ಸದಸ್ಯ:Appanna P P/WEP 2018-19 dec

ವಿಕಿಪೀಡಿಯ ಇಂದ
Jump to navigation Jump to search
ಜಿ ಹೆಚ್ ಹಾರ್ಡಿ
Ghhardy@72.jpg
ಜಿ ಹೆಚ್ ಹಾರ್ಡಿ
ಜನನ೭ ಫೆಬ್ರುವರಿ ೧೮೭೭
ಕ್ರಾನ್ಲೀಗ್ ,ಇಂಗ್ಲೆಂಡ್
ಮರಣ೧ ಡಿಸೆಂಬರ್ ೧೯೪೭
ಕೇಂಬ್ರಿಡ್ಜ್ ,ಇಂಗ್ಲೆಂಡ್
ಕಾರ್ಯಕ್ಷೇತ್ರಗಣಿತಶಾಸ್ತ್ರ
ಗಮನಾರ್ಹ ಪ್ರಶಸ್ತಿಗಳು
  • ಸ್ಮಿಥ್  ಪ್ರಶಸ್ತಿ(೧೯೦೧)
  • ರಾಯಲ್  ಮೆಡಲ್(೧೯೨೦)
  • ಡಿ ಮಾರ್ಗನ್  ಮೆಡಲ್(೧೯೨೧)
  • ಸಿಲ್ವೆಸ್ಟರ್ ಮೆಡಲ್(೧೯೪೦)
  • ಕೊಪ್ಲೆ ಮೆಡಲ್(೧೯೪೭)

ಗಾಡ್ಫ್ರೆ ಹೆರಾಲ್ಡ್ ಹಾರ್ಡಿ ಅವರು (೭ ಫೆಬ್ರುವರಿ ೧೮೭೭ - ೧ ಡಿಸೆಂಬರ್ ೧೯೪೭) ಪ್ರಸಿದ್ದ ಗಣಿತಜ್ಞರಾಗಿದ್ದರು.

ಜೀವನ[ಬದಲಾಯಿಸಿ]

ಜಿ ಎಚ್ ಹಾರ್ಡಿ ಇಂಗ್ಲೆಂಡಿನ ಕ್ರಾನ್ಲೀಗ್ ಅಲ್ಲಿ ೭ ಫೆಬ್ರವರಿ ೧೮೭೭ ರಂದು ಬೋಧನಾ ಕುಟುಂಬಕ್ಕೆ ಜನಿಸಿದರು. ಅವರ ತಂದೆ ಕ್ರಾನ್ಲೀಗ್ ಶಾಲೆಯಲ್ಲಿ ಆರ್ಟ್ ಮಾಸ್ಟರ್ ಆಗಿದ್ದರು.ಅವರ ತಾಯಿ ಲಿಂಕನ್ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಹಿರಿಯ ಪ್ರಾದ್ಯಪಕರಾಗಿದ್ದರು. ಇಬ್ಬರೂ ಪೋಷಕರು ಗಣಿತಶಾಸ್ತ್ರದಲ್ಲಿ ಒಲವು ಹೊಂದಿದ್ದರು.ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿ ಗಣಿತಶಾಸ್ತ್ರದ ಕಡೆಗೆ ಆಕರ್ಷಿತರಾದರು .

ಶಿಕ್ಷಣ ಮತ್ತು ವೃತ್ತಿ ಜೀವನ[ಬದಲಾಯಿಸಿ]

