ಸದಸ್ಯ:Arunbranco/sandbox

ವಿಕಿಪೀಡಿಯ ಇಂದ
Jump to navigation Jump to search
                ಸರ್ ಎಂವಿ ಭಾರತ ಕಂಡ ವಿಶ್ವವಿಖ್ಯಾತ ಇಂಜಿನಿಯರ್

ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಮುದ್ದೇನಹಳ್ಳಿಯಲ್ಲೆ ನಡೆಯಿತು.ತಂದೆ ಶ್ರೀನಿವಾಸಶಾಸ್ತ್ರಿಗಳು ತೀರ್ಥಯಾತ್ರೆಯ ನಿಮಿತ್ತ ರಾಯಚೂರಿನಿಂದ ಹಿಂದಿರುಗುವಾಗ ಮಾರ್ಗಮಧ್ಯೆ ಸ್ವರ್ಗಸ್ಥರಾದರು.ಆಗ ವಿಶ್ವೇಶ್ವರಯ್ಯನವರ ವಯಸ್ಸು ಕೇವಲ 15 ವರ್ಷ.ತಂದೆಯ ಮರಣದ ನಂತರ ತಾಯಿ ವೆಂಕಟಲಕ್ಷಮಮ್ಮನವರಿಗೆ ವಿಶ್ವೇಶ್ವರಯ್ಯನವರ ಶಿಕ್ಷಣ ಮುಂದುವರೆಸುವ ಬಗ್ಗೆ ಚಿಂತೆ ಕಾಡತೊಡಗಿತು, ವಿಷಯ ತಿಳಿದ ವಿಶ್ವೇಶ್ವರಯ್ಯನವರ ಸೋದರಮಾವನವರಾದ ರಾಮಯ್ಯನವರು ವಿಶ್ವೇಶ್ವರಯ್ಯನವರನ್ನ ಬೆಂಗಳೂರಿಗೆ ಕರೆಯಿಸಿ (1875 ರಲ್ಲಿ) ವೆಸ್ಲಿಯನ್ ಮಿಷನ್ ಪ್ರೌಡಶಾಲೆಗೆ ಸೇರಿಸಿದರು.ತಮ್ಮ 24 ನೆ ವಯಸ್ಸಿನಲ್ಲೆ (1884) ಬೊಂಬಾಯಿ ಪ್ರಾಂತ್ಯದಲ್ಲಿ ಸಹಾಯಕ ಇಂಜಿನಿಯರ್ ಅಧಿಕಾರಿಯಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿ ಸತತ 24 ವರ್ಷಗಳಷ್ಟು ಕಾಲ ಇಂಜಿನಿಯರಿಂಗ್ ವಿಭಾಗದ ಎಲ್ಲ ಉನ್ನತ ಹುದ್ದೆಗಳಿಗೂ ಬಹಳ ಬೇಗ ತಮ್ಮ ಸಾಮರ್ಥ್ಯ ಮತ್ತು ದಕ್ಷತೆಯಿಂದ ಮೇಲೆರಿದರು.

