ಸದಸ್ಯ:Br Bharath Kumar/ನನ್ನ ಪ್ರಯೋಗಪುಟ/7

ವಿಕಿಪೀಡಿಯ ಇಂದ
Jump to navigation Jump to search

ಡೊನಾಲ್ಡ್ ಎ. ಗ್ಲೇಸರ್[ಬದಲಾಯಿಸಿ]

ಡೊನಾಲ್ಡ್ ಆರ್ಥರ್ ಗ್ಲೇಸರ್ (ಸೆಪ್ಟೆಂಬರ್ ೨೧, ೧೯೨೬ - ಫೆಬ್ರುವರಿ ೨೮, ೨೦೧೩) ಅಮೆರಿಕದ ಭೌತವಿಜ್ಞಾನಿ ಹಾಗು ನರಜೀವವಿಜ್ಞಾನಿ.

Br Bharath Kumar/ನನ್ನ ಪ್ರಯೋಗಪುಟ/7
Donald Glaser Image 1960.jpg
ಡೊನಾಲ್ಡ್ ಎ. ಗ್ಲೇಸರ್
ಜನನಡೊನಾಲ್ಡ್ ಅರ್ತುರ್ ಗ್ಲೇಸರ್
೨೧ ೧೯೨೬
ಕ್ಲೇವ್ಲ್ಯಾಂಡ್, ಒಹಿಯೊ, ಯು.ಎಸ್.
ಮರಣಫೆಬ್ರುವರಿ 28, 2013(2013-02-28) (ವಯಸ್ಸು 86)
ಬರ್ಕ್ಲೀ, ಕ್ಯಾಲಿಫೋರ್ನಿಯಾ, ಯು.ಎಸ್.
ಕಾರ್ಯಕ್ಷೇತ್ರಭೌತಶಾಸ್ತ್ರ, ಅಣು ಜೀವಶಾಸ್ತ್ರ
ಸಂಸ್ಥೆಗಳು
ಅಭ್ಯಸಿಸಿದ ವಿದ್ಯಾಪೀಠ
ಡಾಕ್ಟರೇಟ್ ಸಲಹೆಗಾರರುಕಾರ್ಲ್ ಡೇವಿಡ್ ಆಂಡರ್ಸನ್
ಪ್ರಸಿದ್ಧಿಗೆ ಕಾರಣ
ಗಮನಾರ್ಹ ಪ್ರಶಸ್ತಿಗಳು
ಸಂಗಾತಿ
  • ರುತ್ ಬೋನ್ನಿ ತೋಮ್ಪ್ಸನ್ (m. ೧೯೬೦; ೨ ಮಕ್ಕಳು)
  • ಲಿನ್ನ್ ಬರ್ಕೋವಿಟ್ಸ್ (m. ೧೯೭೫)

ಇವರಿಗೆ ಭೌತಶಾಸ್ತ್ರ ವಿಷಯಕ್ಕೆ ೧೯೬೦ರಲ್ಲಿ ನೊಬೆಲ್ ಪ್ರಶಸ್ತಿ ದೊರಕಿದೆ.

ವಿಧ್ಯಾಭ್ಯಾಸ[ಬದಲಾಯಿಸಿ]

ಓಹಿಯೋದಲ್ಲಿನ ಕ್ಲೆವೆಲ್ಯಾಂಡ್ನಲ್ಲಿ ಜನಿಸಿದ ಗ್ಲೇಸರ್, ಕೇಸ್ ಸ್ಕೂಲ್ ಆಫ್ ಅಪ್ಲೈಡ್ ಸೈನ್ಸ್ನಲ್ಲಿ ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪೂರ್ಣಗೊಳಿಸಿದರು. ಅವರು 1949 ರಲ್ಲಿ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಪಿಎಚ್ಡಿ ಪಡೆದರು. 1949 ರಲ್ಲಿ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿ ಸ್ಥಾನ ಪಡೆದರು.

ವೈಯಕ್ತಿಕ ಜೀವನ[ಬದಲಾಯಿಸಿ]

