ಸದಸ್ಯ:BVRsowmya/ನನ್ನ ಪ್ರಯೋಗಪುಟ
ಗೋಚರ
ಸುರೇಂದ್ರ ನಾಥ ಬ್ಯಾನರ್ಜಿ : ಭಾರತದ ರಾಷ್ರೀಯ ಚಳುವಳಿಯ ಪಿತಾಮಹ
ಭಾರತದ ರಾಷ್ರೀಯ ಚಳುವಳಿಯ ಆರಂಭದ ಹಂತದಲ್ಲಿ ಮೂಡಿಬಂದ ಸೌಮ್ಯವಾದಿ ಬುದ್ದಿಜೀವಿ ಜನನಾಯಕರಲ್ಲಿ ಸುರೇಂದ್ರನಾಥ ಬ್ಯಾನರ್ಜಿ ಗಮನಾರ್ಹ ರಾಗಿದ್ದಾರೆ. ಏಕೆಂದರೆ ಆಗಿನ್ನೂ ರಾಷ್ರೀಯ ಆಂದೋಲನದ ಅರಿವೇ ಇಲ್ಲದ ಸಮಯ ಆದಗಿದ್ದಿತು.ಅಂಥಹ ವೇಳೆಯಲ್ಲಿ ಲೇಖನ ಭಾಷಣಗಳ ಮೂಲಕ ಬ್ರಿಟಿಷರ ಅನ್ಯಾಯಗಳ ಮೇಲೆ ಬೆಳಕು ಚೆಲ್ಲಿ ಜನತೆಯನ್ನು ಹುರಿದುಂಬಿಸಿದರು.' ಎ ನೇಷನ ಇಸ್ ದಿ ಮೇಕಿಂಗ್ ' ಎಂಬುದು ಅವರ ಪ್ರಮುಖ ಆ ಕೃತಿಯಾಗಿದ್ದಿತು.ಅನ್ಯಾಯಗಳ ವಿರುದ್ದ ಸೆಟೇದು ನಿಂತರು.ಆ ಹಿನ್ನಲೆಯಲ್ಲಿ ಅವರು ಭಾರತದ ರಾಷ್ರೀಯ ಚಳುವಳಿಯ ಪಿತನೆಂದು ಪರಿಗಣಿತರಾದ ಸುರೇಂದ್ರನಾಥ್ ಬ್ಯಾನರ್ಜಿ ಕಲ್ಕತ್ತಾದ ಚರೆನ್ ಬ್ಯಾನರ್ಜಿಯವರ ಪುತ್ರ.ಲಂಡನ್ ನಲ್ಲಿ ವಿದ್ಯಾರ್ಜ್ನನೆ ಮಾಡಿ ಐ.ಸಿ.ಎಸ್.ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರಥಮ ಭಾರತೀಯ ಇವರಾದರು.ಅಪ್ರಾಪ್ತರೆಂಬ ನೆಪ ಒಡ್ದಿದ ಅಧಿಕಾರಿಗಳು ಬ್ಯಾನರ್ಜಿಯವರನ್ನು ಆಡಳಿತ ಸೇವೆಯಿಂದ ದೂರ ಸರಿಸಿದರು.ದೇಶಕ್ಕೆ ಮರಳಿದ ಬ್ಯಾನರ್ಜಿ ಜನಸೇವೆಗೆ ತಮ್ಮ ಜೀವನ ಮೂಡುಪಾಗಿಸಿದರು.
"ದಿ ಬಂಗಾಳ್'ಪತ್ರಿಕೆಯನ್ನು ಆರಂಭಿಸಿ ಜನರಲ್ಲಿ ರಾಷ್ಟಬಿಮಾನ ಮೂಡಿಸಿ ಸ್ವಾತಂತ್ರ್ಯ ಚಳುವಳಿಗೆ ಸಜ್ಜುಗೂಳಿಸಿದರು. ೧೮೭೬ರಲ್ಲಿ ಇಂಡಿಯನ್ ಅಸೋಸಿಯೆಷನ್, ೧೮೮೨ ರಲ್ಲಿ ರಿಪ್ಪನ್ ಕಾಲೇಜು ,೧೮೮೩ರಲ್ಲಿ ಇಂಡಿಯನ್ ನ್ಯಾಷನಲ್ ಕಾನಫರೆನ್ಸ್ ಸ್ಥಾಪನೆ ಮಾಡಿದರು. ಭಾರತದ ರಾಷ್ರೀಯ ಕಾಂಗ್ರೆಸ್ ಸ್ಥಾಪನೆಗೆ ಮುಂಚಿನ ಅಖಿಲ್ ಭಾರತ ಮಟ್ಟದ ಮೊದಲ ಸಂಸ್ಥೆ ಎಂದರೆ ಬ್ಯಾನರ್ಜಿಯವರ ಇಂಡಿಯನ್ ನ್ಯಾಷನಲ್ ಕಾನಫಾರೆನ್ಸ್ ಆಗಿದ್ದಿತು. ಎರಡು ಬಾರಿ ಕಾಂಗ್ರೆಸ್ ಅದ್ಯಕ್ಷರಗಿದ್ದು ಅದಕ್ಕೆ ಶಕ್ತಿ ತುಂಬಿದರು .ಐ.ಸಿ.ಎಸ್.ಸ್ಪರ್ದಾತ್ಮಕ ಪರೀಕ್ಷೆಗೆ ಕೂರಲು ಭಾರತೀಯ ಅಭ್ಯರ್ಥಿಗಳಿಗೆ ನಿಗದಿಗೊಳಿಸಿದ್ದ ವಯೋಮಿತಿಯನ್ನು ೨೨ ವರ್ಷ್ಗಗಳಿಂದ್ ೧೯ ವರ್ಷಗಳಿಗೆ ಇಳಿಸಿ ಹೊರಡಿಸಿದ ಬ್ರಿಟಿಷ್ ಷಡ್ಯ್ಂತ್ರದ ವಿರುದ್ದ ದೇಶವ್ಯಾಪಿ ಚಳುವಳಿಯನ್ನು ವ್ಯವಸ್ಥೆಗೊಳಿಸಿ ಆಂದೋಲನವನ್ನೆ ಉಂಟು ಮಾಡಿದರು.ಈ ಕಾರಣದಿಂದಾಗಿ ಬ್ರಿಟಿಷರು ಸುರೇಂದ್ರನಾಥ ಬ್ಯಾನರ್ಜಿಯವರನ್ನು" ಭಾರತದ ಪ್ರಕ್ಷುಬ್ದತೆಯ ಹರಿಕಾರ"
ಎಂದು ಪರಿಗಣಿಸಿದ್ದರು.