ಸದಸ್ಯ:Anu Saralaya/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search

[೧]=ಬಲ್ಲಾಳರಾಯ= ಈಗಿನ ಕುಕ್ಕೆಯ 'ಮೂಲ' ದೇವಳದ ಹೊರಾಂಗಣದಿಂದ ಒಳಾಂಗಣ ಪ್ರವೇಶಿಸುವಾಗ ನಡೆಯ ಎಡಭಾಗದಲ್ಲಿ ಬಲ್ಲಾಳರಾಯನೆನ್ನುವ ಕಲ್ಲಿನ ವಿಗ್ರಹ ಇದೆ. ಇದರ ಕುರಿತಂತೆ ಒಂದು ಐತಿಹ್ಯವಿದೆ.

ಇತಿಹಾಸ[ಬದಲಾಯಿಸಿ]

ಹಿಂದೆ ಮಧ್ವ ಮೂಲ ವಿಷ್ಣು ತೀಥ೯ರು ಸಂಸ್ಥಾನದಿಂದ ಸಿದ್ಧ ಪರ್ವತಕ್ಕೆ ತಪಸ್ಸಿಗೆ ಹೊರಟು ಹೋಗುವಾಗ ಮದ್ವದಿಂದ ದತ್ತವಾದ ಸಂಪುಟವನ್ನು ಕೊಂಡೊಯ್ದರು. ಆಗ ಇನ್ನೋರ್ವ ಸ್ವಾಮಿ ಅನಿರುದ್ಧ ತೀರ್ಥರಿಗೆ ಕಂಡು ಬಂದು ನಾಳೆ ನೀನು ಹರಿದ್ಯಾನದಲ್ಲಿರುವಾಗ ನೀನು ಅಪೇಕ್ಷಿಸಿದಾಗ ಸಂಪುಟವು ಕುಮಾರಧಾರದಲ್ಲಿ ತೇಲಿ ಬರುವುದು ಇನ್ನೊಂದು ಕನ್ನಡಿ ಹೊಳೆಯಲ್ಲಿ ತೇಲಿ ಬರುತ್ತದೆ. ಕುಮಾರಧಾರದಲ್ಲಿ ಬರುವುದನ್ನು ಸಂಸ್ಥಾದಲ್ಲೂ ಮತ್ತೊಂದನ್ನು ಸ್ಥಾನಕ್ಕೂ ಕೊಡಬೇಕು ಎಂದು ತಿಳಿಸಿದರು. ಹಾಗೆ ಬಂದ ಸಂಪುಟವು ಅನಿರುದ್ಧ ತೀರ್ಥಿರಿಗೆ ಸಿಕ್ಕಿರುವ ವಿಚಾರವು ಊರವರಿಗೆ ತಿಳಿದು ಒಂದನ್ನು ಅವರೇ ಇಟ್ಟುಕೊಂಡುದಾಗಿಯೂ ಇನ್ನೊಂದು ಸಂಪುಟ ಮತ್ತು ಅಕ್ಷಯ ಪಾತ್ರವನ್ನು ಮಾತ್ರ ದೇವಸ್ಥಾನಕ್ಕೆ ನೀಡಿರುತ್ತಾರೆಂದೂ ಬಲ್ಲಾಳನಲ್ಲಿ ದೂರು ಹೇಳಿದರಂತೆ. ಆಗ ಆಗ್ರಹ ಪೂರ್ವಕವಾಗಿ ಮಂದ ಸ್ವಾಮಿಯವರಿಗೆ ತಾವು ಉಳಿಸಿಕೊಂಡಿರುವ ಸಂಪುಟವನ್ನು ನೀಡುವಂತೆ ಬಲ್ಲಾಳ ಆಜ್ಞಾಪಿಸುತ್ತಾನೆ. ಅದು ನನ್ನಲಿರುವುದು ಗುರುಗಳ ಹೇಳಿಕೆ ಪ್ರಕಾರವೆಂದು ಅನಿರುದ್ದ ತೀರ್ಥರು ವಿಜ್ಞಾಪಿಸಿಕಂಡರು. ಬಲ್ಲಾಳ ಕೇಳಲ್ಲಿಲ್ಲ. ಸಂಪುಟ ಪಡಕೊಂಡ ಬಲ್ಲಾಳ ಅದರ ಮುಚ್ಚಳ ತೆಗೆಸಲು ಪ್ರಯತ್ನಪಟ್ಟು ಸೋತು ಪಟ್ಟದಾನೆಯ ಕಾಲಿನಿಂದ ಮೆಟ್ಟಿಸಿದ. ಆನೆಯ ಮೈ ಉರಿ ತಾಳಲಾರದೆ ನದಿಯಲ್ಲಿ ಬಿದ್ದು ಸತ್ತಿತ್ತು. ಆನೆ ಸತ್ತ ಸ್ಥಳ ಆನೆಗುಂಡಿಯೆಂದಾಯಿತು. ಬಲ್ಲಾಳರಾಯನಿಗೂ ಮೈ ಉರಿಯಿಂದ ಗುಳ್ಳೆಗಳೆದ್ದವು. ಸಂಪುಟವನ್ನು ಹಿಂತಿರುಗಿಸಿ ಸುಬ್ರಾಯ ದೇವರೆದುರಲ್ಲಿ ಧ್ಯಾನನಿರತನಾದ ಸುಬ್ರಾಯ ದೇವರು ನೀನು ಗುರುದ್ರೋಹ ಮಾಡಿದ್ದಿ,ಈಗ ಶರಣದ್ದರಿಂದ ನಿನ್ನ ಪಾಪ ವಿಮೋಚನೆಯಾಗಬೇಕಗಿದೆ. ಅದಕ್ಕಾಗಿ ಮತ್ತು ಮೈಯುರಿ ಕಡಿಮೆಯಾಗಬೇಕದರೆ ನಿನ್ನ ಪ್ರತಿಬಿಂಬವನ್ನು ಕಲ್ಲಿನಿಂದ ತಯಾರಿಸಿ ನನ್ನ ಸನ್ನಿಧಿಯಲ್ಲಿ ಇರಿಸು,ಭಕ್ತಾದಿಗಳು ನಿನಗೆ ಕುಂಬಳಕಾಯಿ,ಬೆಣ್ಣೆ,ಹತ್ತಿ,ಸಾಸಿವೆ ಪದಾರ್ಥಗಳನ್ನು ಹರಕೆಯಾಗಿ ಸಲ್ಲಿಸುವರು ಅದನ್ನು ಮಾರಿ ಬಂದ ಹಣವನ್ನು ಸಂಸ್ಥಾನ ಮಠಕ್ಕೆ ಅರ್ಪಿಸಬೇಕು ಅಲ್ಲದೆ ದೇವಸ್ಥಾನದ ಅಧಿಕಾರವನ್ನು ಮಠದ ಸ್ವಾಮಿಯವರಿಗೆ ಒಪ್ಪಿಸಬೇಕು ಎಂದು ನಿರ್ದೇಶಿಸಿತಂತೆ.

