ಸದಸ್ಯ:Akshatha M J/ನನ್ನ ಪ್ರಯೋಗಪುಟ
ಕಾವೇರಿ ನಿಸರ್ಗಧಾಮ
ಕೊಡಗು ಜಿಲ್ಲೆಯ ಕುಶಾಲನಗರದಲ್ಲಿರುವ ಸುಂದರ ಪ್ರವಾಸಗರ ತಾಣವೇ ಕಾವೇರಿ ನಿಸರ್ಗಧಾಮ. ಈ ನಿಸರ್ಗಧಾಮವು ತನ್ನ ನೈಸರ್ಗಿಕವಾದ ಸೌಂದರ್ಯ ಹಾಗೂ
ಶಾಂತಿಯುತ ಪರಿಸರಕ್ಕೆ ಹೆಸರುವಾಸಿಯಾಗಿದೆ.
೬೪ ಎಕರೆ ವಿಸ್ತೀರ್ಣವುಳ್ಳ ಈ ದ್ವೀಪದಲ್ಲಿ ಸುತ್ತಲೂ ಎಲ್ಲಿ ನೋಡಿದರತ್ತ ಹಚ್ಚ ಹಸಿರನ್ನೇ ಒಳಗೊಂಡಿದೆ.
ಈ ದ್ವೀಪವನ್ನು ತಲುಪಲು ಒಂದು ತೂಗು ಸೇತುವೆಯನ್ನು ದಾಟಿ ಹೋಗಬೇಕಾಗುತ್ತದೆ. ಇಲ್ಲಿ ತೇಗದ ಮರಗಳು, ಶ್ರೀಗಂಧದ ಮರಗಳು ಮತ್ತು ಬಿದಿರಿನ ತೋಪುಗಳು ಸೇರಿದಂತೆ ಅನೇಕ ರೀತಿಯ ಮರಗಳ ಕಾನನವೇ ಇದೆ.
ಮಕ್ಕಳೊಂದಿಗೆ ಬಂದು ಕಾಲ ಕಳೆಯಲು ಇದು ಸೂಕ್ತವಾದ ಪಿಕ್ನಿಕ್ ತಾಣವಾಗಿದೆ. ಮಕ್ಕಳಿಗೆ ಆಡಲು ಸಣ್ಣ ಪಾರ್ಕ್ ಇದ್ದು,
ಇಲ್ಲಿರುವ ಮೊಲಗಳು, ಜಿಂಕೆಗಳು, ನವಿಲುಗಳು ಮಿನಿ ಮೃಗಾಲಯದಂತೆ ಮಕ್ಕಳ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ.
ಇಲ್ಲಿ ಮರದ ಮೇಲೆ ಬಿದಿರಿನ ಕುಠೀರಗಳಿದ್ದು, ವಸತಿ ಪ್ರದೇಶದಲ್ಲಿ ಇಲಾಖೆಯ ವತಿಯಿಂದ ಅತಿಥಿ ಗೃಹಗಳನ್ನು ನಿರ್ಮಿಸಲಾಗಿದೆ. ಇಲ್ಲಿರುವ ರೆಸ್ಟೋರೆಂಟ್ ನಲ್ಲಿ ಆಹಾರವನ್ನು ಸೇವಿಸಿ, ರಾತ್ತಿಯಲ್ಲಿ ವೇಳೆ ಟ್ರೀ ಹೌಸ್ ನಲ್ಲಿ ವಿಶ್ರಾಂತಿಯನ್ನು ಪಡೆದು ಆರಾಮವಾಗಿ ಪ್ರಕೃತಿಯ ಮಡಿಲಿನಲ್ಲಿ ನಿದ್ರಿಸಬಹುದು.
ಈ ಕಾವೇರಿ ನಿಸರ್ಗಧಾಮವು ಮಡಿಕೇರಿಯಿಂದ ಸುಮಾರು ೨೫ ಕಿ.ಮೀ. ಮತ್ತು ಕುಶಾಲನಗರದಿಂದ ೨ ಕಿ. ಮೀ. ದೂರದಲ್ಲಿದೆ. ಇಲ್ಲಿಗೆ ಬಂದು ತಲುಪಲು ಉತ್ತಮವಾದ ಸಾರಿಗೆ ವ್ಯವಸ್ಥೆಯಿದೆ. ಹಾಗೆ ತಮ್ಮ ತಮ್ಮ ಖಾಸಗಿ ವಾಹನಗಳಲ್ಲಿಯೂ ಸಹ ಬರಬಹುದು. ಹೀಗೆ ಇಲ್ಲಿರುವ ಹಲವಾರು ಆಕರ್ಷಣೆಯಿಂದ ಕಾವೇರಿ ನಿಸರ್ಗಧಾಮವು ಪ್ರವಾಸಿಗರನ್ನು ಸೆಳೆಯುವ ಜನಪ್ರಿಯ ತಾಣವಾಗಿದೆ.