ಸದಸ್ಯ:Angelin lidyea/WEP 2018-19 dec

ವಿಕಿಪೀಡಿಯ ಇಂದ
Jump to navigation Jump to search

ಕ್ಲಾಸಿಕಲ್ ಕಂಡೀಷನಿಂಗ್[ಬದಲಾಯಿಸಿ]

ಕ್ಲಾಸಿಕಲ್ ಕಂಡೀಷನಿಂಗ್ ಎಂದರೆ ಕೂಡುವಿಕೆ ಮೂಲಕವಾಗಿ ಕಲಿಯುವುದು. ರಶಿಯನ್ ಮನೋವಿಜ್ಞಾನಿಯಾದ, ಐವಾನ್ ಪ್ಯಾವಲಾವ್ ಈ ಪರಿಕಲ್ಪನೆಯನ್ನು ಪರಿಚಯಿಸಿದರಿಂದಾಗಿ ‘ಪಾವಲೋವಿಯನ್ ಕಂಡೀಷನಿಂಗ್ ’

ಎಂದು ಕೂಡ ಈ ಪರಿಕಲ್ಪನೆ ಹೆಸರುವಾಸಿಯಾಗಿದೆ. ಸರಳವಾಗಿ ಹೇಳುವುದಾದರೆ, ಒಬ್ಬ ಮನುಷ್ಯ ಅಥವಾ ಪ್ರಾಣಿಯಲ್ಲಿ ಹೊಸ ವರ್ತನೆಯನ್ನು ಕಲಿಸುವುದಕಾಗಿ, ಪರಸ್ಪರ ಸಂಭಂದವಿಲ್ಲದೆ ಇರುವಂಥ  ಎರಡು

ಪ್ರಚೋದಕಗಳನು ಕೂಡಿಸುವುದನ್ನು ಕ್ಲಾಸಿಕಲ್ ಕಂಡೀಷನಿಂಗ್ ಎಂದು ಹೇಳುತಾರೆ. ಕ್ಲಾಸಿಕಲ್ ಮತ್ತು ಒಪೆರಾಂಟ್ ಕಂಡೀಷನಿಂಗ್ ಪರಿಕಲ್ಪನೆಗಳು ಸೇರಿ ಮನೋವಿಜ್ನ್ಯಾನದ, ‘ಬೆಹವಿಮೊರಿಸ್ಮ್’  ಎಬ ತತ್ವ ಸಿದ್ಧಾಂತದಾ ಅಡಿಪಾಯಗಳಾದವು. ೨೦ನೆ ಶತಮಾನದ ಮನೋವೈಜ್ಞಾನಿಕ ಚಿಕಿತ್ಸಾ ವಿಧಾನಗಳಲ್ಲಿ ಈ ಸಿದ್ಧಾಂತ ಅತೀ ಪ್ರಭಾವಶಾಲಿಯಾಗಿತ್ತು.

ಪ್ಯಾವಲಾವ್ನನ ಪ್ರಯೋಗ[ಬದಲಾಯಿಸಿ]

ಪ್ಯಾವಲಾವ್ ಮಾಡಿದ್ದ ಪ್ರಯೋಗ .

ಪ್ಯಾವಲಾವ್ ತನ್ನ ಪ್ರಯೋಗಶಾಲೆಯಲ್ಲಿ ನಾಯಿಯ ಮೇಲೆ ಪ್ರಯೋಗಗಳನ್ನು ನಡೆಸುತಿರುವಾಗ ಈ ಪರಿಕಲ್ಪನೆಯನ್ನು ಕಂಡನು. ಪ್ಯಾವಲಾವ್ ನಾಯಿಗಲ್ಲ ಜೀರ್ಣ ಪ್ರಕ್ರಿಯೆಯಾ ಕುರಿತು ಅಧ್ಯಯನ ಮಾಡುತಿರುವಾಗ,

ನಾಯಿ ತನಗೆ ಆಹಾರವನ್ನು ಕೊಡುವನನ್ನು ಕಂಡ ಕೂಡಲೇ ಅತಿಯಾಗಿ ಜೋಲು ಸುರಿಸುವುದನ್ನು ಗಮನಿಸಿದನು. ನಾಯಿ ಆಹಾರವಿಲ್ಲದೆಯಿದ್ದರೂ, ಆಹಾರವನ್ನು ಕೊಡುವವನನ್ನು ಕಂಡ ಕೂಡಲೇ ಆಹಾರದ ನಿರೀಕ್ಷೆಯಿಂದ

