) ಭಾಗದಲ್ಲಿ ಭಾಷೆ ಮತ್ತು-- ಅದರ ವಿಷಯಗಳ ವ್ಯಾಕರಣ ಅಭ್ಯಾಸಕ್ಕೆ ಬೇಕಾದ ಎಲ್ಲಾ ವಿಚಾರಗಳನ್ನೂ ಸಂಗ್ರಹಿಸಿ ಕೊಟ್ಟಿದ್ದಾರೆ ಇದೊಂದು ಉಪಯುಕ್ತ ಪ್ರಕಟಣೆ.:ಅಭಿಪ್ರಾಯ: (ಶ್ರೀ) ಜಿ. ನಾರಾಯಣ , (ಮಾಜಿ ಬೆಂಗಳೂರು ಮೇಯರ್) ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ ಬೆಂಗಳೂರು ; (೧೯೭೫ )
  • (ಕನ್ನಡ ವ್ಯಾಕರಣಕ್ಕೆ ಕೊಂಡಿಯಾದ ಅದರ ಉಪಪುಟವಾದ ಈ ಪುಟವನ್ನು ಅಳಿಸಲು ಹಾಕಿಉವುದು ವಿಷಾದನೀಯ- ಆ ಕಾರಣ ಇದರ ಚರ್ಚೆಯನ್ನು ಕನ್ನಡ ವ್ಯಾಕರಣದ ಪುಟಕ್ಕೆ ಸ್ಥಳಾಂತರಿಸಬೇಕಾಗುವುದು)(ಅಥವಾ ಅರಳಿಕಟ್ಟೆಗೆ ಹಾಕೋಣವೇ?)ನಕಲು ಮಾಡಿಟ್ಟುಕೊಂಡಿರುತ್ತೇನೆ. ಕ್ಷಮಿಸಿ- ನನ್ನಮೇಲಿನಸಿಟ್ಟು ವಿಕಿಪುಟದಮೇಲೆ ಆಘಾತವಾಗುತ್ತಿರುವುದು ವಿಷಾದನೀಯ. Bschandrasgr (ಚರ್ಚೆ) ೧೪:೪೬, ೧೭ ಮೇ ೨೦೧೯ (UTC)

ತತ್ಸಮ ತದ್ಭವ[ಬದಲಾಯಿಸಿ]

+List of Latin words with English derivatives

 • ದಯವಿಟ್ಟು ಗಮನಿಸಿ ವಿಕಿಪೀಡಿಯಾದಲ್ಲಿ ಯಾವುದೇ ವಿಷಯಕ್ಕೆ ಸಂಬಂಧಪಟ್ಟ ಮಾಹಿತಿ ಪಟ್ಟಿಗಳಿಗೆ ಅವಕಾಶವಿದೆ. ಮೇಲಿನ ಒಂದು ಉದಾಹರಣೆ ಕೊಟ್ಟಿದ್ದೇನೆ ಈ ಬಗೆಯ ನೂರಾರು ಉದಾಹರಣೆ ಕೊಡಬಹುದು. ವಿಕಿಪೀಡಿಯಾದಲ್ಲಿ ಕೇವಲ ಪ್ರಬಂಧ ಮಾದರಿಯ ಲೇಖನಗಳಷ್ಟೇ ಅಲ್ಲದೆ, ಯಾವುದೇ ಮಾಹಿತಿಯ ವ್ಯವಸ್ಥಿತ ನಿರೂಪಣೆ, ಪಟ್ಟಿ, ವಿವರಗಳಿಗೆ ಅವಕಾಶವಿದೆ. ವಿಕಿಪೀಡಿಯಾ ಲೇಖನ ಮಾತ್ರಕ್ಕೆ ಸೀಮಿತವಲ್ಲ, ಮಾಹಿತಿಗಳ ಕಣಜ - ದಯವಿಟ್ಟು ತಿಳಿಯಿರಿ. ತತ್ಸಮ ತದ್ಭವಗಳ ಪಟ್ಟಿಗೆ ಅಂಕಣ ಹಾಕಿ ವಿವರಣೆ ಇದ್ದರೆ, ಅದನ್ನು ಕೊಟ್ಟರೆ, ಚಂದ ಕಾಣುವುದು. ಅವರಿಗೆ ಅದರ ಪರಿಚಯ ಇಲ್ಲದಿದ್ದರೆ ಉಳಿದವರು ಮಾಡಬಹುದು. ರದ್ದು ಮಾಡುವುದಲ್ಲ. ವಿಕಿಯ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದೆ ಅನೇಕ ಮಾಹಿತಿಗಳನ್ನು ರದ್ದು ಮಾಡಲಾಗಿದೆ. ಅದರಿಂದ ಅನೇಕ ಸಂಪಾದಕರು ವಿಕಿಯನ್ನು ತೊರೆದು ಹೋಗಿದ್ದಾರೆ. ಆ ಸಂಪಾದನೆಗಳಲ್ಲಿ - ಅದರಲ್ಲಿ ದೋಷ ಕಂಡರೆ ಉಳಿದವರು ಅದನ್ನು ತಿದ್ದಿ ಬೆಳಸಿ ಸರಿಪಡಿಸಬೇಕು. ಒಬ್ಬರೇ ಲೇಖನವನ್ನು ಪೂರ್ನ ಗೊಳಿಸಬೇಕೆಂಬ ನಿಯಮಿವಿಲ್ಲ. ತಿಳಿದವರು ತತ್ಸಮ ತದ್ಭವ ಪಟ್ಟಿಗೆ ಅಗತ್ಯ ವಿವರಣೆ ಮತ್ತು ಅಂಕನ ಹಾಕಿ ಅಭಿವೃದ್ಧಿಪಡಿಸಲಿ.ರದ್ದು ಮಾಡುವ ಅಗತ್ಯ ಇಲ್ಲ. Bschandrasgr (ಚರ್ಚೆ) ೦೪:೨೨, ೧೧ ಮೇ ೨೦೧೯ (UTC)
ಮಾನ್ಯ @Bschandrasgr:,
 • ಈ ತರಹದ ಪಟ್ಟಿಗಳು ವಿಕಿಪೀಡಿಯ ಲೇಖನದಲ್ಲಿ ಇರಬಾರದು. ಈ ಲೇಖನ ತತ್ಸಮ ತದ್ಭವ ಏನು? ಅದು ಎಲ್ಲಿ ಬಳಕೆ ಮಾಡುತ್ತಾರೆ? ಯಾಕೆ ಬಳಕೆ ಮಾಡುತ್ತಾರೆ ಎಂಬುದನ್ನು ಏನೂ ಹೇಳುವುದಿಲ್ಲ. ಹಾಗಾಗಿ ಲೇಖನ ಪೂರ್ಣವಾಗಿಲ್ಲ ಎಂದುಬು ನನ್ನ ಅಭಿಪ್ರಾಯ. ವಿಕಿಪೀಡಿಯ ಇರುವುದು ಒಂದು ವಿಷಯದ ಬಗ್ಗೆ ಅತೀ ಉತ್ತಮವಾದ ಮಾಹಿತಿ ನೀಡುವುದಕ್ಕೆ. ಈ ತರಹದ ಲೇಖನಗಳು ಪೂರ್ಣ ಆಗಿಲ್ಲದೇ ಇದ್ದರೆ ಅದು ವಿಕಿಪೀಡಿಯ:ಕರಡು ಪುಟದಲ್ಲಿ ಇರಬೇಕು. ದಯವಿಟ್ಟು ಇದನ್ನು ಕರಡು ಪುಟಕ್ಕೆ ಸ್ಥಳಾಂತರಿಸಬೇಕಾಗಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೦೭:೦೪, ೧೧ ಮೇ ೨೦೧೯ (UTC)
 • ತತ್ಸಮ ತದ್ಭವ‎;ಈ ತರಹದ ಪಟ್ಟಿಗಳು ವಿಕಿಪೀಡಿಯ ಲೇಖನದಲ್ಲಿ ಇರಬಾರದು ಎಂದು ನಿಮಗೆ ಯಾರು ಹೇಳಿದರು? - ಮೇಲೆ ಇಂಗ್ಲಿಷ್‍ನ ಅದೇ ಬಗೆಯ 'ತತ್ಸಮ ತದ್ಭವ'ದ ಲ್ಯಾಟಿನ್ ಪಟ್ಟಿಯನ್ನೂ ಉದಾಹರರಣೆಗೆ ಕೊಟ್ಟರೂ ಅದನ್ನು ನೋಡದೆ ಬರೆದಿದ್ದೀರಿ - ನೀವು ವಿಕಿಪೀಡಿಯಾ ತಜ್ಞರಾದರೆ ಆ ಬಗೆಯ ನೂರಾರು ಪಟ್ಟಿಗಳನ್ನು ಮೊದಲು ವಜಾ ಮಾಡಿಸಿ. ಅಸೆಂಬ್ಲಿ ಸದಸ್ಯರ ಪಟ್ಟಿಯೂ ಅದರ ಜೊತೆ ಸೇರುವುದು, ಎಲ್ಲ ಪ್ರಶಸ್ತಿಗಳ ಪಟ್ಟಿಯನ್ನೂ ವಜಾ ಮಾಡಿಸಿ. ನಿಮ್ಮದು ಮೊದಲಿಂದಲೂ ಮೊಂಡು ವಾದ ಮತ್ತು ಉದಾಹರಣೆ ಕೊಟ್ಟರೂ ಒಪ್ಪದ ಮೊಂಡು ತರ್ಕ. ವಿಕಿಯಲ್ಲಿ ಪಟ್ಟಿಗಳು ಇರಬಾರದೆ?. ಈ ಇಂಗ್ಲಿಷನಲ್ಲಿ ಏಕೆ ಮಾಡಿದ್ದಾರೆ? ಅಲ್ಲಿ ಸಾವಿರಾರು ಪಟ್ಟಿಗಳಿವೆ. ಅದನ್ನು ತಿಳಿಸಿದರೂ ಮೊಂಡುತನ ಏಕೆ? ನಿಮ್ಮ ಅಜ್ಞಾನಕ್ಕೆ ಕನ್ನಡ-ವಿಕಿಬಲಿಯಾಗಿದೆ. ಉದಾಹರಣೆ ಕೊಟ್ಟರೂ ನೊಡದೆ ಮಾಡುವ ಮೊಂಡುವಾದಕ್ಕೆ ಏನು ಹೇಳಲಿ?; ಮೊದಲು ಅದಕ್ಕೆ ಉತ್ತರಿಸಿ, ಮತ್ತು ಎಲ್ಲ ವಿಷಯದ ಪಟ್ಟಿಗಳನ್ನು ಕನ್ನಡ - ಇಂಗ್ಲಿಷ್‍ನಲ್ಲಿ ರದ್ದುಪಡಿಸಿ ನಂತರ ನನಗೆ ಹೇಳಿ- ಸರಿಯಾದ ಆಧಾರ ಸಹಿತ ಉತ್ತರ ಕೊಡದೆ ಹಾಕಿದ ರದ್ದು ನೋಟಿಸನ್ನು ತೆಯುತ್ತೇನೆ. ನನ್ನ ವಾದಕ್ಕೆ ಮೇಲೆ ಆಧಾರವನ್ನು ಕೊಟ್ಟಿದ್ದೇನೆ. ಅದನ್ನು ಮತ್ತೊಮ್ಮೆ ಇಲ್ಲಿ ಹಾಕಿದ್ದೇನೆ - ನೋಡಿ. List of Latin words with English derivatives ತಮ್ಮವ Bschandrasgr (ಚರ್ಚೆ) ೦೯:೦೭, ೧೧ ಮೇ ೨೦೧೯ (UTC)
