ಸದಸ್ಯ:Aniruddha v manja/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
grand father writer and poet

ಕೆ. ಎಸ್. ನಾಗಭೂಷಣಂ (2 ಮಾಚರ್್ 1933-15 ಫಬ್ರವರಿ 2016) ಕನ್ನಡ ಪತ್ರಕೋದ್ಯಮದಲ್ಲಿ 30ಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಇವರು, 48 ವರ್ಷಗಳಿಂದ ಪ್ರಜಾವಾಣಿಯಲ್ಲಿ ಪ್ರಕಟವಾಗುವ ಕನ್ನಡಿಗರ ಪದಚಾತುರ್ಯಕ್ಕೆ ಸವಾಲೆಸಗುವ ಪದರಂಗವನ್ನು ರಚಿಸಿದವರು.

ಜನನ/ಶಿಕ[ಬದಲಾಯಿಸಿ]

ಹಾಸನದ ಸಕಲೇಶಪುರದಲ್ಲಿ ಜನಿಸಿದ ಇವರು ತಮ್ಮ ವ್ಯಾಸಂಗವನ್ನು ಕೋಲಾರ ಜಿಲ್ಲೆಯಲ್ಲಿ ನಡೆಸಿದರು. ಕಾಲೇಜಿನಲ್ಲಿದ್ದಾಗಲೇ ಕನ್ನಡ ಲೇಖನಗಳನ್ನೂ, ನಾಟಕಗಳನ್ನೂ ರಚಿಸಿದ್ದರು. ಸೆಂಟ್ರಲ್ ಕಾಲೇಜಿನ ವಿದ್ಯಾಥರ್ಿಯಾಗಿದ್ದಾಗಲೇ ಕನ್ನಡ ಸಂಘದ ಕಾರ್ಯದಶರ್ಿಯಗಿದ್ದರು. ಜಿ.ಪಿ.ರಾಜರತ್ನಂ, ಅನಾಕೃ, ವಿಸೀ, ಡಿ.ವಿ.ಜಿ ಅವರ ಆಪ್ತ ಶಿಷ್ಯರಾಗಿ ತಮ್ಮ ಕನ್ನಡ ಜ್ಞಾನವನ್ನು ಬೆಳಸಿಕೊಂಡರು. ಪತ್ರಿಕಾ ಜೀವನಕ್ಕೆ ಕಾಲಿಡುವ ಮುನ್ನ ನಾಭೂ ಮುಂಬೈನ ಲಿಂಟಾಸ್ ಕಂಪನಿಯಲ್ಲಿ ಕನ್ನಡದ ಕಾಪಿರೈಟರ್ ಅಗಿ ಕೆಲಸ ನಿರ್ವಹಿಸಿದ್ದರು. 1960-62ರಲ್ಲಿ ಹೊರಬಂದಿದ್ದ ಕನ್ನಡ ಜಾಹಿರಾತುಗಳಿಗೆ ತಮ್ಮ ವಿಭಿನ್ನ ಶೈಲಿಯ ಶಿಷರ್ಿಕೆಗಳನ್ನು ನೀಡಿದ್ದರು.

