ಸದಸ್ಯ:Amogh prakash248/WEP 2018-19

ವಿಕಿಪೀಡಿಯ ಇಂದ
Jump to navigation Jump to search
ಜಸ್ ಲಾಲ್ ಪ್ರಧಾನ್
ಜನನ
ಜಸ್ ಲಾಲ್ ಪ್ರಧಾನ್

೨೪ ಏಪ್ರಿಲ್ ೧೯೫೭
ರಾಷ್ಟ್ರೀಯತೆಭಾರತೀಯ
ವೃತ್ತಿಬಾಕ್ಸರ್

ಜನನ ಮತ್ತು ಬಾಲ್ಯ ಜೀವನ[ಬದಲಾಯಿಸಿ]

ಭಾರತದ ಪ್ರಸಿದ್ಧ ಬಾಕ್ಸರ್ ರಾದ ಜಸ್ ಲಾಲ್ ಪ್ರಧಾನ್ ಅವರು ೧೯೫೭ರ ಏಪ್ರಿಲ್ ೨೪ ರಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಇವರು ಶ್ರೀಮತಿ ಮತ್ತು ಶ್ರೀಮಾನ್ ಬಹದ್ದೂರ್ ಪ್ರಧಾನರವರಿಗೆ ಸಿಕ್ಕಿಂನ ಸಿಂಗ್ಟಮ್ ಖಾಮ್ ಡಾಂಗ್ ನಲ್ಲಿ ಜನಿಸಿದರು.ಅವರು ತಮ್ಮ ಹುಟ್ಟೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಉತ್ತರಕಾಂಡದ ರೂರ್ಕಿಗೆ ತೆರಳಿದರು.ಅವರು ತಮ್ಮ ೧೫ನೇ ವಯಸ್ಸಿನಲ್ಲಿ ಬಾಕ್ಸಿಂಗ್ ನಲ್ಲಿ ಆಸಕ್ತಿ ತೋರಿಸಿದರು.

Boxing080905 photoshop.jpg
Boxing dsc03574.jpg

ವೃತ್ತಿಜೀವನ[ಬದಲಾಯಿಸಿ]

ಜಸ್ ಲಾಲ್ ಪ್ರಧಾನ್ ರವರು ವಿದ್ಯಾಭ್ಯಾಸ ಮುಗಿಸಿದ ನಂತರ ಭಾರತೀಯ ಸೈನ್ಯಕ್ಕೆ ಸೈನಿಕರಾಗಿ ಸೇರಿಕೊಂಡರು.ಆದರೆ ಅವರು ಸೇವೆಯಲ್ಲಿರುವಾಗಲೂ ತಮ್ಮ ಬಾಕ್ಸಿಂಗನ್ನು ಮುಂದುವರೆಸಿದರು.ಹಿಮಾಲಯ ರಾಜ್ಯದ ಕ್ರೀಡಾ ಪ್ರಿಯರಿಗೆ ೧೯೮೩ ಮರೆಯಲಾಗದ ವರ್ಷವಾಗಿತ್ತು. ಈ ವರ್ಷದಲ್ಲಿ ಸಿಕ್ಕಿಂನ ಶ್ರೀ ಜಸ್ ಲಾಲ್ ಪ್ರಧಾನ್ ಅವರು ಎಲ್ಲಾ ಭಾರತೀಯರಿಗೆ ಹೆಮ್ಮೆತಂದುಕೊಟ್ಟರು. ದಕ್ಷಿಣ ಕೊರಿಯಾದ ಸಿಯೋಲ್ನಲ್ಲಿ ನಡೆದ ೯ನೇ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗಳಿಸಿ ಭಾರತಕ್ಕೆ ಕೀರ್ತಿ ತಂದು ಕೊಟ್ಟರು. ಅವರು ೧೯೮೨ರಲ್ಲಿ ನ್ಯೂದೆಹಲಿಯಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಕಂಚಿನ ಪದಕವನ್ನು ಗೆದ್ದರು. ಇದು ಅವರ ಜೀವನದಲ್ಲಿ ಒಂದು ಮುಖ್ಯ ಘಟನೆಯಾಗಿದೆ. ನಂತರ ೧೯೮೪ ರಲ್ಲಿ ಲಾಸ್ ಏಂಜಲೀಸ್ ನಲ್ಲಿ ನಡೆದ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಮತ್ತೊಮ್ಮೆ ಕಂಚಿನ ಪದಕವನ್ನು ಗಳಿಸಿ ಭಾರತಕ್ಕೆ ಹೆಮ್ಮೆ ತಂದರು.೧೯೮೧ರಲ್ಲಿ ಬ್ರಿಸ್ಬೇನಲ್ಲಿ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನು ಗೆದ್ದರು.


