ಸದಸ್ಯ:Ashwini N/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಭುವನಗಿರಿ ಭುವನೇಶ್ವೇರಿ ದೇವಸ್ಥಾನ

ಭುವನೇಶ್ವರಿ ತಾಯಿಯು ಹತ್ತು ಮಹಾವಿದ್ಯಾ ದೇವತೆಗಳಲ್ಲಿ ಒಬ್ಬಳು ಹಾಗೂ ತಾಯಿ ದುರ್ಗೆಯ ಒಂದು ಅಂಶ."ಭುವನೇಶ್ವರಿ" ಅಂದರೆ ಈ ವಿಶ್ವದ ತಾಯಿ."ವಿಶ್ವ"ವೆಂದರೆ ತ್ರಿ-ಭುವನಗಳು,ಭೂಮಿ,ವಾತಾವರಣ ಮತ್ತು ಸ್ವರ್ಗ.[೧]

ಸ್ಥಳ ಪರಿಚಯ[ಬದಲಾಯಿಸಿ]

ಶ್ರೀ ಭುವನೇಶ್ವರಿ ದೇವಾಲಯ,ಭುವನಗಿರಿ,ಸಿದ್ಧಾಪುರ ತಾಲ್ಲೂಕು,ಉತ್ತರ ಕನ್ನಡ ಜಿಲ್ಲೆ.ಸಿದ್ಧಾಪುರದಿಂದ ಭುವನಗಿರಿಗೆ ಸರಿಸುಮಾರು ೮ ಕಿಲೋ.ಮೀಟರ್ ಅಂತರವಿದೆ.[೨]


ದೇವಾಲಯದ ಇತಿಹಾಸ[ಬದಲಾಯಿಸಿ]

ಭುವನೇಶ್ವರಿ ದೇವಾಲಯದ ನಿರ್ಮಾಣವು ಕದಂಬರ ಕಾಲದಲ್ಲಿಯೇ ಪ್ರಾರಂಭಗೊಂಡಿತು. ಆದರೆಅದರ ನಿರ್ಮಾಣದ ಕಾರ್ಯ ಪೂರ್ಣಗೊಳಲ್ಲಿಲ್ಲ.ನಂತರ ವಿಜಯನಗರದ ಸಾಮ್ರಾಜ್ಯದ ಕಾಲದಲ್ಲಿಆ ದೇವಸ್ಥಾನದ ನಿರ್ಮಾಣದ ಕಾರ್ಯ ಮುಂದುವರಿಯಿತು.ಕೊನೆಗೆ ೧೬೯೨ರಲ್ಲಿ ಬಿಳಗಿ ಸಾಮ್ರಜ್ಯದಆರಸರು ಆ ದೇವಸ್ಥಾನವನ್ನು ಪೂರ್ಣವಾಗಿ ಕಟ್ಟಿದರು.ಇದನ್ನು ಪೂರ್ಣವಾಗಿ ಕಟ್ಟುವುದರ ಜವಬ್ದಾರಿಯನ್ನು ವಹಿಸಿಕೊಂಡವರು ಬಿಳಗಿ ಸಾಮ್ರಾಜ್ಯದ ಕೊನೆಯ ಆರಸ ಬಸವೇಂದ್ರ.ಬಿಳಗಿಯ ಹಿಂದಿನ ಹೆಸರು ಶ್ವೇತಪುರವೆಂದಾಗಿತ್ತು.[೩]

