ಸದಸ್ಯ:Anusha manjeshwar/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Owned by Prasar Bharati (Govt. of India) Country ಭಾರತ India Headquarters - Replaced Doordarshan Kendra - Website www.-.tvಸರ್ಕಾರಿ ಸ್ವಾಮ್ಯದ ಕಿರುತೆರೆ ವಾಹಿನಿಗಳ ಜಾಲ.

ಪರಿವಿಡಿ

   ೧ ಇತಿಹಾಸ
   ೨ ತಂತ್ರಜ್ಞಾನ
   ೩ ಇವನ್ನೂ ನೋಡಿ
   ೪ ಹೊರಗಿನ ಕೊಂಡಿ

ಇತಿಹಾಸ ತಂತ್ರಜ್ಞಾನ ಇವನ್ನೂ ನೋಡಿ ಹೊರಗಿನ ಕೊಂಡಿ [ತೋರಿಸು]

   v t e 

ಭಾರತದ ಸರ್ಕಾರಿ ಸ್ವಾಮ್ಯದ ಕಿರುತೆರೆ ವಾಹಿನಿಗಳ ಜಾಲ ವರ್ಗಗಳು:

   Pages using duplicate arguments in template callsದೂರದರ್ಶನ
  ದೂರದರ್ಶನಭಾರತದ ಅತೀ ದೊಡ್ಡ ಪ್ರಸಾರ ಕೇಂದ್ರ. ಇದನ್ನು ಎಲ್ಲರಿಗೂ ದೊರಕುವಂತೆ ಮಾಡುತ್ತಿರುವುದು " ಪ್ರಸಾರ ಭಾರತಿ". ಪ್ರಸಾರ ಭಾರತಿಯು ಮೂಲತಃ ಭಾರತದ್ದೇ ಆದ್ದರಿಂದ ಇದು ನಮ್ಮ ದೇಶದ ಅತ್ಯಂತ ದೊಡ್ಡ ಪ್ರಸಾರ ಕೇಂದ್ರವೆಂದು ಎನಿಸಿಕೊಂಡಿದೆ. ಇದು ಸ್ವಯಂ ಆಡಳಿತವಾಗಿದ್ದು, ಭಾರತದ ಆಡಳಿತದ ನಿಯಮಗಳಿಗೆ ಒಳಗಾಗಿದೆ. ಇದು ದೂರದರ್ಶನ ಟೆಲಿವಿಷನ್ ನೆಟ್ ವರ್ಕ್ ಮತ್ತು ಆಲ್ ಇಂಡಿಯಾ ರೇಡಿಯೋವನ್ನು ಒಳಗೊಂಡಿದೆ. 
ಚಿತ್ರ:20170206 061814dd.jpg
ಡಿಡಿ ರಾಜಸ್ತಾನ
