ಸದಸ್ಯ:Akasmita/ನನ್ನ ಪ್ರಯೋಗಪುಟ/lesser kestrel
Lesser kestrel | |
---|---|
![]() | |
Lesser Kestrel | |
Conservation status | |
Egg fossil classification | |
Kingdom: | |
Phylum: | |
Class: | |
Order: | |
Family: | |
Genus: | |
Species: | F. naumanni
|
Binomial nomenclature | |
Falco naumanni Fleischer, 1818
| |
![]() | |
Range of F. naumanni Breeding range Year-round range Wintering range |
![]() | ಈ ಲೇಖನ ಅಥವಾ ವಿಭಾಗ ವಿಸ್ತರಣೆಯ ಅಥವಾ ಮಹತ್ವದ ಬದಲಾವಣೆಗಳ ಮಧ್ಯಂತರದಲ್ಲಿದೆ. ನೀವೂ ಲೇಖನದ ಅಭಿವೃದ್ಧಿಯಲ್ಲಿ ಸಂಪಾದನೆಗೆ ತೊಡಗಲು ಇಚ್ಛಿಸಿದಲ್ಲಿ, ಸ್ವಾಗತ. ಈ ಲೇಖನ ಅಥವಾ ವಿಭಾಗವನ್ನು ಬಹಳ ದಿನಗಳವರೆಗೆ ಸಂಪಾದಿಸದಿದ್ದಲ್ಲಿ, ದಯವಿಟ್ಟು ಈ ಟೆಂಪ್ಲೇಟನ್ನು ಅಳಿಸಿಹಾಕಿ. ಈ page ಕಡೆಯ ಬಾರಿ ಸಂಪಾದಿಸಿದ್ದು ಇವರು Céréales Killer (ಚರ್ಚೆ | ಕೊಡುಗೆಗಳು) 2 ವರ್ಷಗಳ ಹಿಂದೆ. (ಅಪ್ಡೇಟ್) |
ಕಿರು ಚಾಣ (Falco naumanni) ಒಂದು ಸಣ್ಣ ಗಿಡುಗ. ಈ ಜಾತಿಯು ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾದಾದ್ಯಂತ ಮೆಡಿಟರೇನಿಯನ್ ನಿಂದ ಚೀನಾ ಮತ್ತು ಮಂಗೋಲಿಯಾದ ತನಕ ಸಂತಾನೋತ್ಪತ್ತಿ ಮಾಡುತ್ತದೆ.ಇದು ಬೇಸಿಗೆ ವಲಸೆಗಾರ,ಅಲ್ಲದೆ ಆಫ್ರಿಕಾ ಮತ್ತು ಪಾಕಿಸ್ತಾನಕ್ಕೆ ಚಳಿಗಾಲದ ವಲಸೆಗಾರ. ಕೆಲವೊಮ್ಮೆ ಭಾರತ ಮತ್ತು ಇರಾಕ್ ದೇಶಗಳಿಗು ವಲಸೆ ಹೋಗುವುದುಂಟು. ಈ ಜಾತಿಯ ಹೆಸರನ್ನು ಲ್ಯಾಟಿನ್ ಇಂದ ಪಡೆದಿದ್ದು, ಫಾಲ್ಸಿಸ್ (falsis) ಅಂದರೆ ಕುಡಗೋಲು ಎಂದರ್ಥ, ಇದು ಚಾಣಗಳ ಉಗುರುಗಳನ್ನು ಉಲ್ಲೇಖಿಸುತ್ತದೆ.