ನಿಮಗೆ ಯಾರೊಬ್ಬರಾದರೂ ಹೇಳುವುದು ತಿಳಿಯುತ್ತದೋ ಇಲ್ಲವೋ ಗೊತ್ತಿಲ್ಲ. ನೀವು ಕೊಟ್ಟ ಇಂಗ್ಲೀಶ್ ಪುಟದಲ್ಲಿ ಎಷ್ಟು ಮಾಹಿತಿ ಇದೆ ಮತ್ತು ಉಪಯುಕ್ತವಾಗಿದೆ ಅಂತ ನೋಡಿ. ಇನ್ನು ಈ ತರಹದ ಪುಟ ಇರಬಾರದು ಅಂದರೆ ಈ ವಿಷಯದ ಪುಟ ಇರಬಾರದು ಅಂತ ಅಲ್ಲ. ಈ ತರಹ ಎಂತದೂ ಸರಿಯಾದ ಮಾಹಿತಿ ಇಲ್ಲದ ನಿಷ್ಪ್ರಯೋಜಕ ಪುಟಗಳನ್ನು ಪ್ರಕಟಿಸಬಾರದು ಅಂತ ಅರ್ಥ. ಬೇರೆಯವರು ವಿಸ್ತರಿಸಬೇಕು, ವಿಸ್ತರಿಸುತ್ತಾರೆ ಅಂತ ಹೀಗೆ ಅರೆಬರೆ ಪುಟಗಳನ್ನ ಪ್ರಕಟಿಸುವಂತಿಲ್ಲ. ಇದನ್ನು ಕರಡು ಪುಟದಲ್ಲಿ ಇಡಬೇಕು. ಅಥವಾ ಆ ಲೇಖಕರಿಗೇ ವಿಸ್ತರಿಸುವ ಬಯಕೆ ಇದ್ದಲ್ಲಿ ಮೊದಲು ತಮ್ಮ ಪ್ರಯೋಗಪುಟದಲ್ಲಿ ಇಟ್ತುಕೊಂಡು ಒಂದಷ್ಟು ಮೂಲಭೂತ ಮಾಹಿತಿಗಳನ್ನಾದರೂ ಸೇರಿಸಿ ನಂತರ ಪ್ರಕಟಿಸಬೇಕು. ಈ ತರಹದ ಅಸಂಬದ್ದತೆ ಮತ್ತು ಅದಕ್ಕೆ ಬೆಂಬಲಿಸುವ ನಿಮ್ಮಂತಹವರಿಂದ ಕನ್ನಡ ವಿಕಿ ಗುಣಮಟ್ಟ ಕುಸಿಯುತ್ತಿದೆ. ಯಾವೊಂದು ವಿಷಯದ ಬಗ್ಗೆಯೂ ಸರಿಯಾದ ಪೂರ್ಣ ಮಾಹಿತಿ ಇರುವುದಿಲ್ಲ ಎಂಬ ಸಾರ್ವಜನಿಕ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಯಾರೂ ಕನ್ನಡ ವಿಕಿಯನ್ನು ಮಾಹಿತಿಗಾಗಿ ಬಳಸುತ್ತಿಲ್ಲ. --ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೬:೨೮, ೧೧ ಮೇ ೨೦೧೯ (UTC)

ಉತ್ತರ[ಬದಲಾಯಿಸಿ]

 • ಉತ್ತರ- ಅದನ್ನು (<ಇಂಗ್ಲಿಷ್ ಪಟ್ಟಿ ಪುಟ) ಒಬ್ಬರೇ ಅಭಿವೃದ್ಧಿ ಪಡಿಸಿದ್ದಲ್ಲ, ೨೦-೩೦ ಜನ ಸೇರಿ ಅಭಿವೃದ್ಧಿಪಡಿಸಿದ್ದಾರೆ, ನೀವೂ ಇದನ್ನು ಅದೇ ರೀತಿ ಅಭಿವೃದ್ಧಿಪಡಿಸಲು ಸಹಾಯ ಮಾಡಬಹುದು. ಇಂಗ್ಲಿಷ್ ಲೇಖನದ ಮಟ್ಟಕ್ಕೆ ಕನ್ನಡದ ಸಾವಿರಾರು ಪುಟಗಳು ಬರುವಿದಿಲ್ಲ. ಅವನ್ನಲ್ಲಾ ರದ್ದು ಮಾಡವಿರಾ? ಒಂದು ಮಾಹಿತಿ ಪುಟವನ್ನು ಒಬ್ಬರು ಆರಂಭಿಸಿದರೆ ಇಂಗ್ಲಿಷ್ ವಿಭಾಗದಲ್ಲಿ ನೂರಾರು ಜನರು ಅದಕ್ಕೆ ಸಹಾಯ ಹಸ್ತ ನೀಡುತ್ತಾರೆ. ನೀವು ಅದನ್ನು ಮಾಡುವುದು ಬಿಟ್ಟು ಕತ್ತರಿಹಾಕುವ- ರದ್ದು ಪಡಿಸುವ ಯೊಚನೆಯನ್ನೇ ಮಾಡತ್ತೀರಿ. ನಾನು ಮೊದಲಿಂದಲೂ ನಿಮಗೆ ಈ ಕಲ್ಲುಹೊಡೆಯುವ ಕೆಲಸಕ್ಕಿಂತ, ಅಭಿವೃದ್ಧಿಂಅಡುವ ಪೂರಕ ಕೆಲಸ ಮಾಡಿ ಎಂದರೆ - ನೀವು ಯಾವ ಚುಟಕವನ್ನೂ ವಿಸ್ತರಿಸದೆ - ವಿಷಯ ಪೂರಣ ಮಾಡದೆ ಕೇವಲ ಹೊಸಬರಿಗೆ ಕಲಿಯುವವರಿಗೆ ನಿರುತ್ಸಾಹ ಮೂಡಿಸಿ ಒದ್ದು ಓಡಿಸುತ್ತಿದ್ದೀರಿ. ಈಗ ತಮ್ಮಲ್ಲಿ ನನ್ನ ಕೋರಿಕೆ- ಈ ಲೇಖನವನ್ನು, ಅದೇ ಇಂಗ್ಲಿಷ ಲೇಖನದಂತೆ ನೀವೇ ಅಬಿವೃದ್ಧಿಪಡಿಸಿ ಕನ್ನಡ ವಿಕೆ ಬೆಳೆಸಲು ಸಹಾಯ ಮಾಡಲು ಮತ್ತು ಮಾರ್ಗದರ್ಶನ ಮಾಡಲು ಕೋರುತ್ತೇನೆ. 'ಇದರ ಹೊಸ ಸಂಪಾದಕರಿಗೆ' "ಉಲ್ಲೇಖ, ವರ್ಗ, ವಿವರಣೆ, ಎಲ್ಲಾ ಹೊಸದು'. ನನ್ನ ಕೈಲಾದಷ್ಟು ಸರಿಪಡಿಸಿದ್ದೇನೆ. "ಮೂಲ ಸಂಪಾದಕರಿಗೆ ಅಂಕಣ ಹಾಕುವುದು ತಿಳಿದಿರಲಾರದು". ವಿಶೇಷ ತಜ್ಞರಾದ ನೀವು ದಯವಿಟ್ಟು ಈ ಪಟ್ಟಿಗೆ ಅಂಕಣ ಹಾಕಿ ಸಂಸ್ಕೃತ - ಕನ್ನಡ ಬದಗಳ ಉಪಯೋಗದ ಉದಾಹರಣೆ ಕೊಟ್ಟು ಅವರಿಗೆ ಮಾರ್ಗ ದರ್ಶನ ಮಾಡಲು ಕೋರುತ್ತೇನೆ. ಅದಿಲ್ಲದಿದ್ದರೆ ನಿಮ್ಮ ತಜ್ಞತೆ - "ತರಬೇತಿದಾರರ ತರಬೇತಿ ಪಡದಿರುವುದು" - ಹಣ- ಮತ್ತು ಕಾಲ ವ್ಯರ್ಥಕ್ಕೆ ಎಂದು ಸವಿನಯ ಪೂರ್ವಕ ಹೇಳುತ್ತೇನೆ. ಕಲಿತ ವಿದ್ಯೆ ನಾಯಿಯ ಮೊಲೆಯ ಹಾಲಿನಂತೆ ತನ್ನವರಿಗೆ ಮಾತ್ರಾ ಉಪಯೊಗವಾಗಿ ಅನ್ಯರಿಗೆ ಸಿಗದಿದ್ದರೆ ಏನು ಪ್ರಯೋಜನ. ನಾನು ನಿಮ್ಮಷ್ಟು ತಜ್ಞನಲ್ಲ ಸ್ವಯಂಶಿಕ್ಷಣ ಪಡೆದವ. ನೀವು ವಿಕಿಯಲ್ಲಿ ಮೇಧಾವಿಗಳು ಎಂದುಕೊಂಡವರು, ಏಕೆ ಈ ಲೇಖನ ಅಭಿವೃದ್ಧಿಪಡಿಸಿ ನಮ್ಮಂತಹ ಬಡಪಾಯಿಗಳಿಗೆ ಮಾರ್ಗದರ್ಶನ ನೀಡಬಾರದು? ಅದಿಲ್ಲದ ಉಪದೇಶ ವ್ಯರ್ಥ. ಒಂದು ಇಂಗ್ಲಿಷ ಊದ್ದರಣ: "ಜನರು ಉಪದೇಶವನ್ನು ಕೊಟ್ಟಷ್ಟು ಧಾರಾಳವಾಗಿ ಮತ್ತೆ ಏನನ್ನೂ ಕೊಡಲಾರರು", ಅದಕ್ಕೆ ನೀವು ಉದಾಹರಣೆ ಆಗಬಾರದು ಎಂದು ಬಯಸುತ್ತೇನೆ. ತಮ್ಮವ:Bschandrasgr (ಚರ್ಚೆ) ೧೭:೨೨, ೧೧ ಮೇ ೨೦೧೯ (UTC)
ಅಭಿವೃದ್ಧಿಪಡಿಸಬಾರದು ಅಂತ ಯಾರೂ ಹೇಳಿಲ್ಲ. ಆದರೆ ಮೊದಲ ಬಾರಿ ಹಾಕುವಾಗ ಆ ವಿಷಯದ ಬಗ್ಗೆ ಒಂದಿಷ್ಟು ಮೂಲಭೂತ ಮಾಹಿತಿಗಳನ್ನುಳ್ಳ ಪುಟವನ್ನು ಪ್ರಕಟಿಸಬೇಕು. ಆಮೇಲೆ ಅದನ್ನು ವಿಸ್ತರಿಸಬಹುದು. ಆ ವಿಷಯದ ಬಗ್ಗೆ ಗೊತ್ತಿಲ್ಲದಿದ್ದರೆ ಪ್ರಕಟಿಸಲು ಹೋಗಬಾರದು. ಎಲ್ಲೋ ನೋಡಿಕೊಂಡು ಕಾಪಿ ಮಾಡಿ ಒಂದು ಪಟ್ಟಿ ಹಾಕಿದರೆ ಆಗುವುದಿಲ್ಲ. ವಿಕಿಪೀಡಿಯಾದಲ್ಲಿ ಪುಟರಚಿಸುವಾಗ ಮೊದಲ ಹಂತವೆಂದರೆ ಮಾಹಿತಿ ಸಂಗ್ರಹಣೆ. ಅನಂತರ ಅದನ್ನು ವ್ಯವಸ್ಥಿತವಾಗಿ ಪ್ರಸ್ತುತಪಡಿಸುವುದು. ಆಮೇಲೆ ಅಗತ್ಯವಿದ್ದಲ್ಲಿ ವಿಸ್ತರಿಸುವುದು. ಪತ್ರಿಕೆಗಳಿಂದ ಕಾಪಿಪೇಸ್ಟ್ ಮಾಡಿ, ಪುಸ್ತಕಗಳಿಂದ ಕಾಪಿಹೊಡೆದು ಅರೆಬರೆ ಮಾಹಿತಿ, ಕಾಪಿರೈಟ್ ಹೊಂದಿದ ಮಾಹಿತಿ, ಅಪ್ರಸ್ತುತ ವಿವರಗಳು, ಒಂದು ಫಾರ್ಮ್ಯಾಟ್ ಇಲ್ಲದ ಲೇಖನ, ವಿಶ್ವಕೋಶ ಶೈಲಿಯಲ್ಲಿಲ್ಲದ ವರದಿ ರೂಪದ ಮಾಹಿತಿಗಳು ಇದನ್ನೇ ಮಾಡುತ್ತಾ ಹೋದಲ್ಲಿ ಗುಣಮಟ್ಟದ ಬಗ್ಗೆ ತಿಳಿಯುವುದಾದರೂ ಹೇಗೆ?! ಬೇರೆಯವರು ಹೇಳಿದಾಗ ಅರ್ಥ ಮಾಡಿಕೊಳ್ಳುವ ಮನಃಸ್ಥಿತಿಯೂ ಇರದಿದ್ದಲ್ಲಿ ಯಾರೂ ಏನೂ ಮಾಡಲಾಗುವುದಿಲ್ಲ. ವಂದನೆಗಳು --ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೫:೦೯, ೧೨ ಮೇ ೨೦೧೯ (UTC)
 • ಉದಾಹರಣೆ:ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು-- ಪಟ್ಟಿಯಂಥ ಲೇಖನವನ್ನು ವಿಕಿಪೀಡಿಯಾಕ್ಕೆ ಹಾಕ ಬಾರದೆಂದವರು 'ಮಾನ್ಯ ಗೊಪಾಲಕೃಷ್ಣ ಅವರು' ನೀವು ಅವರಗೆ ಬೆಂಬಲ-ಆದರೆ ನಿಮ್ಮ ನೆಡವಳಿಕೆ ತದ್ವಿರುದ್ಧ- ಮೊಂಡು ವಾದ. ಆದರೆ ಈ ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ಎಂಬುದೂ ಬರಿಯ ಪಟ್ಟಿ. ಆ ಪಟ್ಟಿಯಲ್ಲಿ ಎಲ್ಲಿಯೂ ಒಂದು ಆಧಾರವಿಲ್ಲ. ಅನೇಕೆ ಹೆಸರು ಕೆಂಪು ಅಕ್ಷರದಲ್ಲಿದೆ. ಅದರಲ್ಲಿ ವಿಕಿಪೀಡಿಯಾಕ್ಕೆ ವಿವರಣೆ ಏನೂ ಇಲ್ಲದ ನೂರಾರು ಹೆಸರು ಸೇರಸಿದ್ದೀರಿ ಇಲ್ಲವೇ ಸಮರ್ಥಿಸುತ್ತಿದ್ದೀರಿ.