ಕನ್ನಡ ಪತ್ರಿಕೋದ್ಯಮದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಶ್ರೀ ಕೆ. ಎಸ್. ನಾಗಭೂಷಣ ತಾಯ್ನಾಡು, ಜನಪ್ರಗತಿ, ಸಂಯುಕ್ತ ಕನರ್ಾಟಕ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ ನಂತರ ನಾಡಿನ ಪ್ರತಿಷ್ಠಿತ ಪತ್ರಿಕೆಯಾದ ಪ್ರಜಾವಾಣಿಯನ್ನು ಸೇರಿದರು. ಪತ್ರಿಕೆಯ ವಿವಿಧ ಹಂತಗಳಲ್ಲಿ ಹೊಣೆಗಾರಿಕೆಗಳನ್ನು ಸಮರ್ಥವಾಗಿ ನಿಭಾಯಿಸಿದ ಇವರು ಅವರು 1992ರಲ್ಲಿ ಸುದ್ದಿ ಸಂಪಾದಕರಾಗಿ ್ಲ ನಿವೃತ್ತರಾದರು. `ಪದರಂಗ'ದ ಪಿತಾಮಹ ಎಂದು ಪ್ರಚಲಿತರಾದ ಶ್ರೀ ಕೆ.ಎಸ್.ನಾಗಭೂಷಣರವರು (ನಾಭೂ) ಕಳೆದ 48 ವರ್ಷಗಳ ಕಾಲ ನಿರಂತರವಾಗಿ ಪ್ರಜಾವಾಣಿಯಲ್ಲಿ ಪ್ರಕಟವಾಗುವ "ಪದರಂಗ"ದ ಕತರ್ೃವಾಗಿದ್ದರು. ಹುದ್ದೆಯಿಂದ ನಿವೃತ್ತರಾದ ನಂತರವೂ ಪ್ರಜಾವಾಣಿಯ ಪದರಂಗದ ಜೊತೆಗೆ ಉದಯವಾಣಿಯಲ್ಲಿ `ದಿನಪದ', ವನಿತಾ ಮಾಸಪತ್ರಿಕೆಗೆ `ವನಿತಾಪದ', ವಿಜಯಚಿತ್ರ ಚಲನಚಿತ್ರ ಪತ್ರಿಕೆಗೆ `ವಿಜಯಪದ', ಕಾಮನಬಿಲು ್ಲ ಅಂತಜರ್ಾಲ ಅಂಕಣಕ್ಕೆ `ಪದಬಂಧ' ಹೀಗೆ 5000 ಕ್ಕೂ ಹೆಚ್ಚು ಪದಬಂಧಗಳನ್ನು ರಚಿಸಿ ಕನ್ನಡ ಪದಬಂಧ ರಂಗದಲ್ಲೇ ಅದ್ವಿತೀಯವಾದ ದಾಖಲೆಯನ್ನು ನಿಮರ್ಿಸಿದರು. 'ಪದಪರ್ವತಾರೋಹದಲ್ಲಿ ತೇನ್ ಸಿಂಗ್ನಾದ ಈತನ ಸಾಧನೆಯನ್ನು ಸರಿಗಟ್ಟುವವರು ಕನರ್ಾಟಕದಲ್ಲೇ ಇಲ್ಲ? ಎಂದು ಸಾಹಿಗಳಾದ ಅ.ರಾ. ಮಿತ್ರ ಬರೆದಿದ್ದಾರೆ. ನಾಭೂ ಕನ್ನಡದಲ್ಲಿ ಪದಬಂಧ ರಚನಾ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಸೃಜನಾತ್ಮಕವಾದ ಪದ ಜೋಡಣೆ, ಒಗಟಿನಂತಹ ಸುಳಿವುಗಳು ಇವರ ರಚನೆಯ ವಿಶೇಷತೆ. ಇವರು ಎಷ್ಟೋ ಪದಗಳನ್ನು ಮತ್ತೆ ಮತ್ತೆ ಬಳಸಿದ್ದರೂ ಸುಳಿವುಗಳು ಮಾತ್ರ ಬಹಳ ವೈವಿಧ್ಯಮಯವಾಗಿರುತ್ತಿತ್ತು. 