ಸದಸ್ಯ:AishwaryaH1940548/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತುಮಕೂರು[ಬದಲಾಯಿಸಿ]

ದೇವರಾಯನದುರ್ಗ


ದಕ್ಷಿಣ ಕರ್ನಾಟಕದಲ್ಲಿ ಪ್ರಮುಖ ಜಿಲ್ಲಾ ಕೇಂದ್ರವಾಗಿದೆ .ತುಮಕೂರು ಜಿಲ್ಲೆಯಲ್ಲಿ ಒಟ್ಟು ತಾಲ್ಲೂಕುಗಳಿವೆ.ತುಮಕೂರಿನ ಮೂಲ ಹೆಸರು ತುಮ್ಮೆ ಗೂರು. ಬೆಂಗಳೂರಿನಿಂದ 70 ಕಿಲೋಮೀಟರ್ ದೂರದಲ್ಲಿದೆ .ತುಮಕೂರು ಬೆಂಗಳೂರು ಹೆದ್ದಾರಿಯಲ್ಲಿರುವ ಕ್ಯಾತ್ಸಂದ್ರದ ಬಳಿ ಇರುವ ಸಿದ್ದಗಂಗಾ ಮಠ ವಿಶ್ವವಿಖ್ಯಾತವಾಗಿದೆ . ತುಮಕೂರು ಜಿಲ್ಲೆ ಹಾಗೂ ಬೆಂಗಳೂರು ಹೆದ್ದಾರಿಯಲ್ಲಿರುವ ,ಮಧುಗಿರಿ ಗಿಡಮೂಲಿಕೆಗಳಿಗೆ ಮತ್ತು ಅಲ್ಲಿ ಸಾಧನೆ ಮಾಡುತ್ತಿರುವ ಸಿದ್ಧರು ಮತ್ತು ಸಂತರಿಗೆ ಪ್ರಸಿದ್ಧವಾಗಿರುವ ಸಿದ್ಧರಬೆಟ್ಟ ಎಂದು ಹೆಸರುವಾಸಿಯಾಗಿದೆ .ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿರುವ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಕ್ಷೇತ್ರ ಮತ್ತು ಕೆಗ್ಗೆರೆ ನಾಡಿನ ಪ್ರಮುಖ ವೀರಶೈವ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ ತುಮಕೂರು ಜಿಲ್ಲೆಯಲ್ಲಿರುವ ತಿಪಟೂರು ತೆಂಗಿನ ಕೃಷಿಗೆ ಹೆಸರುವಾಸಿಯಾಗಿದ್ದು ಕಲ್ಪತರು ನಾಡು ಎಂದು ಖ್ಯಾತಿ ಪಡೆದಿದೆ .ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮಧುಗಿರಿ ಬೆಟ್ಟ ಏಷ್ಯಾ ಖಂಡದ ಎರಡನೇ ಅತಿ ದೊಡ್ಡ ಏಕಶಿಲಾ ಬೆಟ್ಟ ಎಂದು ಪ್ರಸಿದ್ಧವಾಗಿದೆ , ಹಾಗೂ ಈ ಬೆಟ್ಟದ ಮೇಲೆ ಬಹಳ ದೊಡ್ಡದಾದ ಕೋಟೆಯಿದೆ .ಮಧುಗಿರಿಯ ದಂಡಿನ ಮಾರಮ್ಮ ದೇವಸ್ಥಾನ ಪ್ರಖ್ಯಾತಿ ಹೊಂದಿದೆ .
ತುಮಕೂರಿನ ಪ್ರಸಿದ್ಧ ತಾಣಗಳು

ಗೂಳೂರು ತುಮಕೂರಿನಿಂದ ಸುಮಾರು ೬ ಕಿಲೋಮೀಟರ್ ದೂರದಲ್ಲಿದೆ ಇಲ್ಲಿ ಬಹಳ ಸುಂದರವಾದ ಗೂಳೂರು ಗಣೇಶನ ದೇವಾಲಯವಿದೆ ಪ್ರತಿ ವರ್ಷ ಇಲ್ಲಿ ಆಚರಿಸುವ ಗಣಪತಿ ಹಬ್ಬವು ನಾಡಿನಲ್ಲೆಲ್ಲ ಹೆಸರುವಾಸಿಯಾಗಿದೆ .