ನಮ್ಮ ಕರ್ನಾಟಕದ ರಾಜ್ಯದಲ್ಲಿಯೇ ಕನ್ನಡಮಾತೆಯಾದ ಭುವನೇಶ್ವರ ತಾಯಿಯ ದೇವಾಲಯ ಸಿದ್ದಾಪುರದಲ್ಲಿ ಕಾಣಸಿಗುತ್ತದೆ.ಈ ದೇವಾಲಯದ ಬಳಿ ಒಂದು ತಿಳಿ ನೀರಿನ ಕೆರೆ ಇದೆ.ಈ ಕೆರೆಯ ನೀರನ್ನು ಆ ದೇವಿಯ ಕಾರ್ಯ-ಕ್ರಮಗಳಿಗೆ ಮಾತ್ರ ಬಳಿಸಲಾಗುವುದು.ಅದನ್ನು ಹೊರತುಪಡಿಸಿ ಜಾನುವಾರುಗಳಿಗಾಗಲಿ,ಮೀನು ಹಿಡಿಯುವುದಕ್ಕಾಗಲಿ ಮತ್ತು ಬಟ್ಟೆಗಳನ್ನು ಹೊಗೆಯುದಕ್ಕಾಗಲಿ ಅಲ್ಲಿಅನುಮತಿ ಇಲ್ಲ.ಕೆರೆಯನ್ನು ದಾಟಿದ ಬಳಿಕ ದೇವಾಸ್ಥಾನಕ್ಕೆ ಹೋಗಲು ಮೆಟ್ಟಿಲುಗಳು ಇವೆ.೩೫೦ ಮೆಟ್ಟಿಲುಗಳು ದೇವಾಸ್ಥಾನದ ದ್ವಾರಕ್ಕೆ ತಲುಪಲು ಇವೆ.ಈ ದೇಗುಲವು ೩೦೦ ಅಡಿ ಎತ್ತರದ ಭುವನಗಿರಿ ಬೆಟ್ಟದ ಮೇಲೆ ಸ್ಥಾಪಿತಗೊಂಡಿದೆ. ಈ ದೇವಾಲಯವು ಅರಣ್ಯದ ಮಧ್ಯಭಾಗದಲ್ಲಿ ಇದೆ.ಅದು ಪಶ್ಚಿಮಘಟ್ಟಗಳ ಒಂದು ಭಾಗ.ಭುವನೇಶ್ವರಿ ದೇವಿಯ ದೇವಾಲಯವಲ್ಲದೆ ಇನ್ನೂ ಹಲವಾರು ದೇವಸ್ಥಾನಗಳು ಗಣಪತಿ,ಗೋಪಾಲ ಕೃಷ್ಳನ,ನಂದೀಕೇಶ್ವರನ ದೇವಸ್ಥಾನ ಮತ್ತು ನಾಗರದೇವತೆಗಳದೇವಾಲಯವಿದೆ .ಮುಂಜಾನೆ ಸಮಯದಲ್ಲಿ ಮಹಾಮಂಗಳಾರತಿ ಮಾಡುವುದು ರೂಢಿ.ಈ ದೇವಾಲಯವು ಕರುನಾಡು ರಾಜಜೇಶ್ವರಿ ಭುವನಗಿರಿಯ ಭುವನೇಶ್ವರಿ ಎಂದು ಹೆಸರುವಾಸಿಶ್ರೀ ಭುವನೇಶ್ವರಿ ದೇವಿಯ ಉದ್ಭವಲಿಂಗವು ಆ ದೇವಿಯ ಪಾದತಳದಲ್ಲಿದೆ.ಶ್ರೀಧರ್ ಭಟ್ಟರು ಪ್ರಸ್ತುತಆ ದೇವಾಲಯದ ಅರ್ಚಕರು.ಭುವನೇಶ್ವರಿ ದೇವಾಲಯದಷ್ಟೇ ಪುರಾತನವಾದ್ದು ಮತ್ತೊಂದು ದೇವಾಲಯವು ಆದ ಹನುಮಂತನ ದೇವಸ್ಥಾನವು ಇದೆ.ಆ ದೇವಸ್ಥಾನವು ಸಿದ್ದಾಪುರದಿಂದ ೫ ಕಿಲೋಮೀಟರುಗಳು ಇವೆ.ಹೀಗೆ ಎರಡು ಪುರಾತನ ದೇವಾಲಯಗಳು ಉತ್ತರ ಕನ್ನಡ ಜಿಲ್ಲೆಯ ಸಮೀಪದಲ್ಲಿ ಕಾಣಸಿಗುತ್ತವೆ.[೪]

ಉಲ್ಲೇಖಗಳು[ಬದಲಾಯಿಸಿ]

<reference/>

  1. http://kannadashining.blogspot.in/2016/04/bhuvaneshwari-devi.html
  2. https://www.ixigo.com › siddapur tourism › places to visit
  3. matthuga.in/bhuvanagiri.php
  4. https://en.wikipedia.org/wiki/Siddapur_taluk