ವಿಷಯಕ್ಕೆ ಹೋಗು

ಸದಸ್ಯ:Anjana112

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ಹಾಸನ ಜಿಲ್ಲೆಯ ಬೇಲೂರಿನ ಚೆನ್ನಕೇಶವ ದೇವಾಲಯ.

ಹೊಯ್ಸಳರ ಪ್ರಸಿದ್ದ ದೊರೆ ವಿಷ್ಣುವರ್ಧನನು ಕ್ರಿ.ಶ.೧೧೧೨ರಲ್ಲಿ

ನಿರ್ಮಿಸಿದನು.ಇದು ೧೭೮ ಅಡಿ ಉದ್ದ, ೧೫೬ ಅಡಿ ಅಗಲವಿದೆ.

ಪ್ರವೇಶ ದ್ವಾರದ ಮುಂದೆ ದ್ರಾವೀಡ ಶೈಲಿಯ ಎತ್ತರದ ಗೋಪುರವಿದೆ.

ದೇವಾಲಯ ೪ ರಿಂದ ೫ ಅಡಿ ಎತ್ತರದ ನಕ್ಷತ್ರಕಾರದ ಜಗಲಿಯ ಮೇಲೆ

ನಿಂತಿದೆ.ಗೋಡೆಗಳನ್ನು ೮ ಅಡ್ಡ ಪಟ್ಟಿಕೆಗಳಲ್ಲಿ ವೈವಿಧ್ಯಮಯ

ಕೆತ್ತನೆಗಳಿಂದ ಅಲಂಕರಿಸಲಾಗಿದೆ.

ಈ ಪಟ್ಟಿಕೆಗಳಲ್ಲಿ ಆನೆಗಳ ಸಾಲು, ಸಿಂಹಗಳ ಸಾಲು .ಕುದುರೆಯ

ಸವಾರರು. ರಾಮಾಯಣ, ಮಹಾಭಾರತ, ಹಂಸಗಳು, ಬಳ್ಳಿಗಳು ಹೀಗೆ

ಮುಂತಾದ ಚಿತ್ರಗಳನ್ನು ಕೆತ್ತಲಾಗಿದೆ.

ಕಟಾಂಜನದ ಮೇಲೆ ಕಲ್ಲಿನಲ್ಲಿ ಕೊರೆದು ರಂಧ್ರ ಮಾಡಿದ ಜಾಲಂಧ್ರ

-ಗಳು, ವಾಮನ, ಕಾಳಿಂಗ ಮರ್ದನ, ನರಸಿಂಹ ಶಿಲ್ಪಕೃತಿಗಳನ್ನು ಒಳಗೊಂ

-ಡಿದೆ.

ದೇವಾಲಯದ ಸುತ್ತ ೪೨ ಮದನಿಕೆಯರು ಇದ್ದಾರೆ. ಕನ್ನಡಿಯನ್ನು

ನೋಡುತ್ತಿರುವ, ಮೃದಂಗವನ್ನು ನುಡಿಸುತ್ತಿರುವ ಮದನಿಕೆಯರು

ಎಂತಹವರನ್ನು ಆಕರ್ಷಿಸದಿರಲಾರವು.

ದೇವಾಲಯದ ಒಳಭಾಗ ಗರ್ಭಗುಡಿ, ಸುಖನಾಸಿ, ನವರಂಗಗಳಿಂದ

ಕೂಡಿದೆ. ಸುಖನಾಸಿಯಾ ದ್ವಾರದ ಬದಿಗಳಲ್ಲಿ ದ್ವಾರಪಾಲಕ ವಿಗ್ರಹಗಳು

ಇವೆ. ಗರ್ಭಗುಡಿಯಲ್ಲಿ ಶಂಕ, ಚಕ್ರ, ಗದೆಯನ್ನು ಹಿಡಿದ ಚನ್ನಕೇಶವನು

ಹಸನ್ಮುಕಿಯಾಗಿ ನಿಂತಿದ್ದಾನೆ.

ದಾಸೋಜ, ಅವನ ಮಗ ಚಾವಣ, ಮಲ್ಲಿಯಣ್ಣ, ನಾಗೋಜ,

ಚಿಕ್ಕಹಂಪರು ಈ ದೇವಾಲಯದ ಶಿಲ್ಪಿಗಳು.