ಸದಸ್ಯ:Anusha Sridhar/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search
ಆಚಾರ್ಯ ಶಾರಂಗಧರ

ಶಾರಂಗಧರ ಸಂಹಿತೆ ೧೪ನೇ ಶತಮಾನದಲ್ಲಿ ಆಚಾರ್ಯ ಶಾರಂಗಧರ ರವರಿಂದ ಬರೆಯಲ್ಪಟ್ಟಿದೆ. ಆಯುರ್ವೇದದಲ್ಲಿ ಈ ಗ್ರಂಥವು ಲಘುತ್ರಯೀಗಳಲ್ಲಿ ಒಂದು. ಈ ಸಂಹಿತೆಯಲ್ಲಿ ಆಯುರ್ವೇದದ ಇತರ ಮಾಹಿತಿಗಳೊಂದಿಗೆ ಔಷಧಿ ತಯಾರಿಸುವ ವಿಭಾಗವಾದ ಭೈಷಜ್ಯಕಲ್ಪನಕ್ಕೆ ಹೆಚ್ಚು ಒತ್ತು ನೀಡಲಾಗಿದೆ.[೧]

ಆಚಾರ್ಯ ಶಾರಂಗಧರ[ಬದಲಾಯಿಸಿ]

ಆಚಾರ್ಯ ಶಾರಂಗಧರರ ತಂದೆಯ ಹೆಸರು ದಾಮೋದರ ಮತ್ತು ತಾತನ ಹೆಸರು ರಾಘವದೇವ(ಇವರು ಮಹಾಗಣಪತಿ ಸ್ತೋತ್ರದ ಲೇಖಕರು). ತಂದೆ ದಾಮೋದರರು ಕಾಶ್ಮೀರ ರಾಜ ಹಮ್ಮಿರನ ಆಸ್ಥಾನದಲ್ಲಿ ದೊಡ್ಡ ಕವಿಗಳು.

ಸಂಹಿತೆ[ಬದಲಾಯಿಸಿ]

ಈ ಸಂಹಿತೆಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳನ್ನು ಖಂಡಗಳೆಂದು ಕರೆಯುತ್ತಾರೆ. ೩೨ ಅಧ್ಯಾಯಗಳೊಂದಿಗೆ ೨೬೦೦ ಶ್ಲೋಕಗಳನ್ನು ಹೊಂದಿದೆ.[೨]

ಪೂರ್ವಖಂಡ[ಬದಲಾಯಿಸಿ]

ಈ ಖಂಡವು ೭ ಅಧ್ಯಾಯಗಳನ್ನು ಒಳಗೊಂಡಿದೆ. ಇದರಲ್ಲಿ ನಾಡಿ ಪರೀಕ್ಷೆ,ರೋಗಗಳ ಸಂಖ್ಯೆ, ಮಾನ ಪರಿಭಾಷಾ, ಅರಿಷ್ಟ ಲಕ್ಷಣ,ರಚನಾಶಾಸ್ತ್ರ,ಕ್ರಿಯಾಶಾಸ್ತ್ರ, ಮುಂತದವುಗಳ ಬಗ್ಗೆ ವಿವರಿಸಲಾಗಿದೆ.

ಮಧ್ಯಮಖಂಡ[ಬದಲಾಯಿಸಿ]

ಈ ಖಂಡವು ೧೨ ಅಧ್ಯಾಯಗಳನ್ನು ಒಳಗೊಂಡಿದೆ. ಇದು ಪಂಚವಿಧ ಕಷಾಯ ಕಲ್ಪನ( ಸ್ವರಸ,ಕಲ್ಕ,ಶೃತ,ಶೀತ,ಫಾಂಟ) , ಚೂರ್ಣಕಲ್ಪನ,ಲೇಹ ಕಲ್ಪನ,ಆಸವ-ಅರಿಷ್ಟಕಲ್ಪನ(ಸಂಧಾನಕಲ್ಪನ) ಧಾತು ಶೋಧನ ಇವುಗಳ ಬಗ್ಗೆ ವಿವರಿಸುತ್ತದೆ.

ಉತ್ತರಖಂಡ[ಬದಲಾಯಿಸಿ]

ಈ ಭಾಗವು ೧೩ ಅಧ್ಯಾಯಗಳನ್ನು ಒಳಗೊಂಡಿದೆ. ಇದು ಪಂಚಕರ್ಮವಿಧಿಗಳು(ವಮನ,ವಿರೇಚನ,ಆಸ್ಥಾಪನಬಸ್ತಿ,ಅನುವಾಸನಬಸ್ತಿ,ನಸ್ಯ),ನೇತ್ರಚಿಕಿತ್ಸೆ,ಸ್ವಸ್ಥವೃತ್ತ ಮುಂತಾದವುಗಳನ್ನು ವಿವರಿಸುತ್ತದೆ.

ವಿಶೇಷತೆಗಳು[ಬದಲಾಯಿಸಿ]

  • ಈ ಗ್ರಂಥದಲ್ಲಿ ಋತುಗಳನ್ನು ರಾಶಿಗಳ ಆಧಾರದ ಮೇಲೆ ವಿಂಗಡಿಸಲಾಗಿಸದೆ.
  • ವಿವಿಧ ಕರ್ಮಗಳಾದ ದೀಪನ,ಪಾಚನ ಮುಂತದವುಗಳಿಗೆ ವ್ಯಾಖ್ಯಾನ ನೀಡಲಾಗಿದೆ.
  • ದೋಷಗಳ ಚಲನೆ,ಧಾತುಗಳ ಪೋಷಣೆ,ಶ್ವಾಸಕ್ರಿಯೆಯಲ್ಲಿ ವಾತದೋಷದ ಪ್ರಾಮುಖ್ಯತೆಯನ್ನು ಹೇಳಲಾಗಿದೆ.
  • ರೋಗಗಳ ಸಂಖ್ಯೆಯ ಬಗ್ಗೆ ವಿವರಿಸಲಾಗಿದೆ.
  • ಏಕಮೂಲಿಕ ಪ್ರಯೋಗವನ್ನು ವಿವರಿಸಲಾಗಿದೆ.

ಟೀಕಾಕಾರರು[ಬದಲಾಯಿಸಿ]

  • ಆಢಮಲ್ಲ-ದೀಪಿಕ.
  • ರುದ್ರಭಟ್ಟ-ಆಯುರ್ವೇದ ದೀಪಿಕ.
  • ಕಾಶಿರಾಮ್ ವೈದ್ಯ-ಗೂಡಾರ್ಥದೀಪಿಕ.[೩]

ಉಲ್ಲೇಖ[ಬದಲಾಯಿಸಿ]