ನಂಬಿಕೆ[ಬದಲಾಯಿಸಿ]

ಆ ಪ್ರಕಾರ ನಡೆದುಕೊಂಡ ಬಳಿಕ ಬಲ್ಲಾಳನ ಸಂಕಟ ನಿವಾರಣೆಯಾಯಿತು. ಆ ಸಂಧರ್ಭದಲ್ಲಿ ದೇವರ ಎದುರು ಭಾಗದಲ್ಲಿ ನೆಲೆಗೊಳಿಸಿದ ನಿಗ್ರಹವೇ ಇಂದಿಗೂ ಇದೆ. ಈ ವಿಗ್ರಹವನ್ನು ಸ್ಥಳಾಂತರಿಸಬಾರದೆಂಬ ನಿಷೇಧವಿದೆ. ಮೈಮೇಲಿನ ಬೊಕ್ಕೆ ನಿವಾರಣೆಗಾಗಿ ಹರಕೆ ಹೊರುವವರ ಮೇಲೆ ಉಲ್ಲೇಖಿಸಿದ ವಸ್ತುಗಳನ್ನು ಈ ವಿಗ್ರಹಕ್ಕೆ ಅರ್ಪಿಸುವುದುಂಟು.

ಹರಕೆ ಸಾಮಾನುಗಳು[ಬದಲಾಯಿಸಿ]

  • ಕುಂಬಳಕಾಯಿ
  • ಬೆಣ್ಣೆ
  • ಹತ್ತಿ
  • ಸಾಸಿವೆ

ಉಲ್ಲೇಖಗಳು[ಬದಲಾಯಿಸಿ]

[೨] [೩]

  1. ಕುಕ್ಕೆಯಲ್ಲಿ ನಾಗರಮಡಿಕೆ ಪ್ರಾದೇಶಿಕ ಅಧ್ಯಯನ ಲೇಖಕರು ಡಾ. ಪೂವಪ್ಪ ಕಣಿಯೂರು ೨೦೧೭, ತರಂಗಿಣಿ ಪ್ರಕಾಶನ
  2. ಸ್ಥಳನಾಮ ಮತ್ತು ಐತಿಹ್ಯಗಳು-೨೦೧೬;ಪುಟ೯-೧೦;ಸಂ| ಪೂವಪ್ಪ ಕಣಿಯೂರು
  3. ಕುಕ್ಕೆ ಶ್ರೀ ಕ್ಷೇತ್ರ ವರ್ಣನೆ, ಆಡಳಿತ ಮಂಡಳಿ ಸುಬ್ರಹ್ಮಣ್ಯ, ದ.ಕ