ಅಂತರ ರಾಷ್ಟೀಯ ಸಾಧನೆಗಳು[ಬದಲಾಯಿಸಿ]

-೧೯೮೨ರಲ್ಲಿ ದಕ್ಷಿಣ ಕೊರಿಯಾದಲ್ಲಿ ೯ನೇ ಏಷ್ಯನ್ ಬಾಕ್ಸಿಂಗ್ ಚಾಂಪಿಯನಲ್ಲಿ ಚಿನ್ನದ ಪದಕ.

-೧೯೮೧ರಲ್ಲಿ ಆಸ್ಟ್ರೇಲಿಯಾದಲ್ಲಿ ಮಿನಿ ಕಾಮನ್ ವೆಲ್ತ್ ಗೇಮ್ ನಲ್ಲಿ ಕಂಚಿನಪದಕಗಳಿಸಿದರು.

-೧೯೮೨ ರಲ್ಲಿ ಥೈಲ್ಯಾಂಡ್,ಬಾಂಕಾಕ್ ನಲ್ಲಿ ೮ನೇ ಕಿಂಗ್ಸ್ ಕಪ್ ನಲ್ಲಿ ಪಾಲ್ಗೊಂಡರು.

-೧೯೮೪ರಲ್ಲಿ ಲಾಸ್ ಏಂಜಲೀಸ್ ನಲ್ಲಿ ನಡೆದ ೨೩ ಒಲಂಪಿಕ್ ಗೇಮ್ನಲ್ಲಿ ಭಾಗವಹಿಸಿ ಕಂಚಿನ ಪದಕ ಗಳಿಸಿದರು.

-೧೯೮೩ರಲ್ಲಿ ಜಪಾನ್ ಮತ್ತು ಯು ಎಸ್ ಎಸ್ ಆರ್ ಅಂತರ ರಾಷ್ಟ್ರೀಯ ಬಾಕ್ಸಿಂಗ್ನಲ್ಲಿ ೧೧ನೇ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಂಡರು.

ರಾಷ್ಟ್ರೀಯ ಸಾಧನೆಗಳು[ಬದಲಾಯಿಸಿ]

-೧೯೭೫ರಲ್ಲಿ ಹೈದರಾಬಾದ್ ನಲ್ಲಿ ನಡೆದ ಜೂನಿಯರ್ ನ್ಯಾಷನಲ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದರು.

-೧೯೭೬ರಲ್ಲಿ ತಮಿಳುನಾಡಿನಲ್ಲಿ ನಡೆದ ಹಿರಿಯ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ.

-೧೯೮೧ರಲ್ಲಿ ಜಮ್ ಶೆಡ್ ಪುರದಲ್ಲಿ ನಡೆದ ಹಿರಿಯ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ.

-ಬಾಂಬೆ ದೆಹಲಿಯಲ್ಲಿ ಹಿರಿಯ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ.

-೧೯೮೧-೧೩ರಲ್ಲಿ ರಾಷ್ಟ್ರೀಯ ಹಿರಿಯ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಡಬಲ್ ಚಿನ್ನದ ಪದಕಗಳನ್ನು ಗೆದ್ದರು ಮತ್ತು ಅದನ್ನು ದೇಶದ ಅತ್ಯುತ್ತಮ ಬಾಕ್ಸರ್ ಎಂದು ಘೋಷಿಸಲಾಯಿತು.

ಸಹಕಾರ ಸಾಧನೆಗಳು[ಬದಲಾಯಿಸಿ]

-೧೯೯೦ ಏಷ್ಯನ್ ಗೇಮ್ ಸಮಯದಲ್ಲಿ ರಾಷ್ಟ್ರೀಯ ತರಬೇತಿ ಶಿಬಿರದ ಕೋಚ್ ಆಗಿ ನೇಮಕಾತಿ.

-ಉಜ್ಬೇಕಿಸ್ತಾನ್ ನ ಟಸ್ಕೆಂಟ್ ನಲ್ಲಿ ನಡೆದ ೧ನೇ ಉಜ್ಬೇಕಿಸ್ತಾನ್ ಇಂಡಿಪೆಂಡೆನ್ಸ್ ಕಪ್ ೧೯೯೭ರ ಕೋಚ್ ಆಗಿ ಸೇವೆಮಾಡಿದರು.

-೧೯೯೫ ರಲ್ಲಿ ದಕ್ಷಿಣ ಕೊರಿಯಾದ ಸಿಯೋಲ್ ಕಪ್ ಅಂತರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗೆ ತರಬೇತುದಾರರಾಗಿ ನೇಮಕರಾದರು.

-೧೯೯೫ ರಲ್ಲಿ ನ್ಯೂದೆಹಲಿಯಲ್ಲಿ ನಡೆದ ವೈ ಎಮ್ ಸಿ ಎ ಇಂಟರ್ ನ್ಯಾಷನಲ್ ಬಾಕ್ಸಿಂಗ್ ಟೂರ್ನಮೆಂಟಲ್ಲಿ ಭಾರತ ತಂಡಕ್ಕೆ ಇವರನ್ನು ತರಬೇತುದಾರರಾಗಿ ನೇಮಕರಾದರು.ಅವರ ತಂಡ ನಾಲ್ಕು ಚಿನ್ನದ ಪದಕ ಐದು ಬೆಳ್ಳಿಯ ಮತ್ತು ಏಳು ಕಂಚಿನ ಪದಕಗಳನ್ನು ಗೆದ್ದುಕೊಂಡಿತು.