 • ಕೆಂಪ ಅಕ್ಷರಗಳಲ್ಲಿರವ ವ್ಯಕ್ತಿಗಳು ಪ್ರಸಿದ್ಧರು ಎನ್ನುವುದಕ್ಕ ಆಧಾರವೇನು?? ನೀವು ಹೇಳುವುದು ಒಂದು ಮಾಡುವುದು ಅದಕ್ಕೆ ತದ್ವಿರಿದ್ಧ. ನೀವು ಆ ಪುಟ ಸಂಪಾದನೆ ಮಾಡುವಾಗ ನಿಮ್ಮ ತಿಳುವಳಿಕೆ ಎಲ್ಲಿಗೆ ಹೋಗಿತ್ತು ಎಂದು ಕೇಳಬೇಕಾಗುತ್ತದೆ. ಒಬ್ಬ ಹೊಸಬ ತಪ್ಪು ಮಾಡಿದರೆ ತಿದ್ದಿ ಸರಪಡಿಸಬೇಕಾದ್ಧು ನ್ಯಾಯ. ಆದರೆ "ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು", ಎಂಬ ಪಟ್ಟಿಯಲ್ಲಿ ಮಾನ್ಯ ಗೊಪಾಲಕೃಷ್ಣ ಅವರಿಗಾಗಲಿ, "ತಜ್ಞರಾಗಿ ಉಪದೇಶ ಮಾಡುವ "ತರಬೇತುದಾರರ ತರಬೇತುಗಾರ" ನಿಮಗಾಗಲಿ ಅಸಂಬದ್ದತೆ ಕಾಣಲಿಲ್ಲ. ಆ ತತ್ಸಮ ತದ್ಭವ ಪಟ್ಟಿ ಸರಳವಾಗಿತ್ತು ಮತ್ತು ಕನ್ನಡ ವ್ಯಾಕರಣ ಭಾಗದಲ್ಲಿದ್ದು ಅದರ ಉಪ-ಪುಟ ಅದು. ಅಷ್ಠೂ ಜ್ಞಾನವಿಲ್ಲದೆ ನನ್ನಮೇಲೆ ಟೀಕಾ ಪ್ರಹಾರ ಉಪದೇಶ ಕಿರುಕುಳ ಎಲ್ಲಾ ನೀಡಿದಿರಿ. 'ವಿಷಯದ ಪಟ್ಟಿ' ವಿಕಿಯಲ್ಲಿ ಪಟ್ಟಿಯನ್ನೇ ಮಾಡಬಾರದು' ಎಂದು ಉಪದೇಶವನ್ನು ಮಾಡಿದ, ತಿಳುವಳಿಕೆ ಇಲ್ಲದ ನಿಮ್ಮ ಸ್ನೇಹಿತರ ವಿಚಾರದಲ್ಲಿ ತಪ್ಪು ವಾದವನ್ನು ಸಮರ್ಥಿದಿರಿ. ಇದು ಒಂದು ರೀತಿಯಲ್ಲಿ ಗುಂಪುಕಟ್ಟಿಕೊಂಡು ಸುಳ್ಳೇ- ತಪ್ಪನ್ನು ಆರೋಪಿಸಿ ಧಾಳಿ ಮಾಡವ ಕ್ರಮ, ಹೇಸಿಗೆ ಹುಟ್ಟಿಸುವಂತದು- ಇದು ನಿಮ್ಮ ವರ್ತನೆ ಎಂದು ವಿಷಾದಿಂದ ಹೇಳಬೇಕಾಗಿದೆ. ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ವಿಚಾರದಲ್ಲಿ ಆ ಪುಟದಲ್ಲೇ ತರ್ಕಿಸಿ ಎಂದು ನೀವು ಮೊಂಡು ವಾದ ಮಾಡಬಹುದು. ಇಲ್ಲಿ ಅಗತ್ಯವಾದ್ದರಿಂದ ಉದಾಹರಣೆಗಾಗಿ ಇಲ್ಲಿ ತರಬೇಕಾಯಿತು. ಇಂಗ್ಲಿಷ್ ವಿಬಾಗದಲ್ಲಿ ಹೆಸರಿನ ಪಟ್ಟಿಗಳಿದ್ದರೆ ಅದಕ್ಕೆ ಕೊಂಡಿಗಳಿರುತ್ತವೆ. - ಇಲ್ಲವೇ ಉಲ್ಲೇಖ ಇರುತ್ತದೆ. ಅದಿಲ್ಲದೆ ಸೇರಿಸುವುದಿಲ್ಲ ಅದಿಲ್ಲದಿದ್ದರೆ ಆ ಹೆಸರನ್ನ್ನು ಸೇರಿಸುವುದು ನಿಯಮ ವಿರುದ್ದವೆಂದು ಅಲ್ಪ ಜ್ಞಾನವಿರುವವರಿಗೆ ತಿಳಿಯುತ್ತದೆ - ಆದರೆ ತಜ್ಞರೆಂದುಕೊಂಡ ನಿಮಗೆ ಹೊಳೆಯದು. "ನಾನು ಪ್ರವೇಶ ಮಾಡಿದ ತಾಣದಲ್ಲಿ ಮಾತ್ರಾ ನಿಮ್ಮ ವಿರೋಧಾಭಾಸದ-ವಾದ ಉಪದೇಶ ಆರಂಭವಾಗುತ್ತದೆ; "ತಪ್ಪಲ್ಲದಿದ್ದರೂ ತಪ್ಪನ್ನು ಹುಡುಕುವ ಕುಹಕತನಕ್ಕೆ" ಏನು ಹೇಳಬೇಕು. ಪ್ರಸಿದ್ಧ ವ್ಯಕ್ತಿಗಳು- ಇಲ್ಲಿ ಆಧಾರವಿಲ್ಲದ ತಪ್ಪುಗಳಿದ್ದರೂ ನಿರ್ಲಕ್ಷೆಮಾಡಿ ಅನೇಕ ಬಾರಿ ಸಂಪಾದನೆ ಮಾಡಿದ್ದೀರಿ. ನಾನು ಪ್ರವೇಶಮಾಡಿದಲ್ಲಿ ಹೊಳೆದ ವಿಚಾರ ನಿಮಗೆ ನಿಮ್ಮ ಸ್ನೇಹಿತರಿಗೆ ಆ ತಾಣದಲ್ಲಿ ಹೊಳೆಯಲಿಲ್ಲ. "ಇದು ತೋಳ ಕುರಿಮರಿಯ ನ್ಯಾಯ". ಯಾವಾಗಲೂ ನಿಮ್ಮದು ಸರಿ -ನಾನು ಮಾಡಿದ್ದೆಲ್ಲಾ ತಪ್ಪು- ಈ ನೀತಿಗೆ ಕಿರುಕುಳಕ್ಕೆ ಏನು ಹೇಳುವುದು ತಿಳಿಯದು!! - ತಮ್ಮ ಸ್ವಂತ ಆಸ್ತಿಯಾಗಿದ್ದರೂ ಬೇರೆಯವರಿಂದ ಇಷ್ಟು ಹಿಂಸೆ ಬರಲಾರದು!!. ವಿಕಿಯ ನಿಯಮಗಳನ್ನು ಬಹಳ ತಿಳಿದವರು ನೀವು - ಆದರೆ ಒಂದೊಂದು ಕಡೆ ಒಂದೊಂದು ನೀತಿ ಏಕೆ? ನಿಮ್ಮ ಸ್ನೇಹಿತರಿಗೂ ಮಾಡವುದಕ್ಕೆ ಬೇರೆ ಕೆಲಸವಿದ್ದಂತೆ ಕಾಣುವುದಿಲ್ಲ. ವಿನಾಕಾಣ ಧಾಳಿ ಮಾಡುತ್ತಾರೆ ಇಲ್ಲವೇ ಇಬ್ಬರೂ ಸೇರಿ ಅನಗತ್ಯ ಉಪದೇಶ ಕೊಡುತ್ತೀರಿ. ಆದರೆ ಅದೇ ವಿಚಾರ ನಿಮಗ ಅನ್ವಯಿಸುವುದಿಲ್ಲ!. ಷೇಕ್‍ಸ್ಪಿಯರ್ ಒಂದು ಕಡೆ ಹೇಳುತ್ತಾನೆ,"jealousy thou art Woman" - ಅದರೆ ಇಲ್ಲಿರುವವರು ಇಬ್ಬರೂ ಗಂಡಸರು. ಕ್ಷಮಿಸಿ; ತಪ್ಪಿಲ್ಲದಿದ್ದರೂ ತಪ್ಪೆಂದು- ಬಹಳ ಕಿರುಕುಳ ಕೊಟ್ಟಿದ್ದರಿಂದ ಬೇಸರವಾಗಿ ಇಷ್ಟು ಹೇಳಬೇಕಾಯಿತು. - ವಿಕಿಯನ್ನು ನಿಮ್ಮ ನೀತಿಯಂತೆಯೇ ಅಭಿವೃದ್ಧಿಪಡಿಸಿ. (ಆದರೆ ಪಟ್ಟಿ ಹಾಕಿದವರಿಗೆ ಸುಮ್ಮನೆ ತೊಂದರೆ ಕೊಡಬೇಡಿ) ನಿಮ್ಮ ಮಾತು,"ಪುಟ ರಚಿಸುವಾಗ ಮೊದಲ ಹಂತವೆಂದರೆ ಮಾಹಿತಿ ಸಂಗ್ರಹಣೆ. ಅನಂತರ ಅದನ್ನು ವ್ಯವಸ್ಥಿತವಾಗಿ ಪ್ರಸ್ತುತಪಡಿಸುವುದು" - ಅದನ್ನು ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ಪುಟದಲ್ಲಿ ಕೆಂಪು ಅಕ್ಷರಗಳಿರುವ ಹೆಸರುಗಳಲ್ಲಿ ಆ ಕೆಲಸ ಮಾಡಿದೆಯೇ? ಇಲ್ಲ,- ನಿಮಗೆ ಏಕೆ ಗೋಚರಿಸಲಿಲ್ಲ?. ತತ್ಸಮ ತದ್ಭವಗಳಲ್ಲಿ ಸಣ್ನ ತಪ್ಪುಗಳಿದ್ದರೂ ಸಂಗ್ರಹ ಸರಿಯಾಗಿಯೇ ಇತ್ತು. ಅದು ಸಾರ್ವರ್ತಿಕ ವಿಚಾರವಾದ್ದರಿಂದ- "ರಾಮನು ಗಂಡಸು" ಎಂಬಂತೆ ಕಾಪಿರೈಟ್ ಪ್ರಶ್ನೆ ಬರುವುದಿಲ್ಲ. (ಪತ್ರಿಕೆಯಲ್ಲಿ "ರಾಮನು ಗಂಡಸು" ಎಂದು ಬಂದರೆ ಅದಕ್ಕೂ ಕಾಪಿರೈಟ್ ಎಂದು ವಾದ ಮಾಡುವವರು ನೀವು- ಎಲ್ಲಾ ವಿಷಯದಲ್ಲೂ ತಜ್ಞರು.) ಆದರೂ ಅವಕಾಶ ಸಿಕ್ಕಾಗ ನನಗೆ ಕಿರುಕುಳ ಕೊಟ್ಟು ಸಂತೋಷಪಡುವ ಮನೋಭಾವಕ್ಕೆ ಉತ್ತರವಿಲ್ಲ. (ದಯಮಾಡಿ ವಿಕಿಯನ್ನು ನಿಮ್ಮ ಸ್ವಂತ ಆಸ್ತಿ ಎಂದು ಭಾವಿಸಬೇಡಿ, ಎಲ್ಲವನ್ನೂ ತಿಳಿದಿದ್ದೇನೆ- ತಿಳಿದಿರದೇ ಇದ್ದರೂ, ಕಾಪಿರೈಟ್ ವಿಚಾರದಲ್ಲಿ ಎಲ್ಲವನ್ನೂ ತಿಳಿದಿದ್ದೇನೆ ಎಂಬ ಅಹಂಕಾರ ಬಿಡಿ. ಪತ್ರಿಕೆಯಲ್ಲ- ಪುಸ್ತಕದಲ್ಲಿ ಬರೆದುಕೊಂಡ ಮಾತ್ರಕ್ಕೆ, ಅವರು ಬರೆದುಕೊಂಡರೂ ಕಾಪಿ ರೈಟ್ ಬರುವುದಿಲ್ಲ. ಒಂದೇ- ವಿಚಾರ ವಿಷಯ ಮಾಹಿತಿಗಳಲ್ಲಿ ಹತ್ತಾರು ಜನರಿಗೆ- ಪತ್ರಿಕೆಗೆ ಕಾಪಿರೈಟ್ ಬರುವುದಿಲ್ಲ.) ಕಾನೂನು ತಜ್ಞರಿಂದ ತಿಳಿಯಿರಿ- ಈ ನಿಮ್ಮ ತಪ್ಪು ಧೋರಣೆಯ ಕಾರಣಕ್ಕೆ ಲಕ್ಷಗಟ್ಟಲೆ ಖರ್ಚು ಮಾಡಿ ಮಾಡಿದ ತರಗತಿಗಳು ಒಬ್ಬ ಉತ್ತಮ ಸಂಪಾದಕನನ್ನೂ ವಿಕಿಗೆಕೊಡದೆ, ಹಣ ವ್ಯರ್ಥವಾಗಿ ಹೋಗಿದೆ. ಆದರೆ ನಾನು ಏನು ಹೇಳಿದರೂ ಅದು ನಿಮಗೂ ನಿಮ್ಮ ಸ್ನೇಹಿತರಿಗೂ "ಘೋರ್ಕಲ್ಲ ಮೇಲೆ ಮಳೆ ಹೊಯಿದಂತೆ", "ನೀವು ಹಿಡಿದ ಮೊಲಕ್ಕೆ ಎರಡು ಕೊಂಬು" ಎಂದು ವಾದಮಾಡುವವರು) ದಯವಿಟ್ಟು ಗುಂಪುಕಟ್ಟಿಕೊಂಡು ಸುಮ್ಮನೆ ಕಿರುಕುಳ ಕೊಡುವುದು ತಪ್ಪು, ಕಿರುಕುಳದ ತಪ್ಪುತಪ್ಪಾದ ಉಪದೇಶ ಕೊಡುವದನ್ನು ನಿಲ್ಲಸಬೇಕಾಗಿ ಕೊರುತ್ತೇನೆ.ನಿಮ್ಮವ-Bschandrasgr (ಚರ್ಚೆ) ೧೭:೪೩, ೧೨ ಮೇ ೨೦೧೯ (UTC)