ದೂರ ದರ್ಶನವು ಡಿಡಿ ರಾಜಸ್ತಾನ್ಎಂಬ ಚಾನಲ್ ಒಳಗೊಂಡಿದೆ. ಡಿಡಿ ರಾಜಸ್ತಾನ್ ಆಗಸ್ಟ್ ೧, ೧೯೭೫ ರಂದು ಶೈಕ್ಷಣಿಕವಾಗಿ ಕೋಟ , ಸವಾಯ್ ಮಾಧೋ ಪುರ್  ಮತ್ತು ಜೈಪುರ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಯಿತು. ಡಿಡಿ ರಾಜಸ್ತಾನವು ಅಧಿಕೃತವಾಗಿ ೧೯೮೭ ಜುಲೈ ೬ ರಂದು ಸ್ಥಾಪನೆಗೊಂಡಿತು. ೧೯೮೭ ಜೂನ್ ೧ ರಂದು ಜಲಾನ ಡೂಂಗರಿ ಯಲ್ಲಿ ಕಾರ್ಯಾಚರಣೆ ಗೊಂಡಿತು . ಇದು ೧೯೯೪ ರಲ್ಲಿ ಜೈಪುರ ರಾಜಸ್ತಾನದಿಂದ ಪ್ರಸಾರ ಭಾರತಿ ಎಂಬ ಹೆಸರಿನಿಂದ ಪ್ರಸಾರವಾಯಿತು. ಈ ಕೇಂದ್ರದಿಂದ ಪ್ರಸರಣಾ ಸಮಯವು ಮೂವತ್ತು ನಿಮಿಷ ಗಳದ್ದಾಗಿದ್ದೂ, ಕಾಲ ಕ್ರಮೇಣ ಹೆಚ್ಚಿಸಲಾಯಿತು. ಪ್ರಸ್ತುತ ಕೇಂದ್ರದಿಂದ ಕಾರ್ಯ ಕ್ರಮಗಳು ನಾಲ್ಕು ಗಂಟೆಗಳ ವರೆಗೆ ಚಾನಲ್ ವೀಕ್ಷಿಸುವ ಅವಕಾಶವನ್ನು ನೀಡುತ್ತಿದೆ. ಈ ಚಾನಲ್ ಅನ್ನು  ವೀಕ್ಷಿಸುವವರು ಭಾರತದಲ್ಲಿ ಶೇಕಡ ೭೯ ರಷ್ಟು ಇದ್ದಾರೆ ಮತ್ತು ಶೇಕಡ ೭೨ ರಷ್ಟು ರಾಜಸ್ತಾನದ ಜನರು ಆಗಿರುವುದು ಒಂದು ವಿಸ್ಮಯವೇ ಸರಿ.[೧] 
ಈ ಕೇಂದ್ರದಿಂದ ಪ್ರಸಾರವಾಗುವ ಪ್ರಮುಖ ಕಾರ್ಯ ಕ್ರಮಗಳ ಪಟ್ಟಿ ಹೀಗಿದೆ: " ಕರ್ಮಯಾತ್ರಾ", " ಸಿತಾರೋಂ ಕಿ ಪಸಂದ್", "ಚಾಪಲ್ ವೇದಿಕೆ", ಸಮಯ್ ಕಿ" " ಆಸ್ - ಪಾಸ್"," ಬಟನ್","ನೋರ್ ಬಂದ್ ನಕಾರಾಲೋ", "ಬಾಲಿವುಡ್ ಹಲ್ ಚಲ್", "ನವನ್ ಕುರ್", " ಬರ್ತಾಯನ್ - ೪", "ಚಿರ್ಮಿ", "ಸಂಸ್ಕ್ರತಿ ಸಂಚಯ್", "ಧರ್ತಿ ಮೇರೆ ದೇಶ್ ಕಿ", " ಮರಧಾರ  ರೀ", " ದೇಕೊ ರಾಜಸ್ತಾನ್"," ಧರ್ತಿ ಧೊರಾನ್" ಇತ್ಯಾದಿ. ಡಿಡಿ ರಾಜಸ್ತಾನ್ ನನ್ನು ಟಿವಿ ಚಾನಲ್ ಗಳಲ್ಲಿ ಅಲ್ಲದೆ ಸಾಮಾಜಿಕ ಜಾಲತಾಣ ಗಳಲ್ಲಿಯೂ ನೋಡ ಬಹುದಾಗಿದೆ. ಡಿಡಿ ರಾಜಸ್ತಾನವನ್ನು  ಡ್ಬ್ಲ್ಯಡ್ಬ್ಲ್ಯಡ್ಬ್ಲ್ಯ.