ವಿವರಣೆ[ಬದಲಾಯಿಸಿ]
ಇದು ಒಂದು ಸಣ್ಣ ಬೇಟೆಯ ಹಕ್ಕಿ, ೨೭-೩೩ ಸೇಂ.ಮೀ (೧೧-೧೩ ಇಂಚ್) ಗಾತ್ರ ಹೊಂದಿದ್ದು, ರೆಕ್ಕೆಬಾರು ಸುಮಾರು ೬೩-೭೨ ಸೇಂ.ಮೀ ಆಗಿರುತ್ತದೆ. ಇದು ಚೋರೆ ಚಾಣಕ್ಕೆ ಹೊಲುತ್ತದೆಯಾದರು, ರೆಕ್ಕೆ ಮತ್ತು ಬಾಲವು ಚಿಕ್ಕದಾಗಿರುತ್ತದೆ. ಗಂಡು ಹಕ್ಕಿಯು ಬೂದು ತಲೆಯನ್ನು ಹೊಂದಿದ್ದು, ಬಾಲವು ಚೋರೆ ಚಾಣದಂತೆ ಇರುತ್ತದೆ. ಹೆಣ್ಣು ಮತ್ತು ಎಳೆಯ ಹಕ್ಕಿಗಳು,ಇತರರಿಗಿಂತ ಬಣ್ಣದಲ್ಲಿ ಸ್ವಲ್ಪ ಮಂದವಾಗಿರುತ್ತದೆ. ಇದರ ಕರೆಯು ಕಠಿಣವಾದ ಚೇ-ಚೇ-ಚೇ ಆಗಿದೆ.
ಜೀವಿವರ್ಗೀಕರಣ ಶಾಸ್ತ್ರ[ಬದಲಾಯಿಸಿ]
ಇದರ ಬಾಹ್ಯ ಸಾಮ್ಯತೆ ಹೊರತಾಗಿಯೂ, ಕಿರು ಚಾಣವು ಚೋರೆ ಚಾಣಕ್ಕೆ ನಿಕಟ ಸಂಬಂಧವಿಲ್ಲ ಎನ್ನುವುದನ್ನು mtDNA cytochrome b sequence ವಿಶ್ಲೇಷಣೆಯು ತಿಳಿಸುತ್ತದೆ. ಬೂದು ಬಣ್ಣದ ರೆಕ್ಕೆಯು ಇತರ ಫಾಲ್ಕೊ (Falco) ಜಾತಿಗಳೊಂದಿಗೆ ಕಿರು ಚಾಣವನ್ನು ಸಂಯೋಜಿಸುತ್ತದೆ.
ಪರಿಸರ ವಿಜ್ಞಾನ[ಬದಲಾಯಿಸಿ]
ಹೆಸರಿಗೆ ತಕ್ಕಂತೆ ಕಿರು ಚಾಣವು, ಸಣ್ಣ ಗಾತ್ರದ ಹಕ್ಕಿಯಾಗಿದ್ದು, ಚೋರೆ ಚಾಣಕ್ಕಿಂತ ಹೆಚ್ಚು ಸೂಕ್ಷ್ಮವಾಗಿದೆ. ಕಿರು ಚಾಣವು ಕೀಟಗಳನ್ನು ತಿನ್ನುತ್ತದೆ, ಆದರೆ ಸಣ್ಣ ಹಕ್ಕಿಗಳು, ಸರೀಸೃಪಗಳು ಮತ್ತು ದಂಶಕಗಳನ್ನೂ ಆಹಾರವಾಗಿ ಸೇವಿಸುತ್ತದ್ದೆ. ಇದು ಕಟ್ಟಡಗಳು, ಬಂಡೆಗಳು, ಅಥವಾ ಮರದ ರಂಧ್ರಗಳಲ್ಲಿ ಗುಂಪಾಗಿ ಗೂಡುಗಳನ್ನು ನಿರ್ಮಿಸುತ್ತದೆ. ೩ ರಿಂದ ೬ ಮೊಟ್ಟೆಗಳನ್ನು ಒಮ್ಮೆ ಇಟ್ಟು ಮರಿಮಾಡುತ್ತದ್ದೆ. ಇದು ಯಾವುದೆ ರೀತಿಯ ಗೂಡಿನ ರಚನೆಯು ನಿರ್ಮಿಸುವುದಿಲ್ಲ ಇದು ಫಾಲ್ಕಾನ್ಗಳ (Falcons) ವಿಶಿಷ್ಟಗುಣವಾಗಿದೆ.
ಗ್ಯಾಲರಿ[ಬದಲಾಯಿಸಿ]
Egg, Collection Museum Wiesbaden
Lesser kestrel with insect. Notice yellow talons - an easy way to distinguish between lesser and common kestrel
Male common kestrel feeding his chicks with Stellagama stellio, Negev desert, Israel
- ↑ "Falco naumanni". IUCN Red List of Threatened Species. Version 2013.2. International Union for Conservation of Nature. 2013. Retrieved 26 November 2013.CS1 maint: ref=harv (link)