ಮಾನ್ಯ @Bschandrasgr:ರೇ ಈ ಚರ್ಚೆ ಇಷ್ಟು ಉದ್ದಕ್ಕೆ ಯಾಕೆ ಹೋಗುತ್ತಿದೆ ಎಂದು ತಿಳಿಯುತ್ತಿಲ್ಲ. ಮೊದಲಿಗೆ ನಾನು ಏನು ಹೇಳಿದ್ದೇನೆ ಎಂಬುದನ್ನು ಸ್ಪಷ್ಟಪಡಿಸಲು ಪ್ರಯತ್ನಿಸುತ್ತೇನೆ. ನಾನು ಈ ಲೇಖನವನ್ನು ಅಳಿಸಬೇಕೆಂದು ಎಲ್ಲಿಯೂ ಹೇಳಿಲ್ಲ. ಇದು ಪೂರ್ಣ ಲೇಖನದ ರೀತಿ ಕಾಣುತ್ತಿಲ್ಲ. ಇದನ್ನು ಕರಡು ಪುಟಕ್ಕೆ ಸ್ಥಳಾಂತರಿಸಬೇಕೆಂದೇ ಹೇಳಿದ್ದು. ಆದರೆ ಒಬ್ಬರು ಅಳಿಸುವಿಕೆಗೆ ಹಾಕಿದ ಲೇಖನದ ಟೆಂಪ್ಲೇಟನ್ನು ನೀವು ತೆಗೆಯುವ ಹಾಗಿಲ್ಲ. ಅದು ಚರ್ಚೆ ನಡೆದು ನಂತರವೇ ನಿರ್ವಾಹಕರು ಆ ಟೆಂಪ್ಲೇಟನ್ನು ತೆಗೆಯುತ್ತಾರೆ. ಇದು ವಿಕಿಪೀಡಿಯದ ನಿಯಮ. ನಂತರ ನೀವು ಹೇಳುತ್ತೀರಿ ಹೊಸ ಲೇಖಕರನ್ನು ಉತ್ತೇಜಿಸಬೇಕು ಎಂದು. ಅದು ನಿಜ. ಉತ್ತೇಜಿಸಲು ನಾವು ಈ ರೀತಿ ಚರ್ಚೆ ಪುಟದಲ್ಲಿ ಜಗಳ ಆಡಿಕೊಂಡು ಆ ಪುಟ ಹಾಗಿದೆ ಈ ಪುಟ ಹಾಗಿದೆ ನೀವು ಅದು ಮಾಡಿ ಮೊದಲು ಎಂದು ಆಗ್ರಹಿಸುವುದರಲ್ಲಿ ಯಾವುದೇ ಕೆಲಸಗಳು ನಡೆಯುವುದಿಲ್ಲ. ಹೊಸ ಲೇಖಕರನ್ನು ಉತ್ತೇಜಿಸಿದ ಹಾಗೂ ಆಗುವುದಿಲ್ಲ. ನಾವೂ ವಿಕಿಪೀಡಿಯ ಅಭಿವೃದ್ಧಿ ಪಡಿಸಿದ ಹಾಗಾಗುವುದಿಲ್ಲ. ನಮ್ಮಲ್ಲಿಯೇ ಒಡಕು ಮೂಡುತ್ತದೆ. ನಿಮ್ಮ ಮೇಲೆ ನನಗೆ ತುಂಬಾ ಗೌರವ ಇದೆ. ಆದರೆ ನಾನು ಏನಾದರೂ ಹೇಳಿದರೆ ಅದನ್ನು ನೀವು ತಪ್ಪೇ ಭಾವಿಸುತ್ತೀರಿ. ಯಾಕೆ ಅದನ್ನು ಬೇರಿ ರೀತಿಯಲ್ಲಿ ತೆಗೆದುಕೊಳ್ಳುವುದಿಲ್ಲ? ನಿಮಗೇ ತಿಳಿದಿರುವುದು ಎಂದೂ ನೀವು ಭಾವಿಸುತ್ತೀರಿ. ಅದು ತಪ್ಪಲ್ಲ. ನೀವು ನನ್ನಿಂದ ಹೆಚ್ಚು ಅನೇಕ ವಿಷಯಗಳನ್ನು ತಿಳಿದುಕೊಂಡಿದ್ದೀರಿ, ಹಾಗೂ ಅದರ ಬಗ್ಗೆ ನನಗೆ ಗೌರವ ಮತ್ತು ಹೆಮ್ಮೆ ಇದೆ. ಈ ರೀತಿ ನಾವು ಜಗಳ ಆಡಿದರೆ ನನ್ನಿಂದಾಗಿ ಇವರು ಜಗಳ ಆಡುತ್ತಿದ್ದಾರೆ ಎಂದು ಹೊಸ ಲೇಖಕರಿಗೆ ಬೇಸರವೂ ಉಂಟಾಗಬಹುದು. ನಾವು ವಾಸ್ತವವನ್ನು ಅರ್ಥಯಿಸಿಕೊಂಡು ಆ ಲೇಖಕರಲ್ಲಿ ಯಾಕೆ ಈ ಲೇಖನವನ್ನು ವಿಸ್ತರಿಸುವಂತೆ ಅವರ ಚರ್ಚಾ ಪುಟದಲ್ಲಿ ಕೇಳಿಕೊಳ್ಳಬಾರದು? ಅದು ಎಲ್ಲರಿಗೂ ಅನ್ವಯವಾಗುತ್ತದೆ. ಅಳಿಸುವಿಕೆಗೆ ಹಾಕಿದವರಿಗೂ, ನನಗೂ, ನಿಮಗೂ ಮತ್ತು Vikashegdeಯವರಿಗೂ. ಮತ್ತು ನೀವು ಹೇಳಿದ ಲೇಖನ ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ವಿಕಿಪೀಡಿಯದಲ್ಲಿ ಇರಬಾರದು ಎಂಬುದು ನನ್ನ ಅಭಿಪ್ರಾಯ. ಯಾಕೆಂದರೆ ಲೇಖನದ ಶೀರ್ಶಿಕೆಯೇ "ಪ್ರಸಿದ್ಧ" ಎಂದು ಇದೆ. ಅದು ತಟಸ್ಥ ದೋರಣೆ ಅಲ್ಲ. ಆ ಲೇಖನ ಇದೆ ಎಂದು ನನಗೆ ಈ ಮೊದಲು ತಿಳಿದಿರಲಿಲ್ಲ. ನಿಮಗೆ ಆ ಲೇಖನ ಇರುವುದು ತಪ್ಪು ಎಂದಾದರೆ {{ಅಳಿಸುವಿಕೆ|ಇಲ್ಲಿ ಕಾರಣ ಬರೆಯಿರಿ}} ಟೆಂಪ್ಲೇಟು ಸೇರಿಸಿ. ನಂತರದ್ದು ಸಮುದಾಯ ನಿರ್ಧಾರ ಮಾಡುತ್ತದೆ. ನಿಮಗೆ ಕಿರುಕುಳ ಕೊಡುತ್ತೇನೆ ಎಂದು ಗಂಭೀರ ಆರೋಪ ಮಾಡಿದ್ದೀರಿ. ನಾನು ಕಿರುಕುಳ ಕೊಟ್ಟಿದ್ದೇನೆ ಎಂದು ನಿಮಗನಿಸಿದರೆ ಕ್ಷಮಿಸಿ. ನನ್ನ ಉದ್ದೇಶ ಅದು ಆಗಿರಲಿಲ್ಲ. ವಿಕಿಪೀಡಿಯಕ್ಕೆ ಅದರದ್ದೇ ಆದ ನಿಯಮ ಇದೆ. ಇರುವ ಮಾಹಿತಿ ಎಲ್ಲ ಇಲ್ಲಿ ತಂದು ಕಸದ ಬುಟ್ಟಿ ತರಹ ತನಗೆ ಬೇಕಾದ ಮಾಹಿತಿ ಸೇರಿಸಲು ಇರುವುದಲ್ಲ. ಪತ್ರಿಕೆಯಲ್ಲಿ ಬರುವ ವಿಷಯಗಳನ್ನು ಕಾಪಿ ಮಾಡಿ ಏಕೆ ಹಾಕಬೇಕು? ಜನ ಪತ್ರಿಕೆಯೇ ಓದಲಿ. ವಿಕಿಪೀಡಿಯದಂತಹ ವಿಶ್ವಕೋಶದ ಮಾಹಿತಿ ಯಾಕೆ ನೋಡುತ್ತಾರೆ? ಉದಾಹರಣೆಗೆ ಅಳಿಸುವಿಕೆಗೆ ಈ ಹಿಂದೆ ಹಾಕಿದ ಲೇಖನ ಜ್ಯೋತಿಷ ಮತ್ತು ವಿಜ್ಞಾನ. ಈ ಲೇಖನದಲ್ಲಿ ತಟಸ್ಥ ಧೋರಣೆಯನ್ನು ಅನುಸರಿಸಿಲ್ಲ. ಲೇಖನ ಯಾರು ಮಾಡಿದ್ದಾರೋ ಗೊತ್ತಿಲ್ಲ. ಈಗ ನಾನೇ ಈ ರೀತಿಯ ಲೇಖನ ಮಾಡಿದ್ದರೂ ಅದು ತಪ್ಪೇ. ಲೇಖನದಲ್ಲಿ ಸರಿಯಾದ ಉಲ್ಲೇಖಗಳಿಲ್ಲ. ಶೀರ್ಶಿಕೆಯೇ ಪ್ರಬಂಧದ ಶೀರ್ಶಿಕೆಯ ರೀತಿ ಇದೆ. ಉದಾಹರಣೆಗೆ ಇಂಗ್ಲಿಷ್‌ನ Astrology and science ಪುಟಕ್ಕೆ ಹೋಗುತ್ತೇನೆ. ಅಲ್ಲಿ ಕನ್ನಡದಲ್ಲಿ ಪುಟ ಇದೆ ಎಂದು ಗೊತ್ತಾಗಿ ಕನ್ನಡದಲ್ಲಿ ಓದೋಣ ಎಂದು ಬಂದರೆ ನನಗೆ ಯಾವ ರೀತಿ ಮಾಹಿತಿ ಸಿಗುತ್ತದೆ ಎಂದು ನೀವೇ ನೋಡಿ. ನಾವು ಹೇಳುವುದೆಂದರೆ ನೀವು ಸಂಪಾದನೆ ತುಂಬಾ ಮಾಡುತ್ತೀರಿ. ಆದರೆ ಆ ಸಂಪಾದನೆಯ ಮೌಲ್ಯ ಹೆಚ್ಚಿರಲಿ ಎಂದೇ ಕೇಳಿಕೊಳ್ಳುವುದು. ಏನಾದರೂ ತಪ್ಪು ಹೇಳಿದ್ದರೆ ಕ್ಷಮೆ ಇರಲಿ --ಗೋಪಾಲಕೃಷ್ಣ (ಚರ್ಚೆ) ೦೮:೧೦, ೧೩ ಮೇ ೨೦೧೯ (UTC)

ಆಧಾರ ಕಾರಣವಿಲ್ಲದೆ ರದ್ದಿಗೆ ಪುಟ ಹಾಕುವುದು[ಬದಲಾಯಿಸಿ]

 • (ಟೈಪು ತಪ್ಪುಗಳಿದ್ದರೆ ತಿದ್ದಿಕೊಳ್ಳಿ)
 • ಆಧಾರ ಕಾರಣವಿಲ್ಲದೆ ರದ್ದಿಗೆ ಪುಟ ಹಾಕುವುದು ತಪ್ಪು. ಜ್ಯೋತಿಷ ಮತ್ತು ವಿಜ್ಞಾನನದ ಇಂಗ್ಲಿಷ್ ಲೇಖನ ಬರೆದವನಿಗೆ ಖಗೋಳ ಶಾಸ್ತ್ರವೂ ಗೊತ್ತಿಲ್ಲ - ಫಲಜ್ಯೊತಿಷ ಶಾಸ್ತ್ರವೂ ಗೊತ್ತಿಲ್ಲ. ಅದು ಹೇಗೆ ತಪ್ಪು ಹೇಗೆ ಸರಿ ಎಂಬುದಕ್ಕೆ ಎಲ್ಲಿಯೂ ಆ ಶಾಸ್ತ್ರದ ಉದಾಹರಣೆ ಇಲ್ಲ. ಅದಕ್ಕೆ ಸೆಕೆಂಡ್- ಹ್ಯಾಂಡ್ ನೋಲೆಡ್ಜೆ ಎನ್ನುತ್ತಾರೆ- ಉದ್ದಕ್ಕೂ ಶಾಸ್ತ್ರದ ವಿಷಯ ಪ್ರಸ್ತಾಪಿಸದೆ ಬೇರೆಯವರ ಅಭಿಪ್ರಾಯ ಹಾಕಿ - ಕೈತೊಳೆದುಕೊಳ್ಳವುದು ವೈಜ್ಞಾನಿಕ ಕ್ರಮದ ವಾದ ಅಲ್ಲ. ಆದ್ದರಿಂದ ಅದನ್ನು ಬಿಟ್ಟು ನಾನು ಶಾಸ್ತ್ರ- ವಿಜ್ಞಾನಗಳನ್ನು ಅಭ್ಯಾಸಮಾಡಿ ಆಧಾರ ಕೊಟ್ಟು ನೇರವಾಗಿ ಹೋಲಿಸಿದ್ದೇನೆ. ಆದರೆ ಯಾವಾಗಲೂ ನೀವು ತಿಳಿದಿದ್ದೇ ಸರಿ ಎಂದರೆ ಅದು ಕಟಾಪಂಥಿಗಳದು- ಫ್ಯಾಸಿಸಂ. (ನಮ್ಮಲ್ಲಿಯೂ ಆ ಬಗೆಯ ಪಂಥ ಇದೆ. ಅವರು ಇತರೆ ಯಾರ ಸಕಾರಣ ವಾದವನ್ನೂ ಒಪ್ಪುವುದಿಲ್ಲ) ಅದಕ್ಕೆ ಆಧಾರಗಳನ್ನೂ ಕೊಟ್ಟಿದ್ದೇನೆ. ಇಂಗ್ಲಿಷ್‍ನ ಅನೇಕ ಲೇಖನಗಳು ಹಾಗಿವೆ - ಇಂಗ್ಲಿಷ್‍ನಲ್ಲಿ ಇದ್ದಮಾತ್ರಕ್ಕೆ ಅದು ಶ್ರೇಷ್ಟವಲ್ಲ- ಹಾಗೆ ಭಾವಿಸುವುದು ಗುಲಾಮಿ ಮನೋಭಾವ. ಉದಾ: ಇಂಗ್ಲಿಷ್ನಲ್ಲಿ ಕುರಾನ್ ಬಗ್ಗೆ ಲೇಖನ ಇದೆ- ಅದರೆ ಅದರಲ್ಲಿ ಕುರಾನ್ ವಾಸ್ತವವಾಗಿ ಏನು ಹೇಳುತ್ತದೆ ಎಂಬ ಪ್ರಥಮ ಮಾಹಿತಿಯೇ ಇಲ್ಲ ಬೇರೆಯವರ ಅಭಿಪ್ರಾಯ ಹಾಕಿದ್ದಾರೆ. ಆ ಎರಡನೇ ವ್ಯಕ್ತಿ ಸತ್ಯವನ್ನು ಹೇಳಿದ್ದಾನೆ ಎನ್ನುವುದಕ್ಕೆ ಆಧಾರವೇನು? ಸಲ್ಮಾನ್ ರಶ್ದಿಯವರ ಅಭಿಪ್ರಾಯ ಬೇರೆ ಇದೆ. ಕುರಾನ್ ಏನು ಹೇಳುತ್ತದೆ "ಅದರ ಸೂಕ್ತಿ" ಏನು ಎಂದು ಲಭ್ಯವಿದ್ದರೂ, ಎಲ್ಲೂ ಅದರಲ್ಲಿ ಹೇಳಿಲ್ಲ. ಹೀಗೆ ಮೊದಲ ಹೇಳಿಕೆ ಲಭ್ಯವಿದ್ದರೂ, ಎಡನೆಯವರ ಅಭಿಪ್ರಾಯ ಕೊಡುವ ಲೇಖನ ಕಳಪೆಯದು- ಇದು ವೈಜ್ನಾನಿಕ ನಿಲುವು. 'To understand Shakespeare read Shakespeare' ಇದು ಇಂಗ್ಲಿಷ ಗಾದೆ. ಎಲ್ಲವೂ ಅಲ್ಲದಿದ್ದರೂ ಅವರಿಂದ ಕಲಿಯಬೇಕಾದ್ದ ಬಹಳ ಇದೆ; ಅದು ಇಲ್ಲದೆ ಕನ್ನಡ ಮೃತ ಬಾಷೆಯ ಕಡೆ ಹೋಗುತ್ತಿದೆ. ಅಕ್ಕೆ ನೀವೂ ಪೂರಕ ಅಗಬೇಡಿ.