ಜೋಲು ಸುರಿಸುತಿದೆ ಎಂದು  ಪ್ಯಾವಲಾವ್ವಿಗೆ ಗೋಚರವಾಯಿತು . ನಾಯಿಯ ಈ ನಿರೀಕ್ಷಿತ ಲಾಲೋತ್ಪಾದನೆಯನು "ಮಾನಸಿಕ ಸ್ರವಿಸುವಿಕೆ" ಎಂದು ಕರೆದನು. ತನ್ನ ಈ ಅನೌಪಚಾರಿಕ ಅವಲೋಕನಗಳನ್ನು ಪರೀಕ್ಷಿಸಲು ಅವರು ಪ್ರಯೋಗ್ಸ್ಗಳನ್ನು ಮಾಡಿ ಈ ಪರಿಕಲ್ಪನೆಯನು ಧೃಢಪಡಿಸಿದರು.

ಪ್ರಯೋಗದ ವಿಧಾನ[ಬದಲಾಯಿಸಿ]

ಪಾವ್ಲೋವ್, ಸ್ವಾಭಾವಿಕವಾಗಿ ಲವಣ ಉಂಟುಮಾಡದೇಇರುವಂಥ ವಸ್ತುವಾದ ಗಂಟೆಯನು ತಟಸ್ಥ ಪ್ರಚೋದಕ ವಸ್ತುವಾಗಿ ಉಪಯೋಗಿಸಿದ್ದನು. ನೈಸರ್ಗಿಕವಾಗಿ ಲವಣವನ್ನು ಉಂಟುಮಾಡುವ, ಮಾಂಸದ

ಪುಡಿಯನ್ನು ಲಾಲಾರಸವನು ಪ್ರಚೋದಿಸುವ ನೈಸರ್ಗಿಕ ಉತ್ತೇಜನ ವಸ್ತುವನಾಗಿ ಉಪಯೋಗಿಸಿದರು. ಅವರು ಗಂಟೆಯಾ ಸಹಬ್ಬವನು ಮಡಿದ ಕೂಡಲೇ ಮಾಂಸದ ಪುಡಿಯನ್ನು ನಾಯಿಗೆ ಕೊಟ್ಟರು.

ನಾಯಿ ಮಾಂಸದ ಪುಡಿಗೆ ಲವಣ ಮಾಡುವುದುದಕ್ಕೆ ಯಾವ ತರಬೇತಿ ಅಥವಾ ಕಲಿಕೆ ಬೇಕಾಗಿರಲಿಲ, ನೈಸರ್ಗಿಕವಾಗಿ ನಾಯಿ ಮಾಂಸವನ್ನು ಕಂಡ ಕೂಡಲೇ ಲವಿಸುತದೆ, ಆದರೆ ಗಂಟೆಯ ಶಬ್ದಕೆ

ನಾಯಿ ಲವಿಸುವುದಕೆ ಕಲಿಯಬೇಕಾಗಿತ್ತು. ಹಲವಾರು ಬಾರಿ ಪ್ಯಾವಲಾವ್ ಗಂಟೆಯ ಶಬ್ಧವನ್ನು ಮಡಿದ ಕೂಡಲೇ ಮಾಂಸದ ಪುಡಿಯನ್ನು ನಾಯಿಗೆ ಕೊಟ್ಟರು.ಹೀಗೆ ಮಾಡುತ ಸ್ವಲ್ಪ ಕಾಲದ ನಂತರ

ನಾಯಿ ಗಂಟೆಯ ಶಬ್ದ ಕೇಳಿದಕೂಡಲೇ ಲವಿಸಲು ಪ್ರಾರಂಭಿಸಿತು. ನಾಯಿ ಗಂಟೆಯ ಶಬ್ದ ಕೇಳಿದಕೂಡಲೇ ತನಗೆ ಮಾಂಸಾದಪುಡಿಯೂ ಸಿಗುತದೆ ಎಂದು ಎರಡು ಪ್ರಚೋಧನ ವಸ್ತುಗಳಿಗೂ ಸಂಭಂದವನು

ಉಂಟುಮಾಡದಿದ್ದರಿಂದಾಗಿ ಲವಿಸಲು ಪ್ರಾಂಭಿಸಿತು, ಈ ಪ್ರತಿಕ್ರಿಯೆಯನ್ನು ಪ್ಯಾವಲಾವ್ ನಿಯಮಾಧೀನ ಪ್ರತಿಕ್ರಿಯೆ ಎಂದು ಕರೆದರೂ.