-ಥೈಲ್ಯಾಂಡ್ಬ್ಯಾಂಕಾಕ್ ನಲ್ಲಿ ನಡೆದ ಬಾಕ್ಸರ್ ಚಾಂಪಿಯನ್ ಷಿಪ್ ನಲ್ಲಿ ಅವರ ತಂಡ ಒಂದು ಕಂಚಿನ ಪದಕವನ್ನು ಗೆದ್ದುಕೊಂಡಿತು.

-ಮದ್ರಾಸ್ ನಲ್ಲಿ ನಡೆದ ೯ನೇ ಎಸ್ ಎ ಎಫ಼್ ಗೇಮ್ ೧೯೯೫ರಲ್ಲಿ ಭಾರತದ ಬಾಕ್ಸರ್ ತರಬೇತುದಾರರಾಗಿ ಆಯ್ಕೆಮಾಡಿದರು. ಆ ಸ್ಪರ್ಧೆಯಲ್ಲಿ ಇವರ ತಂಡ ೧೦ ಚಿನ್ನ ಮತ್ತು ೨ ಬೆಳ್ಳಿಯ ಪದಕವನ್ನು ಗೆದ್ದರು.

-೧೯೯೬ರಲ್ಲಿ ಫಿಲಿಪೈನ್ ಸಿ ಇ ಬಿ ಯು ಸಿ ಟಿ ೨ ಒಲಿಂಪಿಕ್ ಅರ್ಹತಾ ಸುತ್ತಿನಲ್ಲಿ ನಡೆದ ಮೇಯರ್ ಕಪ್ ಬಾಕ್ಸಿಂಗ್ ಚಾಂಪಿಯನ್ನಾಗಿ ಆಯ್ಕೆಯಾದರು.

ಪ್ರಶಸ್ತಿಗಳು[ಬದಲಾಯಿಸಿ]

ಭಾರತ ಸರ್ಕಾರವು ೧೯೮೨ರಲ್ಲಿ ಅರ್ಜುನ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿತು. ಭಾರತೀಯ ಅಮೆಚೂರ್ ಬಾಕ್ಸಿಂಗ್ ಒಕ್ಕೂಟ ೧೯೮೧ ಮತ್ತು ೧೯೮೨ ಎರಡು ವರ್ಷಗಳ ಕಾಲ ಅತ್ಯುತ್ತಮ ಬಾಕ್ಸರ್ ಎಂದು ಘೋಷಿಸಿದರು.ಸಿಕ್ಕಿಂ ಸರ್ಕಾರವು ೨೦೧೨ ಮೇ ತಿಂಗಳಿನಲ್ಲಿ ಖೇಲ್ ಸಮ್ಮನ್ ಪ್ರಶಸ್ತಿಯನ್ನು ನೀಡಿದೆ.

ನಿವೃತ್ತ ಜೀವನ[ಬದಲಾಯಿಸಿ]

ಪ್ರಸ್ತುತ ಅವರು ಸಿಕ್ಕಿಂ ರಾಜ್ಯದ ಬಾಕ್ಸಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಸಿಕ್ಕಿಂ ರಾಜ್ಯದಲ್ಲಿ ಅವರು ಮಾಡಿದ ವ್ಯತ್ಯಾಸಗಳು,ಶಿಸ್ತು ಮತ್ತು ವಿವಿಧ ಬಾಕ್ಸಿಂಗ್ ಸ್ಪರ್ಧೆಗಳಲ್ಲಿ ಹಲವು ಪದಕಗಳನ್ನು ಗೆಲ್ಲಲು ಅವರು ತೋರಿಸುತ್ತಿರುವ ಆಸಕ್ತಿ ಎಲ್ಲರಿಗೂ ಗೋಚರಿಸುತ್ತದೆ. ಅವರು ನಿವೃತ್ತ ಸೇನಾ ಅಧಿಕಾರಿಗಳ ಆರ್ಮಿ ಪದವಿ ಮತ್ತು ಕ್ರೀಡಾ ಡಿಪ್ಲೋಮವನ್ನು ಸ್ವಾಧೀನಪಡಿಸಿಕೊಂಡರು.

ಉಲೇಖಗಳು[ಬದಲಾಯಿಸಿ]

[೧]

[೨]

  1. http://www.veergorkha.com/2016/01/living-legend-of-sikkim-arjuna-awardee.html
  2. http://www.newindianexpress.com/sport/other/2017/jan/04/double-impact-boxing-body-picks-two-chief-coaches-1555985.html