ಡಿಡಿ ಕೆ ರಾಜಸ್ತಾನ್. ಟಿವಿ  ಹಾಗು ಭಾರತದ ರಾಷ್ಟೀಯ ಪುಟದಲ್ಲಿ ಹೋಗಿ ವೀಕ್ಷಿಸಬಹುದು. ಇದನ್ನು ೨೯-೫-೨೦೧೨ ರಲ್ಲಿ ಮರು ಸಂಪಾದಿಸಲಾಯಿತು. ಇದು ಅತೀ ಶೀಘ್ರದಲ್ಲಿ ಡಿಡಿ ಅರಾವಳಿ ಎಂಬ ಹೊಸ ಹೆಸರಿನಿಂದ ಪ್ರಸಾರವಾಗಲಿದೆ.ಈ ಡಿಡಿ ಅರಾವಳಿ ಚಾನಲ್  ಡಿಡಿ ಕೆ ಜೈಪುರ್ ದಿಂದ  ಅತೀ ಶೀಘ್ರದಲ್ಲಿ  ಪ್ರಸಾರವಾಗಲಿದೆ. ಡಿಡಿ  ರಾಜಸ್ತಾನವು ದಿನದ ೨೪ ಗಂಟೆಗಳು ಟಿವಿ, ಸಾಮಾಜಿಕ ಜಾಲತಾಣಗಳಲ್ಲಿ,ನಮ್ಮ ದೇಶವಲ್ಲದೆ ಬೇರೆ ದೇಶಗಳಾದ ಚೀನಾ, ಏಷ್ಯಾ, ಮಧ್ಯ ಪ್ರಾಚ್ಯ ದೇಶಗಳಲ್ಲಿಯೂ ಪ್ರಸಾರವಾಗುತ್ತದೆ. ಮೊದಮೊದಲು ಡಿಡಿ ಚಾನಲ್ ಗಳು ಸಂಜೆಯ ೪ ಗಂಟೆಯಿಂದ ರಾತ್ರಿಯ ೧೦ ಗಂಟೆಯ ವರೆಗೆ ಪ್ರಸಾರವಾಗುತ್ತಿತ್ತು. ಅದೂ ಒಂದೇ ಹಿಂದಿ ಭಾಷೆಯಲ್ಲಿ ಪ್ರಸಾರವಾಗುತ್ತಿತ್ತು. ನಂತರ ವಿಸ್ತರಿಸಿ ಬೆಳಗಿನಿಂದ ರಾತ್ರಿಯವರೆಗೆ ಪ್ರಸಾರಮಾಡಲಾಗುತ್ತಿತು. ಕೇವಲ ಭಾನುವಾರಗಳಂದು ಪ್ರಾದೇಶಿಕ ಭಾಷೆಗಳ ಚಲನಚಿತ್ರಗಳನ್ನು ಪ್ರಸಾರಮಾಡಲಾಗುತ್ತಿತ್ತು. ಬುಧವಾರಗಳಂದು" ಚಿತ್ರಹಾರ್" ಎಂಬ ಹಿಂದಿ ಚಲನಚಿತ್ರಗೀತೆಗಳ ನ್ನೂ ಪ್ರಾದೇಶಿಕ ಭಾಷೆಯ ಚಲನಚಿತ್ರಗೀತೆಗಳನ್ನು ಪ್ರಸಾರಮಾಡುತ್ತಿತ್ತು. ನಂತರದ ದಿನಗಳಲ್ಲಿ ಪ್ರಾದೇಶಿಕ ಚಾನಲ್ ಗಳೂ ಬಂದವು. ಪ್ರಾರಂಭದ ದಿನಗಳಲ್ಲಿ ಸಂಜೆಯ ೪ ಗಂಟೆಯಿಂದ ರಾತ್ರಿಯ ೯ ಗಂಟೆಯ ವರೆಗೆ ಪ್ರಾದೇಶಿಕ ಕಾರ್ಯ ಕ್ರಮಗಳೂ ನಂತರ ಡಿಡಿ ನೇಷನಲ್ ಚಾನಲ್ ಪ್ರಸಾರವಾಗುತ್ತಿತ್ತು. ಕ್ರಮೇಣ ಅದನ್ನೂ ವಿಸ್ತರಿಸಿ ಸಂಪೂರ್ಣವಾಗಿ ಪ್ರಾದೇಶಿಕ ಚಾನಲ್ ಆಗಿ ಪರಿವರ್ತಿಸಲಾಯಿತು.