ದೇವರಾಯನದುರ್ಗ ತುಮಕೂರಿನಿಂದ ಕೇವಲ ೧೪ ಕಿಲೋಮೀಟರ್ ದೂರದಲ್ಲಿರುವ ನಾರಸಿಂಹ ಕ್ಷೇತ್ರ ಹೊಯ್ಸಳರ ಕಾಲದಲ್ಲಿ ಬೆಟ್ಟದ ಮೇಲೆ ಆನೆ ಬಿದ್ದ ಜರಿ ಎಂಬ ಹೆಸರಿನ ಊರಿತ್ತು ಎಂದು ಇತಿಹಾಸ .ವಿಜಯನಗರದ ಅರಸರ ಕಾಲದಲ್ಲಿ ಬೆಟ್ಟ ದುರ್ಗಕ್ಕೆ ಕರಿಗಿರಿ ಎಂಬ ಹೆಸರು ಇತ್ತು .ಮಲ್ಲ ಪಟ್ಟಣ ಎಂದು ಕರೆಸಿಕೊಂಡಿದ್ದ ದೇವರಾಯನದುರ್ಗದಲ್ಲಿ ಮೊದಲನೇ ಕಂಠೀರವ ನರಸರಾಜ ಒಡೆಯರು ದುರ್ಗಾ ನರಸಿಂಹ ದೇವಾಲಯ ಕಟ್ಟಿಸಿದ್ದಾರೆ . ಕುಂಬಿ ಬೆಟ್ಟಕ್ಕೆ ಹೋಗುವಾಗ ಮೈಸೂರು ಅರಸರ ಕಾಲದ ಕೋಟೆಯು ಗೋಚರಿಸುತ್ತದೆ .ಬೆಟ್ಟದ ಮೇಲೆ ಇರುವ ಸುಂದರ ದೇವಾಲಯ ದ್ರಾವಿಡ ಶೈಲಿಯಲ್ಲಿದೆ ಊರಿನ ಈಶಾನ್ಯ ದಿಕ್ಕಿನಲ್ಲಿರುವ ಕುಂಬಿ ಬೆಟ್ಟವಿದೆ . ಬೆಟ್ಟದ ಬಲಕ್ಕೆ ತಿರುಗಿದರೆ ಬಿಲ್ಲಿನ ದೊಣೆ ಸೀತಾದೇವಿ ಕೊಳ ಹಾಗೂ ರಾಮ ಲಕ್ಷ್ಮಣರು ತಾಪವನ್ನು ಆಚರಿಸಿದ ಗುಹೆ ಇದೆ . ಈ ಗುಹೆಯಲ್ಲಿ ರಾಮ ಸೀತೆ ಮತ್ತು ಲಕ್ಷ್ಮಣ ವಿಗ್ರಹಗಳಿವೆ ಪಕ್ಕದಲ್ಲಿಯೇ ಬ್ರಿಟಿಷರ ಕಾಲದ ಬಂಗ್ಲೆ ಇರುವ ಬಂಗ್ಲೆ ಬೆಟ್ಟ ನೋಡಬಹುದು .
ಮಧುಗಿರಿ ಬೆಟ್ಟ


ತುಮಕೂರು ಜಿಲ್ಲೆಯಲ್ಲಿ ನಿಜಗಲ್ಲು ಕೋಟೆಯನ್ನು ಕಾಣಬಹುದು .ದಾಬಸ್ ಪೇಟೆಯಿಂದ ೦೧ ಕಿಲೋಮೀಟರ್ ದೂರ ತುಮಕೂರು ಕಡೆಗೆ ಪ್ರಯಾಣಿಸಿದರೆ ಎಡಭಾಗದಲ್ಲಿ ನಿಜಗಲ್ಲು ಬೆಟ್ಟ ಹಾಗೂ ಕೋಟೆಯನ್ನು ಕಾಣಬಹುದು .ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನಲ್ಲಿ ಗೊರವನಹಳ್ಳಿ ಎಂಬ ಗ್ರಾಮವಿದ್ದು ಅಲ್ಲಿ ಪ್ರಸಿದ್ಧ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಲಕ್ಷ್ಮೀ ದೇವಸ್ಥಾನವ.