 • ನೀವು ವಿಕಿಪೀಡಿಯಾದಲ್ಲಿ ಪಟ್ಟಿಯ ಬಗೆಯ ಲೇಖನಕ್ಕೆ ಅವಕಾಶವಿಲ್ಲವೆಂದು, ನಾನು ಮೇಲುಗಡೆ ಉದಾಹರಣೆ ಕೊಟ್ಟರೂ ಹೇಗೆ ಹೇಳಿದಿರಿ? ಇದು ಪೂರ್ವಾಗ್ರಹವಲ್ಲವೇ? ಮತ್ತು ತಪ್ಪು ನೀತಿಯನ್ನು ನನ್ನ ಮೇಲೆ ಹೇರಲು ಏನು ಕಾರಣ? ಕನ್ನಡ ವ್ಯಾಕರಣ ವಿಭಾಗದಲ್ಲಿ ತತ್ಸಮ ತದ್ಭವ ಪದ ಕೆಂಪು ಅಕ್ಷರಗಳಲ್ಲಿ ಇದೆ. ಕೊಂಡಿಯ ಅಗತ್ತ್ಯ ಇತ್ತು. ಅದಕ್ಕೆ ಪಟ್ಟಿ ವಿವರಣೆಯ ಅಗತ್ಯವಿತ್ತು. ವಿವರಣೆಯಾಗಿ ಒಬ್ಬ ಹೊಸಬ ಪಟ್ಟಿ ಕೊಟ್ಟರೆ , ಪ್ರೋತ್ಸಾಹಿಸಿ ಅಭಿವೃದ್ಧಿಪಡಿಸಿ ಅವನು ಯಾರೇ ಅಗಲಿ ಉತ್ತೇಜನ ಕೊಇಡುವ ಬದಲು ತರಗತಿ ನೆದೆಸುವ ನೀವು/ಮತ್ತೊಬ್ಬ ಏಕಾಎಕಿ ಚರ್ಚಿಸದೆ ರದ್ದಿಗೆ ಹಾಕಿದರೆ ಅದು ವಿಕಿ ನಿಯಮಕ್ಕೇ ವಿರೋಧವಲ್ಲವೇ? ಸರಿಯಾದ ತಿಳುವಳಿಕೆ ಇಲ್ಲದೆ ಒಂದು ಅರೆಬರೆ- ಸಾಧಾರಣ- ಉತ್ತಮ ಲೇಖನಕ್ಕೆ ಏಕಾಏಕಿ ರದ್ದು ಸೂಚನೆ ಹಾಕಿದರೆ ವಿಧ್ವಂಸಕತೆಯೇ ಸರಿ. ಮತ್ತು ನಿಮ್ಮಟೀಮಿನವರು ತಾವು ಎಲ್ಲ ತಿಳಿದಿದ್ದೇವೆ ಎಂಬ ಅಹಂಕಅದಿಂದ ಅಥವಾ ಅಸೂಯೆಯಿಂದ ರದ್ದಿಗೆ ಹಾಕಿದರೆ ಅದು ವಿಧ್ವಂಸಕತೆಯೇ ಸರಿ. ಕಾರಣ ಕೊಟ್ಟು ಅದನ್ನು ತೆಗೆಯುವುದು ತಪ್ಪೇ? ಪೂರ್ವಾಗ್ರಹದಿಂದ ನಿಮ್ಮ ಸ್ನೇಹಿತರು ಒಂದು ರಾಜ್ಯದ ಪ್ರಸ್ತುತ ಚುನಾವಣಾ ಫಲಿತಾಂಶದ ವಿವರ ವಿಭಾಗವನ್ನೇ ಸರಿಯಿದ್ದರೂ ಅಳಿಸಿ ಹಾಕಿದರು - ಕಾರಣ ಅದು ಅವರಿಗೆ ಅಲ್ಲಿರುವುದು ಸರಿಕಾಣಲಿಲ್ಲ. ಒಂದು ನಿಮಿಷದಲ್ಲಿ ಅದಕ್ಕೆ ಬೇರೆ ಪುಟ ಮಾಡಬಹುದಿತ್ತು. ಹಾಗೆ ಮಾಡಲಿಲ್ಲ. ಆ ನಂತರ ಆ ರಾಜ್ಯದ ಚುನಾವಣೆ ವಿವರವು ಕನ್ನಡದಲ್ಲಿ ಎಲ್ಲಿಯೂ ಇಲ್ಲ. ನಾನು ಬೇಸರವಾಗಿ ಪ್ರಸ್ತುತತೆ ಮುಂದುವರೆಸಲಿಲ್ಲ. ಅವರೂ ಅದನ್ನು ಮುಂದುವರಿಸಲಿಲ್ಲ. ಏಕೆ? ಅದೇ ರೀತಿ ಇತರ ಕೆಲವು ಪುಟಗಳಿಗೂ ಮಾಡಿದ್ದಾರೆ. ಈ ಕೆಡಿಸುವ ಕೆಲಸ ಏಕೆ?
 • ಈಗ ೨೦೧೯ ರ ಚುನಾವಣೆ ನೆಡೆಯುತ್ತಿದೆ ಅದರ ಪ್ರಸ್ತುತ ಪುಟವನ್ನು ಈ ತಜ್ಞರು ಏಕೆ ಮಾಡವುದಿಲ್ಲ? ಇನ್ನೂ ಅನೇಕ ಪ್ರಸ್ತುತ ಘಟನೆಗೆ ಇಂಗ್ಲಿಷ್ ವಿಭಾಗದಲ್ಲಿ ಪುಟ ಮಾಡಿದ್ದಾರೆ. ನೀವು ಮತ್ತು ನಿಮ್ಮ ಸ್ನೇಹಿತರು - ಯಾಕೆ ಸುಮ್ಮನಿದ್ದೀರಿ - ಬೇರೆಯವರು ಮಾಡಿದರೆ ಇಲ್ಲದ ತಕರಾರು ತೆಗೆದು ಕಿರುಕುಳ ಕೊಡುತ್ತೀರಿ.
 • ಅನೇಕ ಬಅರಿ ಹೇಳಿದ್ದೇನೆ: ಪತ್ರಿಕೆಯಲ್ಲಿ ಪ್ರರಕಟಿಸಿದ ಮಾತ್ರಕ್ಕೆ ಅವರಿಗೆ ಕಾಪಿರೈಟ್ ಹಾಕಿಕೊಂಡರೂ ಕಾಪಿರೈಟ್ ಬರುವುದಿಲ್ಲ. ಉದಾ: ಪವನಜ ಅವರ ಬಯೋಡೇಟಾ ಕುಟುಂಬ ವಿವರ, ವಿದ್ಯೆ, ಸಾಧನೆ ಇವನ್ನು ಒಂದು ಪತ್ರಿಕೆ ಪ್ರಕಟಿಸಿದರೆ ಆ ಹಕ್ಕು ಪೂರಾ ಅವರಿಗೆ ಹೊಗುವುದೇ - ಪವನಜ ಅವರಿಗೆ ತಮ್ಮ ಬಯೋಡೆಟಾ ಹಕ್ಕು ಹೊಯಿತೇ? ಅವರನ್ನು ಒಮ್ಮೆ ಕೇಳಿ. ನಿಮಗೆ ಎಷ್ಟು ಹೇಳಿದರೂ ಕಲ್ಲಮೇಲೆ ಮಳೆ ಹೊಯಿದಂತೆ ಆಗಿದೆ. ಪ್ರಸ್ತುತ ವಿಷಯಕ್ಕೆ ಪತ್ರಿಕೆಗಳೇ ಆಧಾರ. ಅದರಿಂದಲೇ ತೆಗೆದು ಕೊಳ್ಳಬೇಕು. ಅನೇಕ ವಿಷಯಗಳನ್ನು ಬದಲಾಯಿಸಿ ಬರೆಯಲು ಬರುವುದಿಲ್ಲ. ನಿಮಗೆ ಮತ್ತು ನಿಮ್ಮ ಗೆಳೆಯರಿಗೆ ಪ್ರಸ್ತುತ ಲೇಖನ ಬರೆಯಲು ಸವಾಲು ಹಾಕಿದರೂ ಒಂದು ಲೇಖನ ತಯಾರಿಸಲು ಈ ಐದು ವರ್ಷದಲ್ಲಿ ಆಗಿಲ್ಲ ಏಕೆ?. ಇಸ್ರೊದವರು ಉಪಗ್ರಹ ಹಾರಿಸಿದಾಗ ಅದರ ಪುಟ ತಯಾರರಿಸುವಾಗ ಅಡ್ಡಬಂದು ಧಾಳಿ ಮಾಡಿದಿರಿ. ಆ ಎಲ್ಲ ವಿವರಗಳಿಗೆ ಇಸ್ರೋದವರು ತಮ್ಮ ಪುಟದಲ್ಲಿ ಕಾಪಿ ರೈಟ್ ಹಾಕಿಕೊಂಡು ಸಾರ್ಜನಿಕರಿಗೆ ಬಿಡುಗಡೆ ಮಾಡಿದ್ದರು- ಅದರ ಜ್ನಾನವಿಲ್ಲದೆ ಲೇಖನ ಕೆಡಿಸಿದಿರಿ. ಈ ಬಗೆಯ ತಿಳುವಳಿಕೆ ಇಲ್ಲದ ಉಪದ್ವಾಪದಿಂದ ಕನ್ನಡ ವಿಕಿ ಬಡವಾಗಿದೆ. ಪಾಠ ಮಾಡುವಾಗಲೂ ಕಾಪಿ ರೈಟ್ ಬಗ್ಗೆ ತಪ್ಪು ಬೋಧನೆ ಮಾಡುವದರಿಂದಲೂ- ಯಾರೂ ಈವರೆಗೆ - ನಿವಿಬ್ಬರೂ ಸೇರಿ- ಒಂದು ಪ್ರಸ್ತುತ ಲೇಖನ ತಯಾರಿಸಲು ವಿಫಲರಾಗಿದ್ದೀರಿ.
