ವಿಷಯಕ್ಕೆ ಹೋಗು

ಸದಸ್ಯ:Anupaanu

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
        ಪ್ರಾಣಿ ಲೋಕ
 ಪ್ರಾಣಿ ಲೋಕದಲ್ಲಿ ಹಲವು ಪ್ರಾಣಿಗಳಿವೆ ಅದರಲ್ಲಿ ನಾವು "ಕಡಲ ಹಸು"ವಿನ ಬಗ್ಗೆ ತಿಳಿಯೋಣ.
  ನಾವು ಹಸುವನ್ನು ನೋಡಿದ್ದೇವೆ.ಆದರೆ ಕಡಲ ಕಡಲ ಹಸುವನ್ನು ನೋಡಿಲ್ಲ. ಕಡಲ ಹಸು ಇದೆ ಎಂಬುದು ಏಷ್ಟೋ ಜನರಿಗೆ ಗೊತ್ತಿರುವುದಿಲ್ಲ.ಈ ಕಡಲ ಹಸು(sea cow) ಸಮುದ್ರದಲ್ಲಿ ಜೀವಿಸುತ್ತವೆ. ಇದು ತುಂಬಾ ನಿಧಾನವಾಗಿ ಚಲಿಸುವ ಒಂದು ಸಸ್ತನಿ. ಸಮುದ್ರ ಹಸುಗಳು ಗುಂಪಾಗಿ ವಾಸಿಸುತ್ತವೆ.
ಕಡಲ ಹಸು (sea cow) ಮತ್ತು ತಿಮಿಂಗಿಲ (whale) ಇವೆರಡರ ಹೋಲಿಕೆ ತುಂಬಾ ಸ್ವಾರಸ್ಯಪೂರ್ಣ. ತಿಮಿಂಗಿಲ ಸಹ ಸಮುದ್ರದಲ್ಲಿ ಜೀವಿಸುವ ಒಂದು ಸಸ್ತನಿ ಪ್ರಾಣಿ. ತಿಮಿಂಗಿಲದಂತೆಯೇ ಕಡಲ ಹಸು ಸಹ ಸಾಗರದ ಜೀವನಕ್ಕೆ ಚೆನ್ನಾಗಿ ಹೊಂದಿಕಳ್ಳುತ್ತದೆ. ಇದರ ಹಿಂಭಾಗದಲ್ಲಿ ಯಾವುದೇ ಅವಯವವೂ ಇಲ್ಲ. ಇದರ ಮುಂಭಾಗದ ಅವಯವಗಳು ಮಾತ್ರ ಈಜುವುದಕ್ಕೆ ಬಳಸುವ ಅಂಗದ(Flippers)ಆಕೃತಿಯಲ್ಲಿರುತ್ತವೆ. ಇದರ ಚರ್ಮದ ಮೇಲೆ ಕೂದಲು ಇರುವುದಿಲ್ಲ.ತಿಮಿಂಗಿಲ(whale) ಮಾಂಸಹಾರಿ. ಆದರೆ ಕಡಲ ಹಸು ಸಸ್ಯಾಹಾರಿ.
 ಕಡಲ ಹಸಿವಿನಲ್ಲಿ ನಾಲ್ಕು ಜಾತಿಗಳಿವೆ. ಇವುಗಳಲ್ಲಿ ಒಂದು ಜಾತಿಯ ಕಡಲಹಸುವಿಗೆ ಡ್ಯುಗಾಂಗ್(Dugong) ಎನ್ನುತ್ತಾರೆ. ಇನ್ನೂ ಮೂರು ಜಾತಿಗಳಿಗೆ ಸೇರಿದ ಕಡಲ ಹಸುಗಳಿಗೆ ಮ್ಯಾನಟೀಸ್(manatees) ಎಂದು ಕರೆಯುತ್ತಾರೆ. ಡ್ಯುಗಾಂಗ್ ಒರಟೊರಟಾಗಿ ಕಚ್ಚು ಮಾಡಿದಂತಿರುವ ಬಾಲ (Matched tail) ಇರುತ್ತದೆ. ಮ್ಯಾನಟೀಗೆ(manatee) ಬಾಲ ಗುಂಡಗಿದ್ದು, ಈಜುರೆಕ್ಕೆಯ ಆಕೃತಿಯಲ್ಲಿರುತ್ತದೆ(Paddle shaped).