      * ಮೊದಲ ಯೋಜನೆ : ಪಂಜ್ರಾ ನದಿಯಿಂದ ದಾತಾರಿ ಗ್ರಾಮಕ್ಕೆ "ಸೈಫನ್" ವಿಧಾನದಿಂದ ನೀರು ಹಾಯಿಸುವ ಕೆಲಸ. ಕೆಲಸಕ್ಕೆ ಸೇರಿದ 20 ತಿಂಗಳಲ್ಲೆ ಇಲಾಖೆಯ ಪರೀಕ್ಷೆಯಲ್ಲಿ ಉತ್ತಿರ್ಣರಾಗಿ ಮೊದಲ ದರ್ಜೆಯ ಇಂಜಿನಿಯರ್ ಆದರು ಸಿಂಧ್ ವಿಭಾಗದ ಸೆಕ್ಕೂರಿಗೆ ನದಿಯಿಂದ ಕುಡಿಯುವ ನೀರನ್ನು ಒದಗಿಸುವ ಯೋಜನೆ. * ತಪತಿ ನದಿಯಿಂದ ಸೂರತ್ ನಗರಕ್ಕೆ ನೀರೊದಗಿಸುವ ಕಾರ್ಯಯೋಜನೆ. ಪುಣೆ ಮತ್ತು ಸುತ್ತಲಿನ ದಂಡಿನ ಕರ್ಕಿಗೆ ಮೂಸಾ ನದಿಯ ಕಾಲುವೆಯಿಂದ ನೀರು ಒದಗಿಸಲಾಗುತ್ತಿತ್ತು-"ಪೈಪ್" ಜಲಾಶಯದಲ್ಲಿ "ಸ್ವಚ್ಚಲೀ"-ಸ್ವಯಂ ಚಾಲಿತ ಕವಾಟಗಳನ್ನು ಅಳವಡಿಸಿ ಯೋಜನೆಯನ್ನು ಯಶಸ್ವಿಗೊಳಿಸಿದರು-"ಸ್ವಚ್ಚಲೀ" ತಂತ್ರಜ್ಞಾನಕ್ಕೆ ಪೆಟೆಂಟ್ ಪಡೆದುಕೊಂಡರು. * 1904ರಲ್ಲಿ ಬೊಂಬಾಯಿ ಪ್ರಾಂತ್ಯದಲ್ಲಿ ಸ್ಯಾನಿಟರಿ ವಿಭಾಗದ ಇಂಜಿನಿಯರ್ ಹುದ್ದೆಗೇರಿದರು. * 1906ರಲ್ಲಿ ಲಂಡನ್ ನ -ಏಡನ್ ನಗರದ ನೆರವಿಗೆ ಧಾವಿಸಿ ಅಲ್ಲಿನ ನೀರಿನ ಮತ್ತು ಒಳಚರಂಡಿಯ ಯೋಜನೆಗಳನ್ನು ಸಮರ್ಪಕವಾಗಿ ನೆರವೇರಿಸಿದರು. * 1907ರಲ್ಲಿ ಸ್ಯಾನಿಟರಿ ವಿಭಾಗದ ಜೊತೆಗೆ ಇನ್ನು ಎರಡು ವಿಭಾಗದ ಹೊಣೆಗಾರಿಕೆ ಸೇರಿದವು ಅವುಗಳನ್ನು ಸಮರ್ಪಕವಾಗಿ ನಿಭಾಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಬ್ಯಾಂಕುಗಳ ಸ್ಥಾಪನೆ -ಸ್ಟೇಟ್ ಬ್ಯಾಂಕ್ ಆಫ್ ಮೈಸೂರು * ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಲ್ಲು ಬಹಳ ಮುಖ್ಯ ಪಾತ್ರ ವಹಿಸಿದರು. * 1916 ರಲ್ಲಿ ಮೈಸೂರು ವಿಶ್ವವಿದ್ಯಾಲಯ ಸ್ವತಂತ್ರ ವಿಶ್ವವಿದ್ಯಾಲಯವಾಗಿ ಕೆಲಸ ಮಾಡಲು ಪ್ರಾರಂಭಿಸಿತು. * ಭದ್ರಾವತಿ ಕಬ್ಬಿಣ ಕಾರ್ಖಾನೆಯ ಸ್ಥಾಪನೆ * ಕನ್ನಂಬಾಡಿ ಕಟ್ಟೆಯ ಸ್ಥಾಪನೆ * ಕೋಲಾರದ ಚಿನ್ನದ ಗಣಿಗೆ ಮೊಟ್ಟ ಮೊದಲಬಾರಿಗೆ ವಿದ್ಯುತ್ ಪೂರೈಕೆ. * ಗಂಧದ ಎಣ್ಣೆ ಕಾರ್ಖಾನೆ ಮತ್ತು ಸಾಬೂನು ಕಾರ್ಖಾನೆಯ ಸ್ಥಾಪನೆ * ಬಾಳೇಹೊನ್ನೂರಿನ ಕಾಫಿ ಪ್ರಯೋಗ ಕ್ಷೇತ್ರವನ್ನು ವಿಸ್ತರಿಸಿ ಅಬಿವೃದ್ಧಿಗೊಳಿಸಿದರು. * ಹಳ್ಳಿಗಳಲ್ಲಿ ಗ್ರಾಮಸಮಿತಿಗಳನ್ನು ರಚಿಸಿದರು. * 1949ರಲ್ಲಿ ಗ್ರಾಮ ಔದ್ಯೋಗಿಕರಣದ ಯೋಜನೆ ತಯಾರಿಸಿ ಭಾರತ ಸರ್ಕಾರದ ಅನುಮೋದನೆಗೆ ಒಪ್ಪಿಸಿದರು. * 1914ರಲ್ಲಿ ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಸ್ಕೂಲನ್ನು ಸ್ಥಾಪಿಸಿದರು.