ಕ್ರಾನ್ಲೀಗ್‌ ಅಲ್ಲಿ ಶಿಕ್ಷಣ ಪಡೆದ ನಂತರ ಹಾರ್ಡಿ ಅವರಿಗೆ ತಮ್ಮ ಗಣಿತಶಾಸ್ತ್ರದ ಕೆಲಸಕ್ಕಾಗಿ ವಿಂಚೆಸ್ಟರ್ ಕಾಲೇಜಿಗೆ ವಿದ್ಯಾರ್ಥಿವೇತನವನ್ನು ನೀಡಲಾಯಿತು. ೧೮೯೬ ರಲ್ಲಿ ಅವರು ಕೇಂಬ್ರಿಡ್ಜಿನ ಟ್ರಿನಿಟಿ ಕಾಲೇಜು ಪ್ರವೇಶಿಸಿದರು. ಅವರ ತರಬೇತುದಾರರಾದ ರಾಬರ್ಟ್ ಅಲ್ಫ್ರೆಡ್ ಹರ್ಮನ್ ಅವರ ಬಳಿ ಕೇವಲ ಎರಡು ವರ್ಷಗಳ ತಯಾರಿಕೆಯ ನಂತರ ಹಾರ್ಡಿ ಮ್ಯಾಥಮ್ಯಾಟಿಕ್ಸ್ ಟ್ರೈಪೋಸ್ ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನ ಪಡೆದರು. ವಿಶ್ವವಿದ್ಯಾನಿಲಯದಲ್ಲಿರುವಾಗ ಅವರು ಕೇಂಬ್ರಿಡ್ಜ್ ಅಪೋಸ್ಲೆಲ್ಸ್ ಎಂಬ ಸಮಾಜಕ್ಕೆ ಸೇರಿದರು. ೧೯೦೦ ರಲ್ಲಿ ಅವರು ಟ್ರೈಪೋಸ್ ಪ್ರರಿಕ್ಷೆಯ ಎರಡನೇ ಭಾಗದಲ್ಲಿ ಉತ್ತಿರ್ಣರಾದ ನಂತರ ಅವರಿಗೆ ಕಾಲೇಜು   ಫೆಲೋಷಿಪ್‌ಗೆ ಆಯ್ಕೆಯಾದರು. ೧೯೦೩ ರಲ್ಲಿ ಅತ್ಯುನ್ನತ ಶೈಕ್ಷಣಿಕ ಪದವಿಯಾದ ಎಂ ಎ ಪದವಿಯನ್ನು ಇಂಗ್ಲಿಷ್ ವಿಶ್ವವಿದ್ಯಾನಿಲಯಗಳಲ್ಲಿ ಪಡೆದರು. ೧೯೦೬ ರಲ್ಲಿ ಅವರು ಉಪನ್ಯಾಸಕರಾಗಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಲು ಪ್ರಾರಂಭಿಸಿದರು. ೧೯೧೯ ರಲ್ಲಿ ಅವರು ವಿಶ್ವ ಸಮರ ಸಮಯದಲ್ಲಿ ಕೇಂಬ್ರಿಡ್ಜ್ ಅನ್ನು ತೊರೆದು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಸೇರಿಕೊಂಡರು. ಹಾರ್ಡಿ ಅವರು ೧೯೨೮ - ೧೯೨೯ ರ ಶೈಕ್ಷಣಿಕ ವರ್ಷದಲ್ಲಿ ಪ್ರಿನ್ಸ್‌ಟನ್ ಅಲ್ಲಿ ಶೈಕ್ಷಣಿಕ  ವರ್ಷವನ್ನು ಕಳೆದ ಆಸ್ವಾಲ್ಡ್ ವೆಬ್ಲೆನ್ ಅವರೊಂಡಿಗೆ ವಿನಿಮಯ ಮಾಡಿಕೊಂಡರು. ೧೯೩೧ ರಲ್ಲಿ ಹಾರ್ಡಿ ಅವರು ಆಕ್ಸ್‌ಫರ್ಡ್ ಅನ್ನು ಬಿಟ್ಟು ಕೇಂಬ್ರಿಡ್ಜ್‌ಗೆ ಮರಳಿದರು. ಅಲ್ಲಿ ಅವರು ೧೯೪೨ ರವರೆಗೂ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸಿದರು.ಗಾಡ್ಫ್ರೆ ಹೆರಾಲ್ಡ್ ಹಾರ್ಡಿ ಅವರು ಸಂಖ್ಯೆಯ ಸಿದ್ಧಾಂತ ಮತ್ತು ಗಣಿತ ವಿಶ್ಲೇಷಣೆಯಲ್ಲಿನ ಸಾಧನೆಗಾಗಿ ಹೆಸರುವಾಸಿಯಾಗಿದ್ದಾರೆ.ಅವರು ೧೯೦೮ ರಲ್ಲಿ ಜೀವಶಾಸ್ತ್ರದಲ್ಲಿ ಜನಸಂಖ್ಯೆಯ ತಳಿಶಾಸ್ತ್ರದ ಮೂಲಭೂತ ತತ್ತ್ವವಾದ ಹಾರ್ಡಿ-ವೈನ್ಬರ್ಗ್ ತತ್ವಕ್ಕೆ ಹೆಸರುವಾಸಿಯಾಗಿದ್ದಾರೆ.ಹಾರ್ಡಿ ಸಂಗ್ರಹಿಸಿದ ಪತ್ರಿಕೆಗಳನ್ನು ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ ಏಳು ಸಂಪುಟಗಳಲ್ಲಿ ಪ್ರಕಟಿಸಲಾಗಿದೆ. ೧೯೧೧ ರಲ್ಲಿ ಅವರು ಜಾನ್ ಎಡೆನ್ಸಾರ್ ಲಿಟ್ಲ್‌ವುಡ್ ಜೊತೆಗೂಡಿ ಗಣಿತಶಾಸ್ತ್ರದ ವಿಶ್ಲೇಷಣೆ ಮತ್ತು ವಿಶ್ಲೇಷಣಾತ್ಮಕ ಸಂಖ್ಯೆಯ ಸಿದ್ಧಾಂತದಲ್ಲಿ ವ್ಯಾಪಕವಾದ ಕೆಲಸ ಮಾಡಿದರು. ಹಾರ್ಡಿ ಮತ್ತು ಲಿಟ್ಲ್‌ವುಡ್ ಅವರ ಸಹಯೋಗ ಗಣಿತಶಾಸ್ತ್ರದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಮತ್ತು ಪ್ರಸಿದ್ಧ ಸಹಯೋಗಗಳಲ್ಲಿ ಒಂದಾಗಿದೆ.ಹಾರ್ಡಿ ಅವರು ೧೯೧೪ ರಲ್ಲಿ ಭಾರತೀಯ ಗಣಿತಜ್ಞ ಶ್ರೀನಿವಾಸ ರಮಾನುಜನ್ ಅವರ ಮಾರ್ಗದರ್ಶಿಯಾದರು.ಹಾರ್ಡಿ ಮತ್ತು ರಾಮಾನುಜನ್ ನಿಕಟ ಸಹಯೋಗಿಗಳಾಗಿದ್ದರು. ಪಾಲ್ ಎರ್ಡೋಸ್ ಅವರ ಸಂದರ್ಶನವೊಂದರಲ್ಲಿ ಹಾರ್ಡಿ ಮತ್ತು ರಾಮಾನುಜನ್ ಸಹಯೋಗವನ್ನು ಹಾರ್ಡಿಯವರು 'ದಿ ರೊಮ್ಯಾಂಟಿಕ್ ಇನ್ಸಿಡೆಂಟ್ ಆಫ್ ಲೈಫ್' ಎಂದು ವಿಶ್ಲೇಷಿಸಿದರು.