ಇವರು ಸೆಪ್ಟೆಂಬರ್ ೨೧ ೧೯೨೬ ರಂದು ಕ್ಲೀವ್ ಲ್ಯಾಂಡ್ನಲ್ಲಿ ಜನಿಸಿದರು. ಇವರ ಪೋಷಕರು ಯಹೂದಿ ವಲಸಿಗರಾದ ಲೆನಾ ಮತ್ತು ವಿಲಿಯಂ ಜೆ ಗ್ಲೇಸರ್. ಗ್ಲೇಸರ್ ಸಂಗೀತವನ್ನು ಆನಂದಿಸುತ್ತಿದ್ದರು. ಪಿಯಾನೋ, ಪಿಟೀಲು, ಮತ್ತು ವಯೋಲಾಗಳನ್ನು ನುಡಿಸುತ್ತಿದ್ದರು. ಕ್ಲೀವ್ಲ್ಯಾಂಡ್ ಹೈಟ್ಸ್ ಹೈಸ್ಕೂಲ್ ನಲ್ಲಿ ಇವರು ಪ್ರೌಢಶಾಲಾ ವಿಧ್ಯಾಭ್ಯಾಸ ನಡೆಸಿದರು. ಇವರು ತಮ್ಮ ೮೬ ನೇ ವಯಸ್ಸಿನಲ್ಲಿ (೨೮ ಫೆಬ್ರವರಿ ೨೦೧೩) ಮರಣ ಹೊಂದಿದರು.

ಆರಂಭಿಕ ವೃತ್ತಿಜೀವನ[ಬದಲಾಯಿಸಿ]

ಗ್ಲೇಸರ್ ಕೇಸ್ ಸ್ಕೂಲ್ ಆಫ್ ಅಪ್ಲೈಡ್ ಸೈನ್ಸ್ನಲ್ಲಿ (ಈಗ ಕೇಸ್ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾನಿಲಯ) ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.ಕಣ ಭೌತಶಾಸ್ತ್ರದಲ್ಲಿ ವಿಶೇಷವಾಗಿ ಆಸಕ್ತಿ ಹೊಂದಿದ್ದ ಇವರು ಇದೇ ವಿಷಯದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುತ್ತಿದ್ದರು. ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ (ಕ್ಯಾಲ್ಟೆಕ್), ಇವರು ಭೌತಶಾಸ್ತ್ರ ವಿಷಯದಲ್ಲಿ ಪಿ.ಹೆಚ್.ಡಿ ಪದವಿಯನ್ನು ಗಳಿಸಿದರು. ಕಣ ಭೌತಶಾಸ್ತ್ರದಲ್ಲಿನ ಇವರ ಆಸಕ್ತಿ ಇವರಿಗೆ, ನೊಬೆಲ್ ಪ್ರಶಸ್ತಿ ವಿಜೇತ ಕಾರ್ಲ್ ಡೇವಿಡ್ ಆಂಡರ್ಸನ್ ಅವರ ಜೊತೆ ಕಾಸ್ಮಿಕ್ ಕಿರಣಗಳ ವಿಷಯದಲ್ಲಿ ಕೆಲಸ ಮಾಡಲು ದಾರಿ ಮಾಡಿಕೊಟ್ಟಿತು. ಇವರು ನೊಬೆಲ್ ಪ್ರಶಸ್ತಿ ವಿಜೇತ ಮ್ಯಾಕ್ಸ್ ಡೆಲ್ಬ್ರಕ್ ನೇತೃತ್ವದ ಅಣು ಜೆನೆಟಿಕ್ಸ್ ವಿಚಾರಗೋಷ್ಠಿಗಳಿಗೆ ಹಾಜರಾಗುತ್ತಿದ್ದರು. ಗ್ಲೇಸರ್ ತಮ್ಮ ಡಾಕ್ಟರೇಟ್ ಪ್ರಬಂಧವಾದ,"ಸಮುದ್ರ ಮಟ್ಟದ ಹತ್ತಿರ ಚಾರ್ಜ್ಡ್ ಕಾಸ್ಮಿಕ್ ರೇ ಕಣಗಳ ಮೊಮೆಂಟಮ್ ವಿತರಣೆ" ಯನ್ನು ೧೯೪೯ ರಲ್ಲಿ ಪೂರ್ಣಗೊಳಿಸಿದರು. ಅವರು 1957 ರಲ್ಲಿ ಮಿಚಿಗನ್ನಲ್ಲಿ ಪ್ರಾಧ್ಯಾಪಕರಾಗಿ ಬಡ್ತಿ ಪಡೆದರು.