 • ಪ್ರಾಯಶ್ಚಿತ:: ಅದಕ್ಕೆ ಈಗಿನ ೨೦೧೯ರ ಚುನಾವಣೆಗಳ ಪುಟ ತಯಾರಿಸಿ ಪ್ರಾಯಶ್ಚಿತ ಮಾಡಿಕೊಳ್ಳಿ. ಇಲ್ಲದಿದ್ದರೆ ನಮಗೆ ಆ ಯೊಗ್ಯತೆ ಇಲ್ಲ ಎಂದು ಒಪ್ಪಿಕೊಳ್ಳಿ. ಸುಮ್ಮನಿರಿ.
 • ಪತ್ರಿಕೆಗಳಲ್ಲಿ ಬರುವ "ಮುಖ್ಯ ವಿಷಯಗಳು" ಅಲ್ಲಿಗೇ- ಅ ದಿನಕ್ಕೇ ಸತ್ತುಹೋಗುತ್ತವೆ. ಅದಕ್ಕೆ ಸಜೀವವಾಗಿ ಇಡಲು ವಿಕಿ ಒಂದು ಅವಕಾಶ ನೀಡಿದೆ.- ಐತಿಹಾಸಿಕ ಮಹತ್ದ ಜ್ಞಾನ ಇಲ್ದವರಿಗೆ - ನಿಮ್ಮ ಬುದ್ಧಿಗೆ ಅದು ವ್ಯರ್ಥ ದಾಖಲೆಯಾಗಿ ಕಾಣಬಹುದು. ಉದಾಹರಣೆಗೆ ಇಂಗ್ಲಿಷ್ ವಿಕಿಯಲ್ಲಿ ಕಾಶ್ಮೀರದ ಭಯೊತ್ಪಾದಕರ ಪ್ರತಿ ಧಾಳಿಯ ಧಾಖಲೆ ಹಾಕಿದ್ದಾರೆ. ನಿಮಗೆ ಅದು ಏಕೆ ಬೇಕು ಎನ್ನಿಸಬಹುದು. ಕಲ್ಕತ್ತಾದಲ್ಲಿ ವಿಶ್ವದ ಭಾರತದ ಪ್ರತಿಯೊಂದು ಬೆಳವಣಿಗೆಯನ್ನು ದಾಖಲಿಸುವ ಒಂದು ಆರ್ಕೈವ್‍ನ್ನು ಬ್ರಟಿಷರು ಆರಂಭಿಸಿದರು. ನಮಗೆ ಇತಿಹಾಸ ಎಂದರೆ ಏನು ಎಂದು ಗೊತ್ತಿರಲಿಲ್ಲ. ಸತ್ಯ ಘಟನೆಗಳನ್ನು ಬರೆಯುವುದನ್ನು ಅವರು ಕಲಿಸಿದರು - ನಮ್ಮ ಹಿಒಂದಿನ ಇತಿಹಾಸವೆಲ್ಲ ಕಲ್ಪನೆಯ ಮೇಲೋಗರ. ಆದ್ದರಿಂದ ಪತ್ರಿಕೆಯಲ್ಲಿ ಬಂದ ಮುಖ್ಯ ಘಟನೆಗಳನ್ನು-ವಿಚಾರಗಳನ್ನು ಹಾಗೆಯೇ ಸಾಯಲು ಬಿಡದೆ ಕನ್ನಡ ವಿಕಿಯಲ್ಲಿ ದಾಖಲಿಸುವುದು ಮುಖ್ಯ.
 • ಮತ್ತೊಮ್ಮೆ ಕಾಪಿ ರೈಟ್ ವಿಷಯ:: ೨೦೧೮ರ ಕರ್ನಾಟಕ ಅಸೆಂಬ್ಲಿ ಚುನಾವಣೆಯ ನಂತರ ಟೈಮ್ಸ್ ಇಂಗ್ಲಷ್ ಪತ್ರಿಕೆಯಲ್ಲಿ ಚುನಾಯಿತರಾದ ಸದಸ್ಯರ ಪಟ್ಟಿಯನ್ನು ಹಾಕಿದರು. ಅದರ ಕೆಳಗಡೆ ಈ ಪಟ್ಟಿಯು ಕಾಪಿರೈಟಿಗೆ ಒಳಪಟ್ಟಿದೆ- 'ಇದನ್ನು ಕಾಪಿ ಮಾಡುವುದಾಗಲಿ - ಭಾಷಾಂತರ ಮಾಡುವುದನ್ನಾಗಲಿ ನಿಶೇಧಿಸಿದೆ' ಎಂದು ಇಂಗ್ಲಿಷ್‍ನಲ್ಲಿ ಇತ್ತು. ಕರ್ನಾಟಕ ಚುನಾಯಿತ ಸದಸ್ಯರ ಹೆಸರನ್ನು - ಅಥವಾ ಪಟ್ಟಿಯನ್ನು ಬೇರೆಯಾರೂ ಪ್ರಕಟಿಸದಂತೆ - ಉಪಯೋಗಿಸಿದಂತೆ ಇವರಿಗೆ ಕಾಪಿ ರೈಟ್ ಕೊಟ್ಟವರು ಯಾರು?- ಈ ಬಗೆಯ ಮೂರ್ಖತನ - ಅಹಂಕಾರ ಪತ್ರಿಕೆಯವರದು. ಆದ್ದರಿಂದ ಸಾರ್ವತ್ರಿಕ ವಿಷಯವನ್ನು ಕಾಪಿ ಮಾಡಿದರೆ ಅದು ಕಾಪಿರೈಟ್ ಉಲ್ಲಘನೆ ಆಗುವುದಿಲ್ಲ. ಅದನ್ನೇ ನಿಮಗೆ -ನಿಮ್ಮ ಕಟ್ಟಾವಾದಿ-(ಫೆನಾಟಿಕ್) ಗೆಳೆಯರಿಗೆ ಹೇಳಿದ್ದೇನೆ ಅದರೆ - ಕಲ್ಲಿನ ಮೇಲೆ ಮಳೆ ಹೊಯಿದಂತೆ ಆಗಿದೆ. ಮತ್ತೂ ಉದಾ: ಸರ್ವಜ್ಞ ಪದಗಳನ್ನೋ - ಮಂಕುತಿಮ್ಮನ ಪದ್ಯಗಳನ್ನೋ ಪತ್ರಿಕೆ ಪ್ರಕಟಿಸಿದ ಮಾತ್ರಕ್ಕೆ ಅವರಿಗೆ ಹಕ್ಕು ಬರುವುದಿಲ್ಲ. ಅದನ್ನು ತಿಳಿಯದೆ ಸಂಸ್ಕೃತಿ ಇಲಾಖೆ ಸಾರ್ವಜನಿಕರಿಗಾಗಿ ಮಂಕುತಿಮ್ಮನ ಕಗ್ಗವನ್ನು ಕಗ್ಗರಸಧಾರೆ ಎಂಬ ಪುಟಗಳಲ್ಲಿ ಉದ್ದೇಶಪೂರ್ವಕ ಕಾಪಿ ರೈಟ್ ಹಾಕದೆ ಸಾರ್ವಜನಿಕರಿಗೆ ಉಚಿತವಾಗಿ ನೀಡಿದರೆ- ಅದನ್ನು ವಿಕಿಸೋರ್ಸಿಗೆ ಹಾಕಿದಾಗ ನಿಮ್ಮ ಗೆಳೆಯ ಕಟ್ಟಾವಾದಿಗಳು ಸರಿಯಾಗಿ ವಿಚಾರಿಸಿ ತಿಳಿಯದೆ ಮೊಂಡು ವಾದ ಮಾಡಿ ರದ್ದಿಗೆ ಹಾಕಿದರು - ಆ ಮೊದಲ ಮುಖ್ಯ ಪುಟ ರದ್ದಾಯಿತು. ಕಷ್ಟ ಪಟ್ಟು ಮಾಡಿದ್ದು ವ್ಯರ್ಥವಾಯಿತು "ಇತ್ತೀಚೆಗೆ ಪವನಜ ಅವರು ಸೂಕ್ತ ಆಧಾರ ಮತ್ತು ಚರ್ಚೆಯ ನಂತರವೇ ರದ್ದಿಗೆ ಹಾಕಬೇಕೆಂದು ಕಂಚುಡ್ಕ ಅವರಿಗೆ ಸುಚಿಸಿದ್ದಾರೆ". ಮೊಂಡು ವಾದ ಮಾಡಿ ರದ್ದಿಗೆ ಹಾಕಿದ ಆ (ಕಷ್ಟದಿಂದ ತಯಾರಿಸಿದ) ಪುಟ ರದ್ದಾಗಿದೆ. ಹೀಗೆ ಕಡಿಸುವವರ ಮಧ್ಯೆ ಯಾರು ವಿಕಿಗೆ ಬರುತ್ತಾರೆ?. ತಪ್ಪು ನೀತಿಯ ಬೆನ್ನುಹಿಡಿದು ಪಾಠ ಮಾಡಿದರೆ ಯಾರು ಸಂಪಾದನೆಗೆ ಬರುತ್ತಾರೆ? ಸಂಪಾದನೆಯೇ ಅಸಾಧ್ಯವಾಗುತ್ತದೆ. ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಿದ್ದೇನೆ. ಆದರೆ ಪ್ರಯೋಜನ ಇಲ್ಲವೆಂದು ಭಾವನೆ ಇದೆ.
 • ನೀವಿಬ್ಬರೂ ಸವಾಲಾಗಿ ಪ್ರಸ್ತುತ ಹೊಸ ಪಟಗಳನ್ನು ಸೃಷ್ಟಿಸಿ- ನಿಮ್ಮ ಸದುದ್ದೇಶವನ್ನ ಆಗ ಒಪ್ಪುತ್ತೇನೆ- ಇಲ್ಲದಿದ್ದರೆ ಅದು ಬಾಯಾಡಂಬರವಾಗುವುದು. (ಪಾಠಮಾಡುವಾಗ ಅನುಭವ ಉಪಯೋಗಕ್ಕೆ ಬರುವುದು)ಮತ್ತು ತೊಂದರೆ ಕೊಡುವುದು, ಅಡ್ಡ ಬರುವುದು ಕೇಡಿಗತನವಾಗಿವುದು. ನಿಮ್ಮವ:Bschandrasgr (ಚರ್ಚೆ) ೧೧:೦೯, ೧೩ ಮೇ ೨೦೧೯ (UTC)
ನನಗೆ ಆ ಪುಟ ಮಾಡಿ ಈ ಪುಟ ಮಾಡಿ ಎಂದು ಆಗ್ರಯಿಸುವ ನೀವೇ ಆ ಪುಟವನ್ನು ಎಲ್ಲಿಂದಲೂ ಕಾಪಿ ಮಾಡದೇ, ಕೊಡುವ ಮಾಹಿತಿಗೆ ಸರಿಯಾದ ಉಲ್ಲೇಖವನ್ನು ನೀಡಿ ಹಾಕಿ ನೋಡೋಣ. ಮೊದಲಿಗೆ ತನ್ನ ಮೇಲೆ ಇವರು ದ್ವೇಷ ಕಾರುತ್ತಾರೆ ಎಂದು ಆರೋಪಿಸುವ ಬದಲು ಯಾಕೆ ಪದೇ ಪದೇ ಹೇಳಿದ್ದನ್ನೇ ಹೇಳುತ್ತಾರೆ. ಮಾಡುತ್ತಿರುವ ತಪ್ಪುಗಳಾದರೂ ಏನು ಎಂಬುದನ್ನು ತಿಳಿದುಕೊಳ್ಳಿ. ಪತ್ರಿಕೆಗಳಲ್ಲಿ ಬಂದ ಮಾಹಿತಿಗೆ ಕಾಪಿರೈಟು ಇಲ್ಲ. ಅದನ್ನು ಹೇಗೆ ಬೇಕಾದರೂ ಕಾಪಿ ಮಾಡಬಹುದು ಎನ್ನುವುದಕ್ಕೆ ಆಧಾರ ನೀಡಿ. (ಯಾವ ಸರ್ಕಾರಿ ಕಡತದಲ್ಲಿ ಹೇಳಿದೆ) ನಾನು ಪ್ರಸ್ತುತ ಹೊಸ ಪುಟವನ್ನು ಸೃಷ್ಟಿಸುತ್ತಿದ್ದೇನೆ. ಪೂರ್ಣ ಆದಾಗ ನಿಮ್ಮ ಚರ್ಚಾ ಪುಟಕ್ಕೆ ಬಂದು ಅಲ್ಲಿಯೇ ಅದರ ಕೊಂಡಿ ಕೊಡುತ್ತೇನೆ. "ಪತ್ರಿಕೆಗಳಲ್ಲಿ ಬರುವ "ಮುಖ್ಯ ವಿಷಯಗಳು" ಅಲ್ಲಿಗೇ- ಅ ದಿನಕ್ಕೇ ಸತ್ತುಹೋಗುತ್ತವೆ. ಅದಕ್ಕೆ ಸಜೀವವಾಗಿ ಇಡಲು ವಿಕಿ ಒಂದು ಅವಕಾಶ ನೀಡಿದೆ." ಎಂದು ಹೇಳುತ್ತೀರಲ್ಲಾ. ವಿಕಿಪೀಡಿಯವು ಪತ್ರಿಕೆಗಳಲ್ಲಿ ಬರುವ ವಿಷಯಗಳನ್ನು ಸಜೀವವಾಗಿಡಲು ಇರುವುದಲ್ಲ. ಅದಕ್ಕೆ ಪತ್ರಿಕೆಯದ್ದೇ ಆರ್ಕೈವುಗಳಿವೆ ಮತ್ತು ಕೊಂಡಿಗಳನ್ನು ಸಜೀವವಾಗಿಡಲು ವೆಬ್.ಆರ್ಕೈವ್.ಆರ್ಗ್ ಇದೆ. ಅದಕ್ಕೆ ವಿಕಿಪೀಡಿಯದ ಅಗತ್ಯ ಇಲ್ಲ. ಈ ತರಹದ ನಿಮ್ಮ ಧೋರಣೆಯಿಂದಲೇ ವಿಕಿಪೀಡಿಯದ ಗುಣಮಟ್ಟ ಹಾಳಾಗುತ್ತಿರುವುದು. --ಗೋಪಾಲಕೃಷ್ಣ (ಚರ್ಚೆ) ೧೨:೧೪, ೧೩ ಮೇ ೨೦೧೯ (UTC)