1999ರಲ್ಲಿ ಇವರು ಎಲ್ಲಾ ಬಳಸಿದ ಪದಗಳು ಹಾಗು ಅವುಗಳಿಗೆ ನೀಡಿದ ಸುಳಿವುಗಳನ್ನು ಒಂದು ಪುಸ್ತಕ ರೂಪದಲ್ಲಿ ತರಬೇಕೆಂದು ಒಟ್ಟಾಗಿ ಸೇರಿಸಿದ್ದರು. ಆ ವರ್ಷದ ವೇಳೆಗೆ ಅವರು ಬಳಸಿದ್ದ ಪದಗಳ ಸಂಖ್ಯೆ 28000 ಪದಗಳು. ಇಷ್ಟೂ ಪದಗಳ ಸುಳಿವುಗಳು ಭಿನ್ನವಾಗಿವೆ, ಹೊಸತಾಗಿದೆ. ಇದಲ್ಲದೆ ಶ್ರೀಯುತರು ಆಕಾಶವಾಣಿಯಲ್ಲಿ ಅನೇಕ ಆಯೋಗಗಳ ವರದಿಗಳನ್ನು ಮಂಡಿಸಿ ಆಕಾಶವಾಣಿಗೆ ನಾಟಕಗಳನ್ನು ರಚಿಸಿದ್ದರು. ಇವರು ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮೂಲಕ ಪತ್ರಕರ್ತರ ಏಳಿಗೆಗೆ ಶ್ರಮಿಸಿದ್ದರು. ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗೌರವ ಕಾರ್ಯದಶರ್ಿಯಾಗಿದ್ದರು. ಕನ್ನಡ ಚಳುವಳಿಗಳಾದ ಕನ್ನಡ ಬೋಡರ್್ ಬಳಕೆ ಚಳುವಳಿ, ಕನ್ನಡ ಮಾಧ್ಯಮ ಅನುಷ್ಠಾನಕ್ಕಾಗಿ ಚಳುವಳಿಯಲ್ಲಿ ಸಕ್ರಿಯ ಪಾತ್ರವಹಿಸಿದರು. ಇವರ ಪುಸ್ತಕಗಳು ನಾಗಲೋಚನ ನುಡಿವಚನ, ಹನಿ-ದನಿ, ಪದಾಂತರಂಗ ಹಾಗು `ಕನ್ನಡ ಮಾಧ್ಯಮ ಪಾರಿಭಾಷಿಕ', ಎಂಬ ಸಂಪಾದಿತ ಕೃತಿಗೆ ತಮ್ಮ ಕೊಡುಗೆ ನೀಡಿದ್ದಾರೆ. ಕನ್ನಡ ಸಿನಿಮಾರಂಗದಲ್ಲಿಯೂ ದುಡಿದ ಇವರು ಸೇಡಿನಕಿಡಿ, ಗೃಹಿಣಿ, ಅಂತರ ಚಿತ್ರಗಳಿಗೆ ಸಂಭಾಷಣೆ ಬರೆದು ಇವುಗಳ ಸಹನಿದರ್ೇಶನ ಮಾಡಿದ್ದಾರೆ. ಹಲವು ಚತ್ರಗಳಲ್ಲಿ ನಟನೆಯನ್ನು ಮಾಡಿರುತ್ತಾರೆ. ಇವರಿಗೆ ಕಾರ್ಯನಿರತ ಪತ್ರಕರ್ತರ ಸಂಘದಿಂದ `ಶಬ್ದಬ್ರಹ್ಮ' ಎಂಬ ಬಿರುದು ಹಾಗು `ಪದರಂಗ ಪಿತಾಮಹ' ಎಂಬ ಬಿರುದುಗಳನ್ನು ನೀಡಿ ಗೌರವಿಸಲಾಗಿದೆ. ಇವರು ಮುವತ್ತಕ್ಕೂ ಹೆಚ್ಚು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿದ್ದಾರೆ. ಕನರ್ಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಎಂ. ಎಸ್. ರಾಮಯ್ಯ ಪತ್ರಿಕೋದ್ಯಮ ಪ್ರಶಸ್ತಿ, ದೆಹಲಿ ಕನ್ನಡ ಸಂಘದ ಪುರಸ್ಕಾರ, ಡಿವಿಜಿ ಪುರಸ್ಕಾರ ಪ್ರಮುಖವಾದುವು. ಇಂತಹ ಪ್ರತಿಭಾವಂತ ಹಿರಿಯ ಪತ್ರಿಕೋದ್ಯಮಿಯಾದ ಶ್ರೀಯತರು ಕನ್ನಡ ಭಾಷೆಗೆ ತನ್ನದೇ ವಿಶಿಷ್ಟ ಕೊಡುಗೆ ನೀಡಿದ ಹಿರಿಯರು.

reference: ಪ್ರಜವಾಣಿ ೧೭/೦೨/೨೦೧೬ ಉದಯವಾಣಿ ೧೭/೦೨/೨೦೧೬