  ಡ್ಯುಗ್ಯಾಂಗ್ ಜಾತಿಯ ಕಡಲ ಹಸುಗಳು ಆಸ್ಟ್ರೇಲಿಯಾದ ಉತ್ತರ ಕರಾವಳಿಯ ಹಿಂದೂ ಮಹಾಸಾಗರದಲ್ಲಿ ಕಂಡು ಬರುತ್ತವೆ. ಈ ಕಡಲಹಸುವಿನ ಉದ್ದ 8 ರಿಂದ 9 ಅಡಿಗಳಷ್ಟು ಇರುತ್ತದೆ. ಮ್ಯಾನಟೀ ಜಾತಿಗೆ ಸೇರಿದ ಕಡಲ ಹಸುಗಳು- ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಕಂಡುಬರುತ್ತವೆ. ಈ ಜಾತಿಯ ಕಡಲ ಹಸುಗಳು 15 ಅಡಿಗಳಷ್ಟು ಉದ್ದವಾಗಿರುತ್ತವೆ.ಇದರ ತೂಕ 500 ಪೌಂಡುಗಳಷ್ಟು.
 ಮ್ಯಾನಟೀಗಳು ಮೀನನ್ನು ಹೋಲುವಂತಹ ಬಾಲವನ್ನು ಮತ್ತು ಮನುಷ್ಯನನ್ನು ಹೋಲುವಂತಹ ಮುಖವನ್ನು ಹೊಂದಿರುತ್ತದೆ. ಇದರ ಮುಖಕ್ಕೆ ಮತ್ತು ಮಾನವನ ಮುಖಕ್ಕೆ ತುಂಬಾ ಸಮೀಪದ ಹೋಲಿಕೆ ಇದೆ.ಏಷ್ಟೋ ಸಲ,ಇದನ್ನು ಕಂಡು, ಮತ್ಸ್ಯಕನ್ಯೆ ಎಂದು ಭ್ರಮಿಸಿರುವುದೂ ಉಂಟು. ಸಮುದ್ರ ಹಸುಗಳು ಸಸ್ತನಿಗಳೆಂದು ಈಗಾಗಲೇ ತಿಳಿಸಲಾಗಿದೆ. ಆದ್ದರಿಂದ ಅವು ತಮ್ಮ ಮರಿಗಳಿಗೆ, ಸ್ತನಪಾನ ಮಾಡಿಸುತ್ತವೆ.
  ಡ್ಯುಗಾಂಗ್ ಮತ್ತು ಮ್ಯಾನಟೀ, ಮೇಯಲು ವಿಭಿನ್ನ ವಿಧಾನಗಳನ್ನು ಅನುಸರಿಸುತ್ತವೆ. ಡ್ಯುಗಾಂಗ್ ನ ಮೇಲು ತುಟಿ ತುಂಬ ದೊಡ್ಡದಾಗಿರುತ್ತದೆ. ಆದ್ದರಿಂದ ಸಮುದ್ರ ಕಳೆಗಳನ್ನು, ಸುರುಟಿ ತಿನ್ನಲು ಈ ತುಟಿ ಅದಕ್ಕೆ ತುಂಬಾ ಅನುಕೂಲವಗಿ ಇರುತ್ತದೆ.ಇದು,ತನ್ನ ಮೇಲು ತುಟಿಯನ್ನು ಕೆಳ ತುಟಿಗೆ ಒತ್ತಿ ಹಿಡಿದು, ಸಮುದ್ರ ಕಳೆಗಳನ್ನು ಕಿಳುತ್ತದೆ. ಮ್ಯಾನಟೀಯ ಮೇಲು ತುಟಿ ಒರಟೊರಟಾಗಿ ಕಚ್ಚು ಮಾಡಿದಂತೆ ಇರುತ್ತದೆ.ಇದು ಎರಡು ಭಾಗಗಳಾಗಿ ವಿಭಜಿತವಾಗಿದ್ದು,ಒಂದು ಇನ್ನೊಂದಕ್ಕೆ ವಿರುದ್ದವಾಗಿ ಕೆಲಸ ಮಾಡುತ್ತವೆ. ಮ್ಯಾನಟೀ ಒಂದು ದಿನಕ್ಕೆ 100 ಪೌಂಡುಗಳಷ್ಟು ಸಮುದ್ರ ಕಳೆಗಳನ್ನು ಕೀಳುತ್ತದೆ.
         *****