ಪ್ರಶಸ್ತಿಗಳು[ಬದಲಾಯಿಸಿ]

ಹಾರ್ಡಿ ಅವರಿಗೆ ೧೯೦೧ ರಲ್ಲಿ ಸ್ಮಿಥ್  ಪ್ರಶಸ್ತಿ ,೧೯೨೦ ರಲ್ಲಿ ರಾಯಲ್  ಮೆಡಲ್ ,೧೯೨೯ ರಲ್ಲಿ ಡಿ ಮಾರ್ಗನ್  ಮೆಡಲ್ ,೧೯೪೦ ರಲ್ಲಿ ಸಿಲ್ವೆಸ್ಟರ್ ಮೆಡಲ್ ಹಾಗು ೧೯೪೭ ರಲ್ಲಿ ಕೊಪ್ಲೆ ಮೆಡಲ್ ದೊರೆಯಿತು.

ನಿಧನ[ಬದಲಾಯಿಸಿ]

ಹಾರ್ಡಿ ಅವರು ಡಿಸೆಂಬರ್ ೧ ,೧೯೪೭ ರಲ್ಲಿ ಇಂಗ್ಲೆಂಡಿನ ಕೇಂಬ್ರಿಡ್ಜ್ ನಲ್ಲಿ ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]

  1. https://en.wikipedia.org/wiki/G._H._Hardy
  2. https://www.thenewsminute.com/article/man-who-taught-infinity-how-g-h-hardy-mentored-srinivasa-ramanujans-genius-42102
  3. http://www-history.mcs.st-andrews.ac.uk/DNB/Hardy.html