ಡಿಡಿ ರಾಜಸ್ತಾನ್ ದಲ್ಲಿ ಪ್ರಸಾರವಾಗುತ್ತಿರುವ " ಪ್ರಶ್ನೋತ್ತರಿ" ಎಂಬ ಪ್ರಸಿದ್ಧ ಕಾರ್ಯಕ್ರಮ ತನ್ನ ೫೨೫ ನೇ ಸಂಚಿಕೆಯನ್ನು ಪೂರೈಸಿರುವುದು ನಮಗೆ ಹೆಮ್ಮೆಯ ವಿಷಯ. ಪ್ರಶ್ನೋತ್ತರಿ ೧೯೯೩ ರಲ್ಲಿ ತಿಂಗಳಲ್ಲಿ ಎರಡು ಬಾರಿ ಪ್ರಸಾರವಾಗುತ್ತಿತ್ತು. ಈಗ ವಾರದಲ್ಲಿ ಎರಡು ಬಾರಿ ಪ್ರಸಾರವಾಗುವಷ್ಟು ಪ್ರಚಲಿತವಾಗಿದೆ. ಮಹೇಂದ್ರ ಸುರಾನ ರವರು ಇದರ ಮಾಲಿಕರೂ ಹಾಗು ನಿರೂಪಕರೂ ಆಗಿರುವರು. ಸರಾಗವಾಗಿ ಇಪ್ಪತೆರಡು ವರುಷಗಳಿಂದ ಪ್ರಸಾರವಾಗುವುದರ ಮೂಲಕ ಇದು "ಲಿಂಕಾ ಬುಕ್ ಆಫ್ ರೆಕಾರ್ಡ್ಸ್" ನಲ್ಲಿ ೨೦೦೩ನೇ ಇಸವಿಯಲ್ಲಿ ಸೇರ್ಪಟ್ಟಿದೆ ಹಾಗೂ "ಬೋರ್ನ್ವೀಟಾ ಕ್ವಿಝ್ " ನ್ನು ಹಿಂದುಳಿಸಿದೆ. ಪ್ರತೀ ಕಾರ್ಯಕ್ರಮವು ೧೫೦ ಸ್ಫರ್ಧಿಗಳನ್ನು ಒಳಗೊಂಡಿರುತ್ತದೆ. ಶಾಲೆ, ಕಾಲೇಜ್ ಮತ್ತು ಜನ ಸಾಮಾನ್ಯರು ಈ ಸ್ಫರ್ಧೆಯಲ್ಲಿ ಭಾಗವಹಿಸುತ್ತಾರೆ. ಪ್ರತೀ ಪ್ರಶ್ನೆಗೆ ಉತ್ತರಿಸುವವರಿಗೆ ಸ್ಥಳದಲ್ಲೇ ಬಹುಮಾನವನ್ನು ವಿತರಿಸಲಾಗುವುದು. ಇದು ಡಿಡಿ ರಾಜಸ್ತಾನ್ ನಲ್ಲಿ ಅಲ್ಲದೆ ಬೇರೆ ಡಿಡಿ ಪ್ರಾದೇಶಿಕ ಚಾನಲ್ ಗಳಲ್ಲಿಯೂ ಪ್ರಸಾರವಾಗುತ್ತಿದೆ. ಇದು ಡಿಡಿ ಚಾನಲ್ ನ ವಿಭಿನ್ನವಾದ ಏಕೈಕ ಕಾರ್ಯಕ್ರಮವಾಗಿದೆ." ಮಿನಿಸ್ಟ್ರಿ ಆಫ್ ಇನ್ಫಾರ್ಮೇಷನ್ ಮತ್ತು ಬ್ರೋಡ್ ಕಾಸ್ಟಿಂಗ್" ಇದರ ಹೆಚ್ಚುತಿರುವ ಟಿ.ಆರ್.ಪಿ ಯನ್ನು ಗಮನಿಸಿ ತಿಂಗಳಲ್ಲಿ ಎರಡು ಬಾರಿಯ ಬದಲು ವಾರದಲ್ಲಿ ಎರಡು ಬಾರಿ ಪ್ರಸಾರ ಮಾಡುವಂತೆ ಸೂಚಿಸಿದೆ.