ಶಿಕ್ಷಣ ಕ್ಷೇತ್ರದಲ್ಲಿ ಕೂಡ ತುಮಕೂರು ಹೆಸರುವಾಸಿಯಾಗಿದ್ದು ಸಿದ್ದಗಂಗಾ ಮಠ ಶಿಕ್ಷಣ ಸಂಸ್ಥೆಗಳು ,ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳು ಪ್ರಮುಖವಾಗಿವೆ .
ಪ್ರಖ್ಯಾತ ನಾಟಕ ಕಂಪೆನಿಯೂ ಚಿತ್ರ ನಿರ್ಮಾಣ ಸಂಸ್ಥೆಯಾಗಿದ್ದ ಗುಬ್ಬಿ ನಾಟಕ ಕಂಪನಿಯ ಸಂಸ್ಥಾಪಕರಾದ ವೀರಣ್ಣನವರು ತುಮಕೂರು ಜಿಲ್ಲೆಯ ಗುಬ್ಬಿಯವರು . 



ಐಶ್ವರ್ಯ ಎಚ್ ಆದ ನಾನು ಪ್ರತಿಷ್ಠಿತ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ ನಾನು ನನ್ನ ವಿದ್ಯಾಭ್ಯಾಸದ ಘಟ್ಟದಲ್ಲಿ ಐಎಎಸ್ ಮಾಡಬೇಕು ಎಂಬ ಗುರಿ ಇಟ್ಟುಕೊಂಡಿದ್ದೇನೆ ಈ ನಿಟ್ಟಿನಲ್ಲಿ ನಾನು ಒಂದನೇ ತರಗತಿಯಿಂದ ಉತ್ತಮ ವ್ಯಾಸಂಗ ಮಾಡಿದ್ದು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಡಿಸ್ಟಿಂಗ್ಷನ್ ನಲ್ಲಿ ೯೫.೫೬ ಶ್ರೇಣಿಯಲ್ಲಿ ಉತ್ತೀರ್ಣ ಆಗಿರುತ್ತೇನೆ ಹಾಗೂ ಪ್ರತಿಷ್ಠಿತ ಕ್ರೈಸ್ಟ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿ ಸೆಕೆಂಡ್ ಪಿಯುಸಿ ನಲ್ಲಿಯೂ ಸಹ ೮೯.೫ ಶ್ರೇಣಿಯಲ್ಲಿ ಡಿಸ್ಟಿಕ್ ನಲ್ಲಿ ಉತ್ತೀರ್ಣ ಆಗಿರುತ್ತೇನೆ ಮುಂದೆಯೂ ಸಹ ಬಿಎಸ್ಸಿ ಪದವಿಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣಳಾಗಿ ಐಎಎಸ್ ಪದವಿಯನ್ನು ಪಡೆಯಬೇಕೆಂದು ಗುರಿ ಇಟ್ಟುಕೊಂಡಿರುತ್ತೇನೆ .


ನಮ್ಮ ದೇಶದಲ್ಲಿ ಕಾಡುತ್ತಿರುವ ಬಡತನ ಹಾಗೂ ರೈತರ ಸಮಸ್ಯೆಗಳ ಬಗ್ಗೆ ಕಾಳಜಿ ಹೊಂದಿದ್ದು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ನಾಗರಿಕ ಸೇವೆ ಮಾಡಬೇಕು ಎಂಬ ಹಂಬಲದಿಂದ ಐಎಎಸ್ ಮಾಡಲೇಬೇಕು ಎಂಬ ಗುರಿ ಇಟ್ಟುಕೊಂಡಿರುತ್ತೇನೆ .