++

 • ಮಾನ್ಯ ಗೋಪಾಲಕೃಷ್ಣರವರೆ ಮಾತು ತಿರುಗಿಸಬೇಡಿ. ನಿಮ್ಮಿಬ್ಬರ ಮಾತನ್ನು ನನ್ನ ಬಾಯಿಗೆ ತುರಕಬೇಡಿ. ನಾನು ಎಲ್ಲಿಯೂ ಕಾಪಿ ಮಾಡದೆ ಹಾಕುತ್ತೇನೆಂದು ಹೇಳಿಲ್ಲ- ಬದಲಾಗಿ ಸಾರ್ವಜನಿಕ ಮಾಹಿತಿಯನ್ನು ಕಾಪಿ ಮಾಡಿಯೇ ಹಾಕುತ್ತೇನೆ ಅದು ನನ್ನ ಹಕ್ಕು, ಅದು ಕಾಪಿರೈಟ್ ಉಲ್ಲಂಘನೆ ಅಲ್ಲ ಎಂದಿದ್ದೇನೆ. ಆದರೆ ಅದರಲ್ಲಿರುವ ಸ್ವಮತ- ಪರ ವಿರೋಧ ಮತ್ತು ಅಭಿಪ್ರಾಯಗಳನ್ನು ವಿಕಿ ನಿಯಮಕ್ಕೆ ವಿರೋಧವಅದ್ದರಿಂದ ನಾನು ಯಾವಾಗಲೂ ತೆಗೆದುಕೊಂಡಿಲ್ಲ, ಅಗತ್ಯವೂ ಇಲ್ಲ. ಅದರೂ ಅದನ್ನೂ ಕಾಪಿ ಮಾಡಬಾರದೆಂದವರು ಇಲ್ಲದ ಅಧಿಕಕಾನೂನು ಸೇರಿಸಿ ಹೇಳಿದವರು ನೀವಿಬ್ಬರು. "ಉದಾಹರಣೆಗೆ: ೨೦೧೮ರ ಕರ್ಣಾಟಕ ಚುನಾವಣೆಯಲ್ಲಿ ಬಜೆಪಿ ೧೦೬ ಸ್ಥಾನಗಳನ್ನೂ ಕಾಂಗ್ರೆಸ್ ೭೮ ಸ್ಥಾನಗಳನ್ನೂ ಜೆಡಿಎಸ್ ೩೫ ಸ್ಥಾನಗಳನ್ನೂ ಪಡೆದಿದೆ ಎಂದು ಪತ್ರಿಕೆಯಲ್ಲಿದ್ದರೆ ನಾನು ಅದನ್ನು ಹಾಗೆಯೇ ಕಾಪಿಮಾಡಿ ತೆಗೆದು ಕೊಳ್ಳುವವನು (ನೀಉ ಹೇಳಿದಂತೆ ಬದಲಾಯಿಸುವುದಿಲ್ಲ.)- ಕಾಪಿ ರೈಟ್ ಬಗ್ಗೆ ಪತ್ರಿಕೆಯವರು ಕೋರ್ಟಿಗೆ ಹೋದರೂ ನಾನು ಎದುರಿಸಬಲ್ಲೆ'. ಎಲ್ಲ ಆ ಚುನಾವಣೆಯ ಅಂಕೆ ಸಂಖ್ಯೆಗಳನ್ನೂ ನಾನು ಹಾಗೆಯೇ ಹಾಕುವವನು - ನಾನು ಬದಲಾಯಿಸುವುದಿಲ್ಲ." ಆದರೆ "ಅದು ತಪ್ಪು ಎಂದೂ, ಯಾರಿಗೂ ಪ್ರಸ್ತುತ ವಿಷಯ ಪುಟ ತೆರೆಯಲು ಬಿಡದೆ ಕಿರುಕುಳ ಕೊಟ್ಟು ನಾನು ಪ್ರಸ್ತುತವಿಷಯ ಹಾಕದಂತೆ ತಡೆದವರು ನೀವು ಇಬ್ಬರು ಪಂಚತಂತ್ರದ ಮಂತ್ರಿಗಳು. ಆದ್ದರಿಂದ ನೀವು ನನಗೆ ಪ್ರಸ್ತುತ ಪುಟ ಹಾಕಲು ಹೇಳುವ ಅಗತ್ಯವಿಲ್ಲ. ಸುಮಾರು ೮೦- ೧೦೦ ಪ್ರಸ್ತುತ ಲೇಖನಗಳನ್ನು - ರಾಜಕೀಯ , ಕ್ರೀಡೆ. ಅಂತರರಾಷ್ಟ್ರೀಯ ವಿಚಾರಗಳು, ಕಾಮನ್ ವೆಲ್ತ್ ಕ್ರೀದೆಗಳು, ಒಲಮಪಿಕ್ ಕ್ರೀಡೆಗಳು-- ಕ್ರೀಡಅಪಟುಗಳು ಎಲ್ಲಾದರ ಬಗ್ಗೆ ಹಾಕಿದ್ದೇನೆ. ವ್ಯಕ್ತಿ ಕ್ರೀಡಾ ಪಟುಗಳ ವ್ಯಕ್ತಿಗಳ ಹೆಸರು -ತಂದೆ ತಾಯಿ, ಸಾದನೆ ಎಲ್ಲಾ ಕಾಪಿ ಮಾಡಿದ್ದೇನೆ, ಬಲಾಯಿಸಿಲ್ಲ. ಹಿಂದೆ ನಿರ್ವಾಹಕರಾದ ಓಂಶಿವಪ್ರಕಾಶರವರೂ ನೋಡಿ ಒಪ್ಪಿದ್ದಾರೆ. ಅವರು ಅಂಕೆ ಸಂಕ್ಎಗಳಿಗೆ ಕಷ್ವಾದೃ ಅಂಕಣ ಹಾಕಿ ಎಂದು ಸಲಹೆ ನೀಡಿದರು ಅದೇ ರೀತಿ ರಾತ್ರಿಯೆಲ್ಲಾ ನಿದ್ದೆಗೆಟ್ಟು ಕಲಿತು ಹಾಕಿ ಪುಟ ಅಭಿವರದ್ಧಿ ಪಡಿಸಿದೆ. ಮತ್ತೆ ನೀವು ನನಗೆ ಕಲಿಸುವುದು ಬೇಡ. *ಕಲಿಯಬೇಕಾದರು ನೀವು! ಈ ಹತ್ತು ವರ್ಷದಲ್ಲಿ ಒಂದೇ ಒಂದು ಪ್ರಸ್ತುತ ಲೇಖನ ಹಾಕದೆ ಲೇಖನ ಹಾಕುವವರಿಗೆ ಸತತ ಕಿರುಕುಳ ಕೊಟ್ಟು ಪ್ರಸ್ತುತ ಲೇಖನವೇ ಇಲ್ಲದಂತೆ ಮಾಡಿ ನಿಮ್ಮ ಸಾಹಸಕ್ಕೆ ಭುಜತಟ್ಟಿಕೊಂಡವರು ನೀವಿಬ್ಬರು. ಈಗ ಸತತ ತರಬೆತಿ ಮಾಡಿ ಹಣ ವ್ಯರ್ಥಮಾಡಿದ ನೀವು ಕಲಿಯಬೇಕಾಗಿದೆ. ನನಗೆ ನಿಮ್ಮ ಕಿರುಕುಳ ಉಪದೇಶ ಎರಡೂ ಅಗತ್ಯವಿಲ್ಲ. ಏಕೆಂದರೆ ನಿಮಗೆ ಏನೂ ಅನುಭವ ಇಲ್ಲದೆ ಪುಸ್ತಕದ ಬದನೆಕಾಯಿಯಲ್ಲಿ ಅಡುಗೆ ಮಾಡಿ ತರಗತಿ ನೆಡೆಸಿ ಕಲಿಯುವವರಿಗೆ ಊಟದ ನಾಟಕಮಾಡಿ ಬಡಿಸಿ ಹೊಟ್ಟೆ ತುಂಬಿಸಲು ವಿಫಲರಾದವರು. ಅನಗತ್ಯ ಲಕ್ಗಗಟ್ಟಲೆ ಖರ್ಚು ಮಾಡಿ ಒಣಗಿದ ಮರ ಬೆಳಸಿದವರು. ಈಗ ಕಲಿಯಬೇಕಾದ್ದು ನೀವು. ದಯವಿಟ್ಟು ಮಾತು ತಿರುಗಿಸಬೇಡಿ.
 • ಅತ್ಯಂತ ಸಂಕೀರ್ಣವಾದ ಅಮೆರಿಕ ಸಂಯುಕ್ತ ಸಂಸ್ಥಾನದ ಚುನಾವಣೆ ಲೇಖನ ಅಭಿವೃದ್ಧಿ ಪಡಿಸುವಾಗ ಕಲವು ತಕರಾರು ತೆಗೆದವರು ನಿಮ್ಮ ಮಿತ್ರರು, ಅದನ್ನು ಗೌರವದಿಂದ ಸ್ವೀಕರಿಸಿ ಲೇಖನ ತಯಾರಿಸಿದೆ, ಒಬ್ಬರೇ ಒಬ್ಬ ತಜ್ಞರು ಸಹಾಯ ಮಾಡಲಿಲ್ಲ. ಜಗತ್ತಿನ ಬಲಿಷ್ಠ ಪ್ರಜಾಪ್ರಭುತ್ವದ ಚುನಾವಣೆ ಮತ್ತೆ ಬರುತ್ತಿದೆ. ಅದನ್ನು ತಯಾರಿಸಿ ತೋರಿಸಿ. ನನಗೇನೂ ಇದರಿಂದ ಲಾಭವಿಲ್ಲ ಆದರೆ ಖರ್ಚು ಇದೆ ಚಿಂತೆ ಇಲ್ಲ. ಣಾನು ಮಾಡಿದೆ ಎಂಬ ಅಹಂಕಾರವಿಲ್ಲ. ಆದರೆ ತಜ್ಞರೆಂದು ಅಹಂಕಾರ ಪಡುವ ನಿಮ್ಮಿಬ್ಬರಿಂದ ವಿಕಿ ಬಡವಾಯಿತು ಎಂಬ ಬೇಸರವಿದೆ. ಈ ಕನ್ನಡ ವಿಕಿ ಮೊದಲೇ ಹೊಟ್ಟಗಿಲ್ಲದ ಗೋವಿನಂತಿದೆ- ಅದರ ಬಾಯಲ್ಲಿದ್ದ ಸ್ವಲ್ಪ ಹುಲ್ಲನ್ನೂ ಇಬ್ಬರು ಸೇರಿ ಕಿತ್ತುಕೊಂಡಿರಿ. ಕೆಲಸವನ್ನು ಮೆಚ್ಚದಿದ್ದರೂ ಅಷ್ಟೇ ಹೋಯಿತು. ಆದರೆ ಕಿರುಕುಳಿಂದ ವಿಕಿ ಬಡವಾಯಿತು- ಹೊಸಬರು ಬರಲಿಲ್ಲ. ನೀವು ವಿಘ್ನಸಂತೋಷಿಗಳಾಗಿ ಊರೂರುಗಳಲ್ಲಿ ಸಭೆಮಾಡಿ ಫೋಟೋ ವರದಿ ಪುಟ ಬಿಟ್ಟರೆ ಮತ್ತೇನು ಇದೆ. ಅಲ್ಲಿಯ ವಿದ್ಯಅರ್ಥಿಗಳು ವಿಜ್ಞಾನ ಅಥವಅ ಬೇರೆ ಪುಟ ತಯಾರಿಸಿದರೆ ಅಗಕ್ಕೆ ಫೋಟೋ ಹಾಕಿ ಮಾರ್ಗದರ್ಶನ ನಿಡುವವರಿಲ್ಲ, ಇಂಗ್ಲಷ್ ಪುಟಕ್ಕೆ ಲಿಂಕ್‍ಹಾಕುವ ಕ್ರಮ ಹೇಳಿಲ್ಲ. ಜಂಬಕ್ಕಾಗಿಯಲ್ಲ ನಾನು ಕೈಲಾದಷ್ಟು ಆ ಕೆಲಸ ಮಾಡಿದ್ದೇನ. ಜೀವಕೋಶದ ಪುಟ ನೋಡಿ ಇನ್ನೂ ಇವೆ- ಅವು ಬೇಡ.