ನೊಬೆಲ್ ಪಾರಿತೋಷಕ[ಬದಲಾಯಿಸಿ]

ಬಬಲ್ ಚೇಂಬರ್ ಆವಿಷ್ಕಾರಕ್ಕಾಗಿ ಗ್ಲೇಸರ್ಗೆ ೧೯೬೦ರಲ್ಲಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಆಣ್ವಿಕ ಜೀವಶಾಸ್ತ್ರಕ್ಕೆ ಪರಿವರ್ತನೆ[ಬದಲಾಯಿಸಿ]

ನೊಬೆಲ್ ಪ್ರಶಸ್ತಿ ಪಡೆದ ನಂತರ ಗ್ಲೇಸರ್ ಭೌತಶಾಸ್ತ್ರದಿಂದ ಬೇರೊಂದು ಕ್ಷೇತ್ರದಲ್ಲಿ ತಮ್ಮ ಕೆಲಸ ಮುಂದುವರೆಸಲು ಆಸಕ್ತಿ ತೋರಿದರು. ಗ್ಲೇಸರ್ ಜೀವಶಾಸ್ತ್ರವನ್ನು ಅಧ್ಯಯನ ಮಾಡಲು ಪ್ರಾರಂಭಿಸಿದರು.ಅವರು ಬೇಸಿಗೆಯಲ್ಲಿ ಎಮ್.ಐ.ಟಿ ಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾಗ ಜೀವಶಾಸ್ತ್ರ ವಿಚಾರಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದರು. ಅವರು ಕೋಪನ್ ಹ್ಯಾಗನ್ ನಲ್ಲಿ ಖ್ಯಾತ ಡ್ಯಾನಿಶ್ ಮಾಲಿಕ್ಯುಲರ್ ಜೀವಶಾಸ್ತ್ರಜ್ಞನಾಗಿದ್ದ ಓಲೆ ಮಾಲೋ ಜೊತೆಯಲ್ಲಿ ಒಂದು ಸೆಮಿಸ್ಟರ್ ಅಭ್ಯಾಸದಲ್ಲಿ ತೊಡಗಿಕೊಂಡರು.

ನರಜೀವಶಾಸ್ತ್ರಕ್ಕೆ ಪರಿವರ್ತನೆ[ಬದಲಾಯಿಸಿ]

ಆಣ್ವಿಕ ಜೀವಶಾಸ್ತ್ರವು ಜೀವರಸಾಯನಶಾಸ್ತ್ರದ ಮೇಲೆ ಹೆಚ್ಚು ಅವಲಂಬಿತವಾಗಿರುವುದರಿಂದ, ಗ್ಲೇಸರ್ ಮತ್ತೊಮ್ಮೆ ವೃತ್ತಿ ಬದಲಾಯಿಸಲು ನಿರ್ಧರಿಸಿದರು. ಭೌತಶಾಸ್ತ್ರ ಮತ್ತು ಆಣ್ವಿಕ ಜೀವಶಾಸ್ತ್ರದಲ್ಲಿ ದೃಷ್ಟಿಗೋಚರ ಕೆಲಸಗಳನ್ನು ಸ್ವಯಂಚಾಲಿತಗೊಳಿಸುವ ಅವರ ಅನುಭವವು, ಅವರು ಮಾನವ ದೃಷ್ಟಿ ಮತ್ತು ಮೆದುಳು ಕಂಡದ್ದನ್ನು ಹೇಗೆ ಪ್ರಕ್ರಿಯೆಗೊಳಿಸುತ್ತದೆ ಎಂಬುದರ ಬಗ್ಗೆ ಆಸಕ್ತಿ ತೋರಲು ಕಾರಣವಾದವು. ಅವರು ದೃಷ್ಟಿಗೋಚರ ವ್ಯವಸ್ಥೆ ಮತ್ತು ದೃಷ್ಟಿಗೋಚರ ಮನೋವಿಜ್ಞಾನದ ಕಂಪ್ಯೂಟಿಂಗ್ ಮಾಡೆಲಿಂಗ್ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ನಂತರ ಅವರು ರೌಲ್ಯಾಂಡ್ ಸಂಸ್ಥೆಯಲ್ಲಿ ಏಳು ತಿಂಗಳು ಕಳೆದರು.


ಬಾಹ್ಯ ಕೊಂಡಿಗಳು[ಬದಲಾಯಿಸಿ]

  1. https://www.nobelprize.org/nobel_prizes/physics/laureates/1960/glaser-bio.html
  2. https://www.nobelprize.org/nobel_prizes/physics/laureates/1960/glaser-facts.html
  3. https://www.nobelprize.org/nobel_prizes/physics/laureates/1960/
  4. http://instrumentationlab.berkeley.edu/
  5. http://news.berkeley.edu/2013/03/01/physics-nobelist-and-biotech-pioneer-donald-glaser-dies-at-86/
  6. https://www.britannica.com/biography/Donald-A-Glaser
  7. https://en.wikiquote.org/wiki/Donald_A._Glaser

ಉಲ್ಲೇಖಗಳು[ಬದಲಾಯಿಸಿ]

  1. https://www.osti.gov/accomplishments/glaser.html