ಈ ನಿಟ್ಟಿನಲ್ಲಿ ನನ್ನ ಕಾಲೇಜಿನ ಉಪನ್ಯಾಸಕರ ಸಹಕಾರದಿಂದ ನಾನು ನನ್ನ ಗುರಿಯನ್ನು ಸಾಧಿಸುತ್ತೇನೆಂದು ನಂಬಿಕೆಯಿಂದ ನನ್ನ ವ್ಯಾಸಂಗವನ್ನು ಮುಂದುವರಿಸುತ್ತೇನೆ .ನನ್ನ ವಿದ್ಯಾಭ್ಯಾಸದ ಅವಧಿಯಲ್ಲಿ ಅತ್ಯುತ್ತಮವಾಗಿ ವ್ಯಾಸಂಗವನ್ನು ಮಾಡಿ ನಾಗರಿಕ ಸೇವೆಯಲ್ಲಿ ಸೇರಿ ದೇಶದಲ್ಲಿ ಕಾಡುತ್ತಿರುವ ಬಡತನ ಹಾಗೂ ಹಿಂದುಳಿದ ಸಮಾಜಗಳಿಗೆ ಉತ್ತಮ ಸೇವೆಯನ್ನು ಒದಗಿಸಲು ತುಂಬಾ ಆಸಕ್ತಿ ಇರುತ್ತದೆ .


ನಮ್ಮ ದೇಶದಲ್ಲಿ ಕಾಡುತ್ತಿರುವ ರೈತರ ಸಮಸ್ಯೆ ಪರಿಸರ ಹಾಗೂ ದೇಶದಲ್ಲಿ ಇರುವ ಮೂಲಭೂತ ಸಮಸ್ಯೆಗಳ ಬಗ್ಗೆ ನಾನು ನನ್ನ ಕೈಲಾದ ಸೇವೆಯನ್ನು ನೀಡಬೇಕೆಂದು ಗುರಿ ಇಟ್ಟುಕೊಂಡಿರುತ್ತೇನೆ .


ಈ ನಿಟ್ಟಿನಲ್ಲಿ ನನ್ನ ತಂದೆ ತಾಯಿ ಹಾಗೂ ಕುಟುಂಬದವರ ಸಹಕಾರವೂ ಕೂಡ ಇದ್ದು ಅವರೆಲ್ಲರಿಗೂ ತುಂಬಾ ಅಭಾರಿಯಾಗಿರುತ್ತೇನೆ ಹಾಗೂ ಎಲ್ಲರ ಆಸೆಯನ್ನು ಈಡೇರಿಸುವುದು ನನ್ನ ಆದ್ಯ ಕರ್ತವ್ಯವಾಗಿರುತ್ತದೆ ಎಂದು ಭಾವಿಸುತ್ತೇನೆ ,ಮತ್ತು ನಾನು ವಿದ್ಯಾಭ್ಯಾಸ ಮಾಡುತ್ತಿರುವ ಕಾಲೇಜಿಗೂ ಉಪನ್ಯಾಸಕರಿಗೂ ಹಾಗೂ ನನ್ನ ತಂದೆ ತಾಯಿಯವರಿಗೂ ಒಳ್ಳೆಯ ಹೆಸರನ್ನು ತಂದು ಕೊಡಬೇಕೆಂದು ತುಂಬಾ ಆಸೆಯನ್ನು ಹೊಂದಿರುತ್ತೇನೆ .


ನಾನು ನನ್ನ ವಿದ್ಯಾಭ್ಯಾಸದ ಹಾದಿಯಿಂದ ಐಎಎಸ್ ಮಾಡಲೇಬೇಕು ಎಂಬ ಗುರಿ ಇಟ್ಟುಕೊಂಡಿರುತ್ತೇನೆ .ಈ ನಿಟ್ಟಿನಲ್ಲಿ ನನ್ನ ಉಪನ್ಯಾಸಕರು ಸಹಕಾರ ನೀಡಬೇಕೆಂದು ಧನ್ಯತೆಯಿಂದ ಕೋರಿಕೊಳ್ಳುತ್ತೇನೆ. ವಂದನೆಗಳು .