ವ್ಯಾಟ್ಸನ್ನನ ಪ್ರಯೋಗ[ಬದಲಾಯಿಸಿ]

ಜಾನ್ ವ್ಯಾಟ್ಸನ್.

೧೯೨೦ರಲಿ ಜಾನ್ ವ್ಯಾಟ್ಸನ್ ಎಂಬ ಮನೋ ವಿಜ್ನ್ಯಾನಿಯು, ಈ ಪರಿಕಲ್ಪನೆಯನ್ನು ಮನುಷ್ಯರ ವರ್ತನೆಗಳಲ್ಲಿಯೂ ಅವಲಂಬಿಸಬಹುದೇನು ಕಂಡುಹಿಡಿದರು.ಜಾನ್ ವಾಟ್ಟೆಸೊನ್ ತಮ್ಮ ಪ್ರಯೋಗವನು ಆಲ್ಬರ್ಟ್ ಎಂಬ

೯ ಮಾಸಗಳು ತುಂಬಿದ ಗಂಡುಮಗುವಿನ ಮೇಲೆ ಮಾಡಿದರು. ವಾಟ್ಟೆಸೊನ್, ಅಲ್ಬೆರ್ಟ್ಟ್ರಿಗೆ ಬಿಳಿ ಮೊಲವೊಂದನ್ನು ಪರಿಚಯಿಸಿದರು ,ಆಲ್ಬರ್ಟ್ ಹೆದರುವಂತೆ ಯಾವ ಪ್ರತಿಕ್ರಿಯೆಯನ್ನು ತೋರಿಸಲಿಲ್ಲ. ನಂತರ

ವಾಟ್ಟೆಸೊನ್, ಆಲ್ಬರ್ಟ್ ಮೊಲವನು ಮುಟ್ಟಿದಾಗಲ್ಲೆಲ ಜೋರಾದ ಶಬ್ದವನ್ನು ಮಾಡಿದನು. ಈ ಶಬ್ಧವನ್ನು ಕೇಳಿದಕೂಡಲೇ ಆಲ್ಬರ್ಟ್ ಹೆದರಿ ಅಳಲು ಪ್ರಾರಂಭಿಸಿದನು. ಹಲವಾರು ಬಾರಿ ಮೊಲ ಹಾಗು ಜೋರಾದ

ಶಬ್ದವನ್ನು ಕೂಡಿಸಿ ಪರಿಚಯಿಸಿದರಿಂದಾಗಿ, ಆಲ್ಬರ್ಟ್ ಕೆಲವು ದಿನಗಳುಕಳೆದನಂತರ, ಬಿಳಿ ಮೊಲವನು ನೋಡಿದಾಗಲೆಲ್ಲ ಹೆದರಿ ಅಳ್ಳಲು ಪ್ರಾರಂಭಿಸಿದನು.ಆಲ್ಬರ್ಟ್, ತಾನು ಮೊಲವನು ಮುಟ್ಟಿದಕೂಡಲೇ ಭಯವನು ಉಂಟುಮಾಡುವಂತ ಶಬ್ಧವನ್ನು ನಿರೀಕ್ಷಿಸಿ ಹೆದರಿ ಆಳಲು ಪ್ರಾರಂಭಿಸಿದನೆಂದು ವಾಟ್ಟೆಸೊನ್ ದೃಢಪಡಿಸಿದರು.

ಅನೇಕ ಪ್ರಯೋಗಗಳಿಂದಾಗಿ, ಮನೋವಿಜ್ಞಾನಿಗಳು ಮನುಷ್ಯನ ಹಲವಾರು ಭಯ ಹಾಗು ಆತಂಕಗಳಿಗೆ " ಕ್ಲಾಸಿಕಲ್ ಕಂಡೀಷನಿಂಗ್"  ಪರಿಕಲ್ಪವೇ ಕಾರಣವೆಂದು ಅನುವಾದಿಸಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

https://en.wikipedia.org/wiki/Classical_conditioning

https://www.simplypsychology.org/classical-conditioning.html