[೨] ಡಿಡಿ ಫ್ರಿಡಿಶ್ ಮೊದಲು ಡಿಡಿ ಡೈರೆಕ್ಟ್ ಪ್ಲಸ್ ಎಂಬ ಹೆಸರಿನಿಂದ ಪ್ರಚಲಿತವಾಗಿತ್ತು. ಇದು ಯಾವುದೇ ಶುಲ್ಕವಿಲ್ಲದೇ ಪ್ರಸಾರ ಮಾಡುವ ಪ್ರಸಾರಕೇಂದ್ರವಾಗಿದೆ. ಉಚಿತ ಪ್ರಸಾರ ಮಾಡುವ ಭಾರತದ ಏಕೈಕ ಕೇಂದ್ರ ಇದಾಗಿದೆ. ಇದೇ ಡಿಡಿ ಡೈರೆಕ್ಟ್ ಪ್ಲಸ್ ನಲ್ಲಿ ಡಿಡಿ ರಾಜಸ್ತಾನವೂ ಹಾಗೂ ಮತ್ತಿತರ ಪ್ರಾದೇಶಿಕ ಡಿಡಿ ಚಾನಲ್ ಗಳು ಪ್ರಸಾರವಾಗುತ್ತದೆ. ಮೊದಲು ಎನ್. ಎಸ್.ಎಸ್ - ೬ ಉಪಗ್ರಹದಿಂದ ೯೫ ಡಿಗ್ರಿ ಗಳಲ್ಲಿ ನೋಡಬಹುದಾಗಿತ್ತು. ಈಗ ಅದನ್ನು ಇನ್ ಸ್ಟ- ೪ಬಿ ಉಪಗ್ರಹದ ಮೂಲಕ ೯೩.೫ ಡಿಗ್ರಿ ೬೪ ಎಫ಼್ ಟಿ ಎ, ಎಮ್ ಪಿ ಇ ಜಿ -೨ ನಲ್ಲಿ ಡಿಡಿಯ ಚಾನಲ್ ಗಳು ಮತ್ತು ಅದರ ಉಪ ಪ್ರಸಾರವಾದ ೨೯ ರೇಡಿಯೋ ಚಾನಲ್ ಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ೨೦೧೬ ಫೆಬ್ರವರಿ ೧ ರಿಂದ ಇತ್ತೀಚಿನ ದಿನಗಳ ವರೆಗೆ ಜಿ.ಎಸ್.ಎ.ಟಿ -೧೫ ಮೂಲಕ ೧೦೪ ಎಸ್.ಡಿ.ಟಿವಿ ಚಾನಲ್ ಗಳು ಹಾಗು ೪೦ ರೇಡಿಯೋ ಚಾನಲ್ ಗಳ ಪ್ರಸಾರದ ವಿಸ್ತಾರವನ್ನು ಒಳಗೊಂಡಿದೆ. ಭವಿಷ್ಯದಲ್ಲಿ ಇದನ್ನು ಎಮ್ ಪಿ ಇ ಜಿ - ೪, ಡಿ ವಿ ಬಿ - ಎಸ್ ೨ ಗಳಲ್ಲಿ ಪ್ರಸಾರ ಮಾಡುವ ಉದ್ದೇಶವನ್ನು ಒಳಗೊಂಡಿದೆ. ಡಿಡಿ ರಾಜಸ್ತಾನದ ಚಾನಲ್ ಗಳು ಕೇಂದ್ರ ಸರಕಾರದ ನಿಬಂಧನೆಗಳಿಗೆ ಒಳಗೊಂಡಿದೆ. ಆದರೂ ಅದರ ಪ್ರಾದೇಶಿಕ ಚಾನಲ್ ಗಳು (ಡಿಡಿ ಚಂದನ, ಡಿಡಿ ಮಲಯಾಳಂ ಮುಂತಾದವುಗಳು.... ) ರಾಜ್ಯ ಸರಕಾರಗಳ ಒಡೆತನವನ್ನು ಹೊಂದಿದೆ. ಈ ಎಲ್ಲಾ ವಿಷಯಗಳಿಂದಲೇ ಡಿಡಿ ರಾಜಸ್ತಾನ್ ಭಾರತದ ಹೆಮ್ಮೆಯೆನಿಸಿದೆ.

"ಉಲ್ಲೇಖನಗಳು"[ಬದಲಾಯಿಸಿ]

  1. https://en.wikipedia.org/wiki/DD_Rajasthan
  2. http://www.business-standard.com/article/pti-stories/dd-s-quiz-show-prashnottari-completes-525-episodes-115092000454_1.html