 • ಮತ್ತೆ ಹೇಳುತ್ತೇನೆ. ಕಲಿಯಬೇಕಾದವರು ಪಾಠಮಾಡುವ ನೀವು, ನಾನು ಅತ್ಯಂತ ಸಂಕೀರ್ಣ ಪುಟಗಳನ್ನು ಬಹಳ ಕಷ್ಟದಿಂದ ತಯಾರಿಸಿ ಹಾಕಿದ್ದೇನೆ- ಜಂಬಕ್ಕೆ ಹೇಳಿದ್ದಲ್ಲ. ಮುಂದೆ ವಿಕಿ ನೆಡಸಬೇಕಾದರು ನೀವು ಕಲಿತು ತೋರಿಸಬೇಕು ಕಲಿಸಬೇಕು. ಮತ್ತೆ ಒಲಂಪಿಕ್ ಬರುತ್ತದೆ, ತಯಾರಾಗಿ, ಕನ್ನಡ ವಿಕಿ ಬೆಳಸಿ. ಕಿರುಕುಳ ಕೊಟ್ಟು ಸಂತೋಷ ಪಡುವುದಕ್ಕಿಂತ ಕಲಿತು ಸಂತೋಷ ಪಡುವುದರಲ್ಲಿ ಹೆಚ್ಚು ಆನಂದವಿದೆ. ನಾನು ಹಾಕಿದ ಎಲ್ಲಾ ಪುಟಗಳನ್ನೂ ನೋಡಿ. ಸಾಮಾನ್ಯ ಜ್ಞಾನ- ಸಾರ್ವತ್ರಿಕ ಜ್ಞಾನಕ್ಕೆ ಕಾಪಿರೈಟ್ ಹಾಕಿಕೊಂಡರೂ ಅದು ಬರದು. ನಾನು ಆ ಕಾನೂನಿನ ತಜ್ಞರು ಬರೆದ ಲೇಖನ ಓದಿದ್ದೇನೆ. ಸ್ವಂತಿಕೆ ಇದ್ದರೆ ಮಾತ್ರಾ ಅದು ಕಾಪಿರೈಟಿಗೆ ಯೋಗ್ಯ. ನನ್ನದು ಅರಣ್ಯ ರೋದನವಾಗಬಹುದು ಬೇಸರವಿಲ್ಲ. ವಿಕಿಗೆ ಪ್ರಸ್ತುತ ಲೇಖನ ಬರೆಯುವ ಬಗ್ಗೆ ನನಗೆ ನಿಮ್ಮಿಂದ ರೇಜಿಗೆ ಹುಟ್ಟಿದೆ. ನಿಮ್ಮವ:Bschandrasgr (ಚರ್ಚೆ) ೧೭:೫೮, ೧೩ ಮೇ ೨೦೧೯ (UTC)
ಕೊನೆಗೂ ನಿಮ್ಮ ಮೊಲಕ್ಕೆ ಮೂರೇ ಕಾಲು ಅಂತಲೇ ಸಾಧಿಸುತ್ತಿದ್ದೀರಿ. ವಿಕಿಪುಟಗಳ ತಯಾರಿಕೆಗೆ ಹೇಳಿದ ವಿಷಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಿರಿ. ಇನ್ನು ಚರ್ಚೆ ವ್ಯರ್ಥ. ವಿಕಿಗುಣಮಟ್ಟ ಹಾಳುಮಾಡುವ ಕೆಲಸವನ್ನು ನಿಲ್ಲಿಸಿ ಎಂಬ ಒಂದೇ ಕೋರಿಕೆ ನಿಮಗೆ. ಧನ್ಯವಾದಗಳು.--ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೩:೫೪, ೧೬ ಮೇ ೨೦೧೯ (UTC)
 • ನಾನು ನಿಮಗೆ ಸಕಾರಣವಾಗಿ ಮೊಂಡುವಾದವೆಂದು ಹೇಳಿದ್ದನ್ನು ನೀವು ವಿನಾಕಾರಣ ನನಗೇ ತುರುಕುತ್ತಿದ್ದೀರಿ, ನಿಮಗೆ ಕೊನೆಗೂ ಒಂದು ಮುಖ್ಯವಾದ ಪ್ರಸ್ತುತ ಲೇಖನ ತಯಾರಿಸಲು ಬರುವುದಿಲ್ಲ ಅಥವಾ ತಯಾರಿಸುವ ಯೋಗ್ಯತೆ ಇಲ್ಲ ಎಂದು ಒಪ್ಪಿಕೊಂಡಂತಾಯಿತು. ನಾನು ಇದುವರೆಗೆ ನೂರಾರು ಪ್ರಸ್ತುತ ಲೇಖನ ತಯಾರಿಸಿದ್ದೇನೆ. ಅಸೂಯೆಯಿಂದ ತುಂಬಿದ ನಿಮಗೆ ಪಥ್ಯವಾಗದೆ ಇರಬಹುದು. ನನಗೆ ನೀವು ಹೇಳುವ ಅವಶ್ಯಕತೆಯೇ ಬರುವುದಿಲ್ಲ. ನಿಮ್ಮ ತರಬೇತಿಗಳು ಹೇಗಿದೆ ಎಂದರೆ, ಒಮ್ಮೆಯೂ ನೀರಿಗೆ ಇಳಿಯದ ವ್ಯಕ್ತಿ ತಾನು ಈಜಿನಲ್ಲಿ ಪ್ರವೀಣನೆಂದು ನೀರಿನಲ್ಲಿ ಇಳಿದವನಿಗೆ ದಡದಲ್ಲಿ ನಿಂತು ತರಬೇತಿ ಕೊಡುವ ತಜ್ಞನೆಂದು ಹೇಳುವ ಆಷಾಢಭೂತಿಯಂತಲ್ಲವೇ? ನಾನು ಯಾರಿಗೂ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿಲ್ಲ; ಅನಗತ್ಯ ಟೀಕೆಮಾಡಿ ಕಿರುಕುಳ ಕೊಡುತ್ತಿಲ್ಲ. ಆದರೆ ಬೇರೆಯವರಿಗೆ ಮಾರ್ಗದರ್ಶನ ಮಾಡುವ ನೀವು - ನಿಮಗೆ ಜವಾಬ್ದಾರಿ ಬಂದಾಗ ನುಣುಚಿಕೊಂಡು ಪರದೂಷಣೆ ಮಾಡುವುದೇಕೆ? - ೨೦೧೮ ರ ಕರ್ನಾಟಕ ಚುನಾವಣೆಯ ಪುಟವನ್ನು ತಜ್ಞರಾದ ನೀವು ತಯಾರಿಸಬಹುದು ಎಂದು ಬಹಳ ದಿನ ಕಾದರೂ ಅದರ ಗೊಡವೆಗೆ ಹೋಗದಿರುವುದನ್ನು ನೋಡಿದೆ. ಬೇರೊಬ್ಬರು ಬೇಸರದಿಂದ ನಮ್ಮ ರಾಜ್ಯದ ಚುನಾವಣೆಯ ಪುಟವನ್ನು ಆರಂಭಿಸಿದರು ಅವರ ಸಹಾಯಕ್ಕೆ ನೀವು- ತಜ್ಞರು ಬರಲಿಲ್ಲ, ನನ್ನ ಕೈಲಾದಷ್ಟು ವಿಸ್ತರಿಸಿದೆ. ಉಳಿದವರು ಸಹಾಯ ಮಾಡಿದರು. ಆದರೆ ಆಗ ನಿಮಗೆ ನಿದ್ದೆ. ಈಗ ಬಹಳ ಪ್ರಾಮುಖ್ಯತೆ ಹೊಂದಿದ ೨೦೧೯ರ ಲೋಕಸಭೆ ಚುನಾವಣೆ ಪುಟ ತಯಾರಿಸಿ ತೋರಿಸಿ ಎಂದರೆ- ಜವಾಬ್ದಾರಿ ಬಂದಾಗ ನುಣುಚಿಕೊಂಡು ಪರದೂಷಣೆ ಮಾಡುವುದೇಕೆ? ಇದು ಆಷಾಢಭೂತಿತನವಲ್ಲವೇ? ನಿಮಗೇ ಬರದೇ ಇರುವ ವಿಷಯದಲ್ಲಿ ಮತ್ತೆ ಅದೇನು ಮಣ್ಣು ತರಬೇತಿ ಕೊಡುತ್ತೀರಿ ಎಂದು ಕೇಳಿದರೆ ತಪ್ಪೇ?. ವಿಕಿಗೆ ಲೇಖನ ಬರದಂತೆ ಮಾಡಿದವರು ನೀವು- ನಿಮ್ಮ ಗೆಳೆಯರು. ಅದಕ್ಕೆ ತರಬೇತಿ ಬೇರೆ. ಆದರೆ ಬೇರೆಯವರು ಮಾಡಿದ್ದನ್ನು ಸಹಿಸುವುದಿಲ್ಲ. ನೀವು ಉತ್ತಮ ಪ್ರಸ್ತುತ ಲೇಖನ ಮಾಡಲು -ಕೇಳಿಕೊಂಡರೂ ಮಾದರಿಯಾಗಿ ಮಾಡಿ ತೊರಿಸಲು ಸಾಮರ್ಥ್ಯವಿಲ್ಲ. ವಿಕಿ ಗುಣಮಟ್ಟವನ್ನು ಹೇಳುವ ನೀವು ಏಕೆ 'ಪ್ರಸ್ತುತ' ಪುಟ ತಯಾರಿಸಬಾರದು? ನಿಮ್ಮ ಅಸಾಮರ್ಥ್ಯಕ್ಕೆ ಮೊಂಡು ವಾದವೆಂದು ನನ್ನನ್ನು ದೂಷಣೆ ಮಾಡುತ್ತಿದ್ದೀರಿ. ವಾಟ್ ಎ ಹಿಪೊಕ್ರಸಿ - ಇಫ್ ನಾಟ್ ವಾಟ್?? - ಸರಿ ನಿಮ್ಮ ಅಸಾಮರ್ಥ್ಯಕ್ಕೆ ನಾವು ಬಲಿ- ವಾದ ನಿಲ್ಲಿಸಬಹುದು. ವಂದನೆಗಳು:Bschandrasgr (ಚರ್ಚೆ) ೧೬:೪೯, ೧೬ ಮೇ ೨೦೧೯ (UTC)

ಅಳಿಸುವ ಬಗೆಗೆ[ಬದಲಾಯಿಸಿ]

 • ತತ್ಸಮ ತದ್ಬವ ಕನ್ನಡ ವ್ಯಾಕರಣದ ಉಪಪುಟ ಅದರಲ್ಲಿರುವ ತತ್ಸಮ ತದ್ಭವ ಗಳಿಗೆ ಉದಾಹರಣೆ ಮತ್ತು ವಿವರಣೆ ಅಗತ್ಯವಾಗಿದೆ ಎಂದ ಮಾತ್ರಕ್ಕೆ. ಅಲ್ಲಿರುವ ಆ ಪುಟದ ಕೊಂಡಿಯನ್ನು ತೆಗೆದು ಹಾಕುವುದು ಸರಿಯಲ್ಲ. ಯಾವುದೇ ಸಂಪಾದಕರು ವಿವರಣೆ ಕೊಡಬಹುದು- ಕೊಡಲು ಅವಕಾಶವಿದೆ. ಕಲವು ವಿಷಯಗಳಿಗೆ ಪಟ್ಟಿ ಮಾತ್ರಾ ಇರುವುದು. ಅದು ತಪ್ಪಲ್ಲ. ಪ್ರತಿಷ್ಠೆಯ ವಿಷಯವಾಗಿ ದುರುದ್ದೇಶದಿಂದ ತೆಗೆದರೆ ಅದು ವಿಧ್ವಂಸಕ ಕೃತ್ಯ- ಅಭಿವೃದ್ಧಿಪಡಿಸಿ ಎಂದರೆ ತೆಗೆದು ಹಾಕುತ್ತೇನೆ ಎನ್ನುವುದು ನನ್ನ ಮೇಲಿನ ದ್ವೇಷಕ್ಕೇ ಎಂದು ಭಾವಿಸಬೇಕಾಗುವುದು. ನನಗೆ ನಷ್ಟವಿಲ್ಲ, ನಿಮಗೂ ಅದು ನಷ್ಟವಿಲ್ಲ, ಕನ್ನಡ ವಿಕಿಗೇ ನಷ್ಟ- ನಿಮಗೆ ಕನ್ನಡ ವಿಕಿಗೆ ಲೇಖನಗಳು ಬರದಿದ್ದರೆ ನಷ್ಟವೇ ಇಲ್ಲ - ವಾಸ್ತವವಾಗಿ ಕನ್ನಡ ವ್ಯಾಕರಣ ಪುಸ್ತಕಗಳಲ್ಲಿ ಕೇವಲ "ತತ್ಸಮ ತದ್ಬವ" ಪಟ್ಟಿಯೇ ಇದೆ. ಅದನ್ನು ನೋಡಿಯೇ ನಾನು ಉಲ್ಲೇಖ ಹಾಕಿದ್ದೇನೆ - ಪುಟವನ್ನೂ ಹಾಕಿದ್ದೇನೆ -ದಯವಿಟ್ಟು ನೋಡಿ. ಏನೇ ಆದರೂ ಅದು ಕನ್ನಡ ವ್ಯಾಕರಣದ ಕೊಂಡಿಯ ಪುಟವಾದ್ದರಿಂದ ತೆಗೆಯಲು ನನ್ನ ವಿರೋಧವಿದೆ. ತಾವು ಈ ಕನ್ನಡ ವಿಕಿಯ ಸರ್ವಾಧಿಕಾರಿಯೇ ಎಂದು ಕೇಳಬೇಕಾಗುವುದು. ಬೇರೆಯವರ ಅಭಿಪ್ರಾಯಕ್ಕೆ ಬೆಲೆ ಇಲ್ಲವೇ? ವಂದನೆಗಳು:Bschandrasgr (ಚರ್ಚೆ) ೧೪:೩೨, ೧೭ ಮೇ ೨೦೧೯ (UTC)